ಪೊಲೀಸ್ ಕುಸುಮಗಳ ಕಾರ್ಯಕ್ರಮದ ವಾರ್ಷಿಕ ಸಮಾರಂಭ

  •    ಕೆ.ಜಿ.ಎಫ್ ನಗರದ ಡಿ..ಆರ್. ಪೊಲೀಸ್ ವಸತಿಗೃಹಗಳ ಸಮುಚ್ಚಯದಲ್ಲಿ ಪೊಲೀಸ್ ಕುಸುಮಗಳ ಕಾರ್ಯಕ್ರಮವನ್ನು ಈಗ್ಗೆ ಸುಮಾರು ಒಂದು ವರ್ಷದಿಂದ ಅಂದರೆ ೨೦೦೭ ಮಾರ್ಚ್ ತಿಂಗಳಿಂದ ಪ್ರಾರಂಬಿಸಲಾಗಿತ್ತು. ಕಾರ್ಯಕ್ರಮವನ್ನು ಪ್ರತಿ ತಿಂಗಳ ೨ನೇ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳ ದಿನದಂದೂ ಸಹ ನಡೆಸಲಾಗುತ್ತಿದೆ.
  •   ಈ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ. ಯಿಂದ ೧೦ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳ ಭಾಗವಹಿಸುತ್ತಿದ್ದು, ಅವರಿಗೆ ಪಠ್ಯಪುಸ್ತಕ ಜೊತೆಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಅವರು ನೀಡುವ ಉತ್ತರದ ಆಧಾರದ ಮೇಲೆ ಅವರಿಗೆ ಅಂಕಗಳನ್ನು ನೀಡಿ ಬಹುಮಾನಗಳನ್ನು ನೀಡಲಾಗುತ್ತದೆ. ಜೊತೆಗೆ ಅವರಿಗೆ ಸಿಹಿ ತಿಂಡಿಯನ್ನು ನೀಡಲಾಗುತ್ತಿದೆ. ಮತ್ತು ವಿದ್ಯಾರ್ಥಿಗಳಿಂದ ಹಾಡು ಹೇಳುವುದು, ಹಾಸ್ಯ, ನೃತ್ಯ, ಗಾದೆ ಮುಂತಾದ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ನೈಪುಣ್ಯತೆಯನ್ನು ಹೊರ ತೆಗೆಯಲು ಮತ್ತು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಹಾಗೂ ಎಲ್ಲಾ ಮಕ್ಕಳು ಭಯವಿಲ್ಲದೆ ಎದ್ದು ನಿಂತ್ತು ಧೈರ್ಯವಾಗಿ ಮಾತನಾಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಸ್ವಯಂ ಸ್ಪೂರ್ತಿಯೇ ಕಾರ್ಯಕ್ರಮದ ದಾರಿ ದೀಪವಾಗಿದೆ. ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಒಂದು ವೇದಿಕೆಯು ಅವಶ್ಯಕತೆ ಇದ್ದು ನಿಟ್ಟಿನಲ್ಲಿ ಪೊಲೀಸ್ ಕುಸುಮಗಳ ಕಾರ್ಯಕ್ರಮದ ಪ್ರಾರಂಭದಲ್ಲಿ 70-80 ಜನ ಇದ್ದ ಮಕ್ಕಳು ಈಗ್ ೭೦೮೦ ಜನ ಮಕ್ಕಳು ಕಾರ್ಯಕ್ರಮದಲ್ಲಿ ಬಂದು ಸೇರಿರುತ್ತಾರೆ. ಇದು ಮಕ್ಕಳಲ್ಲಿನ ಆಸಕ್ತಿಯನ್ನು ತೋರಿಸುತ್ತದೆ.
  •   ದಿನಾಂಕ: ೦೮-೦೩-೨೦೦೮ ರಂದು ಇಂತಹ ಕಾರ್ಯಕ್ರಮದ ಪ್ರಥಮ ವಾರ್ಷಿಕ ಸಮಾರಂಭವನ್ನು ಆಯೋಜಿಸಿದ್ದು, ಮಾನ್ಯ ಶ್ರೀ. ಎಂ.ವಿ. ಶೇಷನ್ ಪೊಲೀಸ್ ಉಪಾಧೀಕ್ಷಕರು, ಕೆ.ಜಿ.ಎಫ್ ರವರು ಉದ್ಘಾಟಿಸಿದ್ದು, ಅವರು ಮಾತನಾಡಿ ತಮ್ಮ ಪೊಲೀಸ್ ವಸತಿಗೃಹಗಳ ಸಮುಚ್ಚಿಯದಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಸಹಾಯವಾಗುವ ಇಂತಹ ಕೆಲಸ ಮಾಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿರಲ್ಲದೆ, ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
  •   ಗೃಹ ರಕ್ಷಕ ದಳದ ಸಮಾದೇಷ್ಟರಾದಂತಹ ಶ್ರೀ. ಪರುಶೋತ್ತಮ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದು, ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿರುವ ಮತ್ತು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡುವ ಇಂತಹ ಸಾಮಾಜಿಕ ಕಾರ್ಯಕ್ರಮ, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವುದಕ್ಕೆ ನಿಜಕ್ಕೂ ಮೆಚ್ಚುವಂತಹದ್ದು ಎಂದು ಅಭಿಪ್ರಾಯಪಟ್ಟರು.
  •   ಈ ಕಾರ್ಯಕ್ರಮಕ್ಕೆ ಸಮಾರು ೧೦೦ ಮಕ್ಕಳು ಮತ್ತು ೩೦೦ ಜನ ಪೋಷಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
  •   ಈ ಕಾರ್ಯಕ್ರಮದಲ್ಲಿ ಮಕ್ಕಳಿಂದಲೇ ನಿರೂಪಣೆ, ಪ್ರಾರ್ಥನೆ, ಸ್ವಾಗತ ಭಾಷಣ, ವಂದನಾರ್ಪಣೆ, ಅತಿಥಿಗಳಿಗೆ ಮಾಲಾರ್ಪಣೆ ಮುಂತಾದವುದೆಲ್ಲವನ್ನು ಮಕ್ಕಳಿಂದಲೇ ಮಾಡಿಸಲಾಗಿದ್ದು, ಕೊನೆಯಲ್ಲಿ ಮಕ್ಕಳಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.

Leave a Reply