ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಏಪ್ರಿಲ್ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

 ಕೊಲೆ: ಇಲ್ಲ

ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ:ಇಲ್ಲ

ಸಾಧಾರಣ ಕಳ್ಳತನ:ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ :ಇಲ್ಲ

ರಸ್ತೆ ಅಪಘಾತಗಳು:೦೧

 -ಮಾರಣಾಂತಿಕ:ಇಲ್ಲ
-ಸಾಧಾರಣ: ೦೧

  •  ಬಂ

                                      • ಗಾರಪೇಟೆಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. – ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ತೋಟಗಾರಿಕೆ ಇಲಾಖೆ ಸಮೀಪ ಸಂಭವಿಸಿರುತ್ತದೆ. ದಿನಾಂಕ ೧೯.೦೪.೨೦೦೮ ರಂದು ೧೨೧೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ಗ್ರಾಮದ ವಾಸಿ ಶ್ರೀ ಶಿವಕುಮಾರ್ (೫೫) ಬಿನ್ ಲೇಟ್ ಸದಾಶಿವಪ್ಪ ಎಂಬುವರು ತನ್ನ ಹೀರೋಹೊಂಡಾ ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೩-ಎಸ್-೮೪೬೬ ರಲ್ಲಿ ಕೆ.ಜಿ.ಎಫ್. – ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ತೋಟಗಾರಿಕೆ ಇಲಾಖೆ ಸಮೀಪ ಬಂಗಾರಪೇಟೆ ಕಡೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಶ್ರೀ ಯೆಬ್ಬಾಲ್ ಬಾಬು (೪೦) ಬಿನ್ ಮಾನ್ಯುಯಲ್ ಎಂಬುವರು ಮಾರುತಿ ಕಾರ್ ಸಂಖ್ಯೆ: ಕೆಎ-೦೩-ಜಡ್-೪೫೬೬ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹೀರೋಹೊಂಡಾ ಮೋಟಾರ್ ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಶ್ರೀ ಶಿವಕುಮಾರ್ ಎಂಬುವರಿಗೆ ರಕ್ತಘಾಯಗಳಾಗಿರುತ್ತವೆ.
                                      ಮೋಸ / ವಂಚನೆ ಪ್ರಕರಣಗಳು:ಇಲ್ಲ

                                      ಕೊಲೆಗೆ ಪ್ರಯತ್ನ: ಇಲ್ಲ

                                      ದೊಂಬಿ:ಇಲ್ಲ

                                      ಹಲ್ಲೆ:೦೧

                                      •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ಮಸ್ಕಂ ಎ.ಬ್ಲಾಕ್ ನಲ್ಲಿ ನಡೆದಿರುತ್ತದೆ. ದಿನಾಂಕ ೧೯-೦೪-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್.ನ ಮಸ್ಕಂ ಎ.ಬ್ಲಾಕ್ ವಾಸಿಯಾದ ಶ್ರೀ ರತೇಶ್ (೨೪) ಬಿನ್ ಮಗೇಂದ್ರನ್ ಎಂಬುವರು ತನ್ನ ಮನೆಯ ಮುಂದೆ ಪೂಜೆ ಪ್ರಯುಕ್ತ ಚಪ್ಪರಹಾಕಿದ್ದರು. ಈ ಸಂಬಂಧವಾಗಿ ಅದೇ ಬ್ಲಾಕಿನ ವಾಸಿ ಗೌತಮ್ ಎಂಬುವರು ಅಲ್ಲಿಗೆ ಬಂದು ಯಾಕೆ ರಸ್ತೆಗೆ ಅಡ್ಡವಾಗಿ ಚಪ್ಪರ ಹಾಕಿದ್ದೀಯ ಎಂತ ಶ್ರೀ ರತೇಶ್ ಬಳಿ ಜಗಳ ತೆಗೆದಾಗ ರತೇಶ್ ರವರ ತಂದೆ ಸಮಾಧಾನಪಡಿಸಿದ್ದ ಹಿನ್ನಲೆಯಲ್ಲಿ ಗೌತಮ್ ರವರು ಒಂದು ಕತ್ತಿಯನ್ನು ಎತ್ತಿಕೊಂಡು ಬಂದು ರತೇಶ್ ರವರ ತಂದೆಗೆ ಪ್ರಾಣ ಬೆದರಿಕೆ ಹಾಕಿ ತಲೆಯ ಮೇಲೆ ಯಾವುದೋ ದ್ರಾವಕವನ್ನು ಹಾಕಿ ತಲೆ ಮತ್ತು ಮುಖದ ಮೇಲೆ ಉರಿ ಉಂಟು ಮಾಡಿರುತ್ತಾನೆ.

                                      ಇತರೆ:ಇಲ್ಲ

                                      ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:ಇಲ್ಲ

                                      ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

                                      •  

                                       

                                      •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ಅಶೋಕನಗರದ ಗಂಗಿರೆಡ್ಡಿ ಮೈದಾನದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೯-೦೪-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಕೆನಡೀಸ್ ಲೈನ್ ವಾಸಿಯಾದ ಶ್ರೀ ರಾಜಾ (೩೬) ಬಿನ್ ತಿಲಗರಾಜ್ ಎಂಬುವರ ತಮ್ಮನಾದ ಶ್ರೀ ತೆನ್ನಾರಸನ್ ಎಂಬುವರು ಕೆ.ಜಿ.ಎಫ್. ಗಂಗಿರೆಡ್ಡಿ ಮೈದಾನದಲ್ಲಿರುವ ಬಾವಿಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾನೆ.
                                      ವ್ಯಕ್ತಿ ಕಾಣೆ ಪ್ರಕರಣಗಳು:೦೧
                                      •    ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣಪ್ಪ (೩೮) ಬಿನ್ ಚಿಕ್ಕಗೂಳಪ್ಪ ಎಂಬುವರ ಮಗಳಾದ ಕು: ಶ್ವೇತಾ (೧೬) ಎಂಬುವರು ದಿನಾಂಕ ೧೭-೦೪-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಮನೆಯಿಂದ ಹೋದವಳು ದಿನಾಂಕ ೧೯-೦೪-೨೦೦೮ರ ತನಕ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
                                      ಮುಂಜಾಗ್ರತೆ ಕ್ರಮಗಳು:ಇಲ್ಲ

                                      ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

                                      -ಪ್ರಕರಣಗಳು:ತಿಳಿದು ಬಂದಿಲ್ಲ         

                                      -ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
                                      ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 

                                       

                                       

                                       

                                       

                                      Leave a Reply