ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ಕಾಂಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ವೆಂಕಟಾಪುರ ಗ್ರಾಮದಲ್ಲಿ ಸಂಭವಿಸಿರುತ್ತದೆ. ವೆಂಕಟಾಪುರ ಗ್ರಾಮದ ವಾಸಿ ಶ್ರೀಮತಿ ಜಯಂತಿ (೨೬) ಎಂಬುವರು ಸುಮಾರು ೬ ವರ್ಷಗಳ ಹಿಂದೆ ವೆಂಕಟಾಪುರ ಗ್ರಾಮದ ವಾಸಿ ನಾರಾಯಣಪ್ಪನೊಂದಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿರುತ್ತಾರೆ. ಮದುವೆಯಾದಾಗಿನಿಂದ ಗಂಡ ನಾರಾಯಣಪ್ಪ ಅತ್ತೆ ಮುನಿಯಮ್ಮ ಮತ್ತು ತಿಪ್ಪಮ್ಮ ಎಂಬುವರುಗಳು ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದು ಹಲವು ಪಂಚಾಯ್ತಿಗಳನ್ನು ನಡೆಸಿ ಸಮಾದಾನ ಮಾಡಿದ್ದರೂ ಸಹ ಹಿಂಸೆ ಮತ್ತು ಕಿರುಕುಳ ಮುಂದುವರೆದಿದ್ದು ಅವರ ಕಿರುಕುಳ ತಾಳಲಾರದೆ ದಿನಾಂಕ ೨೪-೦೪-೨೦೦೮ ರಂದು ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ವಿಜಿ ಟಿ.ವಿ.ಎಸ್ ವರ್ಕ್‌ಶಾಪ್ ಹತ್ತಿರ ಉರಿಗಾಂಪೇಟೆ ರಸ್ತೆ, ರಾಬರ್ಟ್‌ಸನ್‌ಪೇಟೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೩.೦೪.೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಉರಿಗಾಂಪೇಟೆಯ ಮನೆ ಸಂಖ್ಯೆ ೧೦೯೭ ರ ವಾಸಿ ಸುರೇಶ್ ಬಿನ್ ಕೋದಂಡನ್ ಮತ್ತು ಪ್ರಸನ್ನ ಎಂಬುವರು ತಮ್ಮ ಟಿ.ವಿ.ಎಸ್ ವಾಹನದಲ್ಲಿ ಉರಿಗಾಂಪೇಟೆ ಯಿಂದ ರಾಬರ್ಟ್‌ಸನ್‌ಪೇಟೆಗೆ ಬರುತ್ತಿರುವಾಗ ಎದರುಗಡೆಯಿಂದ ಒಂದು ಆಟೋ ಚಾಲಕ ತನ್ನ ವಾಹನವನ್ನು ಅತಿವೇಗಾಗಿ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಸುರೇಶ್ ರವರ ವಾಹನಕ್ಕೆ ಡಿಕ್ಕಿ ಹೊಡೆದು ಆಟೋವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಇದರ ಪ್ರಯುಕ್ತ ಸುರೇಶ್ ಮತ್ತು ಪ್ರಸನ್ನ ರವರುಗಳಿಗೆ ರಕ್ತ ಗಾಯಗಳಾಗಿರುತ್ತವೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಸಂಗನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಈಗ್ಗೆ ೪ ದಿನಗಳ ಹಿಂದೆ ಸಂಘನಹಳ್ಳಿ ಗ್ರಾಮದಲ್ಲಿ ನಡೆದ ವೆಂಕಟರಮಣ ದೇವರ ರಥೋತ್ಸವದ ತೇರು ಎಳೆಯುವ ಸಮಯದಲ್ಲಿ ಅದೇ ಗ್ರಾಮದ ವೆಂಕಟಮ್ಮ ಎಂಬಾಕೆಗೆ ಅದೇ ಗ್ರಾಮದ ಕೃಷ್ಣಪ್ಪ (೪೦) ಬಿನ್ ನಾಗಪ್ಪ ಎಂಬುವರ ಕೈ ತಗುಲಿದ ವಿಚಾರದಲ್ಲಿ ದಿನಾಂಕ ೨೪.೦೪.೨೦೦೮ ರಂದು ೦೫೦೦ ಗಂಟೆಗೆ ಕೃಷ್ಣಪ್ಪನು ಅವರ ಮನೆಯ ಮುಂದೆ ಮಲಗಿದ್ದಾಗ ಸಂಗನಹಳ್ಳಿ ಗ್ರಾಮದ ಕೃಷ್ಣಪ್ಪ, ಉಮಾಪತಿ, ಪಾಪನ್ನ ಮತ್ತು ತಿಮ್ಮರಾಯಪ್ಪ ಎಂಬುವರುಗಳು ಸಮಾನ ಉದ್ದೇಶದಿಂದ ಕೃಷ್ಣಪ್ಪನೊಂದಿಗೆ ಜಗಳ ಮಾಡಿ ದೊಣ್ಣೆಗಳಿಂದ ಕೈಗಳಿಂದ ಮೈಮೇಲೆ ಹೊಡೆದು ಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


