February 18, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಉರಿಗಾಂ ಹೆನ್ರೀಸ್ ಈರೋಡ್ ಲೈನ್ ಮನೆ ಸಂಖ್ಯೆ ೨೦ ರ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೮-೦೨-೨೦೦೮ ರಂದು ೦೬೩೦ ಗಂಟೆ ಸಮಯದಲ್ಲಿ ಹೇನ್ರೀಸ್ ಈರೋಡ್ ಲೈನ್ ವಾಸಿ ಶ್ರೀಮತಿ ರಾಣಿ ಎಂಬುವರು ನೀರು ಹಿಡಿಯಲು ಮನೆಯ ಪಕ್ಕದಲ್ಲಿರುವ ಸಾರ್ವಜನಿಕ ನಲ್ಲಿಯ ಬಳಿ ಹೋದಾಗ ಅದೇ ಕೇರಿಯ ವಾಸಿಗಳಾದ ಚಂದರ್, ರಾಜೇಶ್ವರಿ ಮತ್ತು ತ್ಯಾಗರಾಜ್ ಎಂಬುವರುಗಳು ಏಕೋದ್ದೇಶದಿಂದ ರಾಣಿಯವರನ್ನು ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ಈ ವಿಷಯವನ್ನು ರಾಣಿಯವರ ಗಂಡನಾದ ಪಳನಿಸ್ವಾಮಿ ಎಂಬುವರು ಏಕೆ ನನ್ನ ಪತ್ನಿಯನ್ನು ಬೈದಿದ್ದು ಎಂದು ಕೇಳಿದ್ದಕ್ಕೆ ಚಂದರ್, ರಾಜೇಶ್ವರಿ ಮತ್ತು ತ್ಯಾಗರಾಜ್ ರವರುಗಳು ಪಳನಿಸ್ವಾಮಿ ಮತ್ತು ಅವರ ಪತ್ನಿ ರವರನ್ನು ಕೆಟ್ಟ ಮಾತುಗಳಿಂದ ಬೈದು ಕಲ್ಲುಗಳಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.
ಇತರೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಪೆಟ್ರೋಲಿಯಂ ರಿಸ್ಟ್ರಿಷನ್ ಕಾಯ್ದೆ ಅಡಿಯಲ್ಲಿ
ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೨-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಪಿ.ಎಸ್.ಐ. ಬಂಗಾರಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಬೂದಿಕೋಟೆಯ ವಾಸಿ ಚಾಂದ್ ಪಾಷ ಎಂಬುವರು ತಮ್ಮ ಚಿಲ್ಲರೆ ಅಂಗಡಿಯ ಮೇಲೆ ದಾಳಿ ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಕಲಬೆರೆಕೆ ಪೆಟ್ರೋಲ್ ಮಾರಾಟ ಮಾಡುತ್ತಿರುವವನನ್ನು ದಸ್ತಿಗಿರಿ ಮಾಡಿ ಕಲಬೆರೆಕೆ ಪೆಟ್ರೋಲ್ ಅನ್ನು ವಶಪಡಿಸಿಕೊಂಡಿರುತ್ತಾರೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೋಳಿ ಪಂದ್ಯದ ಆಟಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೨-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಪಿ.ಎಸ್.ಐ. ಬಂಗಾರಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಬಂಗಾರಪೇಟೆ ತಾಲೂಕು ಚಂಬೇನಹಳ್ಳಿ ಗ್ರಾಮ ಬಳಿ ಎರಡು ಕೋಳಿ ಹುಂಜಗಳನ್ನು ಮತ್ತು ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ ೧೦ ಮಂದಿಯ ಮೇಲೆ ದಾಳಿ ಮಾಡಿ ಅವರುಗಳನ್ನು ದಸ್ತಿಗಿರಿ ಮಾಡಿ ಜೂಜಾಟಕ್ಕೆ ಪಣವಾಗಿಟ್ಟಿದ್ದ ರೂ ೨೦೦/- ಗಳನ್ನು ಮತ್ತು ಕೋಳಿಗಳನ್ನು ಅಮಾನತ್ತು ಪಡಿಸಿರುತ್ತದೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 17, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೨-೨೦೦೮ ರಂದು ಬಂಗಾರಪೇಟೆ ರೈಲ್ವೆ ಕ್ವಾಟ್ರಸ್ ವಾಸಿ ಶ್ರೀರಾಮಲು ಎಂಬುವರು ಮೈ ಹುಷಾರಿಲ್ಲದ ಕಾರಣ ವೈದ್ಯರ ಬಳಿ ಹೋಗಿದ್ದರು. ಅದೇ ದಿನ ಸುಮಾರು ೧೪೩೦ ಗಂಟೆ ಸಮಯದಲ್ಲಿ ಶ್ರೀರಾಮಲು ರವರ ಮಗಳಾದ ಕುಮಾರಿ ದೀಪ (೧೬) ಎಂಬುವಳು ತಂದೆಯನ್ನು ವೈದ್ಯರ ಬಳಿಯಿಂದ ಕರೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಕಾಣೆಯಾದ ಹುಡುಗಿಯ ಚಹರೆ ಈ ರೀತಿ ಇರುತ್ತದೆ. ಎತ್ತರ ೪ ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ನೀಲಿ ಪ್ಯಾಂಟ್ ಕೆಂಪು ಬಣ್ಣದ ಟಿ ಶರಟು ಧರಿಸಿರುತ್ತಾಳೆ. ಕನ್ನಡ, ತೆಲೆಗು ಮತ್ತು ತಮಿಳು ಭಾಷೆ ಮಾತನಾಡುತ್ತಾಳೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 16, 2008
ದಿನಾಂಕ ೨೫-೦೯-೨೦೦೬ ರಂದು ೦೮೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಸರಹದ್ದು ಹುನ್ಕುಂದ ಗ್ರಾಮದ ಬಳಿ ಬಂಡೆಯ ಮೇಲೆ ಶ್ರೀಮತಿ ಮಂಜುಳ ಕೋಂ ನಾರಾಯಣಸ್ವಾಮಿ ರವರು ಬಟ್ಟೆ ಹೊಗೆಯುತ್ತಿರುವಾಗ ಅದೇ ಗ್ರಾಮದ ವಾಸಿ ಮುನಿರತ್ನಪ್ಪ ಎಂಬುವನು ಹಿಂದೆಯಿಂದ ಬಂದು ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ಬಸವನ ಗುಟ್ಟೆಗಳ ಮಧ್ಯಕ್ಕೆ ಎತ್ತಿಕೊಂಡು ಹೋಗಿ ಬಲತ್ಕಾರವಾಗಿ ಹಠಸಂಬೋಗ ಮಾಡಿರುವ ಬಗ್ಗೆ ಬಂಗಾರಪೇಟೆ ಪೊಲಿಸ್ ಠಾಣೆಯಲ್ಲಿ ಕೇಸು ದಾಖಲು ಮಾಡಿ ಶ್ರೀ ಎ.ಜಿ.ಕಾರಿಯಪ್ಪ, ಸಿಪಿಐ ಬಂಗಾರಪೇಟೆ ವೃತ್ತ ರವರು ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಸದರಿ ಪ್ರಕರಣದ ವಿಚಾರಣೆಯನ್ನು ಕೋಲಾರದ ಮಾನ್ಯ ೧ ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ.ಮನಮೋಹನ ರವರು ಎಸ್.ಸಿ. ಸಂಖ್ಯೆ ೪೫/೨೦೦೭ ರ ರೀತ್ಯಾ ನಡೆಸಿದ್ದು, ಶ್ರೀ. ಬಿ.ಎಂ.ವಿರಕ್ತ ಮಠ, ಸರ್ಕಾರಿ ಅಭಿಯೋಜಕರು ವಾದವನ್ನು ಮಂಡಿಸಿ, ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾದೀಶರು ದಿನಾಂಕ:೦೭-೦೨-೨೦೦೮ ರಂದು ಆರೋಪಿಗೆ ೦೭ ವರ್ಷ ಕಠಿಣ ಸಜೆ ಮತ್ತು ಒಂದು ಸಾವಿರ ರೂಗಳ ದಂಡ ವಿದಿಸಿದ್ದು, ದಂಡ ಪಾವತಿಸದಿದ್ದಲ್ಲಿ ೦೬ ತಿಂಗಳ ಕಠಿಣ ಸಜೆಯನ್ನು ನೀಡಿ ತೀರ್ಪು ನೀಡಿರುತ್ತಾರೆ.
ತನಿಖಾಧಿಕಾರಿಗಳು ಮತ್ತು ಪ್ರಕರಣಕ್ಕೆ ಸಹಾಯಕರಾದ ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ಬಹುಮಾನ ಘೋಷಿಸಲಾಗಿದೆ.
Leave a Comment » |
ಆಡಳಿತಾತ್ಮಕ |
Permalink
Posted by spkgf
February 16, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ೦೨
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನೆರನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೬-೦೨-೨೦೦೮ ರಂದು ೦೭೩೦ ಗಂಟೆ ಸಮಯದಲ್ಲಿ ನೆರನಹಳ್ಳಿ ಗ್ರಾಮದ ವಾಸಿ ಶ್ರೀ ಗೋವಿಂದಪ್ಪ ತನ್ನ ತೋಟಕ್ಕೆ ನೀರು ಕಟ್ಟಲು ಹೋದಾಗ ಅವರ ಸಹೋದರ ಕಿಟ್ಟಪ್ಪ ಅಡ್ಡಿಪಡಿಸಿದ. ಏಕೆ ಅಡ್ಡಿಪಿಸುತ್ತೀಯ ಎಂತ ಅವರ ಅಣ್ಣನಾದ ವೆಂಕಟೇಶಪ್ಪನು ಕೇಳಲಾಗಿ ಕಿಟ್ಟಪ್ಪ ಕಟರ್ ನಿಂದ ವೆಂಕಟೇಶಪ್ಪನ ತಲೆಯ ಎಡ ಬಾಗ ಬಲಗೈ ಹಿಂಭಾಗ ಮುಂತಾದ ಕಡೆ ಹೊಡೆದು ಕತ್ತರಿಸಿರುತ್ತಾನೆ. ಹಾಗು ಗೋವಿಂದಪ್ಪನಿಗೂ ಸಹ ರಕ್ತಗಾಯಪಡಿಸಿ ಇಬ್ಬರನ್ನು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನೆರನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೬-೦೨-೨೦೦೮ ರಂದು ೦೭೩೦ ಗಂಟೆ ಸಮಯದಲ್ಲಿ ನೆರನಹಳ್ಳಿ ಗ್ರಾಮದ ವಾಸಿ ಶ್ರೀ ಕಿಟ್ಟಪ್ಪ @ ಕೃಷ್ಣಪ್ಪ ಎಂಬುವರು ತನ್ನ ತೋಟಕ್ಕೆ ನೀರು ಕಟ್ಟಲು ಹೋದಾಗ ಅವರ ಸಹೋದರರಾದ ವೆಂಕಟೇಶಪ್ಪ, ಗೋವಿಂದಪ್ಪ ಮತ್ತು ಅಣ್ಣನ ಮಗಾನಾದ ಮಂಜುನಾಥ ರವರು ಅಡ್ಡಿಪಡಿಸಿ ಒಂದು ಕಟರ್ ನಿಂದ ಕಿಟ್ಟಪ್ಪನ ಮೂಗಿನ ಬಳಿ ಮತ್ತು ಕೈ ಕಾಲುಗಳ ಮೇಲೆ ಹೊಡೆದು ರಕ್ತ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.
ದೊಂಬಿ: ಇಲ್ಲ
ಹಲ್ಲೆ: ೦೨
-
ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಆಂಡ್ರಸನ್ ಪೇಟೆಯ ಓಡ್ಯಾನಿಯಲ್ ರಸ್ತೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೫-೦೨-೨೦೦೮ ರಂದು ಬೈನೇಹಳ್ಳಿ ಗ್ರಾಮದ ವಾಸಿ ಶ್ರೀ ಹರೀಶ್ (೧೮) ಎಂಬುವರು ಓಡ್ಯಾನಿಯಲ್ ರಸ್ತೆಯಲ್ಲಿ ತನ್ನ ಸೈಕಲ್ ಬಳಿ ನಿಂತಿದ್ದಾಗ ಹಣದ ವಿಚಾರದಲ್ಲಿ ಗೋಣಮಾಕನಹಳ್ಳಿ ಗ್ರಾಮದ ವಾಸಿ ತಂಗರಾಜ್ ಎಂಬುವರು ಹರೀಶ್ ರವರ ಬಳಿ ಜಗಳ ಕಾದು ಒಂದು ರಾಡಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.
-
ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರ ಮುಂದೆ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೫-೦೨-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಸಂಜಯಗಾಂಧಿ ನಗರದ ವಾಸಿ ಶ್ರೀ ಕುಮರೇಶನ್ (೧೮) ಎಂಬುವರು ಸರ್ಕಾರಿ ಆಸ್ಪತ್ರಯ ಮುಂದೆ ನಿಂತಿದ್ದಾಗ ಅದೇ ಕೇರಿಯ ವಾಸಿಗಳಾದ ರಾಜ, ಅಯ್ಯಪ್ಪ ಮತ್ತು ಶ್ಯಾಮ್ ಎಂಬುವರು ವಿನಾ ಕಾರಣ ಜಗಳ ತೆಗೆದು ಕುಮರೇಶನ್ ರವರಿಗೆ ಕಲ್ಲು ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 15, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
ಸಾಧಾರಣ ಕಳ್ಳತನ: ೧೦
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಅಜ್ಜಪಲ್ಲಿ ರಸ್ತೆ ಹೆನ್ರೀಸ್ ಶಾಫ್ಟ್ ಹಿಂದೆ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೨-೨೦೦೮ ರಂದು ೧೭೪೫ ಗಂಟೆ ಸಮಯದಲ್ಲಿ ಉರಿಗಾಂ ಪೊಲೀಸ್ ಠಾಣೆಯ ಪಿ.ಎಸ್.ಐ. ಮತ್ತು ಸಿಬ್ಬಂದಿಗಳು ಗಸ್ತಿನಲ್ಲಿರುವಾಗ ಅಜ್ಜಪಲ್ಲಿ ರಸ್ತೆ ಹೆನ್ರೀಸ್ ಶಾಫ್ಟ್ ಹಿಂದೆ ಕೆ.ಜಿ.ಎಫ್ ವಾಸಿಗಳಾದ ಜಸ್ಪೀನ್, ರಘು, ಸುರೇಶ್, ವಿಜಿ, ವಿಜಯಕುಮಾರ್, ಸೂರ್ಯನಾರಾಯಣ ಮತ್ತು ಕೆ.ಏಕಾಂಬರಂ ಎಂಬುವರುಗಳು ಹೇನ್ರೀಸ್ ಶಾಫ್ಟ್ ಮತ್ತು ಕ್ಯಾಂಟಿನ್ ನಿಂದ ಕೆಲವು ಮರದ ಹಲಗೆ ಮತ್ತು ತರಕಾರಿಗಳನ್ನು ಕದ್ದು ಕ್ಯಾಂಟರ್ ವಾಹನ ಸಂಖ್ಯೆ ಕೆಎ-೦೮-೪೮೪ ರಲ್ಲಿ ತುಂಬುತ್ತಿದ್ದು, ಪಿ.ಎಸ್.ಐ. ರವರ ಜೀಪನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಗಳು ೫ ಜನರನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಮಿಕ್ಕ ಇಬ್ಬರು ಆರೋಪಿಗಳು ಪರಾರಿಯಾಗಿರುತ್ತಾರೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೨-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಮಾರಿಕುಪ್ಪಂ ಆಂದ್ರಲೈನ್ ವಾಸಿ ಕುಮಾರಿ ರೋಸಿಮೇರಿ (೨೨) ಎಂಬುವರು ಪಾಯಖಾನೆಗೆಂದು ಮನೆಯಿಂದ ಹೊರಗೆ ಹೋದವಳು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಕಾಣೆಯಾದ ಹುಡುಗಿಯ ಚಹರೆ ಈ ರೀತಿ ಇರುತ್ತದೆ. ಎತ್ತರ ೪.೩ ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ಬಿಳಿ ಚುಕ್ಕೆಗಳ ಕಪ್ಪು ಬಣ್ಣದ ನೈಟಿ ಧರಿಸಿರುತ್ತಾನೆ. ತೆಲೆಗು ಮತ್ತು ತಮಿಳು ಭಾಷೆ ಮಾತನಾಡುತ್ತಾನೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 14, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ “ಸಿ“ ಬ್ಲಾಕ್ ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೨-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಸಿ ಬ್ಲಾಕ್ ವಾಸಿ ಶ್ರೀ ರವಿ (೩೯) ಬಿನ್ ಆದಿ ಎಂಬುವರು ಮನೆಯಲ್ಲಿರುವಾಗ ಕೆ.ಜಿ.ಎಫ್. ವಾಸಿಗಳಾದ ಜಗನ್, ಪ್ರಸನ್ನ, ಶಿವಶಂಕರ್, ಬಾಲು, ಸರವಣ, ಬಾಬು, ಸುರೇಶ್ ಮತ್ತು ಫಿಲಿಕ್ಸ್ ಎಂಬುವರುಗಳು ರವಿ ಮಾಮೂಲು ಹಣ ಕೊಡದ ವಿಚಾರವಾಗಿ ಅಕ್ರಮ ಗುಂಪು ಕಟ್ಟಿಕೊಂಡು ರವಿ ರವರ ಮನೆಗೆ ನುಗ್ಗಿ ರವಿ ಮತ್ತು ಆತನ ತಮ್ಮಂದಿರನ್ನು ಹಿಡಿದು ಮನೆಯ ಹೊರಗೆಳೆದು ಕೈಗಳಿಂದ ಮೈಮೇಲೆ ಹೊಡೆದು, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.
ಹಲ್ಲೆ: ೦೧
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨
-
ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಅಶೋಕನಗರ, ಬಿ ಬ್ಲಾಕ್ ನ ಮನೆ ಸಂಖ್ಯೆ ೩೦೫ ರಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಡಿ ಬ್ಲಾಕ್ ವಾಸಿ ಕುಮಾರಿ ಶ್ರೀಲಕ್ಷ್ಮಿ (೧೭) ಎಂಬುವರಿಗೆ ೪ ವರ್ಷಗಳಿಂದ ಅತಿಯಾಗಿ ಹೊಟ್ಟೆನೋವು ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ವಾಸಿಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೧೪-೦೨-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಮನೆಯಲ್ಲಿಯೇ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪೂಗಾನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೨-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಪೂಗಾನಹಳ್ಳಿ ಗ್ರಾಮದ ವಾಸಿ ಕುಮಾರಿ ಶೈಲಜ (೧೮) ಬಿನ್ ಗೋವಿಂದಪ್ಪ ಎಂಬುವರು ಬಟ್ಟೆಯನ್ನು ಒಗೆಯಲು ಗ್ರಾಮದಿಂದ ೦.೫ ಕೀ.ಮಿ ದೂರವಿರುವ ಕದಿರೆಪ್ಪ ಎಂಬುವರ ಮಣ್ಣು ಬಾವಿಗೆ ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 13, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಮುಷ್ಟ್ರಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೯-೦೨-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಮುಷ್ಟ್ರಹಳ್ಳಿ ಗ್ರಾಮದ ವಾಸಿ ಶ್ರೀಮತಿ ಕಾಂತಮ್ಮ (೩೦) ಬಿನ್ ಮುಂಜುನಾಥ್ ಎಂಬುವರು ಮನೆಯಲ್ಲಿರುವಾಗ ಅದೇ ಗ್ರಾಮದ ವಾಸಿಗಳಾದ ಶಶಿಕಲಾ, ಶಾಂತಮ್ಮ, ಸುದಾ, ಸುನಂದಮ್ಮ, ಕೆಂಪಣ್ಣ, ಅಪ್ಪಿ ಮತ್ತು ಕಾಂತಮ್ಮ ಕೋಂ ಕೆಂಪಣ್ಣ ಎಂಬುವರುಗಳು ಮನೆಯ ಬಚ್ಚಲು ನೀರು ಹಾದು ಹೋಗುವ ವಿಚಾರದಲ್ಲಿ ಅಕ್ರಮ ಗುಂಪು ಕಟ್ಟಿಕೊಂಡು ಕಾಂತಮ್ಮನವರ ಮನೆಗೆ ನುಗ್ಗಿ ಆಕೆಯ ತಲೆ ಜುಟ್ಟು ಹಿಡಿದು ಮನೆಯ ಹೊರಗೆಳೆದು ಕೈಗಳಿಂದ ಮೈಮೇಲೆ ಹೊಡೆದು ಗಡಾರಿ ತೋರಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪಿಚ್ಚಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಪಿಚ್ಚಹಳ್ಳಿ ಗ್ರಾಮದ ವಾಸಿ ಶ್ರೀ ಶಂಕರ (೪೫) ಬಿನ್ ಲೇಟ್ ಅಣ್ಣಾಮಲೈ ಎಂಬುವರಿಗೆ ಮಧ್ಯಪಾನ ಮಾಡುವ ಚಟವಿದ್ದು, ಅದಕ್ಕೆ ಹಣದ ಅವಶ್ಯಕತೆ ಇದ್ದುದ್ದರಿಂದ ಬೇರೆ ಆಧಾಯ ಸಹ ಇಲ್ಲದೆ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೧೨-೦೨-೨೦೦೮ ರಂದು ೧೪೦೦ ರಿಂದ ೧೯೦೦ ಗಂಟೆ ಮದ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 12, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು, ಬೇತಮಂಗಲ-ಕೆ.ಜಿ.ಎಫ್. ಮುಖ್ಯ ರಸ್ತೆಯ ಗೋಸಿನ ಕರೆಯ ಬ್ರಿಡ್ಜ್ ಮೇಲೆ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೨-೨೦೦೮ ರಂದು ೨೨೩೦ ಗಂಟೆ ಸಮಯದಲ್ಲಿ ಸುರೇಶ್ ಎಂಬುವರು ಬೇತಮಂಗಲ ಕಡೆಯಿಂದ ಗೋಸಿನ ಕರೆಯ ಬ್ರಿಡ್ಜ್ ಬಳಿ ತಮ್ಮ ಟಿವಿಎಸ್ ಸಂಖ್ಯೆ ಕೆಎ-೦೫-ಇಬಿ-೧೭೩೮ ರ ವಾಹನದಲ್ಲಿ ತನ್ನ ಸ್ನೇಹಿತನನ್ನು ಹಿಂದೆ ಕುಳ್ಳರಿಸಿಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಕೆ.ಜಿ.ಎಫ್. ಕಡೆಯಿಂದ ವೆಂಕಟೇಶ್ವರ ಬಸ್ ಸಂಖ್ಯೆ ಕೆಎ-೦೭-೭೭೦೦ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿವಿಎಸ್ ವಾಹನಕ್ಕೆ ಡಿಕ್ಕಿ ಹೋಡೆದ ಪರಿಣಾಮ ಸುರೇಶ್ ಎಂಬುವರಿಗೆ ತೆಲೆಗೆ, ಕೈಕಾಲುಗಳಿಗೆ ಮತ್ತು ದೇಹದ ಮೇಲೆ ತೀವ್ರತರಹದ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಟಿವಿಎಸ್ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯ ತಲೆಗೆ ರಕ್ತಗಾಯಗಳಾಗಿದ್ದು ಚಿಕಿತ್ಸೆಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಿರುತ್ತದೆ.
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕವರಗಾನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೨-೨೦೦೮ ರಂದು ೦೭೩೦ ಗಂಟೆ ಸಮಯದಲ್ಲಿ ಕವರಗಾನಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟಪ್ಪ ಬಿನ್ ಗಂಟ್ಲಪ್ಪ ಎಂಬುವರು ತನ್ನ ಸ್ವಂತ ಸೈಟಿನಲ್ಲಿ ಹುಲ್ಲು ಮೆದೆಗೆ ಕಲ್ಲು ಕೂಸುಗಳನ್ನು ಹೂಣುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ವೆಂಕಟರಾಮಪ್ಪ, ಗೋಪಿ, ಸೀನಪ್ಪ, ಚಲಪ್ಪ ಮತ್ತು ನಾಯಪ್ಪ ಎಂಬುವರುಗಳು ಏಕಾಏಕಿ ಬಂದು ಕಲ್ಲು ಕೂಸುಗಳನ್ನು ಹಾಕಬಾರದೆಂದು ಅಡ್ಡ ಪಡಿಸಿ ಗಲಾಟೆ ಮಾಡಿ ವೆಂಕಟಪ್ಪನ ಮಕ್ಕಳನ್ನು ಹೊಡೆದು ತೊಂದರೆ ಮಾಡಿದ್ದು, ಆ ಪೈಕಿ ಜಗದೀಶ ಎಂಬುರಿಗೆ ಸೀನಪ್ಪರವರು ಒಂದು ಮಚ್ಚಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ನಂತರ ವೆಂಕಟರಾಮಪ್ಪರವರು ಒಂದು ದೊಣ್ಣೆಯಿಂದ ಹೊಡೆದು, ಉಳಿದ ಆರೋಪಿಗಳು ಕೈಗಳಿಂದ ಹೊಡೆದಿರುತ್ತಾರೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕವರಗಾನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೨-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಕವರಗಾನಹಳ್ಳಿ ಗ್ರಾಮದ ವಾಸಿಗಳಾದ ಜಗಪತಿ, ವೆಂಕಟಪ್ಪ, ಗೋಪಾಲ, ಲಕ್ಷ್ಮಪ್ಪ ಮತ್ತು ಗಣೇಶ್ ಎಂಬುವರು ತಮ್ಮ ವಠಾರದಲ್ಲಿ ಕಲ್ಲು ಕೂಸುಗಳನ್ನು ಹೂಣುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ಸೀನಪ್ಪ, ವೆಂಕಟರಾಮಪ್ಪ, ನಾಯಣ್ಣ ಹಾಗೂ ಗೋಪಿ ರವರುಗಳು ಕೂಸಗಳನ್ನು ಹೂಳಬೇಡಿ ನಿಮ್ಮಗೆ ಕೊಟ್ಟಿರುವ ಜಾಗದಲ್ಲಿ ಹಾಕಿಕೊಳ್ಳಿ ಎಂದು ಹೇಳುತ್ತಿರುವಾಗ ಜಗಪತಿ ರವರು ಸೀನಪ್ಪನವರಿಗೆ ಕೆಟ್ಟ ಮಾತುಗಳಿಂದ ಬೈದು ಎಡಕೈ ಕಚ್ಚಿ ರಕ್ತಗಾಯಪಿಸಿರುತ್ತಾನೆ ಮತ್ತು ಗೋಪಾಲ ಮತ್ತು ಗಣೇಶ ರವರು ಸಹ ಹಾರೆಯಿಂದ ತಿವಿದು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 11, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲಹಲ್ಲೆ: ೦೨
-
ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಆಂಡ್ರಸನ್ ಪೇಟೆಯ ಹರಿಶ್ಚಂದ್ರ ದೇವಾಲಯ ಬೀದಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೦-೦೨-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಹರಿಶ್ಚಂದ್ರ ದೇವಸ್ಥಾನ ಬೀದಿಯ ವಾಸಿ ಶ್ರೀ ಕಣ್ಣ (೨೬) ಎಂಬುವರು ಅದೇ ಕೇರಿಯ ತನ್ನ ಅತ್ತೆ ಮನೆಯ ಬಳಿ ಇದ್ದಾಗ ಆಂಡ್ರಸನ್ ಪೇಟೆಯ ಲೂರ್ದುನಗರ ವಾಸಿಗಳಾದ ಆಂತೋಣಿ ಮತ್ತು ಪ್ರೇಮ್ ಕುಮಾರ್ ಎಂಬುವರು ಕಣ್ಣ ರವರ ಬಳಿ ಬಂದು ನಿನ್ನ ತಂಗಿಯನ್ನು ನಾನು ಮದುವೆ ಮಾಡಿಕೊಳ್ಳುತ್ತೇನೆಂದು ಆಂತೋಣಿಯವರು ಹೇಳಿದಕ್ಕೆ ಕಣ್ಣ ರವರು ನನ್ನ ತಂಗಿಗೆ ಮೊದಲೇ ಮದುವೆಯಾಗಿದೆ ನೀನು ಹೋಗು ಎಂದು ಹೇಳಿದಕ್ಕೆ ಆಂತೋಣಿ ರವರು ಕಣ್ಣ ರವರೊಂದಿಗೆ ಜಗಳ ಕಾದು ಮುಖಕ್ಕೆ ಕೈಗಳಿಂದ ಹೊಡೆದು ಮತ್ತು ಪ್ರೇಮ್ ಕುಮಾರ್ ರವರು ಬ್ಲೇಡಿನಿಂದ ಕಣ್ಣ ರವರ ಬೆನ್ನಿನ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-
ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಆಂಡ್ರಸನ್ ಪೇಟೆಯ ಹರಿಶ್ಚಂದ್ರ ದೇವಾಲಯ ಬೀದಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೦-೦೨-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಹರಿಶ್ಚಂದ್ರ ದೇವಾಲಯ ಬೀದಿಯಲ್ಲಿ ಅದೇ ಕೇರಿಯ ವಾಸಿ ಕಣ್ಣ ಮತ್ತು ಲೂರ್ದುನಗರದ ವಾಸಿ ಆಂತೋಣಿ ಎಂಬುವರುಗಳ ನಡುವೆ ಬಾಯಿಮಾತಿನ ಜಗಳ ನಡೆಯುತ್ತಿದ್ದಾಗ ಇವರಿಬ್ಬರ ಜಗಳವನ್ನು ಬಿಡಿಸಲು ಲೂರ್ದುನಗರದ ವಾಸಿ ಶ್ರೀ ಪ್ರೇಮ್ ಕುಮಾರ್ ಎಂಬುವರು ಹೋದಾಗ ಕಣ್ಣ ರವರು ಆಂತೋಣಿಗೆ ಬ್ಲೇಡಿನಿಂದ ಹೊಡೆಯಲು ಹೋದಾಗ ಪ್ರೇಮ್ ಕುಮಾರ್ ರವರು ತಡೆಯಲು ಕೈ ಅಡ್ಡ ಇಟ್ಟಾಗ ಬ್ಲೇಡು ಪ್ರೇಮ್ ಕುಮಾರ್ ಮತ್ತು ಆಂತೋಣಿ ರವರಿಗೆ ಬಿದ್ದು ರಕ್ತಗಾಯಗಳಾಗಿರುತ್ತೆ ಮತ್ತು ರಜನಿ ರವರು ಸಹ ಕೈಗಳಿಂದ ಹೊಡೆದಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 10, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf