ದಿನದ ಅಪರಾಧಪಕ್ಷಿ ನೋಟ ೨೯ ನೇ ಮಾರ್ಚ್ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರರು ಸರ್ಕಾರಕ್ಕೆ ಮೋಸ / ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಆರ್.ಎಂ.ಸಿ. ಯಾರ್ಡ್ ನಲ್ಲಿರುವ ಡಿ.ಸಿ.ಸಿ. ಬ್ಯಾಂಕಿಗೆ ಸಂಬಂಧಪಟ್ಟ ಶ್ರೀ ನಿಂಗೇಗೌಡ, Asst. Rigister of Co-oparative Society & Recovery Officer, ರವರು ೨೦೦೪-೦೫, ೨೦೦೫-೦೬ ಆಡಿಟ್ ಮಾಡಿದಾಗ ಹಿಂದೆ ಕೆಲಸ ಮಾಡುತ್ತಿದ್ದ ನೌಕರರಾದ ಎಂ.ಚೌಡಪ್ಪ ಮಾಜಿ ಮ್ಯಾನೇಜರ್ ಮತ್ತು ಇಳಂಗವನ್, ಮಾಜಿ ಕ್ಯಾಷಿಯರ್ ರವರುಗಳು ಸುಮಾರು ,೨೪,೦೮೦/- ರೂಗಳನ್ನು ಬ್ಯಾಂಕಿನಲ್ಲಿ ದುರುಪಯೋಗ ಪಡಿಸಿರುತ್ತಾರೆ. .ಪಿ.ಎಂ.ಸಿ. ಯಾರ್ಡ್ ನಲ್ಲಿರುವ
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರರು ಸರ್ಕಾರಕ್ಕೆ ಮೋಸ / ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಮದ್ದಯ್ಯ ರಸ್ತೆಯಲ್ಲಿರುವ ಡಿ.ಸಿ.ಸಿ. ಬ್ಯಾಂಕಿಗೆ ಸಂಬಂಧಪಟ್ಟ ಶ್ರೀ ನಿಂಗೇಗೌಡ, Asst. Rigister of Co-oparative Society & Recovery Officer, ರವರು ೨೦೦೩-೦೪ ರಿಂದ ೨೦೦೫-೦೬ ಆಡಿಟ್ ಮಾಡಿದಾಗ ಹಿಂದೆ ಕೆಲಸ ಮಾಡುತ್ತಿದ್ದ ನೌಕರರಾದ ಕೃಷ್ಣಮೂರ್ತಿ, ಮಾಜಿ ಮ್ಯಾನೇಜರ್, ಶ್ರೀನಿವಾಸಲು ಮಾಜಿ ಕ್ಯಾಷಿಯರ್, ಚಂದ್ರಶೇಖರ್ ಮಾಜಿ ಮ್ಯಾನೇಜರ್, ಶ್ರೀನಿವಾಸಲು ಮಾಜಿ ಕ್ಯಾಷಿಯರ್, ರಾಘವೇದ್ರರೆಡ್ಡಿ ಮಾಜಿ ಮ್ಯಾನೇಜರ್ ಮತ್ತು ಚೌಡಪ್ಪ ಮಾಜಿ ಮ್ಯಾನೇಜರ್ ರವರುಗಳು ಸುಮಾರು ೧೦,೪೨,೪೦೦/- ರೂಗಳನ್ನು ಬ್ಯಾಂಕಿನಲ್ಲಿ ದುರುಪಯೋಗ ಪಡಿಸಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ:ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ರಾಬರ್ಟ್‌‌ಸನ್‌ಪೇಟೆಯ ಸ್ವಾಮಿನಾಥಪುರಂನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೦೩-೨೦೦೮ ರಂದು ೧೦.೦೦ ಗಂಟೆ ಸಮಯದಲ್ಲಿ ಸ್ವಾಮಿನಾಥಪುರಂ ವಾಸಿ ಶ್ರೀ ಜ್ಷಾನ ಶೇಖರ್‍ ಎಂಬುವರು ತನ್ನ ಸ್ನೇಹಿತನಾದ ನಾಗ ಎಂಬುವರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮೃತ ಪಟ್ಟಿರುವುದರಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾರೆ.
  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಾವರೆಕೆರೆ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ತಾವರೆಕೆರೆ ಗ್ರಾಮದ ವಾಸಿ ಶ್ರೀ ಈರಪ್ಪ(೭೦) ಬಿನ್ ಲೇಟ್ ಸಂತೂರಪ್ಪ ಎಂಬುವರಿಗೆ ಈಗ್ಗೆ ಸುಮಾರು - ವರ್ಷಗಳಿಂದ ಕೆಮ್ಮು ಮತ್ತು ಹೊಟ್ಟೆ ನೋವು ಬರುತ್ತಿದ್ದು, ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸುತ್ತಿದ್ದರೂ ಸಹ ಗುಣಮುಖವಾಗದೆ ಜೇವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ ೨೮-೦೩-೨೦೦೮ ರಂದು ಮದ್ಯಾಹ್ನ .೦೦ ಗಂಟೆಯ ಸಮಯದಲ್ಲಿ ಆದೇ ಗ್ರಾಮ ಏತ್ತಿರಾಜು ರವರ ಬಾವಿಯ ನೀರಿನಲ್ಲಿ ಬಿದ್ದು ಅತ್ಮಹತ್ಯ ಮಾಡಿಕೊಂಡಿರುತ್ತಾರೆ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply