ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಫೆಬ್ರವರಿ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: E®è

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಎನ್.ಜಿ.ಹುಲ್ಕೂರು ಗ್ರಾಮದ ಕ್ರಾಸ್ ಮಸೀದಿ ಬಳಿ ಸಂಭವಿಸಿರುತ್ತದೆ. ಪೂಗಾನಹಳ್ಳಿ ವಾಸಿ ಶ್ರೀ. ಅಶೋಕ್ ಬಿನ್ ರಾಧಕೃಷ್ಣಪ್ಪ(೧೯) ರವರು ದಿನಾಂಕ ೨೩-೦೨-೨೦೦೮ ರಂದು ಬೆಳಿಗ್ಗೆ ೦೫೩೦ ಗಂಟೆಯಲ್ಲಿ ಎನ್.ಜಿ.ಹುಲ್ಕೂರು ಗೇಟಿನಲ್ಲಿರುವ ಹಾಲಿನ ಡೈರಿಗೆ ಹಾಲನ್ನು ಹಾಕಲು, ಪೂಗಾನಹಳ್ಳಿ ಗ್ರಾಮದಿಂದ ಹಾಲನ್ನು ತೆಗೆದುಕೊಂಡು ವಿವೇನಂದ ವಿದ್ಯಾಸಂಸ್ಥೆಯನ್ನು ಬಿಟ್ಟು ಎನ್.ಜಿ.ಹುಲ್ಕೂರು ಕ್ರಾಸ್ ಬಳಿಯಿರುವ ಮಸೀದಿ ಬಳಿ ಬರುತ್ತಿರುವಾಗ ಯಾರೋ ಜನ ಹುಡುಗರು ಬಂದು ಅಶೋಕ್ ರವರನ್ನು ಹಿಡಿದುಕೊಂಡು ದೊಣ್ಣೆಗಳಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಹಾಗೂ ಕೈಗಳಿಂದ ಮೈಮೇಲೆ ಹೊಡೆದು ಮೂಗುಗಾಯಪಡಿಸಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಎಂ.ವಿ.ನಗರ, ಬೆಮೆಲ್‌ನಗರದಲ್ಲಿ ಸಂಭವಿಸಿರುತ್ತದೆ. ಮೃತಳು ಶ್ರೀಮತಿ ಸತ್ಯಬಾಮ ಕೋಂ ಮನೋಹರನ್ (೪೮) ರವರು ಮಾನಸಿಕ ಅಸ್ವಸ್ಥಳಾಗಿದ್ದು, ದಿನಾಂಕ ೧೩-೦೨-೨೦೦೮ ರಂದು ವಿಷ ಸೇವನೆ ಮಾಡಿ ಚಿಕಿತ್ಸೆಗಾಗಿ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೨-೦೨-೨೦೦೮ ರಂದು ರಾತ್ರಿ ೨೧೫೫ ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.
  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಕಂತೇಪುರಮಠ ಗ್ರಾಮದಲ್ಲಿ ಸಂಭವಿಸಿರುತ್ತದೆ. ಅದೇ ಗ್ರಾಮದ ವಾಸಿ ಮೃತ ಶ್ರೀ. ಗಣೇಶ್ ಬಿನ್ ಲಿಂಗಒಡೆಯರ್(೩೦) ಎಂಬುವರು ಎರಡು ಮದುವೆಯಾಗಿ ಇಬ್ಬರು ಹೆಂಡತಿಯರೊಂದಿಗೆ ಅನ್ಯೋನ್ಯವಾಗಿ ಸಂಸಾರ ಮಾಡಲು ಸಾಧ್ಯವಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ ೨೨-೦೨-೨೦೦೮ ರಂದು ಇವರ ಜಮೀನಿನಲ್ಲಿರುವ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ-

ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply