ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಜೂನ್ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೬-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ರಾಬರ್ಟ್‌‌ಸನ್‌ಪೇಟೆ, ಅಂಬೇಡ್ಕರ್‍ ನಗರ, ಮನೆ ಸಂಖ್ಯೆ ೭೮ರ ವಾಸಿ ಶ್ರೀ ನಾಗರಾಜ್ (೫೦) ಬಿನ್ ತಂಗರಾಜ್ ಎಂಬುವರು ತಮ್ಮ ಹಸುವನ್ನು ಡಾ/ ಅಂಬೇಡ್ಕರ್‍ ಪಾರ್ಕ್‌‌ನಲ್ಲಿ ಮೇಯಲ್ಲು ಬಿಟ್ಟಿದ್ದು ನಂತರ ೦೨೩೦ ಗಂಟೆಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಹಸುವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಹಸುವಿನ ಬೆಲೆ ಸುಮಾರು ೧೦,೦೦೦/- ರೂಗಲಾಗುವುದು.  

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೬-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಆಂದ್ರಪ್ರದೇಶದ ವಿ.ಕೋಟ ಮಂಡಲ್, ಮರಿಮಾಕನಪಲ್ಲಿ ಗ್ರಾಮದ ವಾಸಿ ಶ್ರೀ ಮಂಜುನಾಥರೆಡ್ಡಿ (೨೬) ಎಂಬುವರು ತಮ್ಮ ಲಗ್ಗೇಜ್ ಆಟೋ ಸಂಖ್ಯೆ ಎಪಿ-೦೩-ಎಕ್ಸ್-೧೪೮೨ ರ ವಾಹನದಲ್ಲಿ ಮುಳಬಾಗಿಲು ತಾಲೂಕು ಗಾಜುಲಹಳ್ಳಿ ಗ್ರಾಮದ ವಾಸಿ ವೆಂಕಟಸ್ವಾಮಿಯನ್ನು ಕುಳ್ಳರಿಸಿಕೋಂಡು ವಿಕೋಟೆಯಿಂದ ತಾಯಲೂರಿಗೆ ಬರುತ್ತಿರುವಾಗ ಕೊಡುಗೇನಹಳ್ಳಿ ಗ್ರಾಮದ ಬಳಿ ಹೋಗುತ್ತಿರುವಾಗ ಹಿಂದೆಯಿಂದ ಜಿಪಿಟಿ ಸಂಖ್ಯೆ ಎ-೫೭೮೬ ರ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆದು ಆಟೋದಲ್ಲಿದ್ದ ಗಾಜುಲಹಳ್ಳಿ ಗ್ರಾಮದ ವೆಂಕಟಸ್ವಾಮಿಯವರ ತಲೆಗೆ ಏಟು ಬಿದ್ದು ರಕ್ತಗಾಯವಾಗಿರುತ್ತದೆ.  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೬-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಶಾಂತಿ ನಗರದ ವಾಸಿ ನಾಗರಾಜ್ ಎಂಬುವನು ನ್ಯೂ ಟೌನ್ ವಾಸಿ ರುದ್ರಪ್ಪ ಎಂಬುವರನ್ನು ಕುರಿತು ಮನೆಯ ವಿಷಯದಲ್ಲಿ ಜಗಳ ತೆಗೆದು ಕೈಗಳಿಂದ ರುದ್ರಪ್ಪನ ಕತ್ತಿನ ಮೇಲೆ ಹೊಡೆದು ಕೆಟ್ಟ ಮಾತುಗಳಿಂದ ಬೈದು ಹಾಗೂ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೬-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕೋಗಿಲಹಳ್ಳಿ ಗ್ರಾಮದ ವಾಸಿ ಕುಮಾರಿ  ಲಕ್ಷ್ಮಿ (೧೭) ಬಿನ್ ರಮೇಶ್ ಎಂಬುವರು ತೋಟದ ಬೋರ್‌ವೆಲ್‌ ನಿಂದ ಮನೆಗೆ ಹಾಕಿರುವ ಪೈಪಿನಲ್ಲಿ ನೀರು ಬರದೆ ಇರುವ ವಿಚಾರದಲ್ಲಿ ಕೋಗಿಲಹಳ್ಳಿ ಗ್ರಾಮದ ತನ್ನ ತೋಟದ ಮನೆಯ ಬಳಿ ’ಯಾರೋ ಪೈಪ್ ಕಟ್ ಮಾಡಿರುತ್ತಾರೆಂದು ಬೈದುಕೊಳ್ಳುತ್ತಿದ್ದಾಗ ಲಕ್ಷ್ಮಿಯವರ ಚಿಕ್ಕಪ್ಪ ಲಕ್ಷ್ಮಿಯೊಂದಿಗೆ ಜಗಳ ಕಾದು ಒಂದು ಕಲ್ಲಿನಿಂದ ಲಕ್ಷ್ಮಿರವರ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.      

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಭಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೬-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಶ್ರೀ. ಎನ್.ಎನ್.ಪ್ರಸಾದ್, ಪಿ.ಎಸ್.ಐ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಸುಸೈಪಾಳ್ಯಂನಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕಾಗಿ ಇಟ್ಟುಕೊಂಡಿದ್ದು, ಅಲ್ಲಿಗೆ ದಾಳಿ ಮಾಡಲಾಗಿ ಸುಸೈಪಾಳ್ಯಂನ ಮೇರಿ ಕೋಂ ಆಂತೋನಿ ಎಂಬುವರು ಸುಮಾರು ೮೦೦/- ರೂ ಬೆಲೆ ಬಾಳುವ ೮ ಲೀಟರ್‍ ಕಳ್ಳಭಟ್ಟಿ ಸಾರಾಯಿಯನ್ನು ಅಕ್ರಮವಾಗಿ ಮಾರಾಟಮಾಡುತ್ತಿದ್ದವರನ್ನು ಮತ್ತು ಮಾಲನ್ನು ಅಮಾನತ್ತುಗೊಳಿಸಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಮ್ಮಸಂದ್ರ ಗ್ರಾಮದ ವಾಸಿ ಶ್ರೀ ಕೆ.ವೈ.ವೆಂಕಟರಮಣಪ್ಪ ಬಿನ್ ಯಳಚಪ್ಪ ಎಂಬುವರ ಮಗಳಾದ ವಿ.ಪವಿತ್ರ ಎಂಬುವಳು ಕೆ.ಜಿ.ಎಫ್. ಸುಭಾಷಿಣಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ ೨೫-೦೬-೨೦೦೮ ರಂದು ೦೯೦೦ ಗಂಟೆಗೆ ಪರೀಕ್ಷೆಯ ಪ್ರವೇಶ ಪತ್ರ ತರುವುದಾಗಿ ಹೇಳಿ ಮನೆಯಿಂದ ಹೋದವಳು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply