ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನತ್ತ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೯-೦೨-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ನತ್ತ ಗ್ರಾಮದ ವಾಸಿ ಶ್ರೀ ಎಂ.ಎನ್.ಜಯರಾಂ ಎಂಬುವರ ಜಮೀನಿನಲ್ಲಿ ಬೋರುವೆಲ್‌ಗೆ ಅಳವಡಿಸಿದ್ದ ೪೦ ಮೀಟರ್ ಕೇಬಲ್ ವೈರನ್ನು ೩ ಜನ ಆರೋಪಿಗಳಾದ ರಾಜು, ಪುಂಗಾವಣಿ ಮತ್ತು ಮಾಣಿಕ್ಯಂ ಎಂಬುವರು ಕೆಬಲ್ ವೈರನ್ನು ಕತ್ತರಿಸಿ ಸುಮಾರು ೧೫೦೦/- ರೂ ಬೆಲೆ ಬಾಳುವುದನ್ನು ನೀಲಗಿರಿ ತೋಪಿನಲ್ಲಿ ಹಾಕಿ ಸುಡುತ್ತಿದ್ದವರನ್ನು ದಸ್ತಗಿರಿ ಮಾಡಲಾಗಿರುತ್ತದೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಸಿಂಗರಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಸಿಂಗರಹಳ್ಳಿ ಗ್ರಾಮದ ವಾಸಿ ಶ್ರೀಮತಿ ಮಂಜುಳಾದೇವಿ ಎಂಬುವರಿಗೆ ೩ ವರ್ಷಗಳ ಹಿಂದೆ ವಿ.ಸೀತಾರಾಮ ಎಂಬುವರೊಂದಿಗೆ ಮದುವೆಯಾಗಿದ್ದು, ಸೀತಾರಾಮನು ಸಂಸಾರಕ್ಕೆ ಸರಿಯಾಗಿ ಮನೆ ಸಾಮಾಗ್ರಿಗಳನ್ನು ತಂದು ಹಾಕುತಿಲ್ಲದ ಕಾರಣ ಮಂಜುಳಾದೇವಿ ರವರು ಕೇಳಿದರೆ ವಿನಾ ಕಾರಣ ಬೈಯುವುದು ಹಿಂಸೆ ನೀಡುತ್ತಿರುತ್ತಾನೆ. ಈ ಬಗ್ಗೆ ದಿನಾಂಕ ೧೭-೦೨-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಮಂಜುಳಾದೇವಿಯವರು ಸೀತಾರಾಮರವರನ್ನು ಸಂಸಾರಕ್ಕೆ ಸಾಮಾಗ್ರಿಗಳನ್ನು ತಂದು ಹಾಕು ಎಂದು ಕೇಳಿದ್ದಕ್ಕೆ ಮನೆಯಲ್ಲಿದ್ದ ಮುದ್ದೆ ತೊಳಸುವ ಕೋಲಿನಿಂದ ಎರಡೂ ಕಾಲುಗಳ ಮೇಲೆ ಮತ್ತು ಕೈಗಳ ಮೇಲೆ ಹೊಡೆದಿದ್ದು, ಆ ಸಮಯಕ್ಕೆ ಮಂಜುಳಾದೇವಿಯವರ ತಂದೆ ಅಲ್ಲಿಗೆ ಬಂದು ಯಾಕೆ ಹೊಡೆಯುತ್ತಿಯ ಎಂದು ಕೇಳಿದ್ದಕ್ಕೆ ಆತನನ್ನು ಸಹಾ ಕೈಗಳಿಂದ ಹೊಡೆದು ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಿರುತ್ತಾನೆ.
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಜೆ.ಕೆ.ಪುರಂ ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೮-೦೨-೨೦೦೮ ರಂದು ೧೮೪೫ ಗಂಟೆ ಸಮಯದಲ್ಲಿ ಸೊಣ್ಣಗಾನಪಲ್ಲಿ ಗ್ರಾಮದ ವಾಸಿ ಶ್ರೀ. ಸುಬ್ಬೇಗೌಡ ಎಂಬುವರು ರಾಜಪೇಟೆ ರಸ್ತೆಯ ಕುಪ್ಪಂ-ವಿಕೋಟೆ ರಸ್ತೆಯಲ್ಲಿ ಜಮೀರ್ ರವರ ಪಂಚರ್ ಅಂಗಡಿ ಹತ್ತಿರ ರಸ್ತೆಯ ಎಡ ಅಂಚಿನಲ್ಲಿ ನಡೆದುಕೊಂಡು ಬರುತ್ತಿರುವಾಗ ವಿಕೋಟೆ ಕಡೆಯಿಂದ ಕುಪ್ಪಂ ಕಡೆಗೆ ಹೋಗಲು ಮಠಂ ಗ್ರಾಮದ ವಾಸಿ ಮುನಿರಾಮಯ್ಯ ಎಂಬುವರ ಮಗ ತನ್ನ ದ್ವಿಚಕ್ರವಾಹನ ಸಂಖ್ಯೆ ಕೆಎ-೦೪-ಇಸಿ-೫೨೭೨ ರಲ್ಲಿ ಹಿಂಬದಿಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಕಳ್ಳರಿಸಿಕೊಂಡು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಬ್ಬೇಗೌಡನಿಗೆ ಹೊಡೆದ ಪ್ರಯುಕ್ತ ಕೆಳಗೆ ಬಿದ್ದು ತಲೆಗೆ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ.
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳಿ ಹೋಬಳಿ ಕಾವೇರನಹಳ್ಳಿಯ ದೇವರಾಜ್ ಜಲ್ಲಿ ಕ್ರಷರ್ ಪ್ಯಾಕ್ಟರಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೬-೦೨-೩೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಯಂಡಪಲ್ಲಿ ಗ್ರಾಮದ ವಾಸಿ ಶ್ರೀ ಶಿವ (೨೪) ಎಂಬುವರು ದೇವರಾಜ್ ಜಲ್ಲಿ ಕ್ರಷರ್ ಪ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಕಟ್ ಆಗಿ ಕ್ರಷರ್ ಚಕ್ರದ ಹತ್ತಿರ ಕಲ್ಲುಗಳು ಸೇರಿಕೊಂಡು ಜಾಮ್ ಆಗಿದ್ದು, ಕಲ್ಲುಗಳನ್ನು ಶಿವ ರವರು ಗಡಾರಿಯಿಂದ ತೆಗೆಯುತ್ತಿರುವಾಗ ಗಡಾರಿ ಮತ್ತು ಹ್ಯಾಂಗಲ್ ನಡುವೆ ಶಿವ ರವರ ಬೆರಳುಗಳು ಸಿಕ್ಕಿ ಹಾಕಿಕೊಂಡು ಎಡಕೈ ಮದ್ಯ ಮತ್ತು ಉಂಗುರದ ಬೆರಳುಗಳ ತುದಿ ಸುಮಾರು ಒಂದು ಅಂಗುಲದಷ್ಟು ಜಜ್ಜಿ ರಕ್ತಗಾಯವಾಗಿರುತ್ತದೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಪೆಟ್ರೋಲಿಯಂ ರಿಸ್ಟ್ರಿಷನ್ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೨-೨೦೦೮ ರಂದು ೧೮೧೫ ಗಂಟೆ ಸಮಯದಲ್ಲಿ ಪಿ.ಎಸ್.ಐ. ಕಾಮಸಮುದ್ರಂ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಗುಲ್ಲಹಳ್ಳಿ ಗ್ರಾಮದ ತಾಯಪ್ಪ @ ಮುನಿಸ್ವಾಮಿ ಎಂಬುವರು ತಮ್ಮ ಚಿಲ್ಲರೆ ಅಂಗಡಿಯ ಮೇಲೆ ದಾಳಿ ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಕಲಬೆರೆಕೆ ಪೆಟ್ರೋಲ್ ಮಾರಾಟ ಮಾಡುತ್ತಿರುವವನನ್ನು ದಸ್ತಿಗಿರಿ ಮಾಡಿ ಕಲಬೆರೆಕೆ ಪೆಟ್ರೋಲ್ ಅನ್ನು ವಶಪಡಿಸಿಕೊಂಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


