ದಿನದ ಅಪರಾಧಗಳ ಪಕ್ಷಿನೋಟ ೩೧ನೇ ಮೇ ೨೦೦೮

May 31, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್ ಬಸ್ ನಿಲ್ದಾಣದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೧-೦೫-೨೦೦೮ ರಂದು ೦೭೪೫ ಗಂಟೆ ಸಮಯದಲ್ಲಿ ಬೆಂಗಳೂರಿನ ರಾಜ ರಾಜೇಶ್ವರಿ ನಗರ, ಮನೆ ಸಂಖ್ಯೆ ೬೮೦ ರ ವಾಸಿ ಶ್ರೀ ಟಿ.ಸಿ.ಪ್ರಭಾಕ್, ಬೆಮೆಲ್ ಕಾರ್ಖಾನೆಯ ನೌಕರ ರವರು ರೈಲ್ವೆ ನಿಲ್ದಾಣದಿಂದ ಬಸ್ಸು ನಿಲ್ದಾಣಕ್ಕೆ ಬಂದು ಬೆಮೆಲ್ ಕಾರ್ಖಾನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿರುವಾಗ ಮಿನಿ ಬಸ್ ಸಂಖ್ಯೆ ಕೆಎ-೨೦-ಎ-೨೨೪ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಭಾಕರ್‍ ರವರಿಗೆ ಡಿಕ್ಕಿ ಹೊಡೆದು, ಇದರ ಪ್ರಯುಕ್ತ ರಕ್ತಗಾಯವಾಗಿರುತ್ತದೆ.  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪೂಗಾನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೫-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಪೂಗಾನಹಳ್ಳಿ ಗ್ರಾಮದ ವಾಸಿ ಶ್ರೀ ರಾಧಾಕೃಷ್ಣ (೪೫) ಬಿನ್ ವೆಂಕಟರಾಮ ಎಂಬುವರು ಮನೆಯಲ್ಲಿ ಇರುವಾಗ ಅದೇ ಗ್ರಾಮದ ವಾಸಿ ಶ್ರೀನಿವಾಸ, ಪಿ.ಎಂ.ನಾರಾಯಣಸ್ವಾಮಿ ಮತ್ತು ಇತರರು ಅಕ್ರಮ ಕೂಟ ಕಟ್ಟಿಕೊಂಡು ತಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿರುವುದಾಗಿ ರಾಧಾಕೃಷ್ಣ ರವರ ಮೇಲೆ ಜಗಳ ಕಾದು ಒಂದು ದೊಣ್ಣೆಯಿಂದ ರಾಧಾಕೃಷ್ಣ ರವರ ತಲೆಯ ಮೇಲೆ ಹೊಡೆದು ಕೊಲೆಗೆ ಮಾಡಲು ಪ್ರಯತ್ನಿಸಿರುತ್ತಾರೆ.

ದೊಂಬಿ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪೂಗಾನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೫-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಪೂಗಾನಹಳ್ಳಿ ಗ್ರಾಮದ ವಾಸಿ ಶ್ರೀ ಗೋಪಾಲ ಬಿನ್ ಮುನಿವೆಂಕಟಪ್ಪ ಎಂಬುವರು ತಮ್ಮ ಮನೆಯಲ್ಲಿರುವಾಗ ಅದೇ ಗ್ರಾಮದ ವಾಸಿಗಳಾದ ರಾಧಾಕೃಷ್ಣ, ಸುಧಾಕರ, ಜಯರಾಮಯ್ಯ, ರಘುಪತಿ ಮತ್ತು ಇತರರು ಅಕ್ರಮ ಕೂಟ ಕಟ್ಟಿಕೊಂಡು ಚುನಾವನೆ ವಿಷಯವಾಗಿ ಜಗಳ ಕಾದು ದೊಣ್ಣೆ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಹಲ್ಲೆ: ಇಲ್ಲ  

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್, ಸ್ವರ್ಣಕುಪ್ಪಂನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಸ್ವರ್ಣಕುಪ್ಪಂ ವಾಸಿ ಶ್ರೀಮತಿ ಪುಷ್ಪ ಕೋಂ ಅರುಣ್ ಕುಮಾರ್‍ ಎಂಬುವರಿಗೆ ಆಗಾಗ ಹೊಟ್ಟೆ ನೋವು ಬರುತ್ತಿದ್ದು, ಚಿಕಿತ್ಸೆ ಪಡೆದರು ವಾಸಿಯಾಗದೇ ದಿನಾಂಕ ೨೫-೦೫-೨೦೦೮ ರಂದು ರಾತ್ರಿ ಹೊಟ್ಟೆ ನೋವು ತಾಳಲಾರದೆ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಪ್ರಯತ್ನಿಸಿದಾಗ ಮೈಮೇಲೆ ಸುಟ್ಟಗಾಯಗಳಾಗಿ ಆಸ್ಪತ್ರೆಯಲ್ಲಿ ದಿನಾಂಕ ೩೦-೦೫-೨೦೦೮ ರಂದು ೧೮೫೫ ಗಂಟೆಗೆ ಮೃತ ಪಟ್ಟಿರುತ್ತಾರೆ.
  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಮೂತನೂರು ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ಮೂತನೂರು ಗ್ರಾಮದ ವಾಸಿ ಶ್ರೀ ಅಪ್ಪೋಜಪ್ಪ (೭೦) ಎಂಬುವರಿಗೆ ಈಗ್ಗೆ ಸುಮಾರು ೮ ತಿಂಗಳಿಂದ ಹೊಟ್ಟೆನೋವು ಬರುತ್ತಿದ್ದು, ಕೋಲಾರದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡಿಸಿದ್ದು, ಹೊಟ್ಟೆನೋವು ವಾಸಿಯಾಗದ ಕಾರಣ ದಿನಾಂಕ ೨೮-೦೫-೨೦೦೮ ರಂದು ೦೯೦೦ ಗಂಟೆಗೆ ಅಪ್ಪೋಜಪ್ಪನು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ವಾಪಸ್ಸು ಮನೆಗೆ ಬಂದಿರುವುದಿಲ್ಲ. ದಿನಾಂಕ: ೩೧-೦೫-೨೦೦೮ ರಂದು ೦೬೩೦ ಗಂಟೆಯಲ್ಲಿ ತನ್ನ ಜಮೀನಿನಲ್ಲಿರುವ ಬಾವಿಯಲ್ಲಿ ಅಪ್ಪೋಜಪ್ಪನ ಮೃತ್ ದೇಹವು ತೇಲುತ್ತಿದ್ದು, ಅಪ್ಪೋಜಪ್ಪನು ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾದಗಳ ಪಕ್ಷಿನೋಟ ೩೦ನೇ ಮೇ ೨೦೦೮

May 30, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧

  •   ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಮಾನಭಂಗಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನದೊಡ್ಡೂರು ಕರಪನಹಳ್ಳಿ ಗ್ರಾಮದಲ್ಲಿ ದಿನಾಂಕ ೨೯-೦೫-೨೦೦೮ ರಂದು ಮದ್ಯಾಹ್ನ ೧೩೦೦ ಗಂಟೆ ಸಮಯದಲ್ಲಿ ಕು: ಸುಷ್ಮಾ (೧೧) ಬಿನ್ ಪ್ರಹ್ಲಾದ್‌ ರವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ಮೂರ್ತಿ ಉರಫ್ ರಾಮಮೂರ್ತಿ ಬಿನ್ ವೆಲ್ಡರ್‍ ಮುನಿಯಪ್ಪ (೨೬) ರವರು ಸದರಿ ಬಾಲಕಿಯನ್ನು ತನ್ನ ಮನೆಯೊಳಕ್ಕೆ ಕರೆದು ಮಾನಭಂಗ ಮಾಡಲು ಪ್ರಯತ್ನಿಸಿ, ಆಕೆ ಕಿರುಚುಕೊಂಡಾಗ ದೊಣ್ಣೆಯನ್ನು ತೋರಿಸಿ ಕಿರುಚಾಡಿದರೆ ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಸುಷ್ಮಾ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿರುತ್ತಾಳೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೫-೨೦೦೮ ರಂದು ಬೆಳಿಗ್ಗೆ ೧೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಕುರೂರು ಗ್ರಾಮದ ಶಾಲೆಯ ಬಳಿ ಅದೇ ಗ್ರಾಮದ ವಾಸಿಗಳಾದ ಮುನಿವೆಂಕಟರೆಡ್ಡಿ ಮತ್ತು ಕಿಟ್ಟಾರೆಡ್ಡಿ ಉರುಫ್ ಕೃಷ್ಣಾರೆಡ್ಡಿ ರವರುಗಳು ಅದೇ ಗ್ರಾಮದ ವಾಸಿಗಳಾದ ರಾಮಚಂದ್ರಾರೆಡ್ಡಿ, ನಾರಾಯಣಮ್ಮ, ಗಂಗಮ್ಮ ರವರುಗಳ ಬಳಿ ಜಮೀನು ಉಳುಮೆ ಮಾಡುವ ವಿಚಾರದಲ್ಲಿ ಜಗಳ ಕಾದು ಕಲ್ಲು ಮತ್ತು ದೊಣ್ಣೆಗಳಿಂದ ೦೩ ಜನರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೦೫-೨೦೦೮ ರಂದು ಸಂಜೆ ೧೯೩೦ ಗಂಟೆಯಲ್ಲಿ ಆಂಡ್ರಸನ್‌ಪೇಟೆ ಮಾರ್ಕೆಟ್ ಮುಂಭಾಗ ಸುರೇಶ್‌ಬಾಬು ಉರುಫ್ ಅಪ್ಪನ್ (೨೮) ಬಿನ್ ಗಫೂರ್‍ ರವರು ಮಾವಿನಕಾಯಿ ಮಾರುತ್ತಿದ್ದಾಗ ಕುಟ್ಟಿ ಬಿನ್ ವಿಜಯರಾಜ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ರವರು ಬಂದಿದ್ದು, ಗಂಡ ಹೆಂಡತಿ ಜಗಳ ವಿಚಾರವಾಗಿ ಸುರೇಶ್‌ಬಾಬು ರವರು ಬುದ್ಧಿ ಹೇಳಿದ್ದಕ್ಕೆ ಕುಟ್ಟಿ ರವರು ಕೋಪಗೊಂಡು ಕೆಟ್ಟ ಮಾತುಗಳಿಂದ ಬೈದು ಒಂದು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೫-೨೦೦೮ ರಂದು ಬೆಳಿಗ್ಗೆ ೦೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಕನಮನಹಳ್ಳಿ ಗ್ರಾಮದ ವಾಸಿ ಮುನಿಯಪ್ಪ ಯಾವುದೇ ಪರವಾನಗಿ ಇಲ್ಲದೆ ಕನಮನಹಳ್ಳಿಗೆ ಹೋಗುವ ಕಾಲುದಾರಿಯಲ್ಲಿ ಒಂದು ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ಸುಮಾರು ೧೫ ಲೀಟರ್‍ ಕಳ್ಳಬಟ್ಟಿ ಸಾರಾಯಿ ಸಾಗಿಸುತ್ತಿದ್ದಾಗ ಒಡ್ಲಬಂಡಿ ಗ್ರಾಮದ ಸ್ಥಳದಲ್ಲಿ ಮಾಲು ಸಮೇತ ಮುನಿಯಪ್ಪನನ್ನು ಹಿಡಿದು ಕ್ರಮಕೈಗೊಂಡಿರುತ್ತದೆ.
  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೫-೨೦೦೮ ರಂದು ಬಂಗಾರಪೇಟೆ ತಾಲೂಕಿನ ಕಲ್ಲಿಕುಪ್ಪ ಗ್ರಾಮದಲ್ಲಿ  ನಾರಾಯಣಮ್ಮ (೩೮) ಕೋಂ ಲೇಟ್‌ ವೆಂಕಟಸ್ವಾಮಿ ರವರು ಯಾವುದೇ ಪರವಾನಗಿಯಿಲ್ಲದೆ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದವರನ್ನು ಬೇತಮಂಗಲ ಪೊಲೀಸರು ದಸ್ತಗಿರಿ ಮಾಡಿ ಕ್ರಮ ಜರುಗಿಸಿರುತ್ತಾರೆ. ಸುಮಾರು ೪.೫ ಲೀಟರ್‍ ಕಳ್ಳಬಟ್ಟಿ ಸಾರಾಯಿ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಮೇ ೨೦೦೮

May 29, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬೆಮೆಲ್ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿಯ ಡೆಕ್ಕನ್ ಹೈಡ್ರಾಲಿಕ್ಸ್ ಪ್ರವೈಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೫-೨೦೦೮ ರಿಂದ ೨೪-೦೫-೨೦೦೮ ರ ಮದ್ಯ ಡೆಕ್ಕನ್ ಹೈಡ್ರಾಲಿಕ್ಸ್ ಕಾರ್ಖಾನೆಯಲ್ಲಿ ಸುಮಾರು ೨೦೦೦/- ರೂಗಳು ಬೆಲೆ ಬಾಳುವ ಹತ್ತು ಹೈಡ್ರಾಲಿಕ್ಸ್ ಸಿಲೆಂಡರ್‍ ಬಾಟಂ ಕಳುವಾಗಿದ್ದು, ಅವುಗಳು ದಾಸರಹೊಸಹಳ್ಳಿಯಲ್ಲಿರುವ ಎಸಿಸಿ ಸಿಮೆಂಟ್ ಅಂಗಡಿಯ ಪಕ್ಕದಲ್ಲಿ ಪತ್ತೆಯಾಗಿರುತ್ತದೆ. ಈ ಕಳುವನ್ನು ಎನ್.ಜಗದೀಶ್, ಸೆಕ್ಯೂರಿಟಿ ಗಾರ್ಡ್‌, ಡೆಕ್ಕನ್ ಹೈಡ್ರಾಲಿಕ್ಸ್ ರವರು ಮಾಡಿರಬಹುದೆಂಬ ಗುಮಾನಿ ಬಂದಿರಯತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್, ದೇಶಿಹಳ್ಳಿಯ ಆರ್‍.ಕೆ.ಎನ್ ಮಿಲ್ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೫-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ಬೆಂಗನೂರು ಗ್ರಾಮದ ವಾಸಿ ಶ್ರೀ ಅಶೋಕ (೨೨) ಎಂಬುವರು ಟಿ.ವಿ.ಎಸ್. ವಿಕ್ಟರ್‍ ಸಂಖ್ಯೆ ಕೆಎ-೦೫-ಇಕ್ಯೂ-೮೯೮೫ ವಾಹನದಲ್ಲಿ ಬಂಗಾರಪೇಟೆಗೆ ಬಂದು ತಮ್ಮ ಗ್ರಾಮಕ್ಕೆ ಹೋಗಲು ಬಂಗಾರಪೇಟೆ-ಕೆ.ಜಿ.ಎಫ್ ಮುಖ್ಯ ರಸ್ತೆಯ ದೇಶಿಹಳ್ಳಿ ಬಳಿ ಇರುವ ಆರ್‍.ಕೆ.ಎನ್. ಮಿಲ್ ಬಳಿ ಹೋಗುತ್ತಿದ್ದಾಗ ಎದರುಗಡೆಯಿಂದ ಟೆಂಪೊ ಸಂಖ್ಯೆ ಟಿಎನ್-೨೩-ಎಡಬ್ಲ್ಯೂ-೯೯೮೭ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಶೋಕ ರವರ ವಾಹನಕ್ಕೆ ಡಿಕ್ಕಿ ಹೊಡೆದು ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಅವರು ಮೃತ ಮಟ್ಟಿರುತ್ತಾರೆ.   

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್, ಅಶೋಕ್ ನಗರದ ’ಬಿ’ ಬ್ಲಾಕ್ ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೫-೨೦೦೮ ರಂದು ೧೮೩೦ ಗಂಟೆ ಸಮಯದ ಶ್ರೀ ಲಕ್ಷ್ಮಯ್ಯ, ಪಿ.ಐ., ಡಿ.ಸಿ.ಐ.ಬಿ, ಡಿ.ಪಿ.ಓ, ಕೆ.ಜಿ.ಎಫ್. ರವರಿಗೆ ಬಂಧ ಖಚಿತ ವರ್ತಮಾನದ ಮೇರೆಗೆ ರಾಬರ್ಟ್‌‌ಸನ್‌ಪೇಟೆ ಪಿ.ಎಸ್.ಐ (ಅಪರಾಧ) ಮತ್ತು ಸಿಬ್ಬಂದಿಗಳೊಂದಿಗೆ ಅಶೋಕ ನಗರದ ’ಬಿ’ ಬ್ಲಾಕ್ ವಾಸಿ ರಾಧಮ್ಮ ರವರ ಮನೆಯಲ್ಲಿಟ್ಟಿದ ಸುಮಾರು ೧೫೦ ಲೀಟರನಷ್ಟು ಕೊಳೆಯನ್ನು ನಾಶಪಡಿಸಿ ಮಾರಾಟ ಮಾಡಲು ಪ್ಲಾಸ್ಟಿಕ್ ಕ್ಯಾನಿನಲ್ಲಿಟ್ಟಿದ್ದ ಸುಮಾರು ೩೦ ಲೀಟರ್‌ನಷ್ಷು ಭಟ್ಟಿ ಸಾರಾಯಿಯನ್ನು ಮತ್ತು ಮಡಿಕೆಗಳನ್ನು ಅಮಾನತ್ತುಮಾಡಿಕೋಂಡಿರುತ್ತದೆ. ಆರೋಪಿಯು ಸ್ಥಳದಿಂದ ಪರಾರಿಯಾಗಿರುತ್ತಾರೆ.   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಮೇ ೨೦೦೮

May 28, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್, ರಾಜೇಂದ್ರ ಬಡಾವಣೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ರಾಜೇಂದ್ರ ಬಡಾವಣೆಯಲ್ಲಿ ವಾಸಿ ಶ್ರೀ ರಾಧಾಕೃಷ್ಣ ಮನೆ ಸಂಖ್ಯೆ ೩೧೯ ರಂಬುವರು ಬೆಂಗಳೂರು, ಮಾರತ್ತಹಳ್ಳಿ, ಅಶ್ವತ್ತ ನಗರದ ಶಾರದಮ್ಮ ಎಂಬುವರ ಮನೆಯಲ್ಲಿ ಬೋಗ್ಯಕ್ಕೆ ಇದ್ದು, ಆ ಮನೆಯನ್ನು ಕಾಲಿ ಮಾಡಿ ಶಾರದಮ್ಮ ನವರ ಬಳಿ ಬೋಗ್ಯದ ಹಣ ರೂ ೧,೦೦,೦೦೦/- ಗಳನ್ನು ವಾಪಸ್ಸು ಕೇಳಿದಾಗ ಶಾರದಮ್ಮನು ನೀನೇ ನನಗೆ ಹಣ ಕೊಡಬೇಕು ಎಂಬು ರಾಧಾಕೃಷ್ಣರವರಿಗೆ ಹೇಳಿ ಕಳುಹಿಸಿ, ದಿನಾಂಕ ೨೦.೦೫.೨೦೦೮ ಮತ್ತು ೨೪.೦೫.೨೦೦೮ ರಂದು ರಾಧಾಕೃಷ್ಣರವರಿಗೆ ಪೋನ್ ಮಾಡಿ ಹಣವನ್ನು ಕೊಡದಿದ್ದರೆ ಪ್ರಾಣ ತೆಗೆಯುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾಳೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಉರಿಗಾಂನ ಹೆನ್ರಿಸ್, ೨ನೇ ಲೈನ್, ಮನೆ ಸಂಖ್ಯೆ ೧೪೫ ರಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೪-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಹೆನ್ರಿಸ್, ೨ನೇ ಲೈನ್, ಮನೆ ಸಂಖ್ಯೆ ೧೪೫ ರ ವಾಸಿ ಶ್ರೀಮತಿ ಸರೋಜ (೬೫) ಕೋಂ ವಳ್ಳಿಕಣ್ಣನ್ ಎಂಬುವರು ತನ್ನ ತಂಗಿಯಾದ ಕಲೈ ಸೆಲ್ವಿ ರವರು ಚಾಂಪಿಯನ್‌ರೀಫ್ಸ್, ಡಿ ಬ್ಲಾಕ್‌ನಲ್ಲಿ ವಾಸವಾಗಿದ್ದು, ಅವರನ್ನು ನೋಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟವರು ಇದುವರೆವಿಗೂ ಮನೆಗೆ ವಾಪಸ್ಸು ಬಂದಿರುವುದುಲ್ಲ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಮೇ ೨೦೦೮

May 27, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಬೆಮೆಲ್  ’ಎ’ ಟೈಪ್‌ನ ಮನೆ ಸಂಖ್ಯೆ ೨೫೫ರ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೫-೨೦೦೮ ರಂದು ೧೫೧೫ ಗಂಟೆ ಸಮಯದಲ್ಲಿ ಬೆಮೆಲ್ ಸೆಕ್ಯೂರಿಟಿ ಸಿಬ್ಬಂದಿಯಾದ ಶ್ರೀ ಬಿ.ಎಂ.ಹುದಲಿ ಮತ್ತು ಸಿ.ಎನ್.ಉತ್ತಪ್ಪ ಎಂಬುವರು ’ಎ’ ಟೈಪ್ ಕೋಟ್ರಸ್ ಬಳಿ ಗಸ್ತಿನಲ್ಲಿದ್ದಾಗ ಕೆ.ಜಿ.ಎಫ್, ರಾಬರ್ಟ್‌‌ಸನ್‌ಪೇಟೆಯ ಅಂಬೇಡ್ಕರ್‍ ನಗರದ ವಾಸಿ ಅರುಣ್‌ಕುಮಾರ್‍ (೨೦) ಎಂಬುವನು ’ಎ’ ಟೈಪ್‌ನ ಮನೆ ಸಂಖ್ಯೆ ೨೫೫ ರ ಬಳಿ ಮನೆಗೆ ಅಳವಡಿಸಿದ್ದ ಹಿತ್ತಾಳೆ ನಲ್ಲಿಗಳನ್ನು ಕಟ್‌ಮಾಡಿ ಕಳುವು ಮಾಡುತ್ತಿದ್ದಾಗ ಹಿಡಿದಿರುತ್ತಾರೆ. ಹಾಗೂ ಸುಮಾರು ೧೬೦೦/- ರೂ ಬೆಲೆ ಬಾಳುವ ೮ ಹಿತ್ತಾಳೆ ನಲ್ಲಿಗಳನ್ನು ವಶಪಡಿಸಿಕೊಂಡು ಠಾಣೆಯಲ್ಲಿ ದೂರು ನೀಡಿರುತ್ತಾರೆ.     

ವಾಹನ ಕಳ್ಳತನ: ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚಿನ್ನಕೋಟೆ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೫-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಚಿನ್ನಕೋಟೆ ಗ್ರಾಮದ ವಾಸಿ ಶ್ರೀ ಮುನಿರಾಜು (೨೨) ಬಿನ್ ಕೃಷ್ಣಪ್ಪ ಎಂಬುವರು ತನ್ನ ಮನೆಗೆ ಹೋಗುತ್ತದ್ದಾಗ ಅದೇ ಗ್ರಾಮದ ವಾಸಿಗಳಾದ ನಾಗೇಂದ್ರ, ಸುದಾಕರ ಮತ್ತು ಮಂಜುನಾಥ ರವರುಗಳು ಮುನಿರಾಜು ರವರೊಂದಿಗೆ ವಿನಾಕಾರಣ ಜಗಳ ಮಾಡಿ ಕಟ್ಟ ಮಾತುಗಳಿಂದ ಬೈದು ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಮೇ ೨೦೦೮

May 26, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು, ಬೇತಮಂಗಲದ ಭುವನೇಶ್ವರಿ ಬಾರ್‍ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಂಕ ೧೯-೦೫-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ಚನ್ನಪಲ್ಲಿ ವಾಸಿ ಶ್ರೀ ಬಾಲಕೃಷ್ಣ (೩೦) ಬಿನ್ ಗೋಪಾಲಪ್ಪ ಎಂಬುವರು ಬೇತಮಂಗಲ ಬಸ್ ನಿಲ್ದಾಣದ ಬಳಿ ಇರುವ ಭುವನೇಶ್ವರಿ ಬಾರ್‍ ಪಕ್ಕದಲ್ಲಿ ನಿಲ್ಲಿಸಿದ್ದ ಹೀರೋ ಹೊಂಡಾ ಸ್ಲೆಂಡರ್‍ ಸಂಖ್ಯೆ ಕೆಎ-೦೮-ಕೆ-೪೦೫೭ ವಾಹನವನ್ನು ಯಾರೋ ಆರೋಪಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ.  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ 

ಇತರೆ: ೦೧

  •    ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಉರಿಗಾಂಪೇಟೆಯ ಪಿಷ್ ಲೈನ್ ನಲ್ಲಿ  ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೫-೨೦೦೮ ರಂದು ೦೮೩೦ ರಿಂದ ೧೦೩೦ ಗಂಟೆ ಸಮಯದ ಒಳಗೆ ಮಾನ್ಯ ಡಿವೈಎಸ್‌ಪಿ, ಕೆ.ಜಿ.ಎಫ್. ಮತ್ತು ಸಿಪಿಐ, ರಾಬರ್ಟ್‌‌ಸನ್‌ಪೇಟೆ ವೃತ್ತ ರವರ ಮಾರ್ಗದರ್ಶನದಂತೆ ಶ್ರೀ ಲಕ್ಷ್ಮಯ್ಯ, ಪಿ.ಐ., ಡಿ.ಸಿ.ಐ.ಬಿ, ಡಿ.ಪಿ.ಓ, ಕೆ.ಜಿ.ಎಫ್. ರವರಿಗೆ ಬಂಧ ಖಚಿತ ವರ್ತಮಾನದ ಮೇರೆಗೆ ರಾಬರ್ಟ್‌‌ಸನ್‌ಪೇಟೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳೊಂದಿಗೆ ಉರಿಗಾಂಪೇಟೆಯ ಪಿಷ್‌ ಲೈನ್ ಸಮೀಪ ಇರುವ ಮುಳ್ಳುಪೊದೆಗಳ ಮಧ್ಯ ನೆಲದಲ್ಲಿ ಅದೇ ಕೇರಿಯ ಪ್ರವೀಣ್, ನಾದನ್ ಮತ್ತು ಮತ್ತೊಬ್ಬರು ಕಳ್ಳಬಟ್ಟಿ ಸಾರಾಯಿ ತಯಾರು ಮಾಡುವ ಸಲುವಾಗಿ ಹೂತಿಟ್ಟಿದ್ದ ೩ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸುಮಾರು ಒಂದು ಸಾವಿರ ಲೀಟರ್‍ನಷ್ಟು ಸದರಿ ಸ್ಥಳದಲ್ಲಿ ದಾಳಿ ಮಾಡಿ ನಾಶಪಡಿಸಿ ಆರೋಪಿಗಳು ಮಾರಾಟ ಮಾಡಲು ಇಟ್ಟಿದ್ದ ಸುಮಾರು ೫ ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ಅಮಾನತ್ತುಮಾಡಿಕೋಂಡಿರುತ್ತದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ನೇ ಮೇ ೨೦೦೮

May 25, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಗ್ರಾಮದ ಸಮೀಪ ನಡೆದಿರುತ್ತದೆ. ದಿನಾಂಕ ೨೩-೦೫-೨೦೦೮ಕ್ಕೆ ಹಿಂದೆ ಯಾರೋ ದುಷ್ಕರ್ಮಿಗಳು ದೊಡ್ಡವಲಗಮಾದಿ ಗ್ರಾಮದ ಸಮೀಪ ಹಾದುಹೋಗಿದ್ದ ಶಿವ-ಕೆ.ಜಿ.ಎಫ್.ಲೈನ್, ೭೮ ಕೆ.ವಿ. ೧ನೇ ಲೈನ್ ಟವರ್‍ ಸಂಖ್ಯೆ ೬೩೭ ಮತ್ತು ಲೈನ್ ೨ ರಲ್ಲಿ ಟವರ್‍ ಸಂಖ್ಯೆ ೬೩೪ ರಲ್ಲಿನ ಎರಡು ಟ್ಯೂಬ್‌ಲರ್‍ ಕಂಬಗಳನ್ನು ಕಟ್‌ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ಸುಮಾರು ರೂ. ೧೨,೦೦೦/- ಗಳು.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಬಂಗಾರಪೇಟೆ ತಾಲೂಕಿನ ಬೂಚೇಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ ೨೪-೦೫-೨೦೦೮ ರಂದು ಮದ್ಯಾಹ್ನ ೧೩೦೦ ಗಂಟೆಯಲ್ಲಿ ಬೂಚೇಪಲ್ಲಿ ಗ್ರಾಮದ ವಾಸಿ ಶ್ರೀಮತಿ ರಮಾದೇವಿ (೨೪) ಕೋಂ ಕೃಷ್ಣಮೂರ್ತಿ ಎಂಬುವರು ಗ್ರಾಮದಲ್ಲಿ ನೀರು ಹಿಡಿಯಲು ಹೋದಾಗ, ನಳದ ಬಳಿ ಅದೇ ಗ್ರಾಮದ ವಾಸಿ ಶ್ರೀಮತಿ ಅಲುವೇಲಮ್ಮ ಎಂಬುವರು ಬಟ್ಟೆ ಹೊಗೆಯುತ್ತಿದ್ದು, ಇದನ್ನು ಶ್ರೀಮತಿ ರಮಾದೇವಿ ಕೇಳಿದ್ದಕ್ಕೆ ಶ್ರೀಮತಿ ಅಲುವೇಲಮ್ಮ ಮತ್ತು ಇವರ ಗಂಡ ಬಾಬು ಎಂಬುವರು ಜಗಳ ಕಾದು, ಬಾಬು ಎಂಬುವರು ಒಂದು ಮಚ್ಚಿನಿಂದ ಮತ್ತು ಶ್ರೀಮತಿ ಅಲುವೇಲಮ್ಮ ಎಂಬುವರು ತನ್ನ ಕೈಗಳಿಂದ ಶ್ರೀಮತಿ ರಮಾದೇವಿ ಎಂಬುವರಿಗೆ ಹೊಡೆದು ರಕ್ತಘಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ನೇ ಮೇ ೨೦೦೮

May 24, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್, ತಹಸಿಲ್ದಾರ್‍ ರವರ ಮನೆ ಮುಂಭಾಗದಲ್ಲಿ ಈ ಕೃತ ಸಂಭವಿಸಿರುತ್ತದೆ. ದಿನಾಂಕ ೨೩-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಮನೆ ಸಂಖ್ಯೆ ೧೬, ಮುನಿಸಿಪಲ್ ಕ್ವಾಟ್ರಸ್, ಸಂತೆ ಗೇಟ್, ಬಂಗಾರಪೇಟೆ ವಾಸಿ ಶ್ರೀ ಸತ್ಯಮೂರ್ತಿ ಎಂಬುವರ ಬಾವನಮಗ ಎಂ.ನವೀನ್ ಕುಮಾರ್‍ (೧೦) ಎಂಬುವರು ತಹಸಿಲ್ದಾರ್‍ ರವರ ಮನೆ ಮುಂಭಾಗದ ರಸ್ತೆ ದಾಟುತ್ತಿದ್ದಾಗ ಕೋಲಾರದ ಕಡೆಯಿಂದ ಬಿ.ಇ.ಎಂ.ಎಲ್ ಬಸ್ ಸಂಖ್ಯೆ ಸಿಎನ್‌ಕೆ-೪೯೭೩ ರ ಚಾಲಕ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನವೀನ್ ಎಂಬ ಹುಡುಗನಿಗೆ ಡಿಕ್ಕಿ ಹೊಡೆದ ಪ್ರಯುಕ್ತ ನವೀನ್‌ಗೆ ರಕ್ತಗಯವಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ 

ಇತರೆ: ೦೧

  •   ಆಂಸ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳ ಹೋಬಳಿ, ಯರ್‌ಕುಂಟೆ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೫-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಶ್ರೀ ಲಕ್ಷ್ಮಯ್ಯ, ಪಿ.ಐ., ಡಿ.ಸಿ.ಐ.ಬಿ, ಡಿ.ಪಿ.ಓ, ಕೆ.ಜಿ.ಎಫ್. ರವರಿಗೆ ಬಂಧ ಖಚಿತ ವರ್ತಮಾನದ ಮೇರೆಗೆ ಯರ್‌ಕುಂಟ ಗ್ರಾಮದ ಮುರುಗನ್ ರವರ ಮನೆಯ ಮೇಲೆ ದಾಳಿ ಮಾಡಲು ಆಂಡ್ರಸನ್‌ಪೇಟೆಯ ಪಿ.ಎಸ್.ಐ ಮತ್ತು ಸಿಬ್ಬಂದಿಗಳೊಂದಿಗೆ ದಾಳಿಮಾಡಿದಾಗ ಅವರ ಮನೆಯಲ್ಲಿ ಒಂದು ಪ್ಲಾಸ್ಟಕ್ ಕ್ಯಾನ್,  ಬಿಂದಿಗೆ ಮತ್ತು ಬಾಟಲ್‌ಗಳಲ್ಲಿ ತುಂಬಿ ಕಲ್ಲುಮುಚ್ಚಿ ಇಟ್ಟಿದ್ದ ಸುಮಾರು ೫೦೦೦/- ತಯಾರಿಸಿ ಇಟ್ಟಿದ್ದ ೫೦ ಲೀಟರ್ ಕಳ್ಳಬಟ್ಟಿ ಸಾರಾಯಿ ಒಟ್ಟು ಬಲೆ ರೂ ೫೦೦೦/- ಗಳನ್ನು ದಸ್ತಿಗಿರಿಮಾಡಿರುತ್ತಾರೆ. ಆರೋಪಿಗಳು ಪರಾರಿಯಾಗಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಣಿವೆಕಲ್ಲು ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಕಣಿವೆಕಲ್ಲು ಗ್ರಾಮದ ವಾಸಿ ಶ್ರೀ ವೆಂಕಟ್ರಾಮಪ್ಪ (೬೦) ಎಂಬುವರಿಗೆ ಸುಮಾರು ೨ ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು ಮತ್ತು ಕೈಸಾಲಗಳು ಜಾಸ್ತಿ ಮಾಡಿದ್ದು, ಹೊಟ್ಟೇ ನೋವಿನ ಪ್ರಯುಕ್ತ ಜೀವನದಲ್ಲಿ ಜಗೂಪ್ಸೆ ಹೋಂದಿ ದಿನಾಂಕ ೨೩/೦೫/೨೦೦೮ ರಂದು ೧೨೦೦ ಗಂಟೆ ಸಯದಲ್ಲಿ ಮರಕ್ಕೆ ಹಗ್ಗದಿಂದ ನೇಣು ಹಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ನೇ ಮೇ ೨೦೦೮

May 23, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೨

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಳವಾಯಿಹೊಸಹಳ್ಳಿ ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೫-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ದಳವಾಹಿಹೊಸಹಳ್ಳಿ ಗ್ರಾಮದ ವಾಸಿ ಅಶ್ವತ್ಥಪ್ಪ ಬಿನ್ ಈರಪ್ಪ ನವರ ತೋಟದ ಜಮೀನಿನಲ್ಲಿರುವ ಕೊಳವೆ ಬಾವಿಗೆ ಅಳವಡಿಸಿದ್ದ ೭೦ ಮೀಟರ್‍ ಕೇಬಲ್ ವೈರ್‍ ಬೆಲೆ ಸುಮಾರು ೫,೬೦೦ ರೂ ಬೆಲೆ ಬಾಳುವುದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಎ ಮೋತಕಪಲ್ಲಿ ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೫-೨೦೦೮ ರಂದು ೨೨೦೦ ರಾತ್ರಿ ಸಮಯದಲ್ಲಿ ಎ ಮೋತಕಪಲ್ಲಿ ಗ್ರಾಮದ ವಾಸಿ ಕುಪ್ಪಯ್ಯ ನಾಯ್ಡು ನವರ ತೋಟದ ಜಮೀನಿನಲ್ಲಿರುವ ಕೊಳವೆ ಬಾವಿಗೆ ಅಳವಡಿಸಿದ್ದ ೧೦೦ ಮೀಟರ್‍ ಕೇಬಲ್ ವೈರ್‍ ಬೆಲೆ ಸುಮಾರು ೧೧,೨೦೦/- ರೂ ಬೆಲೆ ಬಾಳುವುದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೩

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನಾಗಲಾಹಳ್ಳಿ ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೫-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಕ್ಯಾಸಂಬಳ್ಳ ಗ್ರಾಮದ ವಾಸಿ ಶ್ರೀರಾಮಪ್ಪ ಬಿನ್ ವೆಂಕಟೇಶಪ್ಪ ಎಂಬುವರು ತನ್ನ ತಮ್ಮನ ಮಗಳ ಮದುವೆ ಪ್ರಯುಕ್ತ ಬಳುವನಹಳ್ಳಿ ಗ್ರಾಮದ ಕೇಶವಗೌಡ ಎಂಬುವರ ಟ್ರಾಕ್ಟರ್‍ ಸಂಕ್ಯೆ ಕೆಎ-೦೮-ಟಿ-೪೨೫ ರಲ್ಲಿ ಮದುವೆ ಸಾಮಾನುಗಳನ್ನು ಹಾಕಿ ಟ್ರಾಕ್ಟರ್‍ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಟ್ರಾಕ್ಟರ್‍ ಟನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಹುಬ್ಬರದ ಮೇಲೆ ಚಲಾಯಿಸಿದಾಗ ಟ್ರಾಕ್ಟರ್‌ನಲ್ಲಿದ್ದ ಶ್ರೀರಾಮಪ್ಪ ಕೆಳಕ್ಕೆ ಬಿದ್ದು ಟ್ರಾಕ್ಟರ್‍ ಚಕ್ರ ಎದೆಯ ಮೇಲೆ ಹರಿದು ತೀವ್ರತರಹದ ಗಾಯಗಳಾಗಿ ಆಸ್ಪತ್ರೆಯಲ್ಲಿ ಮೃತರಾಗಿರುತ್ತಾರೆ. 
  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಬೇತಮಂಗಲದ ರೂಪಶ್ರಿ ಚಿತ್ರಮಂದಿರದ ಮುಂಭಾಗ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೭-೦೫-೨೦೦೮ ರಂದು ೦೬೦೦ ಗಂಟೆ ಸಮಯದಲ್ಲಿ ಪೋತರಾಜನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಮುನಿಯಮ್ಮ ರೂಪಶ್ರಿ ಚಿತ್ರಮಂದಿರ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೇತಮಂಗಲದ ಶ್ರೀರಾಮ ಎಂಬುವರು ತನ್ನ ಟಿವಿಎಸ್ ಎಕ್ಸೆಲ್ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನಿಯಮ್ಮನಿಗೆ ಡಿಕ್ಕಿ ಹೊಡೆದ ಪ್ರಯುಕ್ತ ರಕ್ತಗಾಯವಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ದಿನಾಂಕ ೨೦-೦೫-೨೦೦೮ ರಂದು ೦೩೧೫ ಗಂಟೆಗೆ ಮುನಿಯಮ್ಮ ನವರು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರಯಲ್ಲಿ ಮೃತ ಪಟ್ಟಿರುತ್ತಾರೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಅನಿಗಾನಹಳ್ಳಿ ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨/೦೫/೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ನಾರಾಯಣಪುರ ಗ್ರಾಮದ ವಾಸಿ ಶ್ರೀ ಟಿ.ಶಂಕರಪ್ಪ ನವರ ಮಗಳಾದ ಕುಮಾರಿ ಚಂದ್ರಿಕಾ (೮) ಎಂಬುವಳು ತನ್ನ ಚಿಕ್ಕಮ್ಮನೊಂದಿಗೆ ಬಂಗಾರಪೇಟೆಯ ಜಾತ್ರೆಯನ್ನು ಮುಗಿಸಿಕೊಂಡು ಅನಿಗಾನಹಳ್ಳಿ ಗೇಟ್ ಬಳಿ ಬಸ್ ಇಳಿದು ರಸ್ತೆ ದಾಟುತ್ತಿದ್ದಾಗ ಕೋಲಾರದ ಕಡೆಯಿಂದ ವೆಂಕಟೇಶ್ವರ ಖಾಸಗಿ ಬಸ್ ಸಂಖ್ಯೆ ಕೆಎ-೦೭-ಬಿ-೭೭೭ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಮಾರಿ ಚಂದ್ರಿಕಾಗೆ ಡಿಕ್ಕಿ ಹೊಡೆದ ಪ್ರಯುಕ್ತ ಚಂದ್ರಿಕ ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ.

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ 

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆಯ ಜನರಲ್ ಆಸ್ಪತ್ರೆಯ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨/೦೫/೨೦೦೮ ರಂದು ಬಂಗಾರಪೇಟೆ ಅನಿಗಾನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತದಲ್ಲಿ ಕುಮಾರಿ ಚಂದ್ರಿಕಾ ಎಂಬು ಹುಡುಗಿ ಮೃತ ಪಟ್ಟಿದ್ದು, ಈ ಬಗ್ಗೆ ಪಿ.ಎಸ್.ಐ. ರವರ ಅದೇಶದಂತೆ ಮೃತಳ ಚಹರೆ ಗುರುತುಗಳನ್ನು ತರಲು ಬಂಗಾರಪೇಟೆಯ ಜನರಲ್ ಆಸ್ಪತ್ರೆಗೆ ಸಿಹೆಚ್‌ಸಿ ೧೧೯ ಶ್ರೀ ಸಿ.ಎ.ನಾಗರಾಜ್ ಮತ್ತು ಪಿಸಿ ೨೦೩ ಶ್ರೀ ವೇಣುಗೋಪಾಲ್ ರವರು ಹೋದಾಗ ನಾರಾಯಣಪುರ ಗ್ರಾಮದ ವಾಸಿ ರಾಮಪ್ಪ ಎಂಬುವರು ನಾಗರಾಜ್ ರವರೊಂದಿಗೆ ಜಗಳ ತೆಗೆದು ಕಟ್ಟ ಮಾತುಗಳಿಂದ ಬೈದು ಸರ್ಕಾರಿ ಕೆಲಸ ನಿರ್ವಹಿಸುವಾಗ ಕೆಲಸ ನಿರ್ವಹಿಸದಂತೆ ಅಡ್ಡಿಯನ್ನುಂಟು ಮಾಡಿರುತ್ತಾರೆ.  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೨ನೇ ಮೇ ೨೦೦೮

May 22, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತದೆ. ಕೆ.ಜಿ.ಎಫ್ ಪಾರಾಂಡಹಳ್ಳಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಶ್ರೀ. ಸಂಜೀವಪ್ಪ ಬಿನ್ ಲೇಟ್ ಕುಳ್ಳಪ್ಪ(೬೦) ಮಲ್ಲಂಪಲ್ಲಿ ವಾಸಿ ದಿನಾಂಕ: ೨೧-೦೫-೨೦೦೮ ರಂದು ೧೯೩೦ ಗಂಟೆ ಸಯಯದಲ್ಲಿ ಪಾರಾಂಡಹಳ್ಳಿಯಲ್ಲಿ ಹರಿ ಎಂಬುವರ ಕಬಾಬ್ ಅಂಗಡಿಯಲ್ಲಿ ಮೀನು ತೆಗೆದುಕೊಳ್ಳುವ ಸಲುವಾಗಿ ಹರಿ ರವರ ಪತ್ನಿಯನ್ನು ಮೀನಿನ ಬೆಲೆ ಕೇಳಲಾಗಿ ಹರಿಯವರು ಸುಮ್ಮನೆ ವ್ಯಾಪಾರ ಮಾಡುತ್ತಿಯಾ ಹೊರಗೆ ಹೋಗು ಎಂತ ಜಗಳ ಕಾದು ಸಂಜೀವಪ್ಪನಿಗೆ ಕೆಟ್ಟ ಮಾತುಗಳಿಂದ ಬೈದು ಕಾಲಿನಿಂದ ಒದ್ದಿದರಿಂದ ರಸ್ತೆಯಲ್ಲಿ ಬಿದ್ದು ರಕ್ತಗಾಯಗಳಾಗಿದ್ದು ಹಾಗೂ ನೀನು ಇಲ್ಲೇ ಇದ್ರೆ ಸಾಯಿಸುವುದಾಗಿ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಇತರೆ: ೦೨

  •    ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಉರಿಗಾಂನ ಕೆನೆಡೀಸ್ ೨ನೇ ಲೈನ್ ಮನೆ ಸಂಖ್ಯೆ ೬೪ ರಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೫-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಶ್ರೀ ಮುಸ್ತಾಕ್ ಪಾಷ, ಪಿ.ಎಸ್.ಐ,ಉರಿಗಾಂ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿ ಗಳೊಂದಿಗೆ ಮನೆ ಸಂಖ್ಯೆ ೬೪ರ ಮನೆಯ ಮೇಲೆ ದಾಳಿಮಾಡಿದಾಗ ಸದರಿ ಮನೆಯಲ್ಲಿ ಕುಮಾರ್‍ @ ನಾಯಿಕುಮಾರ್‍ ಬಿನ್ ಲೇಟ್ ಸಂಪಂಗಿ, ಕುಮಾರಿ ಕೋಂ ಕುಮಾರ್‍ ಮತ್ತು ಮಲರ್‍ ಕೋಂ ವಿಲ್ವನಾಥನ್ ಎಂಬುವರುಗಳು ಮೂರು ಪ್ಲಾಸ್ಟಕ್ ಡ್ರಾಮ್ ಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮಾಡುವ ಕೊಳೆಯುವ ರೀತಿಯಲ್ಲಿ ಶೇಖರಿಸಿದ ಕಚ್ಚಾಪದಾರ್ಥಗಳು ರಾಸಾಯನಿಕ ದ್ರವಪದಾರ್ಥಗಳು ಒಂದು ಮಣ್ಣಿನ ಮಡಿಕೆ ಪ್ಲಾಸ್ಟಿಕ್ ಪೈವು ಇಟ್ಟುಕೊಂಡು ಕಳ್ಳಭಟ್ಟಿ ತಯಾರು ಮಾಡಲು ಅಣಿ ಮಾಡುತ್ತಿದ್ದು, ಪೊಲೀಸರನ್ನು ಕಂಡ ಕೂಡಲೆ ಪರಾರಿಯಾಗಿರುತ್ತಾರೆ. ಪಂಚನಾಮೆ ಮೂಲಕ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಕಾನೂನು ಕ್ರಮಕೈಗೊಂಡಿರುತ್ತದೆ.
  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚನ್ನಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ: ೨೧-೦೫-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಬೇತಮಂಗಲ ಪೊಲೀಸ್ ಠಾಣೆಯ ಶ್ರೀ. ಮುನಿನಾರಾಯಣಪ್ಪ, ಎ.ಎ‌ಸ್‌.ಐ. ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳೊಂದಿಗೆ ಕಳ್ಳಿಕುಪ್ಪ ಗ್ರಾಮದ ವಾಸಿಗಳಾದ ಶ್ರೀಮತಿ ಭಾಗ್ಯಮ್ಮ ಕೋಂ ವೆಂಕಟರಾಮಪ್ಪ(೪೦) ಮತ್ತು ಶ್ರೀಮತಿ ಪಾಪಮ್ಮ ಕೋಂ ನಾಗಪ್ಪ(೪೦) ರವರುಗಳ ಮನೆಗಳ ಮೇಲೆ ದಾಳಿ ಮಾಡಲಾಗಿ ಸದರಿಯವರುಗಳು ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಒಂದೊಂದು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮತ್ತು ಗ್ಲಾಸುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವರನ್ನು ಹಿಡಿದು ದಸ್ತಗಿರಿ ಮಾಡಿ ಕಾನೂನು ಕ್ರಮಕೈಗೊಂಡಿರುತ್ತದೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚನ್ನಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿ ಮೃತ ಶ್ರೀ. ರಾಧಕೃಷ್ಣ ಬಿನ್ ಗೋವಿಂದಪ್ಪ(೪೦) ಎಂಬುವರಿಗೆ ಆಗಾಗೆ ಹೊಟ್ಟೆ ನೋವು ಬರುತ್ತಿದ್ದು, ನೋವು ತಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: ೨೧-೦೫-೨೦೦೮ ರಂದು ರಾತ್ರಿ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.