ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದು ಬೂಡದಿಮಿಟ್ಟ ಗ್ರಾಮದಲ್ಲಿ ಈ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೨೫೦೩೨೦೦೮ ರ೦ದು ಮದ್ಯಾಹ್ನ ೧೨೩೦ ಗಂಟೆಗೆ ನಾರಾಯಣಪ್ಪ ಬಿನ್ ಪಾಪಯ್ಯ ೧೪, ವಾಸ ಬೂಡದಿಮಿಟ್ಟ ಗ್ರಾಮದಲ್ಲಿ ತನ್ನ ತಮ್ಮನಾದ ಬಾಲಕೃಷ್ಣ ಎಂಬುವರ ಮನೆ ಬಾಗಿಲಿನ ಬೀಗವನ್ನು ಬಾಗಿಲಿನ ಮೇಲೆ ಇಟ್ಟಿದ್ದು ಸಂಜೆ ೪೩೦ ಗಂಟೆಯ ಸಮಯದಲ್ಲಿ ಬಾಲಕೃಷ್ಣ ಶಾಲೆಯಿಂದ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗವನ್ನು ತೆಗೆದು ಮನೆಯ ಒಳಗೆ ಪ್ರವೇಶ ಮಾಡಿ ಅಲ್ಮೇರ ಬಾಗಿಲು ತೆಗೆದು ಬೀರುವಿನಲ್ಲಿದ್ದ ಎರಡು ಎಲೆ ಚೆನ್ನದ ಸರ ಸುಮಾರು ೩೫ ಗ್ರಾಂ, ಒಂದು ಜೊತೆ ಓಲೆ ೮ ಗ್ರಾಂ, ನಗದು ಸೇರಿ ೪೮೦೦೦/- ರೂ ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ-
ಮಾರಣಾಂತಿಕ: ಇಲ್ಲ-
ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ೩೭ ಜನ ಡಿಎಆರ್ಪೊಲೀಸ್ ಪೇದೆಗಳ ನೇರ ನೇಮಕಾತಿಯ ಪ್ರವಿಷನಲ್ ಪಟ್ಟಿಯನ್ನು ದಿನಾಂಕ ೨೫೦೩೨೦೦೮ ರಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪ್ರಕಟಿಸಲಾಗಿದೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ-ಪ್ರಕರಣಗಳು: ತಿಳಿದು ಬಂದಿಲ್ಲ-
ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


