April 30, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೨
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೆಂಪಾಪುರ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೦೪-೨೦೦೮ ರಂದು ೦೫೩೦ ಗಂಟೆ ಸಮಯದಲ್ಲಿ ಕೆಂಪಾಪುರ ಗ್ರಾಮದ ವಾಸಿ ಕುಮಾರಿ ಉಷಾ (೧೬) ಬಿನ್ ನಂಜುಂಡಪ್ಪ ಎಂಬುವಳು ಮನೆಯಲ್ಲಿ ಮಲಗಿದ್ದವಳು ಕಾಣೆಯಾಗಿರುತ್ತಾಳೆ. ಸ್ನೇಹಿತರ ಮತ್ತು ನೆಂಟರಿಷ್ಠರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಹುಡುಗಿಯ ಚಹರೆ ಈ ರೀತಿ ಇರುತ್ತದೆ. ಹೆಸರು: ಉಷಾ, ವಯಸ್ಸು ೧೬, ಬಣ್ಣ: ಕಪ್ಪು, ಕೋಲು ಮುಖ, ಸಾದಾರಣ ಮೈಕಟ್ಟು, ಕಪ್ಪು ಕೂದಲು, ಉಡುಪು: ರೋಸ್ ಬಣ್ಣದ ಟಾಫ್ ಮತ್ತು ನೀಲಿ ಬಣ್ಣದ ಚೂಡಿದಾರ್, ಬಾಷೆ ಕನ್ನಡ, ತೆಲಗು ತಮಿಳು ಮತ್ತು ಹಿಂದಿ ಮಾತನಾಡುತ್ತಾಳೆ
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ಮಸ್ಕಂ ಇ-ಬ್ಲಾಕ್ ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೫-೦೪-೨೦೦೮ ರಂದು ೦೬೩೦ ಗಂಟೆ ಸಮಯದಲ್ಲಿ ಕುಮಾರಿ ಸಿಮಲಿ (೧೭) ಬಿನ್ ಇಸಾಕ್ ಇ ಬ್ಲಾಕ್ (ಸುಬಾಷಣಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದು) ಎಂಬುವರು ಸುಸೈಪಾಳ್ಯಂನ ಅವರ ಮನೆಯಿಂದ ಚರ್ಚ್‌ಗೆ ಹೋಗಿ ಬರುತ್ತೇನೆಂದು ಅವರ ಕೇರಿಯಲ್ಲಿರುವ ಸೆಂಟ್ ಜೋಸೆಫ್ ಚರ್ಚ್‌ಗೆ ಹೋದವಳು ಮತ್ತೆ ವಾಪಸ್ಸು ಮನೆಗೆ ಬರದೇ ಕಾಣೆಯಾಗಿರುತ್ತಾರೆ. ಅದೇ ಕೇರಿಯ ವಾಸಿ ಆಲ್‌ವಿನ್ ಬಿನ್ ಭರತ್‌ಲೋಮ್ ಎಂಬಾತನು ಸಹ ಊರಿನಲ್ಲಿ ಇಲ್ಲದಿದ್ದರಿಂದ ಆತನೊಂದಿಗೆ ಹೋಗಿರಬಹುದೆಂದು ಗುಮಾನಿ ಇರುತ್ತದೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 29, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಜೆ.ಡಿ.ಎಸ್. ಕಛೇರಿ, ಉರಿಗಾಂ, ಕೆ.ಜಿ.ಎಫ್. ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೪-೨೦೦೮ ರಂದು ೧೩೪೫ ಗಂಟೆ ಸಮಯದಲ್ಲಿ ಶ್ರೀ ದಾಸರಾಮಲು ಇ, ಸೆಕ್ಯೂರಿಟಿ, ಬಿ.ಜಿ.ಎಂ.ಎಲ್ ಎಂಬುವರು ಜೆ.ಡಿ.ಎಸ್. ಕಛೇರಿ ಬಳಿ ಕೆ.ಎಂ ದಿವಾಕರನ್ ರವರ ಬಳಿ ಬಾಲಗಾಟ್ ಪಂಜಾಬಿ ಲೈನ್ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಏಕಾ ಏಕಿ ಜಯಕುಮಾರ್ ಬಿನ್ ಲೇಟ್ ಜ್ಞಾನಪ್ರಕಾಶಮ್, ಮಾರಿಕುಪ್ಪಂ ರವರು ದಾಸರಾಮಲು ಷರಟಿನ ಕಾಲರ್ ಹಿಡಿದು ಎಳೆದಾಡಿ ಕಟ್ಟ ಮಾತುಗಳಿಂದ ಬೈದಿರುತ್ತಾನೆ.
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕದಿರೇಗೌಡನಕೋಟೆ ಗ್ರಾಮದ ಬುಡ್ಡೇಗೌಡನ ಜಮೀನಿನಲ್ಲಿ ಈ ಕೃತ್ಯ ಸಂಭವಿಸಿರುಯ್ಯದೆ. ದಿನಾಂಕ ೨೯-೦೪-೨೦೦೮ ರಂದು ೦೯೪೫ ಗಂಟೆ ಸಮಯದಲ್ಲಿ ಗಂಗಪ್ಪ ಕದಿರೇಗೌಡನಕೋಟೆ ಗ್ರಾಮದ ವಾಸಿ ಶ್ರೀ ನಾರಾಯಣಸ್ವಾಮಿ (೪೦) ಬಿನ್ ಲೇಟ್ ಮುನಿಗಂಗಪ್ಪ ಅದೇ ಗ್ರಾಮದ ಬುಡ್ಡೇಗೌಡ ರವರ ಜಮೀನಿನಲ್ಲಿರುವ ರಾಗಿ ತುಳಿಸುವ ಕಣದಲ್ಲಿ ರಾಗಿಯನ್ನು ತುಳಿಸಸುವ ವಿಷಯದಲ್ಲಿ ಅದೇ ಗ್ರಾಮದ ವಾಇ ಸುಬ್ರಮಣಿ ಜಗಳ ಕಾದು ಕೈಯಲ್ಲಿದ್ದ ವೆಂಕಿಯಿಂದ ನಾರಾಯಣಸ್ವಾಮಿ ರವರ ಬಲಕೈ ಬೆರಳುಗಳ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 26, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪಿಚ್ಚಹಳ್ಳಿ ಹಾಗೂ ಯರನಾಗನಹಳ್ಳಿ ಗ್ರಾಮಗಳ ಮದ್ಯ ಇರುವ ನೀಲಿಗಿರಿ ತೋಪಿನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೮-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಬೆಂಗಳೂರು ತಿಲಕ್ ನಗರ ೧ನೇ ಕ್ರಾಸ್ ೧ನೇ ಮೈನ್ ವಾಸಿ ಶ್ರೀ ಅಬ್ದುಲ್ ಮಜೀದ್ ಬಿನ್ ಲೇಟ್ ಅಬ್ದುಲ್ ಸುಭಾನ ಎಂಬುವರಿಗೆ ಪಯಾಜ್, ಅಶೋಕ್, ಶ್ರೀಧರ್, ಅಸ್ಲಾಂ @ ಸರ್‌ವ್, ದಿಲ್, ಅಬ್ದುಲ್, ಗಂಟ್ಲಪ್ಪ ಮತ್ತು ಇತರರು ೭ ಲಕ್ಷ ರೂ ಮೌಲ್ಯದ ಬಂಗಾರದ ವಡುವೆಗಳನ್ನು ಕೊಡುವುದಾಗಿ ನಂಬಿಸಿ ಪಿಚ್ಚಹಳ್ಳಿ ಗ್ರಾಮದ ಸಮೀಪ ಇರುವ ನೀಲಿಗಿರಿ ತೋಪಿಗೆ ಕರೆದುಕೊಂಡು ಹೋಗಿ ಅಬ್ದುಲ್ ಮಜೀದ್ ರವರಿಂದ ೭ ಲಕ್ಷ ರೂ ಪಡೆದು ಬಂಗಾರದ ವಡುವೆಗಳನ್ನು ಕೊಡದೆ ಮೋಸ ಮಾಡಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾಸೇನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೫-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ದಾಸೇನಹಳ್ಳಿ ಗ್ರಾಮದ ವಾಸಿಗಳಾದ ಗೋವಿಂದಪ್ಪ, ನಂಜಪ್ಪ, ರಾಜಪ್ಪ, ಬತ್ಯಪ್ಪ, ಮುನಿವೆಂಕಟಪ್ಪ, ರಮೇಶ್ ಮತ್ತು ಶ್ರೀರಾಮ ಎಂಬುವಗಳು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಗಡಾರಿಗಳು, ಗುದ್ದಲಿಗಳು ಮತ್ತು ಜನಿಕೆಗಳನ್ನು ಹಿಡಿದುಕೊಂಡು ಬಂದು ಅದೇ ಗ್ರಾಮದ ವಾಸಿಯಾದ ಶ್ರೀ ಚೌಡಪ್ಪ (೪೫) ಬಿನ್ ಗೋವಿಂದಪ್ಪ ರವರ ಖಾಲೀ ನಿವೇಶನಕ್ಕೆ ಹಾಕಿದ್ದ ಕಲ್ಲು ಚಪ್ಪಡಿಗಳ ವಿಚಾರವಾಗಿ ಜಗಳ ಕಾದು ಕೆಟ್ಟ ಮತುಗಳಿಂದ ಬೈದು ಕೊಲೆ ಬೆದರಿಕೆ ಹಕಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 25, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮದು ಪೋಟೋ ಸ್ಟುಡಿಯೋ ಬಳಿ ಬಂಗಾರಪೇಟೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೫-೦೪-೨೦೦೮ ರಂದು ೧೩೫೦ ಗಂಟೆ ಸಮಯದಲ್ಲಿ ಶ್ರೀ. ನಂಜಪ್ಪ ಬಿನ್ ಚಿನ್ನಪ್ಪಯ್ಯ(೬೦), ಚಿನ್ನಾಪುರ ಗ್ರಾಮ ವಕ್ಕಲೇರಿ ಹೋಬಳಿ, ಮಾಲೂರು ತಾಲೂಕು ರವರು ತನ್ನ ವಾಹನ ಹೀರಹೊಂಡಾ ಸಂಖ್ಯೆ ಕೆಎ-೦೮-ಹೆಚ್-೫೭೧೯ ರಲ್ಲಿ ಬರುತ್ತಿದ್ದಾಗ ಮಧು ಪೋಟೋ ಸ್ಟುಡಿಯೋ ಬಳಿ ಬರುತ್ತದ್ದಾಗ ಶ್ರೀ. ರಘುಪತಿ ಬಿನ್ ಕುಮಾರ್(೨೨), ದಾಸ್ ಮೆಡಿಕಲ್ಸ್ ಬಂಗಾರಪೇಟೆ ರವರು ತನ್ನ ವಾಹನ ಟಾಟಾ ಸುಮೋ ಸಂಖ್ಯೆ ಕೆಎ-೨೮-ಎನ್-೯೧೧೧ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ನಂಜಪ್ಪ ರವರು ಕೆಳಗೆ ಬಿದ್ದು ಎಡಗಾಲು ತೀವ್ರ ಸ್ವರೂಪದ ಗಾಯವಾಗಿರುತ್ತೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ೨ನೇ ಕ್ರಾಸ್, ಪೈಪ್‌ಲೈನ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಬಾಲಸುಬ್ರಮಣಿ ಬಿನ್ ಲೇಟ್ ಚೆಂಗಯ್ಯ, ಪೈಪ್‌ಲೈನ್, ರಾಬರ್ಟ್‌ಸನ್‌ಪೇಟೆ ವಾಸಿ ರವರ ಮಗಳಾದ ಕುಮಾರಿ ಸೆಲ್ವಿ ಬಿ. ಕಲ್ಪನ (೨೩) ರವರು ದಿನಾಂಕ ೨೩-೦೪-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಹೊಟ್ಟೆ ನೋವಿಗೆ ಮಾತ್ರೆಯನ್ನು ತರುವುದಾಗಿ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋದವಳು ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 24, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ವಿಜಿ ಟಿ.ವಿ.ಎಸ್ ವರ್ಕ್‌ಶಾಪ್ ಹತ್ತಿರ ಉರಿಗಾಂಪೇಟೆ ರಸ್ತೆ, ರಾಬರ್ಟ್‌ಸನ್‌ಪೇಟೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೩.೦೪.೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಉರಿಗಾಂಪೇಟೆಯ ಮನೆ ಸಂಖ್ಯೆ ೧೦೯೭ ರ ವಾಸಿ ಸುರೇಶ್ ಬಿನ್ ಕೋದಂಡನ್ ಮತ್ತು ಪ್ರಸನ್ನ ಎಂಬುವರು ತಮ್ಮ ಟಿ.ವಿ.ಎಸ್ ವಾಹನದಲ್ಲಿ ಉರಿಗಾಂಪೇಟೆ ಯಿಂದ ರಾಬರ್ಟ್‌ಸನ್‌ಪೇಟೆಗೆ ಬರುತ್ತಿರುವಾಗ ಎದರುಗಡೆಯಿಂದ ಒಂದು ಆಟೋ ಚಾಲಕ ತನ್ನ ವಾಹನವನ್ನು ಅತಿವೇಗಾಗಿ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಸುರೇಶ್ ರವರ ವಾಹನಕ್ಕೆ ಡಿಕ್ಕಿ ಹೊಡೆದು ಆಟೋವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಇದರ ಪ್ರಯುಕ್ತ ಸುರೇಶ್ ಮತ್ತು ಪ್ರಸನ್ನ ರವರುಗಳಿಗೆ ರಕ್ತ ಗಾಯಗಳಾಗಿರುತ್ತವೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಸಂಗನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಈಗ್ಗೆ ೪ ದಿನಗಳ ಹಿಂದೆ ಸಂಘನಹಳ್ಳಿ ಗ್ರಾಮದಲ್ಲಿ ನಡೆದ ವೆಂಕಟರಮಣ ದೇವರ ರಥೋತ್ಸವದ ತೇರು ಎಳೆಯುವ ಸಮಯದಲ್ಲಿ ಅದೇ ಗ್ರಾಮದ ವೆಂಕಟಮ್ಮ ಎಂಬಾಕೆಗೆ ಅದೇ ಗ್ರಾಮದ ಕೃಷ್ಣಪ್ಪ (೪೦) ಬಿನ್ ನಾಗಪ್ಪ ಎಂಬುವರ ಕೈ ತಗುಲಿದ ವಿಚಾರದಲ್ಲಿ ದಿನಾಂಕ ೨೪.೦೪.೨೦೦೮ ರಂದು ೦೫೦೦ ಗಂಟೆಗೆ ಕೃಷ್ಣಪ್ಪನು ಅವರ ಮನೆಯ ಮುಂದೆ ಮಲಗಿದ್ದಾಗ ಸಂಗನಹಳ್ಳಿ ಗ್ರಾಮದ ಕೃಷ್ಣಪ್ಪ, ಉಮಾಪತಿ, ಪಾಪನ್ನ ಮತ್ತು ತಿಮ್ಮರಾಯಪ್ಪ ಎಂಬುವರುಗಳು ಸಮಾನ ಉದ್ದೇಶದಿಂದ ಕೃಷ್ಣಪ್ಪನೊಂದಿಗೆ ಜಗಳ ಮಾಡಿ ದೊಣ್ಣೆಗಳಿಂದ ಕೈಗಳಿಂದ ಮೈಮೇಲೆ ಹೊಡೆದು ಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 23, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
- ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್.ನ ಕೆನಡೀಸ್ ೫ನೇ ಲೈನ್‌ನಲ್ಲಿ ಸಂಭವಿಸಿರುತ್ತದೆ. ಕೆ.ಜಿ.ಎಫ್.ನ ಕೆನಡೀಸ್ ೫ನೇ ಲೈನಿನ ವಾಸಿ ಶ್ರೀ ಧನಶೇಗರ್ ಬಿನ್ ಲೇಟ್ ಪೊನ್ನುಸ್ವಾಮಿ ಎಂಬುವರ ಮಗನಾದ ಶ್ರೀ ಸಂತೋಷ್ ಎಂಬುವರು ಹೊಟ್ಟೆ ನೋವು ಅನ್ನು ತಡೆಯಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಸದ ಮನೆಯಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ವ್ಯಕ್ತಿ ಕಾಣೆ ಪ್ರಕರಣಗಳು: ೦೧
- ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೪-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಚಾಂಪಿಯನ್‌ರೀಪ್ಸ್, ಡಿ.ಎ.ಆರ್. ಪೊಲೀಸ್ ವಸತಿ ಗೃಹದಲ್ಲಿ ವಾಸಿಯಾಗಿರುವ ಶ್ರೀ ಮುನಿರತ್ನಮ್ಮ (೩೫) ಕೋಂ ಮುನಿನಾರಾಯಣ ಎಂಬುವರ ಮಗಳಾದ ಶ್ರೀಮತಿ ಧನಲಕ್ಷ್ಮಿ (೧೯) ಎಂಬುವರು ಬಂಗಾರಪೇಟೆ ತಾಲೂಕಿನ ತೂಕಲ್ ಗ್ರಾಮದ ಮನೆಯಿಂದ ಹೊರಟುಹೋಗಿದ್ದು, ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾಳೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 22, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ ವಾಹನ ಕಳ್ಳತನ :ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣರ : ಇಲ್ಲ
ರಸ್ತೆ ಅಪಘಾತಗಳು:ಇಲ್ಲ
ಮಾರಣಾಂತಿಕ:ಇಲ್ಲ
ಸಾಧಾರಣ:ಇಲ್ಲ
ಮೋಸ / ವಂಚನೆ ಪ್ರಕರಣಗಳು:ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
-ಹಲ್ಲೆ:೦೧
ಚಾಂಪಿಯನ್ ರೀಪ್ಸ್ ಪೊ
ಲೀಸ್ ಠಾಣೆ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೪-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಎಸ್.ಟಿ. ಬ್ಲಾಕ್ ವಾಸಿ ಶ್ರೀಮತಿ. ಅನಿತ @ ಅಮುಲು ಎಂಬುವರ ಗಂಡನು ಅದೇ ಕಾಲೋನಿಯ ನಾಗು ಎಂಬಾಕೆಯೊಂದಿಗೆ ಅಕ್ರಮ ಸಂಬಂದವನ್ನು ಇಟ್ಟಿಕೊಂಡಿದ್ದು, ಈ ಬಗ್ಗೆ ಅನಿತ ರವರು ನಾಗು ರವರ ತಾಯಿ ಮಂಜುಳ ರವರ ಬಳಿ ಈಬಗ್ಗೆ ಕೇಳಲಾಗಿ ಆಕೆಯ ಮಕ್ಕಳಾದ ಪೆರಿಯನಯನ ಮತ್ತು ಚಿನ್ನನಯನ ಎಂಬುರುಗಳು ಅನಿತ ರವರ ಬಳಿ ಜಗಳ ತೆಗೆದು ಪರಿನಯನ ಎಂಬುವನು ಒಂದು ಚಿಕ್ಕ ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ
.
-
ಇತರೆ: ೦೧
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ
ದಿನಾಂಕ: ೨೧-೦೪-೨೦೦೮ ರಂದು ೧೭೦೦ ಗಂಟೆಯ ಸಮಯದಲ್ಲಿ ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದು ಸುವರ್ಣಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ದಾಸ್ ಬಿನ್ ಆರೋಗ್ಯಸ್ವಾಮಿ(೪೮) ರಾಬರ್ಟ್‌ಸನ್ ಪೇಟೆ, ಕೆ.ಜಿ.ಎಫ್ ರವರು ಮತ್ತು ಇತರೆ ೯ ಜನರು ಹಣವನ್ನು ಪಣವಾಗಿಟ್ಟು, ಜೂಜಾಟ ಆಡುತ್ತಿದ್ದವರನ್ನು ಪಿ.ಎಸ್.ಐ ಶ್ರಿ. ಆರ್. ರಘುರಾಮರೆಡ್ಡಿ ಮತ್ತು ಅವರ ಸಿಬ್ಬಂದಿಯವರುಗಳು ದಾಳಿ ನಡೆಸಿ ದಸ್ತಗಿರಿ ಮಾಡಿರುತ್ತಾರೆ. ಆರೋಪಿಗಳಿಂದ ೧೫೩೦-೦೦ ರೂ ಹಣ ಒಂದು ಮಾರುತಿ ಕಾರ್, ೩ ಮೊಬೈಲ್ ಪೋನುಗಳು ಮತ್ತು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ
.
-
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
-ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯ ಸರಹದ್ದು ಉದಯ ನಗರದ ವಾಸಿ ವೆಂಕಟರಾಮಪ್ಪ ರವರ ಮಗಳಾದ ಕುಮಾರಿ ದೇವಿ ರವರು ಮಾನಸಿಕ ಅಸ್ವಸ್ಥಳಾಗಿದ್ದು, ದಿನಾಂಕ: ೨೦-೦೪-೨೦೦೮ ಸಂಜೆ ೧೭೩೦ ಗಂಟೆಯಲ್ಲಿ ಮನೆ ಬಿಟ್ಟು ಹೊರಗೆ ಹೋದವಳು ಊರಿನ ಪಕ್ಕದ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾಳೆ
-ವ್ಯಕ್ತಿ ಕಾಣೆ ಪ್ರಕರಣಗಳು:
-
ಮುಂಜಾಗ್ರತೆ ಕ್ರಮಗಳು: ಮುಂಜಾಗ್ರತೆ ಕ್ರಮಗಳು: ಇಲ್ಲ
-ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:ಪ್ರಕರಣಗಳು:ತಿಳಿದು ಬಂದಿಲ್ಲ
-
ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ಸುಲಿಗೆ: ಇಲ್ಲ
ಮನೆಗಳ್ಳತನ:ಇಲ್ಲ
Leave a Comment » |
ಅಪರಾಧ |
Permalink
Posted by spkgf
April 22, 2008
೨೦೦೮ ನೇ ಸಾಲಿನ ವಿಧಾನ ಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಚುನಾವಣೆ ಸುಸೂತ್ರವಾಗಿ ನಡೆಯಲು ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ ೪೪ ಮಂದಿ ರೌಡಿ ಆಸಾಮಿಗಳನ್ನು ಬಂಧಿಸಿ ಕ್ರಮ ಕೈಗೊಂಡಿರುತ್ತೆ.
ಹಾಗೂ ೭ ಜನ ತಲೆ ಮರೆಸಿಕೊಂಡಿರುವ ವಾರೆಂಟ್ ಆಸಾಮಿಗಳನ್ನು ಸಹ ಬಂದಿಸಿ ಕ್ರಮ ಕೈಗೊಂಡಿರುತ್ತೆ.
Leave a Comment » |
ಅನ್ಯ |
Permalink
Posted by spkgf
April 21, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
ಸಾಧಾರಣ: ೦೧
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂದಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಅನಿಗಾನಹಳ್ಳಿ ಗಾಗ್ರದ ಗೇಟ್ ಬಳಿ ಸಂಭವಿಸಿರುತ್ತದೆ. ಶ್ರೀ. ಸಲೀಂ ಖಾನ್ ಬಿನ್ ಅಮೀರ್ ಜಾನ್ ಜಕ್ಕೂರು ಬಡಾವಣೆ, ಬೆಂಗಳೂರು ರವರು ದಿನಾಂಕ ೧೯-೦೪-೨೦೦೮ ರಂದು ೧೯೦೦ ಗಂಟೆಯಲ್ಲಿ ತನ್ನ ವಾಹನ ಬಜಾಜ್ ಚೇತಕ್ ಸಂಖ್ಯೆ ಕೆಎ-೦೨-ಎಲ್-೮೩೨೩ ಅನ್ನು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಅನಿಗಾನಹಳ್ಳಿ ಗ್ರಾಮದ ಗೇಟ್ ಬಳಿ ಚಾಯಿಸಿಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ಕಾರ್ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸಲೀಂ ಖಾನ್ ರವರ ವಾಹನಕ್ಕೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೆ ಹೋಗಿರುತ್ತಾನೆ. ಸಲೀಂ ಖಾನ್ ಮತ್ತು ಜಾಕೀರ್ ಎಂಬುವರುಗಳಿಗೆ ರಕ್ತಗಾಯಗಳಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ:ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:
ಅಸ್ವಾಭಾವಿಕ ಮರಣದ ಪ್ರಕರಣಗಳು:ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ತಿಳಿದು ಬಂದಿಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 20, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ:ಇಲ್ಲ
ಸಾಧಾರಣ ಕಳ್ಳತನ:ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ :ಇಲ್ಲ
ರಸ್ತೆ ಅಪಘಾತಗಳು:೦೧
-ಮಾರಣಾಂತಿಕ:ಇಲ್ಲ
-ಸಾಧಾರಣ: ೦೧
- ಗಾರಪೇಟೆಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. – ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ತೋಟಗಾರಿಕೆ ಇಲಾಖೆ ಸಮೀಪ ಸಂಭವಿಸಿರುತ್ತದೆ. ದಿನಾಂಕ ೧೯.೦೪.೨೦೦೮ ರಂದು ೧೨೧೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ಗ್ರಾಮದ ವಾಸಿ ಶ್ರೀ ಶಿವಕುಮಾರ್ (೫೫) ಬಿನ್ ಲೇಟ್ ಸದಾಶಿವಪ್ಪ ಎಂಬುವರು ತನ್ನ ಹೀರೋಹೊಂಡಾ ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೩-ಎಸ್-೮೪೬೬ ರಲ್ಲಿ ಕೆ.ಜಿ.ಎಫ್. – ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ತೋಟಗಾರಿಕೆ ಇಲಾಖೆ ಸಮೀಪ ಬಂಗಾರಪೇಟೆ ಕಡೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಶ್ರೀ ಯೆಬ್ಬಾಲ್ ಬಾಬು (೪೦) ಬಿನ್ ಮಾನ್ಯುಯಲ್ ಎಂಬುವರು ಮಾರುತಿ ಕಾರ್ ಸಂಖ್ಯೆ: ಕೆಎ-೦೩-ಜಡ್-೪೫೬೬ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹೀರೋಹೊಂಡಾ ಮೋಟಾರ್ ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಶ್ರೀ ಶಿವಕುಮಾರ್ ಎಂಬುವರಿಗೆ ರಕ್ತಘಾಯಗಳಾಗಿರುತ್ತವೆ.
ಮೋಸ / ವಂಚನೆ ಪ್ರಕರಣಗಳು:ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ:ಇಲ್ಲ
ಹಲ್ಲೆ:೦೧
- ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ಮಸ್ಕಂ ಎ.ಬ್ಲಾಕ್ ನಲ್ಲಿ ನಡೆದಿರುತ್ತದೆ. ದಿನಾಂಕ ೧೯-೦೪-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್.ನ ಮಸ್ಕಂ ಎ.ಬ್ಲಾಕ್ ವಾಸಿಯಾದ ಶ್ರೀ ರತೇಶ್ (೨೪) ಬಿನ್ ಮಗೇಂದ್ರನ್ ಎಂಬುವರು ತನ್ನ ಮನೆಯ ಮುಂದೆ ಪೂಜೆ ಪ್ರಯುಕ್ತ ಚಪ್ಪರಹಾಕಿದ್ದರು. ಈ ಸಂಬಂಧವಾಗಿ ಅದೇ ಬ್ಲಾಕಿನ ವಾಸಿ ಗೌತಮ್ ಎಂಬುವರು ಅಲ್ಲಿಗೆ ಬಂದು ಯಾಕೆ ರಸ್ತೆಗೆ ಅಡ್ಡವಾಗಿ ಚಪ್ಪರ ಹಾಕಿದ್ದೀಯ ಎಂತ ಶ್ರೀ ರತೇಶ್ ಬಳಿ ಜಗಳ ತೆಗೆದಾಗ ರತೇಶ್ ರವರ ತಂದೆ ಸಮಾಧಾನಪಡಿಸಿದ್ದ ಹಿನ್ನಲೆಯಲ್ಲಿ ಗೌತಮ್ ರವರು ಒಂದು ಕತ್ತಿಯನ್ನು ಎತ್ತಿಕೊಂಡು ಬಂದು ರತೇಶ್ ರವರ ತಂದೆಗೆ ಪ್ರಾಣ ಬೆದರಿಕೆ ಹಾಕಿ ತಲೆಯ ಮೇಲೆ ಯಾವುದೋ ದ್ರಾವಕವನ್ನು ಹಾಕಿ ತಲೆ ಮತ್ತು ಮುಖದ ಮೇಲೆ ಉರಿ ಉಂಟು ಮಾಡಿರುತ್ತಾನೆ.
ಇತರೆ:ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
- ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ಅಶೋಕನಗರದ ಗಂಗಿರೆಡ್ಡಿ ಮೈದಾನದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೯-೦೪-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಕೆನಡೀಸ್ ಲೈನ್ ವಾಸಿಯಾದ ಶ್ರೀ ರಾಜಾ (೩೬) ಬಿನ್ ತಿಲಗರಾಜ್ ಎಂಬುವರ ತಮ್ಮನಾದ ಶ್ರೀ ತೆನ್ನಾರಸನ್ ಎಂಬುವರು ಕೆ.ಜಿ.ಎಫ್. ಗಂಗಿರೆಡ್ಡಿ ಮೈದಾನದಲ್ಲಿರುವ ಬಾವಿಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾನೆ.
ವ್ಯಕ್ತಿ ಕಾಣೆ ಪ್ರಕರಣಗಳು:೦೧
- ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣಪ್ಪ (೩೮) ಬಿನ್ ಚಿಕ್ಕಗೂಳಪ್ಪ ಎಂಬುವರ ಮಗಳಾದ ಕು: ಶ್ವೇತಾ (೧೬) ಎಂಬುವರು ದಿನಾಂಕ ೧೭-೦೪-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಮನೆಯಿಂದ ಹೋದವಳು ದಿನಾಂಕ ೧೯-೦೪-೨೦೦೮ರ ತನಕ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
ಮುಂಜಾಗ್ರತೆ ಕ್ರಮಗಳು:ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf