ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನೆರೆನಹಳ್ಳಿ ಗ್ರಾಮದ ಬಳಿ ಈ ಕೃತ್ಯವು ಸಂಬಂವಿಸಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ರಾತ್ರಿ ೨೨೦೦ ಗಂಟೆಯಲ್ಲಿ ಶ್ರೀ. ಪದ್ದಪ್ಪಯ್ಯ ಬಿನ್ ಕೆ.ಎಂ.ನಾಗಪ್ಪ(೩೦), ಕೊಡಿಗೇನಹಳ್ಳಿ ಗ್ರಾಮದ ವಾಸಿ ತನ್ನ ವಾಹನ ಸಂಖ್ಯೆ ಕೆಎ-೦೩-ಇಎಲ್-೪೯೯೪ ಟಿ.ವಿ.ಎಸ್. ವಿಕ್ಟರ್ ವಾಹನದಲ್ಲಿ ಬೆಂಗಳೂರಿನಿಂದ ತನ್ನ ಗ್ರಾಮಕ್ಕೆ ಬರುವಾಗ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ನೆರೆನಹಳ್ಳಿ ಗ್ರಾಮದ ಬಸ್ಸ್ ಶೆಲ್ಟರ್‌ಗೆ ಡಿಕ್ಕಿ ಹೊಡೆದ ಪ್ರಯುಕ್ತ ತಲೆಯ ಬಲಭಾಗಕ್ಕೆ ತೀವ್ರವಾದ ರಕ್ತಗಾಯವಾಗಿ ಮೃತಪಟ್ಟಿರುತ್ತಾರೆ.
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೋಟಿಲಿಂಗೇಶ್ವನ ದೇವಸ್ಥಾನದ ಬಳಿ ಈ ಕೃತ್ಯವು ಸಂಬಂವಿಸಿರುತ್ತದೆ. ದಿನಾಂಕ ೨೮-೦೨-೨೦೦೮ ರಂದು ಬೆಂಗಳೂರಿನ ಕೋಣನಕುಂಟೆ ವಾಸಿ ರತ್ಮಮ್ಮ ರವರ ಮಗನಾದ ಉಮೇಶನಿಗೆ ೧೦ ವರ್ಷಗಳ ಹಿಂದೆಯೇ ಮದುವೆಯಾಗಿದ್ದರೂ, ಪುನಃ ಎರಡನೇ ಮದುವೆಯನ್ನು ಮಿಂಡಹಳ್ಳಿ ಗ್ರಾಮದ ವಾಸಿ ತಿಪ್ಪೇಗೌಢ ರವರ ಮಗಳಾದ ಸುನಂದ ರವರೊಂದಿಗೆ ಮದುವೆ ಮಾಡಲು ಪ್ರಯತ್ನಿಸಿದ್ದಾಗ, ಉಮೇಶನ ಮೊದಲನೇ ಹೆಂಡತಿ ರುಕ್ಮಿಣಿ ರವರು ಈ ಮದುವೆಯನ್ನು ತಡೆದು ದೂರು ನೀಡಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪೀಲುವಾರ ಗ್ರಾಮದಲ್ಲಿ ಈ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ರಾತ್ರಿ ೨೧೦೦ ಗಂಟೆಯಲ್ಲಿ ಶ್ರೀಮತಿ ಅನಿತ ರವರನ್ನು ಅವರ ಗಂಡನಾದ ನಾಗರಾಜ್ ಎಂಬುವರು ಹೊಡೆದನೆಂತ ಅದೇ ಗ್ರಾಮದ ವಾಸಿ ಅನಿತ ರವರ ತಾಯಿಗೆ ಹೇಳಿದ್ದಕ್ಕೆ ನಾಗರಾಜ ಮತ್ತು ತಮ್ಮ ರಾಮಕೃಷ್ಣಪ್ಪ ರವರು ಅನಿತ ರವರ ತಂದೆಗೆ ಹೊಡೆದು ರಕ್ತಗಾಯ ಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.
ಇತರೆ: ೦೧
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೆ.ಜಿ.ಎಫ್ ನ ಮಾರಿಕುಪ್ಪಂ ತೆಲಗು ಮಾಡಲ್ ಹೌಸ್ ನಲ್ಲಿ ಈ ಕತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ಶ್ರೀಮತಿ ಗ್ಲೋರಿ ಕೋಂ ಆನಂದನ್ ರವರು ಎಲ್ಲಿಯೋ ಹೋಗಿ ಮದ್ಯಾಹ್ನ ೧೪೦೦ ಗಂಟೆಗೆ ಮನಗೆ ಬಂದು ಬೀಗ ತೆಗೆದು ನೋಡಲಾಗಿ ಮನೆಯಲ್ಲಿದ್ದ ಹಾಸಿಗೆ ಮತ್ತು ಪುಸ್ತಕಗಳು ಬೆಂಕಿಯಿಂದ ಸುಡುತ್ತಿದ್ದವು, ಇದನ್ನು ಅಕ್ಕಪಕ್ಕದವರ ಸಹಾಯದಿಂದ ಬೆಂಕಿಯನ್ನು ನಂದಿಸಿರುತ್ತಾರೆ. ಈ ಬಗ್ಗೆ ರಂಗಮ್ಮನಾಯ್ಡು ಮತ್ತು ಶ್ರೀಮತಿ ವಸಂತಮ್ಮ ರವರುಗಳ ಮೇಲೆ ಗುಮಾನಿ ಇರುವುದಾಗಿ ತಿಳಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


