ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮದು ಪೋಟೋ ಸ್ಟುಡಿಯೋ ಬಳಿ ಬಂಗಾರಪೇಟೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೫-೦೪-೨೦೦೮ ರಂದು ೧೩೫೦ ಗಂಟೆ ಸಮಯದಲ್ಲಿ ಶ್ರೀ. ನಂಜಪ್ಪ ಬಿನ್ ಚಿನ್ನಪ್ಪಯ್ಯ(೬೦), ಚಿನ್ನಾಪುರ ಗ್ರಾಮ ವಕ್ಕಲೇರಿ ಹೋಬಳಿ, ಮಾಲೂರು ತಾಲೂಕು ರವರು ತನ್ನ ವಾಹನ ಹೀರಹೊಂಡಾ ಸಂಖ್ಯೆ ಕೆಎ-೦೮-ಹೆಚ್-೫೭೧೯ ರಲ್ಲಿ ಬರುತ್ತಿದ್ದಾಗ ಮಧು ಪೋಟೋ ಸ್ಟುಡಿಯೋ ಬಳಿ ಬರುತ್ತದ್ದಾಗ ಶ್ರೀ. ರಘುಪತಿ ಬಿನ್ ಕುಮಾರ್(೨೨), ದಾಸ್ ಮೆಡಿಕಲ್ಸ್ ಬಂಗಾರಪೇಟೆ ರವರು ತನ್ನ ವಾಹನ ಟಾಟಾ ಸುಮೋ ಸಂಖ್ಯೆ ಕೆಎ-೨೮-ಎನ್-೯೧೧೧ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ನಂಜಪ್ಪ ರವರು ಕೆಳಗೆ ಬಿದ್ದು ಎಡಗಾಲು ತೀವ್ರ ಸ್ವರೂಪದ ಗಾಯವಾಗಿರುತ್ತೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ೨ನೇ ಕ್ರಾಸ್, ಪೈಪ್‌ಲೈನ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಬಾಲಸುಬ್ರಮಣಿ ಬಿನ್ ಲೇಟ್ ಚೆಂಗಯ್ಯ, ಪೈಪ್‌ಲೈನ್, ರಾಬರ್ಟ್‌ಸನ್‌ಪೇಟೆ ವಾಸಿ ರವರ ಮಗಳಾದ ಕುಮಾರಿ ಸೆಲ್ವಿ ಬಿ. ಕಲ್ಪನ (೨೩) ರವರು ದಿನಾಂಕ ೨೩-೦೪-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಹೊಟ್ಟೆ ನೋವಿಗೆ ಮಾತ್ರೆಯನ್ನು ತರುವುದಾಗಿ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋದವಳು ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


