ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಏಪ್ರಿಲ್ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪಿಚ್ಚಹಳ್ಳಿ ಹಾಗೂ ಯರನಾಗನಹಳ್ಳಿ ಗ್ರಾಮಗಳ ಮದ್ಯ ಇರುವ ನೀಲಿಗಿರಿ ತೋಪಿನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೮-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಬೆಂಗಳೂರು ತಿಲಕ್ ನಗರ ೧ನೇ ಕ್ರಾಸ್ ೧ನೇ ಮೈನ್ ವಾಸಿ ಶ್ರೀ ಅಬ್ದುಲ್ ಮಜೀದ್ ಬಿನ್ ಲೇಟ್ ಅಬ್ದುಲ್ ಸುಭಾನ ಎಂಬುವರಿಗೆ ಪಯಾಜ್, ಅಶೋಕ್, ಶ್ರೀಧರ್‍, ಅಸ್ಲಾಂ @ ಸರ್‌ವ್‌, ದಿಲ್, ಅಬ್ದುಲ್, ಗಂಟ್ಲಪ್ಪ ಮತ್ತು ಇತರರು ೭ ಲಕ್ಷ ರೂ ಮೌಲ್ಯದ ಬಂಗಾರದ ವಡುವೆಗಳನ್ನು ಕೊಡುವುದಾಗಿ ನಂಬಿಸಿ ಪಿಚ್ಚಹಳ್ಳಿ ಗ್ರಾಮದ ಸಮೀಪ ಇರುವ ನೀಲಿಗಿರಿ ತೋಪಿಗೆ ಕರೆದುಕೊಂಡು ಹೋಗಿ ಅಬ್ದುಲ್ ಮಜೀದ್ ರವರಿಂದ ೭ ಲಕ್ಷ ರೂ ಪಡೆದು ಬಂಗಾರದ ವಡುವೆಗಳನ್ನು ಕೊಡದೆ ಮೋಸ ಮಾಡಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾಸೇನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೫-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ದಾಸೇನಹಳ್ಳಿ ಗ್ರಾಮದ ವಾಸಿಗಳಾದ ಗೋವಿಂದಪ್ಪ, ನಂಜಪ್ಪ, ರಾಜಪ್ಪ, ಬತ್ಯಪ್ಪ, ಮುನಿವೆಂಕಟಪ್ಪ, ರಮೇಶ್ ಮತ್ತು ಶ್ರೀರಾಮ ಎಂಬುವಗಳು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಗಡಾರಿಗಳು, ಗುದ್ದಲಿಗಳು ಮತ್ತು ಜನಿಕೆಗಳನ್ನು ಹಿಡಿದುಕೊಂಡು ಬಂದು ಅದೇ ಗ್ರಾಮದ ವಾಸಿಯಾದ ಶ್ರೀ ಚೌಡಪ್ಪ (೪೫) ಬಿನ್ ಗೋವಿಂದಪ್ಪ ರವರ ಖಾಲೀ ನಿವೇಶನಕ್ಕೆ ಹಾಕಿದ್ದ ಕಲ್ಲು ಚಪ್ಪಡಿಗಳ ವಿಚಾರವಾಗಿ ಜಗಳ ಕಾದು ಕೆಟ್ಟ ಮತುಗಳಿಂದ ಬೈದು ಕೊಲೆ ಬೆದರಿಕೆ ಹಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದೊಡ್ಡವಲಗಮಾದಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೫-೦೪-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಸಿ.ಪಿ.ಐ. ಉರಿಗಾಂ ವೃತ್ತ ರವರಿಗೆ ಬಂದ ಖಚಿತವಾದ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ದೊಡ್ಡವಲಗಮಾದಿ ಗ್ರಾಮದ ವಾಸಿಗಳಾದ ಮೆಹಬೂಬ್ (೬೦) ಬಿನ್ ಸಾಬುಸಾಬ್ ಮತ್ತು ವೆಂಕಟರಾಮ್ (೩೫) ಬಿನ್ ಲೇಟ್ ಚಿಕ್ಕರಾಮಯ್ಯ ರವರುಗಳು ಗ್ರಾಮದ ಹೊರ ವಲಯದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದವರನ್ನು ದಸ್ತಗಿರಿ ಮಾಡಿ ೪೦ ಲೀಟರ್‍ ಕಳ್ಳಬಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿರುತ್ತಾರೆ.  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply