ದಿನದ ಅಪರಾಧಗಳ ಪಕ್ಷಿನೋಟ ೨೨ನೇ ಜೂನ್‌ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ   

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ     

-ಸಾಧಾರಣ: ೦೧

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್‌ ರಾಬರ್ಟ್‌ ಸನ್‌ ಪೇಟೆ ಪ್ರಿಚ್ಚರ್‍ಡ್‌ ರಸ್ತೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೨-೦೬-೨೦೦೮ ರಂದು ೧೩೧೦ ಗಂಟೆ ಸಮಯದಲ್ಲಿ ಶ್ರೀ ರಾಜಪ್ಪ ಮತ್ತು ಪತ್ನಿ ಅಮರಾವರಿ ಮತ್ತು ನಾರಾಯಣಸ್ವಾಮಿ ಎಂಬುವರು ಆಟೋ ಸಂಖ್ಯೆ ಎಂಇಬಿ-೪೮೧೩ರಲ್ಲಿ ಕೆ.ಜಿ.ಎಫ್ ನಿಂದ ಅಡಂಪಲ್ಲಿ ಗ್ರಾಮಕ್ಕೆ ಹೋಗುವಾಗ ಆಟೋ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಸ್ವರ್ಣಕುಪ್ಪಂ ತಿರುವಿನಲ್ಲಿ ಪಲ್ಟಿ ಹೊಡೆಸಿ ಆಟೋ ಕೆಳಕ್ಕೆ ಬಿದ್ದು, ರಾಜಪ್ಪ ಮತ್ತು ಪತ್ನಿಗೆ ರಕ್ತಗಾಯಗಳಾಗಿರುತ್ತವೆ. ಹಾಗೂ ನಾರಾಯಣಸ್ವಾಮಿರವರಿಗೆ ಕಾಲು ಮೂಳೆ ಮುರಿದಿರುತ್ತದೆ.  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಸಿದಿಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ನಂಜಪ್ಪ ಗಾರ್ಡನ್, ೧ನೇ ಮುಖ್ಯ ರಸ್ತೆ ೧ನೇ ಕ್ರಾಸ್‌, ಬಾಬೂಸಾಬ್‌ ಪಾಳ್ಯ ಬೆಂಗಳೂರಿನಲ್ಲಿ ಸಂಭವಿಸಿರುತ್ತದೆ. ಶ್ರೀ. ವಿ. ರಮೇಶ್ ಬಿನ್ ವೆಂಕಟಾಚಲಂ(೩೩) ಬೈರಗಾನಹಳ್ಳಿ, ಬಂಗಾರಪೇಟೆ ತಾಲೂಕು ರವರು ದಿನಾಂಕ: ೨೧-೦೬-೨೦೦೮ ರಂದು ಬೆಳಿಗ್ಗೆ ೯-೩೦ ಗಂಟೆ ಸಮಯದಲ್ಲಿ ಬೆಂಗಳೂರಿನಲಿರುವ ತನ್ನ ಮನೆಯ ಬಳಿ ಇರುವಾಗ ಮುರಳಿ, ಅಮ್ಮಯ್ಯಮ್ಮ ರಾಜೇಂದ್ರ, ಮಾರಕ್ಕ, ರಾಜೇಶ್ ಮತ್ತು ವೆಂಕಟಸ್ವಾಮಿ ಎಲ್ಲರೂ ಬೈರಗಾನಹಳ್ಳಿ ವಾಸಿಗಳು ಹಾಲಿ ಮಹದೇವಪುರ ಬೆಂಗಳೂರು ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಹೆಂಡತಿಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಂಡಿರುವುದಾಗಿ ವಿನಾಕಾರಣ ಜಗಳ ಮಾಡಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಚಾಕುವಿನಿಂದ ಎಡಗೈ ಮೇಲೆ ರಕ್ತಗಾಯಪಡಿಸಿ, ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆಯಾಕಿರುತ್ತಾರೆ.

ಹಲ್ಲೆ: ೦೨

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೨-೦೬-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ವರದಾಪುರ ಗ್ರಾಮದ ವಾಸಿ ಶ್ರೀಮತಿ ಕಲಾವತಿ ಕೋಂ ರಾಮಕೃಷ್ಣಪ್ಪ(೩೫) ಮತ್ತು ಅದೇ ಗ್ರಾಮದ ವಾಸಿಗಳಾದ ವೆಂಕಟಮುನಿಯಪ್ಪ, ಲಕ್ಷ್ಮ್ಮ ಮತ್ತು ಶಕುಂತಲಾ ರವರುಗಳು ಕೋಳಿಗಳ ವಿಚಾರದಲ್ಲಿ ಜಗಳ ಮಾಡಿಕೊಂಡು ಕೆಟ್ಟ ಮಾತುಗಳನ್ನು ಬೈದುಕೊಂಡು, ಕಲಾವತಿ ರವರ ಮಗಳು ಶೃತಿ ರವರು ಜಗಳ ಬಿಡಿಸಲು ಬಂದಾಗ ಶಕುಂತಲಾ ರವರು ಒಂದು ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.  
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಹಿರೇಕರಪನಹಳ್ಳಿಯಲ್ಲಿ ಸಂಭವಿಸಿರುತ್ತದೆ. ಶ್ರೀ. ಚಂದ್ರಪ್ಪ ಬಿನ್ ಸೀನಪ್ಪ ಅದೇ ಗ್ರಾಮದ ವಾಸಿಗಳಾದ ಶ್ರೀನಿವಾಸಪ್ಪ ಬಿನ್ ವೆಂಕಟರಾಮಪ್ಪ, ಚಂದ್ರಪ್ಪ ಬಿನ್ ಶ್ರೀನಿವಾಸಪ್ಪ, ನಾಗೇಶಪ್ಪ ಮತ್ತು ಕನಕಮ್ಮ ರವರುಗಳು ಉದ್ದೇಶಪೂರ್ವಕವಾಗಿ ಜಮೀನು ತಕರಾರಿನ ವಿಷಯದಲ್ಲಿ ಚಂದ್ರಪ್ಪ ರವರೊಂದಿಗೆ ಜಗಳ ಕಾದು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಗಿಟ್ಟಿಯಾಗಿ ಹಿಡಿದುಕೊಂಡು ಹೊಡೆದು, ಪ್ರಾಣ ಬೆದರಿಕೆಯಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply