ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಬೆಮೆಲ್ ’ಎ’ ಟೈಪ್‌ನ ಮನೆ ಸಂಖ್ಯೆ ೨೫೫ರ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೫-೨೦೦೮ ರಂದು ೧೫೧೫ ಗಂಟೆ ಸಮಯದಲ್ಲಿ ಬೆಮೆಲ್ ಸೆಕ್ಯೂರಿಟಿ ಸಿಬ್ಬಂದಿಯಾದ ಶ್ರೀ ಬಿ.ಎಂ.ಹುದಲಿ ಮತ್ತು ಸಿ.ಎನ್.ಉತ್ತಪ್ಪ ಎಂಬುವರು ’ಎ’ ಟೈಪ್ ಕೋಟ್ರಸ್ ಬಳಿ ಗಸ್ತಿನಲ್ಲಿದ್ದಾಗ ಕೆ.ಜಿ.ಎಫ್, ರಾಬರ್ಟ್‌ಸನ್‌ಪೇಟೆಯ ಅಂಬೇಡ್ಕರ್ ನಗರದ ವಾಸಿ ಅರುಣ್‌ಕುಮಾರ್ (೨೦) ಎಂಬುವನು ’ಎ’ ಟೈಪ್‌ನ ಮನೆ ಸಂಖ್ಯೆ ೨೫೫ ರ ಬಳಿ ಮನೆಗೆ ಅಳವಡಿಸಿದ್ದ ಹಿತ್ತಾಳೆ ನಲ್ಲಿಗಳನ್ನು ಕಟ್‌ಮಾಡಿ ಕಳುವು ಮಾಡುತ್ತಿದ್ದಾಗ ಹಿಡಿದಿರುತ್ತಾರೆ. ಹಾಗೂ ಸುಮಾರು ೧೬೦೦/- ರೂ ಬೆಲೆ ಬಾಳುವ ೮ ಹಿತ್ತಾಳೆ ನಲ್ಲಿಗಳನ್ನು ವಶಪಡಿಸಿಕೊಂಡು ಠಾಣೆಯಲ್ಲಿ ದೂರು ನೀಡಿರುತ್ತಾರೆ.
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚಿನ್ನಕೋಟೆ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೫-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಚಿನ್ನಕೋಟೆ ಗ್ರಾಮದ ವಾಸಿ ಶ್ರೀ ಮುನಿರಾಜು (೨೨) ಬಿನ್ ಕೃಷ್ಣಪ್ಪ ಎಂಬುವರು ತನ್ನ ಮನೆಗೆ ಹೋಗುತ್ತದ್ದಾಗ ಅದೇ ಗ್ರಾಮದ ವಾಸಿಗಳಾದ ನಾಗೇಂದ್ರ, ಸುದಾಕರ ಮತ್ತು ಮಂಜುನಾಥ ರವರುಗಳು ಮುನಿರಾಜು ರವರೊಂದಿಗೆ ವಿನಾಕಾರಣ ಜಗಳ ಮಾಡಿ ಕಟ್ಟ ಮಾತುಗಳಿಂದ ಬೈದು ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


