ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಜೆ.ಡಿ.ಎಸ್. ಕಛೇರಿ, ಉರಿಗಾಂ, ಕೆ.ಜಿ.ಎಫ್. ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೪-೨೦೦೮ ರಂದು ೧೩೪೫ ಗಂಟೆ ಸಮಯದಲ್ಲಿ ಶ್ರೀ ದಾಸರಾಮಲು ಇ, ಸೆಕ್ಯೂರಿಟಿ, ಬಿ.ಜಿ.ಎಂ.ಎಲ್ ಎಂಬುವರು ಜೆ.ಡಿ.ಎಸ್. ಕಛೇರಿ ಬಳಿ ಕೆ.ಎಂ ದಿವಾಕರನ್ ರವರ ಬಳಿ ಬಾಲಗಾಟ್ ಪಂಜಾಬಿ ಲೈನ್ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಏಕಾ ಏಕಿ ಜಯಕುಮಾರ್‍ ಬಿನ್ ಲೇಟ್ ಜ್ಞಾನಪ್ರಕಾಶಮ್, ಮಾರಿಕುಪ್ಪಂ ರವರು ದಾಸರಾಮಲು ಷರಟಿನ ಕಾಲರ್‍ ಹಿಡಿದು ಎಳೆದಾಡಿ ಕಟ್ಟ ಮಾತುಗಳಿಂದ ಬೈದಿರುತ್ತಾನೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕದಿರೇಗೌಡನಕೋಟೆ ಗ್ರಾಮದ ಬುಡ್ಡೇಗೌಡನ ಜಮೀನಿನಲ್ಲಿ ಈ ಕೃತ್ಯ ಸಂಭವಿಸಿರುಯ್ಯದೆ. ದಿನಾಂಕ ೨೯-೦೪-೨೦೦೮ ರಂದು ೦೯೪೫ ಗಂಟೆ ಸಮಯದಲ್ಲಿ ಗಂಗಪ್ಪ ಕದಿರೇಗೌಡನಕೋಟೆ ಗ್ರಾಮದ ವಾಸಿ ಶ್ರೀ ನಾರಾಯಣಸ್ವಾಮಿ (೪೦) ಬಿನ್ ಲೇಟ್ ಮುನಿಗಂಗಪ್ಪ  ಅದೇ ಗ್ರಾಮದ ಬುಡ್ಡೇಗೌಡ ರವರ ಜಮೀನಿನಲ್ಲಿರುವ ರಾಗಿ ತುಳಿಸುವ ಕಣದಲ್ಲಿ ರಾಗಿಯನ್ನು ತುಳಿಸಸುವ ವಿಷಯದಲ್ಲಿ ಅದೇ ಗ್ರಾಮದ ವಾಇ ಸುಬ್ರಮಣಿ ಜಗಳ ಕಾದು ಕೈಯಲ್ಲಿದ್ದ ವೆಂಕಿಯಿಂದ  ನಾರಾಯಣಸ್ವಾಮಿ ರವರ ಬಲಕೈ ಬೆರಳುಗಳ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply