ದಿನದ ಅಪರಾಧಗಳ ಪಕ್ಷಿನೋಟ ೨೧ನೇ ಮೇ ೨೦೦೮

May 21, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ವೀರುಪಾಕ್ಷಪುರ ಗ್ರಾಮದ ಕಾಮಸಮುದ್ರಂ ರಸ್ತೆ ಕಡೆ ಹೋಗುವ ದಾರಿಯಲ್ಲಿ ಈ ಕೃತಯ ಸಂಭವಿಸಿರುತ್ತದೆ. ದಿನಾಂಕ ೨೧-೦೫-೨೦೦೮ ರ ಹಿಂದೆ ಯಾರೋ ದುಷ್ಕರ್ಮಿಗಳು ಯವುದೋ ಕಾರಣಕ್ಕಾಗಿ ಎಲ್ಲಿಯೋ ಸುಮಾರು ೩೦ ವರ್ಷ ವಯಸ್ಸಿನ ಅನಾಮದೇಯ ಹೆಂಗಸಿನ ಕತ್ತನ್ನು ಕೋಯ್ದು ಕೊಲೆ ಮಾಡಿ ಸಾಯಿಸಿ ತಲೆಯನ್ನು ಬೇರ್ಪಡಿಸಿ ಸಾಕ್ಷ್ಯಾದಾರಗಳನ್ನು ಮರೆ ಮಾಚುವ ಉದ್ದೇಶದಿಂದ ರುಂಡವಿಲ್ಲದ ಮುಂಡ ದೇಹವನ್ನು ವೀರೀಪಾಕ್ಷಪುರ ದಿಂದ ಕಾಮಸಮುದ್ರಂ ರಸ್ತೆ ಕಡೆ ಹೋಗುವ ದಾರಿಯ ಪಕ್ಕದಲ್ಲಿ ಬಿಸಾಡಿ ಪರಾರಿಯಾಗಿರುತ್ತಾರೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ:  ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಮಿನಿ ಇಬ್ರಾಹಿಂ ರಸ್ತೆ, ಕೆ.ಎಸ್.ಬಿ ಕಾಂಪ್ಲೆಕ್ಸ್ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೫-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ನ್ಯೂ ಪಟೇಲ್‌ರಸ್ತೆ, ಶ್ರೀನಿವಾಸ ನಿಲಯದ ವಾಸಿ ಶ್ರೀ ಶ್ರೀನಿವಾಸನ್ (೩೨) ಬಿನ್ ಅಣ್ಣಾಮಲೈ ಎಂಬುವರು ತಳ್ಳುವ ಗಾಡಿಯನ್ನು ತಳ್ಳಿಕೊಂಡು ರಾಬರ್ಟ್‌‌ಸನ್‌ಪೇಟೆ ಕಡೆಯಿಂದ ಉರಿಗಾಂಪೇಟೆ ಕಡೆಗೆ ಮಿನಿ ಇಬ್ರಾಹಿಂ ರಸ್ತೆಯ ಕೆಎಸ್‌ಬಿ ಕಾಂಪ್ಲೆಕ್ಸ್ ಹತ್ತಿರ ರಸ್ತೆ ಎಡಬದಿಯಲ್ಲಿ ಹೋಗುತ್ತಿರುವಾಗ ಅದೇ ಮರ್ಗವಾಗಿ ಹಿಂದೆಯಿಂದ ಉರಿಗಾಂಪೇಟೆಯ ವಾಸಿ ಸುರೇಶ್ ಎಂಬುವನು ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಶ್ರೀನಿವಾಸನ್ ರವರಿಗೆ ಡಿಕ್ಕಿಹೊಡೆದು ವಾಹನವನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ. ಶ್ರೀನಿವಾಸನ್ ರವರಿಗೆ ಎರಡೂ ಮೊಣಕಾಲುಗಳು, ತಲೆ, ಬಲತೊಡೆ ಹಾಗೂ ಬಲ ಮುಂಗೈ ರಕ್ತ ಗಾಯವಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತದೆ. ಕೆ.ಜಿ.ಎಫ್ ಉರಿಗಾಂ, ಕೆನೆಡೀಸ್ ನ ಮನೆ ಸಂಖ್ಯೆ ೧೧ ರಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಉರಿಗಾಂನ ಕೆನೆಡೀಸ್ ನ ಮನೆ ಸಂಖ್ಯೆ ೧೧ ನ ವಾಸಿ ಶ್ರೀಮತಿ ಸೆಲ್ವಿ ಕೋಂ ಶಿವಕುಮಾರ್‌ ಎಂಬುವರ ಗಂಡನಿಗೂ ಅದೇ ಕೇರಿಯ ವಾಸಿಗಳಾದ ಅನ್ಬರಸನ್ ಮತ್ತು ಕಾಮರಾಜ್ ರವರುಗಳಿಗೆ ರಾಜಕೀಯವಾಗಿ ವೈಷ್ಯಮ್ಯವಿದ್ದು, ದಿನಾಂಕ ೧೮-೦೫-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಅನ್ಬರಸನ್ ಮತ್ತು ಕಾಮರಾಜ್ ರವರುಗಳು ಸೆಲ್ವಿ ರವರ ಮನೆ ಮುಂದೆ ಬಂದು ಗಂಡ ಇಲ್ಲದ ಸಮಯದಲ್ಲಿ ಕೆಟ್ಟ ಮಾತುಗಳಿಂದು ಬೈದು ಆಕೆಯನ್ನು ಮತ್ತು ಗಂಡನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಇತರೆ: ೦೨

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಬ್ರಾದಿ ಮಾರುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಬ್ಯಾಟರಾಯನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೫-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಶ್ರೀ ಹೆಚ್.ಜೆ.ಶಿವಶಂಕರ್, ಪಿ.ಎಸ್.ಐ ಬೆಮೆಲ್ ನಗರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತವಾದ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಬ್ಯಾಟರಾಯನಹಳ್ಳಿ ಗ್ರಾಮದಲ್ಲಿ ಒಬ್ಬ ಮಹಿಳೆ ಅಕ್ರವಾಗಿ ಬ್ರಾದಿ ಬಾಟೆಲ್‌ಗಳನ್ನು ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ೭೪ ಸೂಪರ್‍ ಜಾಕ್ ವಿಸ್ಕಿ ಬಾಟೆಲ್‌ಗಳನ್ನು ಮತ್ತು ೬೦೦೦/- ಹಣ ಅಮಾನತ್ತು ಪಡಿಸಿಕೊಂಡಿರುತ್ತೆ.
  •   ಆಂಸ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ಲೂರ್ದುನಗರದ ಮಲ್ಲಿಗಾ @ ಮುರುಗನ್‌ ರವರ ಮನೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೫-೨೦೦೮ ರಂದು ೦೬೩೦ ಗಂಟೆ ಸಮಯದಲ್ಲಿ ಶ್ರೀ ಲಕ್ಷ್ಮಯ್ಯ, ಪಿ.ಐ., ಡಿ.ಸಿ.ಐ.ಬಿ, ಡಿ.ಪಿ.ಓ, ಕೆ.ಜಿ.ಎಫ್. ರವರಿಗೆ ಬಂಧ ಖಚಿತ ವರ್ತಮಾನದ ಮೇರೆಗೆ ಆಂಡ್ರಸನ್‌ಪೇಟೆಯ ಪಿ.ಎಸ್.ಐ ಮತ್ತು ಸಿಬ್ಬಂದಿಗಳೊಂದಿಗೆ ಲೂರ್ದನಗರದ ಮಲ್ಲಿಗ @ ಮುರುಗನ್‌ ರವರ ಮನೆಯ ಮೇಲೆ ದಾಳಿಮಾಡಿದಾಗ ಅವರ ಮನೆಯಲ್ಲಿ ಒಂದು ಪ್ಲಾಸ್ಟಕ್ ಬಿಂದಿಗೆಯಲ್ಲಿ ತಯಾರಿಸಿ ಇಟ್ಟಿದ್ದ ೧೦ ಲೀಟರ್ ಕಳ್ಳಬಟ್ಟಿ ಸಾರಾಯಿ ಮತ್ತು ತಯಾರಿಸಲು ಬಳಸಿದ್ದ ಉಪಕರಣಗಳಾದ ೨ ಪ್ಲಾಸ್ಟಿಕ್ ಡ್ರಮ್, ೧೫ ಪ್ಲಾಸ್ಟಿಕ್ ಬಿಂದಿಗೆಗಳು, ೧ ಸ್ಟೀಲ್ ಬಿಂದಿಗೆ, ೨೦೦ ಲೀಟರ್‍ ಖಾಲಿ ಪ್ಲಾಸ್ಟಿಕ್  ಡ್ರಮ್, ಚಕ್ಕೆ ಒಟ್ಟು ಬಲೆ ರೂ ೫೦೦೦/- ಗಳನ್ನು ದಸ್ತಿಗಿರಿಮಾಡಿರುತ್ತಾರೆ. ಆರೋಪಿಗಳು ಪರಾರಿಯಾಗಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಮೇ ೨೦೦೮

May 20, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ:  ೦೧

  •   ಮಾರಿಕುಪ್ಪಂ 

  • ಪೊಲೀಸ್ ಠಾಣೆಯಲ್ಲಿ ಸಾದಾರಣ ರಸ್ತೆ ಅಪಘಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಕೆ.ಜಿ.ಎಫ್., ಮಾರಿಕುಪ್ಪಂನ ಪಂಡಾರಂಲೈನ್ ನಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೯-೦೫-೨೦೦೮ ರಂದು ೧೯೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮುಷ್ಟ್ರಹಳ್ಳಿ ಗ್ರಾಮದ ವಾಸಿ ಶ್ರೀ ಶ್ರೀನಿವಾಸ (೪೫) ಬಿನ್ ವೆಂಕಟಸ್ವಾಮಿ ಎಂಬುವರು ತನ್ನ ಸ್ನೇಹಿತನೊಂದಿಗೆ ಲಗ್ನ ಪತ್ರಕೆಗಳನ್ನು ನೆಂಟರ ಮನೆಗಳಲ್ಲಿ ಹಂಚಿಂಕೊಂಡು ತನ್ನ ಟಿವಿಎಸ್ ಸೂಪರ್ ಎಕ್ಸ್‌ಎಲ್ ಸಂಖ್ಯೆ ಕೆಎ-೦೩-ಇಹೆಚ್-೬೭೧೫ ರಲ್ಲಿ ಕ್ಯಾಸಂಬಳ್ಳಿ ಕಡೆಯಿಂದ ಪಂಡಾರಂಲೈನ್ ಬಳಿ ಬರುತ್ತಿರುವಾಗ ಎದುರುಗಡೆಯಿಂದ ಲಗ್ಗೇಜ್ ಆಟೋ ಸಂಖ್ಯೆ ಕೆಎ-೦೮-೧೭೦೩ ಚಾಲಕ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿವಿಎಸ್‌ಗೆ ಡಿಕ್ಕಿ ಹೊಡೆದ ಪ್ರಯುಕ್ತ ಶ್ರೀನಿವಾಸ್ ಮತ್ತು ಆತನ ಸ್ನೇಯಿತನ ತಲೆಗೆ, ಮೊಣಕಾಲು ಮತ್ತು ಕೈಗಳ ಮೇಲೆ ರಕ್ತ ಗಾಯಗಳಾಗಿರುತ್ತವೆ.

 

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ 

ಇತರೆ: ೦೧ 

  •   ಬಂಗಾರಪೇಟೆ

  • ಪೊಲೀಸ್ ಠಾಣೆಯಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಮೃತ ಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆ ಟೌನ್, ಪಲವತಿಮ್ಮನಹಳ್ಳಿಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೯-೦೫-೨೦೦೮ ರಂದು ಗಾಂಧಿ (೪೦) ಬಿನ್ ಲೇಟ್ ಜಾನ್ ದೊರೈರಾಜ್, ಹೆಂಡ್ರಿಸ್, ಕೆ.ಜಿ.ಎಫ್., ಪುಷ್ಪರಾಜ್ ಬಿನ್ ಚಿನ್ನಸ್ವಾಮಿ (೫೬) ವಾಸ ಪಲವತಿಮ್ಮನಹಳ್ಳಿ ಮತ್ತು ಪಳನಿ (೪೦) ಬಿನ್ ಲೇಟ್ ಪೊನ್ನಪ್ಪ, ಪಲವತಿಮ್ಮನಹಳ್ಳಿ ಎಂಬುವರುಗಳು ಪಲತಿಮ್ಮನಹಳ್ಳಿಯ ಲಕ್ಷ್ಮಿ @ ಅಮ್ಮಯ್ಯಮ್ಮ ಕೋಂ ಸಾಮಿಯಲ್ ಮನೆಯಲ್ಲಿ ಕಳ್ಳಬಟ್ಟಿ ಸಾರಾಯಿ ಸೇವಿಸಿದ ಪ್ರಯುಕ್ತ ದಿನಾಂಕ ೨೦-೦೫-೨೦೦೮ ರಂದು ೩ ಜನರ ಪೈಕಿ ಗಾಂದಿ ಮತ್ತು ಪುಷ್ಪರಾಜ್ ಮೃತ ಪಟ್ಟಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ

  • . ಬಂಗಾರಪೇಟೆ ತಾಲೂಕು ಕಣ್ಣೂರು ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೫-೨೦೦೮ ರಂದು ಬೆಳಿಗಿನ ಜಾವ ಕಣ್ಣೂರು ವಾಸಿ ಶ್ರೀ ಕೃಷ್ಣಪ್ಪ (೫೦) ಎಂಬುವರು ವ್ಯಾಪಾರದಲ್ಲಿ ನಷ್ಟವುಂಟಾದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ರಾಬರ್ಟ್‌ಸನ್‌ಪೇಟೆ 

  • ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣಕ್ಕೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಕೆ.ಜಿ.ಎಪ್. ಆಂದ್ರ ಲೈನ್, ೬ನೇ ಕ್ರಾಸ್ ರಾಬರ್ಟ್‌ಸನ್ಪೇಟೆಯಲ್ಲಿ ಸಂಭವಿಸಿರುತ್ತದೆ. ಶ್ರೀಮತಿ. ಸುಶೀಲಮ್ಮ ಕೋಂ ರಾಜಿ, ಆಂದ್ರ ಲೈನ್ ೬ನೇ ಕ್ರಾಸ್, ರಾಬರ್ಟ್‌ಸನ್ ಪೇಟೆ ರವರ ಮಗಳಾದ ಕುಮಾರಿ ಸುಗಂಧಿನಿ @ ರಮ್ಯ(೨೨) ಎಂಬುವರು ದಿನಾಂಕ: ೧೮-೦೫-೨೦೦೮ ರಂದು ರಾತ್ರಿ ೨೦೦೦ ಗಂಟೆಗೆಯಲ್ಲಿ ಮನೆಯಿಂದ ಹೊರಗಡೆ ಹೋದವಳು ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೮ನೇ ಮೇ ೨೦೦೮

May 18, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ:  ೦೨

  •   ರಾಬರ್ಟ್‌‌ಸನ್ ಪೇಟೆಯಲ್ಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ರಾಬರ್ಟ್‌‌ಸನ್‌ಪೇಟೆಯ ಸುಮತಿ ಜೈನ್ ಶಾಲೆಯ ಬಳಿ ಸಂಭವಿಸಿರುತ್ತದೆ.ದಿನಾಂಕ ೧೭.೦೫.೨೦೦೮ ರಂದು ೧೫೦೫ ಗಂಟೆ ಸಮಯದಲ್ಲಿ ಕೆ.ಎಸ್‌.ಆರ್‍.ಟಿ.ಸಿ ಬಸ್ಸ್‌ ಸಂಖ್ಯೆ ೧೪೪೮ ರ ಚಾಲಕ ಶ್ರೀ. ಶ್ರೀನಿವಾಸ್  ರವರು ವಾಹನವನ್ನು ಕೆ.ಎಸ್.ಆರ್‍.ಟಿ.ಸಿ. ಡಿಪೋ ಕಡೆಯಿಂದ ಚಾಲಯಿಸಿಕೊಂಡು ಸುಮತಿ ಜೈನ್ ಶಾಲೆ ಮುಂಭಾಗ ಬರುತ್ತಿದ್ದಾಗ ಕ್ರೂಸ್ ಬಿನ್ ಲೇಟ್ ಥಾಮಸ್(೪೦) ಎಂಬುವರು ತನ್ನ ವಾಹನ ಸಂಖ್ಯೆ ಕೆಎ-೦೮-ಜೆ-೫೯೬೯ ರಲ್ಲಿ ೩ ಜನರನ್ನು ಕುಳ್ಳರಿಸಿಕೊಂಡು ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಬಸ್ಸಿಗೆ ಡಿಕ್ಕಿ ಹೊಡೆದ ಪ್ರಯುಕ್ತ ದ್ವಿಚಕ್ರ ವಾಹನದ ಚಾಲಕನಿಗೆ ತಲೆಗೆ ರಕ್ತಗಾಯವಾಗಿರುತ್ತದೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ.
  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಅಫೀಸರ್‍ ಕ್ವಾಟ್ರಸ್ ಬಳಿ ಸಂಭವಿಸಿರುತ್ತದೆ. ದಿನಾಂಕ: ೧೮-೦೫-೨೦೦೮ ರಂದು ಬೆಳಿಗ್ಗೆ ೧೧೩೦ ಗಂಟೆ ಸಮಯದಲ್ಲಿ ಕರುಣ ಬಿನ್ ಷಣ್ಮುಗಂ, ಬೆಂಗಳೂರು ವಾಸಿ ತನ್ನ ವಾಹನ ಹುಂಡೈ ಆಸೆಂಟ್ ಕಾರು ಸಂಖ್ಯೆ ಕೆಎ-೫೧-ಎನ್-೭೦೩೦ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಕೊಂಡು ಬಂದು  ಅಫೀಸರ್‍ ಕ್ವಾಟ್ರಸನ್‌ ಬಸ್‌ ನಿಲ್ದಾಣದ ರಸ್ತೆ ಬದಿಯಿದ್ದ ಮೋರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಕಾರು ಜಖಂಗೊಂಡಿರುತ್ತದೆ. 

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಗುಟ್ಟಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಶ್ರೀ. ಗೋವಿಂದಪ್ಪ, ಹಂಗಳ ಗ್ರಾಮದ ವಾಸಿ ದಿನಾಂಕ ೧೭-೦೫-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಅದೇ ಗ್ರಾಮದ ವಾಸಿ ಶ್ರೀನಿವಾಸ ಎಂಬುವರನ್ನು ಬೇತಮಂಗಲಕ್ಕೆ ಕರೆದುಕೊಂಡು ಹೋಗಿ ಬಾರಿನಲ್ಲಿ ಚೆನ್ನಾಗಿ ಮದ್ಯಪಾನ ಕುಡಿಸಿ ಅಲ್ಲಿಯೇ ಬಿಟ್ಟುಬಂದಿದ್ದರಿಂದ ಶ್ರೀ.ಸುಂದರ್‍ರಾಜ್ ಬಿನ್ ವೆಂಕಟರಾಮಪ್ಪ (೩೧), ಹಂಗಳ ಗ್ರಾಮ ವಾಸಿ ನಮ್ಮ ಅಣ್ಣನ್ನು ಏಕೆ ಬೇತಮಂಗಲದಲ್ಲಿಯೇ ಬಿಟ್ಟು ಬಂದಿದ್ದಿಯ ಎಂದು ಕೇಳಿದ್ದಕ್ಕೆ ಗೋವಿಂದಪ್ಪನ ಅಣ್ಣನಾದ ವೆಂಕಟಮುನಿ,ಮುನಿಯಮ್ಮ ಮತ್ತು ಮುನಿಯಮ್ಮ (ವೆಂಕಟಮುನಿ ತಾಯಿ) ಎಲ್ಲಾರು ಸೇರಿಕೊಂಡು ಸಂದರ್‍ರಾಜ್ ರವರಿಗೆ ಮಚ್ಚಿನಿಂದ ಎಡಕೈ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.
  • ಆಂಡ್ರಸನ್ ಪೇಟೆ ಪೊಲೀಸ್ ಠಾಣೆ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ತುಕೂಲ್ ಗ್ರಾಮದಲ್ಲಿ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿಗಳಾದ ವೆಂಕಟರಾಮಪ್ಪ(೩೧) ಎಂಬುವರಿಗೂ ಮತ್ತು  ಕೃಷ್ಣಮೂರ್ತಿ ಮತ್ತು ಚೌಡಪ್ಪ ಎಂಬುವರುಗಳು ಮನೆ ಕಟ್ಟುವು ವಿಚಾರದಲ್ಲಿ ಜಗಳ ಮಾಡಿಕೊಂಡು ವೆಂಕಟರಾಮಪ್ಪನಿಗೆ ಕೃಷ್ಣಮೂರ್ತಿ ಮತ್ತು ಚೌಡಪ್ಪ ರವರುಗಳು ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆಯ ಆರ್‍.ಕೆ.ಎನ್. ಮಿಲ್ ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಬಿ.ಆರ್‍. ನಾರಾಯಣಪ್ಪ, ಬಸಾಪುರ ಗಾಗ್ರದ ವಾಸಿ ದಿನಾಂಕ: ೧೭-೦೫-೨೦೦೮ ರಂದು ೧೩೧೫ ಗಂಟೆ ಸಮಯದಲ್ಲಿ ಆರ್‍.ಕೆ.ಎನ್. ಮಿಲ್ ನಲ್ಲಿ ಹಳೆಯ ಬಿಲ್ಡಿಂಗ್ ದುರಸ್ತಿ ಮಾಡಲು ಏಣಿ ಹಾಕಿಕೊಂಡು ಸಿಮೆಂಟ್ ಶೀಟಿನ ಮೇಲೆ ನಡೆದುಕೊಂಡು ಹೋಗುವಾಗ ಸದರಿ ಸಿಮೆಂಟ್ ಶೀಟ್ ಹೊಡೆದು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು, ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮದ್ಯದಲ್ಲಿಯೇ ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಮೇ ೨೦೦೮

May 15, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚೆನ್ನಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೩-೦೫-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಚೆನ್ನಪಲ್ಲಿ ಗ್ರಾಮದ ವಾಸಿ ಶ್ರೀ ರಾಮಚಂದ್ರಪ್ಪ (೫೫) ಬಿನ್ ಮುನಿಸ್ವಾಮಿ ಎಂಬುವರು ತಮ್ಮ ಮನೆಯಲ್ಲಿರುವಾಗ ಅದೇ ಗ್ರಾಮದ ವಾಸಿ ಹರೀಶ್ ಎಂಬುವರು ಚೆನ್ನಾಗಿ ಕುಡಿದು ರಾಮಚಂದ್ರಪ್ಪ ರವರ ಮನೆಯ ಬಳಿ ಬಂದು ಮನೆಯ ವಿಷಯದಲ್ಲಿ ವಿನಾ ಕಾರಣ ಜಗಳ ತೆಗೆದು ಕೆಟ್ಟ ಮಾತಿನಿಂದ ಬೈದು ರಾಮಚಂದ್ರಪ್ಪನವರ ಗಲ್ಲಾಪಟ್ಟಿ ಹಿಡಿದುಕೊಂಡು ಕೈ ಮುಷ್ಟಿಯಿಂದ ಮುಖದ ಮೇಲೆ ಹೊಡೆದ ಪ್ರಯುಕ್ತ ಒಂದು ಹಲ್ಲು ಮುರಿದಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಮಾಕಾರಲಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಮಾಕಾರಲಹಳ್ಳಿ ಗ್ರಾಮದ ವಾಸಿ ಅನಿಲ್ ಕುಮಾರ್‍ (೧೬) ಬಿನ್ ವೆಂಟೇಶಪ್ಪ ಎಂಬುವನು ಇತ್ತೀಚಿಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು ಅದರಲ್ಲಿ ಸ್ನೇಹಿತರೆಲ್ಲರೂ ಉತ್ತೀರ್ಣರಾಗಿದ್ದು ತಾನು ಮಾತ್ರ ಅನುತ್ತೀರ್ಣನಾಗಿದ್ದು ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ ೧೪-೦೫-೨೦೦೮ ರಂದು ೧೬೦೦ ಗಂಟೆಯಲ್ಲಿ ಕ್ರಿಮಿನಾಶಖ ಔಷದಿಯನ್ನು ಕುಡಿದು ಮೃತಪಟ್ಟಿರುತ್ತಾನೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್ ಅಮರಾವತಿ ನಗರದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಅಮರಾವತಿ ನಗರದ ವಾಸಿ ಕುಮಾರಿ ವಿಂದ್ಯ (೨೦) ಬಿನ್ ವೃಷಬೇಂದ್ರ ಎಂಬುವಳಿಗೆ ಈಗ್ಗೆ ಸುಮಾರು ವರ್ಷಗಳಿಂದ ತಲೆನೋವು ಮತ್ತು ಎದೆನೋವು ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖಳಾಗದೆ ಇದ್ದು ದಿನಾಂಕ ೧೪-೦೫-೨೦೦೮ ರಂದು ಎಂದಿನಂತೆ ಕಾಲೇಜಿಗೆ ಹೋಗಿ ಮದ್ಯಾನ್ಹ ಸುಮಾರು ೧೩೦೦ ಗಂಟೆ ಸಮಯದಲ್ಲಿ ಮನೆಗೆ ವಾಪಸ್ಸು ಬಂದಾಗ ಎದೆನೋವು ಮತ್ತು ತಲೆನೋವು ಬಂದು ನೋವು ತಡೆಯಲಾರದೆ ತನ್ನ ಜೀವನದಲ್ಲಿ ಜಿಗೂಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾಳೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೪ನೇ ಮೇ ೧೦೦೮.

May 14, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ರಾಬರ್ಟ್‌‌ಸನ್‌ಪೇಟೆ, ಪ್ರಿಚಾರ್ಡ್ ರಸ್ತೆಯ ವಿಜಯಲಕ್ಷ್ಮಿ ಕಾಂಪೌಂಡ್ ನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೨-೦೫-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ವಿಜಯಲಕ್ಷ್ಮಿ ಕಾಂಪೌಂಡ್ ವಾಸಿ ಶ್ರೀಮತಿ ಸರಸ್ವತಮ್ಮ (೬೨) ಕೋಂ ರಾಮಕೃಷ್ಣಪ್ಪ ಎಂಬುವರ ಬಳಿ ತನ್ನ ಮಗನಾದ ಮಮಜುನಾಥ್ ಎಂಬುವನು ಹಣದ ವಿಚಾರವಾಗಿ ವಿನಾ ಕಾರಣ ಜಗಳ ಕಾದು ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಇತರೆ: ೦೧

  • ರಾಬರ್ಟ್‌‌ಸನ್‌ಪೇಟೆ 

  • ಪೊಲೀಸ್ಠಾಣೆಯಲ್ಲಿ ಆರೋಪಿ ಪರಾರಿ ಪ್ರಕರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವರದಕ್ಷಿಣೆ ಕಿರುಕುಳ ಪ್ರಕಣದಲ್ಲಿ ಭಾಗಿಯಾಗಿರುವ ಶ್ರೀ. ಇಳಿಯರಾಜ ಬಿನ್ ದಾಸ(೩೩), ಹರಿಶ್ಚಂದ್ರ ದೇವಸ್ಥಾನ ಬೀದಿ, ಆಂಡ್ರಸನ್‌ಪೇಟೆ ರವರನ್ನು ದಿನಾಂಕ ೧೩-೦೫-೨೦೦೮ ರಂದು ೧೭೧೫ ಗಂಟೆ ಸಮಯದಲ್ಲಿ ಶ್ರೀ. ಬಾಲಕೃಷ್ಣ, ಪೊಲೀಸ್ ಪೇದೆ ರವರು ನ್ಯಾಯಾಲಯಕ್ಕೆ ಹಾಜರು ಪಡಿಸಲು ನ್ಯಾಯಾಲಯಕ್ಕೆ ಕರೆತಂದು ಶೌಚಾಲಯದ ಬಳಿ ಬಿಟ್ಟಾಗ ಇಳಿಯರಾಜ ಪೇದೆಯ ಕಣ್ಣು ತಪ್ಪಿಸಿ ಕಾಂಪೌಂಡ್ ಜಿಗಿದು ತಪ್ಪಿಸಿಕೊಂಡು ಓಡಿಹೋಗಿದ್ದು, ಬಗ್ಗೆ ರಾಬರ್ಟ್‌‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತದೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೩ ನೇ ಮೇ ೨೦೦೮

May 14, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ಹರಿಶ್ಚಂದ್ರ ದೇವಸ್ಥಾನ ರಸ್ತೆಯಲ್ಲಿ ಸಂಭವಿಸಿರುತ್ತದೆ. ಕೆ.ಜಿ.ಎಫ್. ಚಾಮರಾಜಪೇಟೆ ಮನೆ ಸಂಖ್ಯೆ ೨೩ ವಾಸಿ ಶ್ರೀಮತಿ ಆಶಾ (೨೫) ಮತ್ತು ಇಳಯರಾಜ ಎಂಬುವರುಗಳು ಒಬ್ಬರನ್ನೊಬ್ಬರು ಪ್ರೀತಿಸಿ ಈಗ್ಗೆ ವರ್ಷಗಳ ಹಿಂದೆ ತಮ್ಮ ತಂದೆ ತಾಯಿ ಹಾಗೂ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಆಂಡ್ರಸನ್‌ಪೇಟೆಯ ಹರಿಶ್ಚಂದ್ರ ದೇವಸ್ಥಾನ ರಸ್ತೆಯಲ್ಲಿ ವಾಸವಾಗಿದ್ದು ಈಗ್ಗೆ ವರ್ಷಗಳಿಂದ ಆಶಾ ರವರ ಗಂಡ ಇಳಯರಾಜ ಸಂಸಾರಕ್ಕೆ ಸರಿಯಾಗಿ ಸಾಮಾಗ್ರಿಗಳನ್ನು ತರದೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಅದನ್ನು ತಾಳಲಾರದೆ ಆಶಾ ರವರು ಚಾಮರಾಜಪೇಟೆಯ ತನ್ನ ತಾಯಿಯ ಮನೆಗೆ ಹೋಗಿದ್ದು ದಿನಾಂಕ ೧೨-೦೫-೨೦೦೮ ರಂದು ೧೪೦೦ ಗಂಟೆಗೆ ಇಳಯರಾಜ ಆಶಾ ರವರ ತಾಯಿಯ ಮನೆಗೆ ಬಂದು ಗಲಾಟೆ ಮಾಡಿ ಹಿಂಸೆ ನೀಡಿರುತ್ತಾನೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳಿ ಹೋಬಳಿ, ಬಾಣಗಿರಿಗೊಲ್ಲಹಳ್ಳಿ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ ೧೨-೦೫-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಬಾಣಗಿರಿಗೊಲ್ಲಹಳ್ಳಿ ಗ್ರಾಮದ ವಾಸಿ ಶ್ರೀ ರಾಮಲಿಂಗಂ (೩೦) ಬಿನ್ ಆರಮುಗಂ ಎಂಬುವರು ಬಾಣಗಿರಿಗೊಲ್ಲಹಳ್ಳಿ ಗ್ರಾಮದ ಹತ್ತಿರವಿರುವ ಅವರ ತೋಟದಿಂದ ಮನೆಗೆ ಹೋಗಲು ಅದೇ ಗ್ರಾಮದ ಸಂಪತ್‌ರಾವ್ ರವರ ತೆಂಗಿನ ತೋಪಿನ ಹತ್ತಿರ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿಗಳಾದ ಮಂಜುನಾಥರೆಡ್ಡಿ ಮತ್ತು ಆನಂದರೆಡ್ಡಿ ಇಬ್ಬರೂ ರಾಮಲಿಂಗಂ ರವರ ಎದುರಿಗೆ ಬಂದು ಮಂಜೂನಾಥ್ ರವರ ಜಮೀನಿನಲ್ಲಿ ಟ್ರಾಕ್ಟರ್ ಓಡಿಸಿ ಜಮೀನು ನಾಶ ಮಾಡುವ ವಿಷಯದಲ್ಲಿ ಜಗಳ ತೆಗೆದು ದೊಣ್ಣೆಯಿಂದ ರಾಮಲಿಂಗಂ ರವರ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೧ನೇ ಮೇ ೨೦೦೮

May 11, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಪಟ್ಟಣದ ಕಾರಹಳ್ಳಿ ರಸ್ತೆ, ಶಾಂತಿನಗರದ ಮನೆ ನಂ. ೩೦೦೫ರಲ್ಲಿ ಸಂಭವಿಸಿರುತ್ತದೆ. ದಿನಾಂಕ ೦೯-೦೫-೨೦೦೮ ರಂದು ಬೆಳಿಗ್ಗೆ ಸುಮಾರು ೦೮೦೦ ಗಂಟೆಯಲ್ಲಿ ಇದೇ ಮನೆಯ ವಾಸಿಯಾದ ಶ್ರೀ ಎ.ನಂಜುಂಡಗೌಡ (೫೨) ಬಿನ್ ಅಣ್ಣಯ್ಯಗೌಡ ಎಂಬುವರು ತನ್ನ ಕುಟುಂಬದೊಂದಿಗೆ ತನ್ನ ಸ್ವಂತ ಗ್ರಾಮವಾದ ಆಲೇರಿ ಗ್ರಾಮಕ್ಕೆ ಹೋಗಿದ್ದು, ಅದೇ ದಿನ ರಾತ್ರಿ ಯಾರೋ ಕಳ್ಳರು ಮನೆಯ ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಕಿತ್ತು, ಮನೆಯ ಒಳಗೆ ಇದ್ದ ಬೀರು ಮತ್ತು ಕಬ್ಬಿಣದ ಪೆಟ್ಟಿಗೆಯನ್ನು ತೆಗೆದು ಅದರಲ್ಲಿದ್ದ ರೂ.೭೫,೦೦೦/- (ಎಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ಗಳ ನಗದು ಹಾಗೂ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೇಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ಮಾರಿಕುಪ್ಪಂನ ಮೈರೆಡಿಮೆಂಟ್ ಚರ್ಚ್‌ ಗ್ರೌಂಡ್ ಸಮೀಪ ಸಂಭವಿಸಿರುತ್ತದೆ. ದಿನಾಂಕ ೧೧-೦೫-೨೦೦೮ ರಂದು ೧೪೪೫ ಗಂಟೆ ಸಮಯದಲ್ಲಿ ಸೆಲ್ವಕುಮಾರ್ (೨೦) ಬಿನ್ ಎಡ್ಜರ್ಡ್‌‌ಕುಮಾರ್, ಮಿಷನ್ ಬ್ಲಾಕ್ ಮಾರಿಕುಪ್ಪಂ ರವರು ತನ್ನ ಸ್ನೇಹಿತರೊಂದಿಗೆ ಮೈರೆಡಿಮೆಂಟ್ ಚರ್ಚ್ ಮೈದಾನದಲ್ಲಿ ಕ್ರಿಕೇಟ್ ಆಟವಾಡುತ್ತಿದ್ದಾಗ ಅದೇ ಕೇರಿಯ ಪ್ರಸನ್ನ @ ಅರುಣ್ ಎಂಬುವರು ವಿನಾ ಕಾರಣ ಸೆಲ್ವಕುಮಾರ್ ರವರೊಂದಿಗೆ ಜಗಳಕಾದು ಕ್ರಿಕೇಟ್ ಸ್ಟಮ್ ನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.  

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೮ನೇ ಮೇ ೨೦೦೮

May 9, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೯-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ:  ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಬಂಗಾರಪೇಟೆ ತಾಲೂಕು ಕನಮನಹಳ್ಳಿ-ಡಿ.ಪಿ. ಹಳ್ಳಿ ಮದ್ಯೆ ಸಂಭವಿಸಿರುತ್ತದೆ. ದಿನಾಂಕ ೦೮.೦೫.೨೦೦೮ ರಂದು ಬೆಳಿಗ್ಗೆ ೭.೦೦ ಗಂಟೆಯಲ್ಲಿ ಪೆರಿಯಣ್ಣ ಬಿನ್‌ ವಯ್ಯಾಪುರಿ(೨೬) ಗುಲ್ಲಾಯನೂರು, ದರ್ಮಪುರಿ ಜಿಲ್ಲೆ, ತಮಿಳು ನಾಡು ರವರು ತನ್ನ ವಾಹನ ಈಚರ್‍ ಸಂಖ್ಯೆ ಟಿಎನ್-೨೯-ಎಎ-೮೦೩೫ ಅನ್ನು ಚಲಾಯಿಸಿಕೊಂಡು  ಕನಮನಹಳ್ಳಿ-ಡಿ.ಪಿ. ಹಳ್ಳಿ ರಸ್ತೆಯ ನಡುವೆ ಕೆ.ಜಿ.ಎಫ್‌ ಕಡೆಗೆ ಬರುತ್ತಿರುವಾಗ ಟಿಎನ್-೨೯-ಯು-೨೩೨೩ರ ಬಸ್ ನ ಚಾಲಕ ಮುರುಗನ್‌ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಈಚರ್‍ ವಾಹನಕ್ಕೆ ಡಿಕ್ಕಿ ಹೊಡದ ಪ್ರಯುಕ್ತ, ಈಚರ್‍ ವಾಹನ ಜಖಂಗೊಂಡು ೧,೨೦,೦೦೦/- ರೂ ನಷ್ಟ ಉಂಟಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂದಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ರಾಬರ್ಟ್‌‌ಸನ್‌ಪೇಟೆ ಸ್ವಾಮಿನಾಥಪುರಂ ಬಳಿ ಸಂಭವಿಸಿರುತ್ತದೆ. ಶ್ರೀ. ರಘು ಬಿನ್ ನಾರಾಯುಣಪ್ಪ, ಬೇತಮಂಗಲ ರವರು ದಿನಾಂಕ: ೦೮.೦೫.೨೦೦೮ ರಂದು ರಾತ್ರಿ ೨೩೧೫ ಗಂಟೆಯಲ್ಲಿ ಕೆ.ಜಿ.ಎಫ್‌ ನಿಂದ ಸ್ವಾಮಿನಾಥಪುರದ ಕಡೆಗೆ ಟಾಟಾ ಸುಮೋ ಸಂಖ್ಯೆ ಕೆಎ-೩೪-ಎಂ-೧೨೮೬ದಲ್ಲಿ ಹೋಗುತ್ತಿರುವಾಗ ಯಾರೋ ೬ ಜನ ಅಪರಿಚಿತ ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ, ಕಲ್ಲು, ಕಬ್ಬಿಣ್ಣದ ರಾಡುಗಳಿಂದ ಹಾಗೂ ದೊಣ್ಣೆಗಳಿಂದ ವಾಹನದಲ್ಲಿದ್ದ ರಘು ಹಾಗೂ ಇತರೆ ೩ ಜನರಿಗೆ ಹೊಡೆದು ರಕ್ತಗಾಯಪಡಿಸಿ, ವಾಹನವನ್ನು ಜಖಂಗೊಳಿಸಿ ಓಡಿಹೋಗಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯ ಸಹರಹದ್ದು,   ಶ್ರೀ. ಲೋಕಯ್ಯನಾಯ್ಡು ಬಿನ್ ಜನಾರ್ದನನಾಯ್ಡು, ಉರಿಗಾಂ ಕೆ.ಜಿ.ಎಫ್ ರವರಿಗೆ ಸೇರಿದ ನಾಗಲಾಪಲ್ಲಿಯಲ್ಲಿರುವ ಸರ್ವೇ ನಂ. ೨೭/೨ರಲ್ಲಿನ ಇಟ್ಟಿಗೆ ಪ್ಯಾಕ್ಟರಿಗೆ ದಿನಾಂಕ ೦೯.೦೫.೨೦೦೮ ರಂದು ಬೆಳಗಿನ ಜಾವ ೩.೧೫ ಗಂಟೆಯಲ್ಲಿ ಯಾರೋ ೪-೫ ಜನ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಪ್ಯಾಕ್ಟರಿಯ ಹೆಂಚುಗಳು ತರಾಯಿಗಳು ಮತ್ತು ರೀಪೀಸುಗಳು ನೀಲಗಿರಿ ತುಂಡುಗಳು ಸುಟ್ಟು ಬೂದಿಯಾಗಿ ಸುಮಾರು ರೂ. ೭೫,೦೦೦/- ಗಳಷ್ಟು ನಷ್ಟವುಂಟಗಿರುತ್ತದೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಸಂಗನಹಳ್ಳಿ ಗ್ರಾಮದ ಬಳಿ ನಡೆದಿರುತ್ತದೆ. ದಿನಾಂಕ: ೦೮.೦೫.೨೦೦೮ ರಂದು ರಾತ್ರಿ ಸುಮಾರು ೮-೩೦ ಗಂಟೆ ಸಮಯದಲ್ಲಿ ಬೆಮೆಲ್ ನಗರ ಪೊಲೀಸ್ ಠಾಣೆ ಪಿ.ಎಸ್.ಐ. ರವರಿಗೆ ಬಂದ ಖಚಿತ ವರ್ತಮಾನ ಮೇರೆಗೆ ಸಿಂಗರಹಳ್ಳಿ ಗ್ರಾಮದಲ್ಲಿ ವೆಂಕಟಪ್ಪ ಬಿನ್ ನ್ಯಾತಪ್ಪ (೫೪) ಮತ್ತು ರಾಜು ಬಿನ್ ಗುರಪ್ಪ(೪೩) ರವರುಗಳು ಜೆಡಿಎಸ್ ಅಭ್ಯರ್ಥಿ ಶೇಷುರವರಿಗೆ ಮತ ಚಲಾಯಿಸುವಂತೆ ಹಣದ ಅಮಿಷ ತೋರಿಸಿ ಹಣ ಮತ್ತು ಕರಪತ್ರಗಳನ್ನು ನೀಡಿ, ಚುನಾವಣೆ ಪ್ರಚಾರದ ವೇಳೆ ಮುಗಿದರು ಸಹ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು, ಈ ಸಂಬಂದ ಪ್ರಕರಣದ ದಾಖಲಿಸಿ ಕ್ರಮಕೈಗೊಂಡಿರುತ್ತದೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

  ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೮ನೇ ಮೇ ೨೦೦೮

May 8, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ:  ೦೧

  •   ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಬಂಗಾರಪೇಟೆ-ಕೆ.ಜಿ.ಎಫ್. ಮುಖ್ಯರಸ್ತೆ, ದಾಸರಹೊಸಹಳ್ಳಿ ಗ್ರಾಮದ ಕೈಲಾಷ್‌ ಸಾಮಿಲ್ ಬಳಿ ನಡೆದಿರುತ್ತದೆ. ದಿನಾಂಕ ೦೭-೦೫-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ಗ್ರಾಮದ ವಾಸಿ ಶ್ರೀ ಮುನಿಸ್ವಾಮಿ (೭೨) ಬಿನ್ ಲೇಟ್. ನಾರಾಯಣಸ್ವಾಮಿ ಎಂಬುವರು ತನ್ನ ಸೈಕಲ್‌ನಲ್ಲಿ ಕೈಲಾಷ್‌ ಸಾಮಿಲ್‌ ಬಳಿ ಹೋಗುತ್ತಿದ್ದಾಗ, ಮಾರುತಿ ಒಮನಿ ಕಾರ್‌ ಸಂಖ್ಯೆ: ಕೆಎ-೦೧-೩೧೬೯ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್‌ಗೆ ಡಿಕ್ಕಿ ಹೊಡೆದು ಅಲ್ಲಿಂದ ಕಾರ್‌ ಸಮೇತ ಹೊರಟು ಹೋಗಿರುತ್ತಾನೆ. ಈ ಪ್ರಯುಕ್ತ ಸೈಕಲ್‌ ಸವಾರ ಶ್ರೀ ಮುನಿಸ್ವಾಮಿ ರವರಿಗೆ ತಲೆ, ಎಡಗಣ್ಣಿನ ಹುಬ್ಬು, ಗಡ್ಡದ ಮೇಲೆ ರಕ್ತಗಾಯಗಳಾಗಿರುತ್ತವೆ. 

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಚನ್ನಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ ೨೭-೦೪-೨೦೦೮ ರಂದು ಬೆಳಿಗ್ಗೆ ೧೦೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಚನ್ನಪಲ್ಲಿ ಗ್ರಾಮದ ವಾಸಿಗಳಾದ ಶ್ರೀ ಎಂ.ರಾಧಕೃಷ್ಣ (೩೭) ಬಿನ್ ಗಿಡ್ಡಮುನಿಸ್ವಾಮಿ ಮತ್ತು ಈತನ ಹೆಂಡತಿ ಶ್ರೀಮತಿ ವಸಂತಮ್ಮ ಎಂಬುವರು ಅದೇ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬುವರ ಬಳಿ ತಮ್ಮ ಪಾಲಿನ ಜಮೀನು ನೀಡಲು ಕೇಳಿದ್ದಕ್ಕೆ ಶ್ರೀನಿವಾಸ ಮತ್ತು ಶ್ರೀಮತಿ ಸಾವಿತ್ರಮ್ಮ ಎಂಬುವರು ಆಸ್ತಿ ಕೊಡುವುದಿಲ್ಲವೆಂದು ಜಗಳ ತೆಗೆದು ಶ್ರೀ ಎಂ.ರಾಧಾಕೃಷ್ಣ ಎಂಬುವರಿಗೆ ಬಲಕೈ ಬೆರಳನ್ನು ತಿರುವಿ ಮುರಿದು ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯವುಂಟು ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ಶ್ರೀಮತಿ ವಸಂತಮ್ಮ ಎಂಬುವರಿಗೆ ಶ್ರೀಮತಿ ಸಾವಿತ್ರಮ್ಮ ರವರು ಕೈಗಳಿಂದ ಹೊಡೆದಿರುತ್ತಾಳೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಕದಿರಿನತ್ತಂ ಬಳಿ ನಡೆದಿರುತ್ತದೆ. ದಿನಾಂಕ ೦೭-೦೫-೨೦೦೮ ರಂದು ಮದ್ಯಾಹ್ನ ಸುಮಾರು ೧೫೩೦ ಗಂಟೆ ಸಮಯದಲ್ಲಿ ಕೊಂಗರಹಳ್ಳಿ ಗ್ರಾಮದ ವಾಸಿಯಾದ ಶ್ರೀ ಬಾಬಾ (೩೧) ಬಿನ್ ಬಷೀರ್‍  ಎಂಬುವರು ಯಾವುದೇ ರಹದಾರಿ ಇಲ್ಲದೆ ಸುಮಾರು ೧೦ ಲೀಟರ್‌ನಷ್ಟು ಕಳ್ಳಬಟ್ಟಿ ಸಾರಾಯಿಯನ್ನು ಪ್ಲಾಸ್ಟಿಕ್‌ ಕ್ಯಾನ್‌ನಲ್ಲಿ ಅಕ್ರಮವಾಗಿ ಕದಿರಿನತ್ತಂ ಕಡೆಯಿಂದ ಬಸ್‌ನಿಲ್ದಾಣದ ಕಡೆಗೆ ಸಾಗಿಸುತ್ತಿದ್ದಾಗ ಕಾಮಸಮುದ್ರಂ ಪೊಲೀಸ್ ಠಾಣೆಯ ಪಿ.ಎಸ್.ಐ. ರವರು ಕಂಡು ಮಾಲಿನ ಸಮೇತ ಶ್ರೀ ಬಾಬಾ ರವರನ್ನು ಪೊಲೀಸ್ ವಶಕ್ಕೆ ಪಡೆದು ಕಾನೂನಿನ ಕ್ರಮಕೈಗೊಂಡಿರುತ್ತಾರೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದ ವಾಸಿ ಶ್ರೀ ಶ್ರೀನಿವಾಸರೆಡ್ಡಿ ರವರು ದೇಶಿಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ಯಾವುದೇ ಪರವಾನಗಿಯಿಲ್ಲದೆ ಅಕ್ರಮವಾಗಿ ಸುಮಾರು ೧೭೮ ಕೇಸ್‌ಗಳ ಮದ್ಯವನ್ನು ದಾಸ್ತಾನು ಮಾಡಿದ್ದು, ಬಂಗಾರಪೇಟೆ ಪೊಲೀಸ್ ಠಾಣೆ ಪಿ.ಎಸ್.ಐ. ಶ್ರೀ ಮೋಹನ್ ಎಂಬುವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತನ್ನ ಸಿಬ್ಬಂದಿಯೊಂದಿಗೆ ದಿನಾಂಕ ೦೮-೦೫-೨೦೦೮ ರಂದು ಮದ್ಯಾಹ್ನ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಸೂಕ್ತ ಕ್ರಮ ಕೈಗೊಂಡಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್.ನ ನ್ಯೂ ಕಾಲೋನಿ, ಸುಂದರ್‌ಮ್ಮಾಳ್‌ ಕಾಂಪೌಂಡ್‌, ಇರುದಿಯಪುರಂ ನಲ್ಲಿ ನಡೆದಿರುತ್ತದೆ. ದಿನಾಂಕ ೦೭-೦೫-೨೦೦೮ ರಂದು ರಾತ್ರಿ ೧೯೦೦ ಗಂಟೆಯಲ್ಲಿ ಇರುದಿಯಪುರಂನಲ್ಲಿ ವಾಸವಾಗಿರುವ ಶ್ರೀಮತಿ ಲಕ್ಷ್ಮಿ (೩೨) ಎಂಬುವರು ತನ್ನ ಗಂಡ ಕುಮಾರ್‍ ಎಂಬುವರು ಈಗ್ಗೆ ಸುಮಾರು ೦೬ ತಿಂಗಳ ಹಿಂದೆ ಮೃತಪಟ್ಟಿದ್ದು, ಈ ದಿಸೆಯಲ್ಲಿ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೭ನೇ ಮೇ ೨೦೦೮

May 7, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ:  ೦೨

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಅಪಘಾತವು ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ರಾಬರ್ಟ್‌‌ಸನ್‌ಪೇಟೆಯ ಮಿನಿ ಇಬ್ರಾಹಿಂ ರಸ್ತೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೦೬-೦೫-೨೦೦೮ ರಂದು ೧೮೧೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಉರಿಗಾಂ ಪೇಟೆ ವಾಸಿಯಾದ ಶ್ರೀ ಅಬ್ದುಲ್‌ಅಜೀಜ್ @ ನೂರುಲ್ಲಾ ಬಿನ್ ಲೇಟ್ ಅಬ್ದುಲ್ಲಾ ಸುಬಾನ್ ಎಂಬುವರ ಮಗಳಾದ ಸಾದಿಕ್‌ ಎಂಬುವರು ಸೈಕಲ್‌ನಲ್ಲಿ ರಾಬರ್ಟ್‌‌ಸನ್‌ಪೇಟೆ ಕಡೆಯಿಂದ ಉರಿಗಾಂಪೇಟೆ ಕಡೆಗೆ ಹೋಗಲು ಮಿನಿ ಇಬ್ರಾಹಿಂ ರಸ್ತೆಯಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಯಾವುದೋ ಒಂದು ಆಟೋವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಸೈಕಲ್‌ಗೆ ಡಿಕ್ಕಿ ಹೊಡೆದ ಪ್ರಯುಕ್ತ ಸಾದಿಕ್‌ ರವರು ಕಲ್ಲುಗಳ ಮೇಲೆ ಬಿದ್ದು ರಕ್ತಗಾಯಗಳಾಗಿರುತ್ತವೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೫-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ವಾಸಿ ಶ್ರೀ ಮುತ್ಯಾಲ (೨೩) ಬಿನ್ ಚಿನ್ನಪ್ಪ ಎಂಬುವರು ತನ್ನ ಮೋಟಾರ್ ಸೈಕಲ್‌ ಸಂಖ್ಯೆ: ಎಂಇಪಿ-೯೨೬೦ ರಲ್ಲಿ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿಯಲ್ಲಿ ಅನಿಲ್‌ ಮಿಲ್‌ ಸಮೀಪ ಹೋಗುತ್ತಿದ್ದಾಗ ಎಸ್‌.ಎಸ್‌.ಎನ್‌. ಬಸ್‌ ಸಂಖ್ಯೆ: ಟಿಎನ್‌-೫೫-ಜೆ-೬೩೬೪ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್‍ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದರಿಂದ ಶ್ರೀ ಮುತ್ಯಾಲ ಎಂಬುವರಿಗೆ ರಕ್ತಘಾಯಗಳಾಗಿರುತ್ತವೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೫-೨೦೦೮ ರಂದು ಬೆಳಿಗ್ಗೆ ೧೧೩೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ಸೂರೇಗೌಡನಕೋಟೆ ಗ್ರಾಮದ ವಾಸಿಗಳಾದ ಸುರೇಶ್ ಮತ್ತು ಗಂಗಪ್ಪ ಹಾಗೂ ಬಂಗಾರಪೇಟೆ ಪಟ್ಟಣದ ವಾಸಿಯಾದ ಚಾಂದ್ ಎಂಬುವರು ಚುನಾವಣಾಧಿಕಾರಿಗಳಿಂದ ಯಾವುದೇ ಪರವಾನಿಗೆ ಮತ್ತು ಅನುಮತಿ ಇಲ್ಲದೆ ಟೆಂಪೋ ಸಂಖ್ಯೆ: ಕೆಎ-೨೭-೪೮೫೪ ಮತ್ತು ಕೆಎ-೪೦-೮೧ ಗಳನ್ನು ಬಿ.ಜೆ.ಪಿ.ಪರವಾಗಿ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿಯಲ್ಲಿ ಚುನಾವಣೆ ಮಾಡುವ ಸಲುವಾಗಿ ಉಪಯೋಗಿಸಿ ಚುನಾವಣಾ ನೀತಿ ಉಲ್ಲಂಘಿಸಿರುತ್ತಾರೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೫-೨೦೦೮ ರಂದು ಮದ್ಯಾಹ್ನ ೧೪೧೫ ಗಂಟೆಯಲ್ಲಿ ಕೋಲಾರ ಪಟ್ಟಣದ ವಾಸಿಗಳಾದ ಮಂಜುನಾಥ ಮತ್ತು ಅನಿಲ್ ಎಂಬುವರು ಚುನಾವಣಾಧಿಕಾರಿಗಳಿಂದ ಯಾವುದೇ ಪರವಾನಿಗೆ ಮತ್ತು ಅನುಮತಿ ಇಲ್ಲದೆ ಕ್ವಾಲೀಸ್ ಕಾರ್‍ ಸಂಖ್ಯೆ: ಕೆಎ-೦೩-ಜಡ್‌-೮೧೩೨ನಲ್ಲಿ ಬಂಗಾರಪೇಟೆ ಪಟ್ಟಣದ ಜಿಲ್ಲಾ ಪಂಚಾಯ್ತಿ ಕಛೇರಿ ಸಮೀಪ ಬಿ.ಜೆ.ಪಿ.ಪರವಾಗಿ ಊಟ, ನೀರನ್ನು ಜನರಿಗೆ ಹಂಚಿಕೆ ಮಾಡಲು ಉಪಯೋಗಿಸಿ ಚುನಾವಣಾ ನೀತಿ ಉಲ್ಲಂಘಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.