ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಫೆಬ್ರವರಿ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆ ತಾಲೂಕು ಜೆ.ಕೆ. ಪುರಂ ಗ್ರಾಮದ ಬಳಿ ಸಂಭವಿಸಿರುತ್ತದೆ. ಶ್ರೀ. ಮುರಳಿ ಬಿನ್ಕೃಷ್ಣಪ್ಪ(೨೦) ದಾಸರಹೊಸಹಳ್ಳಿ ಗ್ರಾಮ ರವರು ಕೆಎ-೦೨-ಸಿ-೯೧೧೧ರ ಚಾಲಕರಾಗಿದ್ದು, ದಿನಾಂಕ ೨೬-೦೨-೨೦೦೮ ರಂದು ಬೆಳಿಗ್ಗೆ ೦೬೧೫ ಗಂಟೆ ಸಮಯದಲ್ಲಿ ವೆಂಕಟೇಶ(೩೦) ಮಾರಿಕುಪ್ಪಂ ಕೆ.ಜಿ.ಎಫ್ಮತ್ತು ಮತ್ತೊಬ್ಬರು (ಹೆಸರು ಗೊತ್ತಿಲ್ಲ) ರವರುಗಳು ಕಾರನ್ನು ೭೦೦/- ರೂ ಬಾಡಿಗ ಪಡೆದು ಕುಪ್ಪಂ ಹೋಗಲು ತಿಳಿಸಿ ಅನೇಕ ಕಡೆ ಸುತ್ತಾಡಿಸಿ ರಾತ್ರಿ ೨೧೩೦ ಗಂಟೆಯಲ್ಲಿ ರಾಜಪೇಟೆ ಕಡೆಯಿಂದ ಕೆ.ಜಿ.ಎಫ್ವಾಪಾಸ್ಸು ಬರುತ್ತಿದ್ದಾಗ ವೆಂಟೇಶ ಮತ್ತು ಮತ್ತೊಬ್ಬ ಕಾರನ್ನು ನಿಲ್ಲಿಸಲು ಹೇಳಿ ಮುರಳಿ ರವರ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಕಾರನ್ನು ಸುಲಿಗೆ ಮಾಡಿಕೊಂಡಿ ಹೋಗಿರುತ್ತಾರೆ.

ಮನೆಗಳ್ಳತನ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನೆ ಕನ್ನಕಳವುಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನೆರೆನಹಳ್ಳಿ ಗ್ರಾಮದಲ್ಲಿ ಈ ಕೃತ್ಯವು ಸಂಬಂವಿಸಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ರಾತ್ರಿ ನೆರೆನಹಳ್ಳಿ ಗ್ರಾಮದ ಸರ್ಕಾರಿ ಹಿರಿಯರ ಪ್ರಾಥಮಿಕ ಶಾಲೆಯಲ್ಲಿ ಯಾರೋ ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗವನ್ನು ಕಿತ್ತು ಶಾಲೆಯಲ್ಲಿದ್ದ ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ೨ ಅಲ್ಯುಮಿನಿಯಂ ಪಾತ್ರೆಗಳು, ಒಂದು ಗ್ಯಾಸ್ ಸ್ವೌವ್ , ೨ ಗ್ಯಾಸ್ಸಿಲೆಂಡರ್ಸುಮಾರು ೩೦ ಕೆ.ಜಿ. ಅಕ್ಕಿ ಇತ್ಯಾದಿ ರೂ. ೧೦೦೦೦/- ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಬೂದಿಕೋಟೆ ರಸ್ತೆ ಭುವನಹಳ್ಳಿಯಲ್ಲಿ ಈ ಕೃತ್ಯವು ಸಂಬಂವಿಸಿರುತ್ತದೆ. ದಿನಾಂಕ ೨೫/೨೬-೦೨-೨೦೦೮ ರಂದು ರಾತ್ರಿ ಜಬ್ಬರ್ ರವರ ಅಣ್ಣನಾದ ಮೊಹಮದ್ ಅನೀಫ್ ರವರು ಭುವನಹಳ್ಳಿ ರಸ್ತೆಯ ಮೇಲೆ ಹಾಕಿದ್ದ ಹುಲ್ಲಿನ ಮೇಲೆ ಮಲಗಿದ್ದಾಗ ಯಾರೋ ಅಪರಿಚಿತ ಆಸಾಮಿಯು ಯಾವುದೋ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತ ಪಡಿಸಿದ್ದರಿಂದ ಮಹಮದ್ ಅನೀಫ್‌ ರವರು ಮೃತಪಟ್ಟಿರುತ್ತಾರೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬಂಗಾರಪೇಟೆ ಪೊಲೀಸ್ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆ ತಾಲೂಕು ನೆರನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೫/೨೬-೦೨-೨೦೦೮ ರಂದು ರಾತ್ರಿ ೦೦೩೦ಗಂಟೆ ಸಮಯದಲ್ಲಿ ಶ್ರೀಮುನಿರಾಜು ಬಿನ್ ಮುನಿಯಪ್ಪ(೨೦) ಎಂಬುವರ ತಮ್ಮ ಮದುವಯ ಆರತಕ್ಷತೆಗೆ ನೆರನಹಳ್ಳಿ ಗ್ರಾಮಕ್ಕೆ ಹೋಗಿದ್ದು, ಅದೇ ಗ್ರಾಮದ ವಾಸಿಗಳಾದ ವಿಜಿ, ಮುರಳಿ, ಪ್ರತಾಪ್ ಮತ್ತು ಮಂಜುನಾಥ್ ಎಂಬುವರುಗಳು ಉದ್ದೇಶಪೂರ್ವಕವಾಗಿ ವಿನಾಕಾರಣ ಜಗಳ ತೆಗೆದು ಮುನಿರಾಜು ರವರಿಗೆ ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು, ಕಾಲಿನಿಂದ ಎಡ ದೊಕ್ಕೆಗೆ ಒದ್ದಿ, ಕೈಗಳಿಂದ ಕುತ್ತಿಗೆಗೆ ಒಡೆದು ಮತ್ತು ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಇತರೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಾಣಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೃತವ್ಯವು ಬೇತಮಂಗಲದ ಬಸ್ಸ್ ನಿಲ್ದಾಣದಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ೧೬೦೦ ಗಂಟೆಯಲ್ಲಿ ಶ್ರೀ. ನಾರಾಯಣಸ್ವಾಮಿ ಎಂಬುವರು ಬೇತಮಂಗಲ ಬಸ್ಸ್ ನಿಲ್ದಾಣದಲ್ಲಿ ಹೋಗುತ್ತಿದ್ದಾಗ ಚಂದ್ರಶೇಖರ್ ಎಂಬುವರು ವಿನಾಕಾರಣ ಜಗಳ ತೆಗೆದು ನಾರಾಯಣಸ್ವಾಮಿರವರಿಗೆ ತೋರು ಬೆರಳನ್ನು ಕಚ್ಚಿ, ನನ್ನ ತಂಟೆಗೆ ಬಂದರೆ ಸಾಯಿಸುತ್ತೇನೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply