ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿಯಿರುವ ೩೭ ಸಶಸ್ತ್ರ ಮೀಸಲು ಪೊಲೀಸ್ ಪೇದೆಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ದಿನಾಂಕ ೧೫-೦೩-೨೦೦೮ ರಂದು ಬೆಳಿಗ್ಗೆ ೮-೩೦ ಗಂಟೆಯಿಂದ ದೇಹಧಾರ್ಡ್ಯತೆ/ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಪೊಲೀಸ್ ಕವಾಯಿತು ಮೈದಾನ ಡಿ.ಎ.ಆರ್ ಚಾಂಪಿಯನ್ ರೀಫ್ಸ್, ಕೆ.ಜಿ.ಎಫ್ ನಲ್ಲಿ ನಿಗಧಿಪಡಿಸಲಾಗಿದೆ.


