ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಫೆಬ್ರವರಿ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ಠಾಣೆಯಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಭವಿಸಿರುತ್ತದೆ. ಬಂಗಾರಪೇಟೆ ತಾಲೂಕು ಕಾರಹಳ್ಳಿ ಗ್ರಾಮದಲ್ಲಿ ಈ ಕೃತ್ಯವು ಸಂಭವಿಸಿರುತ್ತದೆ. ಶ್ರೀ. ರವಿ ಬಿನ್ಕೆ.ಎಂ.ವೆಂಕಟ್ರಾಮಪ್ಪ ರವರ ಟಾಟೋ ಸುಮೋ ವಾಹನಕ್ಕೆ ಹರೀಶ್ಎಂಬುವರನ್ನು ಚಾಲಕರನ್ನಾಗಿ ಇಟ್ಟುಕೊಂಡಿದ್ದು, ದಿನಾಂಕ ೨೪-೦೨-೨೦೦೮ ರಂದು ೧೩೩೦ ಗಂಟೆಯಲ್ಲಿ ವಾಹನದಲ್ಲಿ ಬೆಂಗಳೂರಿನಿಂದ ರವಿ ಮನೆಗೆ ಬಂದು ಚಾಲಕನನ್ನು ಮನೆಯಲ್ಲಿ ಬಿಟ್ಟು ರವಿಯವರು ತನ್ನ ಮೈಮೇಲೆ ಇದ್ದ ರೂ. ೨೪,೦೦೦/-ಗಳ ಬೆಲೆಬಾಳುವ ಒಡವೆಗಳನ್ನು ಬಿಚ್ಚಿಇಟ್ಟು ಸ್ನಾನ ಮಾಡಲು ಹೋಗಿದ್ದು, ಚಾಲಕ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ.

ಸಾಧಾರಣ ಕಳ್ಳತನ: ೦೧

  •   ಉರಿಗಾಂ ಪೊಲೀಸ್ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಭವಿಸಿರುತ್ತದೆ. ಬಂಗಾರಪೇಟೆ ತಾಲೂಕು ಕೊತ್ತೂರು ಗ್ರಾಮದಿಂದ ಘಟ್ಟರಾಗಡಹಳ್ಳಿಗಳ ಮದ್ಯೆ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ರಾತ್ರಿ ಯಾರೋ ಕಳ್ಳರು ವಿದ್ಯುತ್ಕಂಬಗಳಿಗೆ ಅಳವಡಿಸಿದ್ದ ಸುಮಾರು ರೂ. ೧೫,೭೫೦/- ಬೆಲೆಬಾಳುವ ೬೯೦ ಮೀಟರ್‍ಗಳಷ್ಟು ಎಸಿಎಸ್‌ಆರ್೧೧ ಕೆ.ವಿ. ವಿದ್ಯುತ್ ತಂತಿಯನ್ನು ಕತ್ತರಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply