ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ರಾಜಶೇಖರ್ ಕಾಂಪ್ಲೆಕ್ಸ್ ಬಳಿ ಸಂಭವಿಸಿರುತ್ತದೆ. ಶ್ರೀ. ನಾರಾಯಸ್ವಾಮಿ ಬಿನ್ ಗೋವಿಂದಪ್ಪ ರವರು ಈಗ್ಗೆ ೨ ವರ್ಷಗಳ ಹಿಂದೆ ಪ್ರಸಾದ್ ಬಿನ್ ತ್ಯಾಗರಾಜ್ ರವರಿಗೆ ಸಾಲವಾಗಿ ರೂ. ೧೪೦೦೦/- ಗಳನ್ನು ನೀಡಿದ್ದು, ದಿನಾಂಕ ೨೮-೦೨-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಪ್ರಸಾದ್ ರವರ ಬಳಿ ಸಾಲವನ್ನು ವಾಪಸ್ಸು ಕೇಳಲು ಹೋದಾಗ ಪ್ರಸಾದ್, ಪ್ರವೀಣ್, ಹರಿ ಬಂಗಾರಪೇಟೆ ರವರುಗಳು ಜಗಳ ತೆಗೆದು ಒಂದು ದೊಣ್ಣೆಯಿಂದ ನಾರಾಯಸ್ವಾಮಿ ರವರ ಬಲಗಣ್ಣಿನ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಒಂದು ರೈಸರ್ನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತವ್ಯವು ಬಂಗಾರಪೇಟೆ ತಾಲೂಕು ತಂಬಾರಲಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೯-೦೨-೨೦೦೮ ರಂದು ಬೆಳಿಗ್ಗೆ ೦೯೪೫ ಗಂಟೆಯಲ್ಲಿ ತಂಬಾರಲಹಳ್ಳಿ ಗ್ರಾಮದ ಸಾರ್ವಜನಿಕ ಕೊಳಯಿ ಬಳಿ ರಾಧರಾಣಿ ಮತ್ತು ಯಲ್ಲಮ್ಮ ರವರುಗಳಿಗೆ ನೀರಿನ ವಿಚಾರವಾಗಿ ಜಗಳವಾಗಿ ಯಲ್ಲಮ್ಮ ರವರು ರಾಧರಾಣಿ ರವರಿಗೆ ಚಾಕೂವಿನಿಂದ ಹೊಡದು ರಕ್ತಗಾಯಪಡಿಸಿ, ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತವ್ಯವು ಬಂಗಾರಪೇಟೆ ಕಂಗಾಂಡ್ಲಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಕಂಗಾಂಡ್ಲಹಳ್ಳಿ ಗ್ರಾಮದ ವಾಸಿ ಶ್ರೀ. ಕುಮಾರ್ ಬಿನ್ ಕೃಷ್ಣಪ್ಪ(೧೬) ರವರು ಶಾಲೆಗೆ ಸರಿಯಾಗಿ ಹೋಗದೆ ಕಾರಣ ಮತ್ತು ಓದದೆ ತನ್ನ ತಾಯಿ ಬುದ್ದಿವಾದ ಹೇಳಿದ್ದಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೨೮-೦೨-೨೦೦೮ ರಂದು ಅದೇ ಗ್ರಾಮದ ವೆಂಟಕಪತಿ ರವರ ಬಾವಿಯಲ್ಲಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


