ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ೦೧
-
ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಗಿರುತ್ತದೆ. ಈ ಕೃತ್ಯವು ಆರ್. ಆರ್. ಗ್ರಾನೈಟ್ ಕಛೇರಿ ಕಾಂಪೌಂಡ್ ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೮-೦೬-೨೦೦೮ ರಂದು ರಾತ್ರಿ ಶ್ರೀ. ಶಿವಕುಮಾರ್ ಬಿನ್ ಸುಬ್ಬಣ್ಣ ಎಂಬುವರು ತಮ್ಮ ಮೋಟಾರ್ ಸೈಕಲ್ ಸಂಖ್ಯೆ ಕೆಎ-೦೮-ಜೆ-೬೯೧೧ ಅನ್ನು ಆರ್. ಆರ್. ಗ್ರಾನೈಟ್ ಕಛೇರಿ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಬೆಲೆ ಸುಮಾರು ೨೮೦೦೦/- ರೂಗಳಾಗಿರುತ್ತವೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅಭಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೬-೨೦೦೮ ರಂದು ಶ್ರೀ ಎಂ.ರಾಜಶೇಖರ್, ಎ.ಎಸ್.ಐ, ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಚಾಂಪಯನ್‌ರೀಫ್ಸ್‌ನ ಆಂದ್ರಲೈನ್ ಬಳಿ ಮನೆ ಸಂಖ್ಯೆ ೧೬ ರಲ್ಲಿ ಮನೆ ಮಾಲಿಕ ಜಾನ್ ಬಿನ್ ದಿವ್ಯನಾಥನ್ ಎಂಬುವನು ಮನೆಯಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದವನನ್ನು ಹಿಡಿದುಕೊಂಡು ೫ ಲೀಟರ್ ಕಳ್ಳಭಟ್ಟಿ ಸಾರಾಯಿ, ಸ್ಟೀಲ್ ಕ್ಯಾನು ಮತ್ತು ಎರಡು ಗಾಜಿನ ಗ್ಲಾಸುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
-
ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅಭಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೬-೨೦೦೮ ರಂದು ಶ್ರೀ ವಿ. ಲಕ್ಷ್ಮಯ್ಯ ಪಿ.ಐ. ಡಿ.ಸಿ.ಐ.ಬಿ. ಡಿ.ಪಿ.ಓ. ಕೆ.ಜಿ.ಎಫ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಚಾಂಪಯನ್‌ರೀಫ್ಸ್‌ನ ಮಳಿಯಾಲಿ ಲೈನ್ ಬಿ. ಬ್ಲಾಕ್ ನ ವಾಸಿ ಶ್ರೀಂತಿ ಪಾಪು ಕೋಂ ಲೇಟ್ ಮುರುಗನ್ ಎಂಬುವರು ತಮ್ಮ ಮನೆಯ ಮುಂದೆ ಒಂದು ಬಳಿಯ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ೧೦ ಲೀಟರ್ ಸುಮಾರೂ ಸಾವಿರು ರೂಗಳ ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದವಳನ್ನು ಹಿಡಿದುಕೊಂಡು ಮತ್ತು ಮೇಲ್ಕಂಡ ಮಾಲನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


