ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೨
-
ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್.ನ ವಿಷೇಶ ಉಪಕಾರಾಗೃಹ ವಸತಿಗೃಹಗಳ ಬಳಿ ಸಂಭವಿಸಿರುತ್ತದೆ. ದಿನಾಂಕ ೧೯-೦೩-೨೦೦೮ ರಂದು ೦೭೦೦ ಗಂಟೆ ಹಿಂದೆ ಯಾರೋ ಅಪರಚಿತ ಕಳ್ಳರು ವಿಶೇಷ ಉಪಕಾರಾಗೃಹಕ್ಕೆ ಸಂಬಂದಿಸಿದ ವಸತಿಗೃಹಗಳ ಬಾಗಿಲುಗಳು ಮತ್ತು ಕಿಟಕಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಘಟ್ಟಮಾದಮಂಗಲ ಗ್ರಾಮದಲ್ಲಿ ಸಂಭವಿಸಿರುತ್ತದೆ. ಘಟ್ಟಮಾದಮಂಗಲ ವಾಸಿ ಶ್ರೀಮತಿ. ಮಂಜುಳಮ್ಮ ಕೋಂ ಮುನಿಯಪ್ಪ(೩೧) ರವರು ದಿನಾಂಕ ೧೮-೦೩-೨೦೦೮ ರಂದು ಮದ್ಯಾಹ್ನ ೧೫೦೦ ಗಂಟೆ ಸಮಯದಲ್ಲಿ ತನ್ನ ಮನೆಗೆ ಬೀಗಿ ಹಾಕಿ ಕಿಟಕಿಯಲ್ಲಿ ಇಟ್ಟು ರಾತ್ರಿ ೧೯೦೦ ಗಂಟೆ ಸಮಯದಲ್ಲಿ ನೋಡಲಾಗಿ ಬೀಗದ ಕೈ ಇಲ್ಲದೆ ಇನ್ನೊಂದು ಬೀಗದಿಂದ ಬಾಗಿಲನ್ನು ತೆರೆದು ನೋಡಲಾಗಿ ಬೀರುವಿನಲ್ಲಿದ್ದ ಬಂಗಾರದೆ ಒಡವೆಗಳು ಮತ್ತು ರೂ. ೧೮೦೦/-ಗಳು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್.ನ ಹಳೆ ವಸತಗೃಹ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೯-೦೩-೨೦೦೮ ರಂದು ೧೩೪೫ ಗಂಟೆ ಸಮಯದಲ್ಲಿ ಶ್ರೀ. ಎನ್. ಶ್ರೀನಿವಾಸ ರೆಡ್ಡಿ ಬಿನ್ ಎ. ನಾರಾಯಣರೆಡ್ಡಿ ಎಂಬುವರು ತನ್ನ ವಾಹನ ಹೀರೋಹೊಂಸ ಸಂಖ್ಯೆ ಕೆಎ-೦೮-ಜೆ-೨೫೫೮ ಅನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಉಟ ಮುಗಿಸಿಕೊಂಡು ೧೪೩೦ ಗಂಟೆ ಬಂದು ನೋಡಲಾಗಿ ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂದಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ನಾಗಕುಪ್ಪ ಗ್ರಾಮದ ಬಳಿ ಸಂಭವಿಸಿರುತ್ತದೆ. ಶ್ರೀ. ರಮೇಶ್, ವರದಿಕುಪ್ಪಂ ಗ್ರಾಮ, ರಾಮಕುಪ್ಪಂ ಮಂಡಲ, ಆಂಧ್ರಪ್ರದೇಶ ರವರು ದಿನಾಂಕ ೧೯-೦೩-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ನಾಗಕುಪ್ಪ ಗ್ರಾಮದ ಬಳಿ ಕೆ.ಜಿ.ಎಫ್ ರಾಮಕುಪ್ಪಂ ರಸ್ತೆಯಲ್ಲಿ ಟ್ರಾಕ್ಟರ್ ಸಂಖ್ಯೆ ಎಪಿ-೦೩-೫೩೬ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಪಕ್ಕದ ಅಳ್ಳಕ್ಕೆ ಉರಳಿಸಿ ಜಕ್ಕಂ ಪಡಿಸಿರುತ್ತಾರೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಕರಡುಗೂರು ಗ್ರಾಮದಲ್ಲಿ ಸಂಭವಿಸಿರುತ್ತದೆ. ಬೆಂಗಳೂರು ವಾಸಿಗಳಾದ ರಾಮಚಂದ್ರರೆಡ್ಡಿ, ಗಾಯಿತ್ರಿ, ಲೋಕೇಶರೆಡ್ಡಿ ಮತ್ತು ಯರನಾಗನಹಳ್ಳಿ ವಾಸಿಗಳಾದ ವೆಂಕಟರಾಮರೆಡ್ಡಿ ಮತ್ತು ಲಕ್ಷ್ಮಮ್ಮ ರವರುಗಳು ಕರಡುಗೂರು ಗ್ರಾಮದ ವಾಸಿ ಯರಮ್ಮ ರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ(೬೮) ರವರ ಮನೆಯ ಗೇಟ್ ತೆಗೆದುಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಅತಿಕ್ರಮ ಪ್ರವೇಶ ಮಾಡಿ ಕೆಟ್ಟ ಮಾತುಗಳಿಂದ ಬೈದು, ಹೊರಗೆ ಬಂದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ, ಮಹಡಿ ಮೇಲೆ ಇದ್ದ ಒಣಗಿಸಿದ ಹುಣಸೆ ಕಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ೦೩
-
ರಾಬಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣದ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಪ್ ೪ನೇ ಬ್ಲಾಕ್, ಒಮರ್ ಬೇಕರಿ ಬಳಿ ಸಂಭವಿಸಿರುತ್ತದೆ. ದಿನಾಂಕ ೧೯-೦೩-೨೦೦೮ ರಂದು ಸಂಜೆ ೧೭೨೦ ಗಂಟೆ ಸಮಯದಲ್ಲಿ ಶ್ರೀ. ಮನ್ಸೂರ್ ಉಮ್ರಾನ್ ಬಿನ್ ಶಫೀವುಲ್ಲಾ ರವರ ಬೇಕರಿಯ ಮುಂದೆ ಚೆಲ್ಲಕುಮಾರ್, ಶಂಕರ್,ಅಪ್ಪು ಮತ್ತು ಜಯಕುಮಾರ್ ಎಂಬುವರುಗಳು ಜಗಳ ಮಾಡಿಕೊಳ್ಳುತ್ತಿದ್ದು, ಮನ್ಸೂರ್ ಉಮ್ರಾನ್ ರವರು ಬೇಕರಿ ಬಳಿ ಗಲಾಟೆ ಮಾಡುತ್ತಿದ್ದನ್ನು ಕೇಳಿದ್ದಕ್ಕೆ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂದಿಸಿದಂತೆ ಅಪರಾದ ಪ್ರಕರಣ ದಾಖಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ದೊಡ್ಡಪಂಡಂಹಳ್ಳಿ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ ೨೦-೦೩-೨೦೦೮ ರಂದು ೦೫೪೫ ಗಂಟೆ ಸಮಯದಲ್ಲಿ ಪಾಂಡುರಂಗರಾವ್ ಮತ್ತು ಮನೋಜ್ ರಾವ್ ಎಂಬುವರುಗಳು ದೊಡ್ಡಪಂಡಂಹಳ್ಳಿ ಮತ್ತು ತೊಪ್ಪನಹಳ್ಳಿ ಗ್ರಾಮಗಳ ಮದ್ಯೆ ಅಕ್ರಮವಾಗಿ ಪರವಾನಿಗೆ ಇಲ್ಲದೆ ೩೫ ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸಾಗಿಸುತ್ತಿದ್ದವರನ್ನು ದಸ್ತಗಿರಿ ಮಾಡಿ ಕೇಸು ದಾಖಲು ಮಾಡಲಾಗಿರುತ್ತದೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂದಿಸಿದಂತೆ ಅಪರಾದ ಪ್ರಕರಣ ದಾಖಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಕದರಿನತ್ತಂ ಗ್ರಾಮ ನರಸಿಂಹಪುರ ಕ್ರಾಸ್ ಬಳಿ ಸಂಭವಿಸಿರುತ್ತದೆ. ದಿನಾಂಕ ೨೦-೦೩-೨೦೦೮ ರಂದು ಕೃಷ್ಣಪ್ಪ ಮತ್ತು ವೆಂಕೋಬರಾವ್ ಎಂಬುವರುಗಳು ಅಕ್ರಮವಾಗಿ ಪರವಾನಿಗೆ ಇಲ್ಲದೆ ೨೦ ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸಾಗಿಸುತ್ತಿದ್ದವರನ್ನು ದಸ್ತಗಿರಿ ಮಾಡಿ ಕೇಸು ದಾಖಲು ಮಾಡಲಾಗಿರುತ್ತದೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by spkgf 
Posted by spkgf
Posted by spkgf 

