ಹತ್ಯಾಚಾರ ವೆಸಗಿದ ಆರೋಪಿಗೆ ೦೭ ವರ್ಷಗಳ ಕಠಿಣ ಸಜೆ

   ದಿನಾಂಕ ೨೫-೦೯-೨೦೦೬ ರಂದು ೦೮೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಸರಹದ್ದು ಹುನ್ಕುಂದ ಗ್ರಾಮದ ಬಳಿ ಬಂಡೆಯ ಮೇಲೆ ಶ್ರೀಮತಿ ಮಂಜುಳ ಕೋಂ ನಾರಾಯಣಸ್ವಾಮಿ ರವರು ಬಟ್ಟೆ ಹೊಗೆಯುತ್ತಿರುವಾಗ ಅದೇ ಗ್ರಾಮದ ವಾಸಿ ಮುನಿರತ್ನಪ್ಪ ಎಂಬುವನು ಹಿಂದೆಯಿಂದ ಬಂದು ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ಬಸವನ ಗುಟ್ಟೆಗಳ ಮಧ್ಯಕ್ಕೆ ಎತ್ತಿಕೊಂಡು ಹೋಗಿ ಬಲತ್ಕಾರವಾಗಿ ಹಠಸಂಬೋಗ ಮಾಡಿರುವ ಬಗ್ಗೆ ಬಂಗಾರಪೇಟೆ ಪೊಲಿಸ್ ಠಾಣೆಯಲ್ಲಿ ಕೇಸು ದಾಖಲು ಮಾಡಿ ಶ್ರೀ ಎ.ಜಿ.ಕಾರಿಯಪ್ಪ, ಸಿಪಿಐ ಬಂಗಾರಪೇಟೆ ವೃತ್ತ ರವರು ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

   ಸದರಿ ಪ್ರಕರಣದ ವಿಚಾರಣೆಯನ್ನು ಕೋಲಾರದ ಮಾನ್ಯ ೧ ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ.ಮನಮೋಹನ ರವರು ಎಸ್.ಸಿ. ಸಂಖ್ಯೆ ೪೫/೨೦೦೭ ರ ರೀತ್ಯಾ ನಡೆಸಿದ್ದು, ಶ್ರೀ. ಬಿ.ಎಂ.ವಿರಕ್ತ ಮಠ, ಸರ್ಕಾರಿ ಅಭಿಯೋಜಕರು ವಾದವನ್ನು ಮಂಡಿಸಿ, ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾದೀಶರು ದಿನಾಂಕ:೦೭-೦೨-೨೦೦೮ ರಂದು ಆರೋಪಿಗೆ ೦೭ ವರ್ಷ ಕಠಿಣ ಸಜೆ ಮತ್ತು ಒಂದು ಸಾವಿರ ರೂಗಳ ದಂಡ ವಿದಿಸಿದ್ದು, ದಂಡ ಪಾವತಿಸದಿದ್ದಲ್ಲಿ ೦೬ ತಿಂಗಳ ಕಠಿಣ ಸಜೆಯನ್ನು ನೀಡಿ ತೀರ್ಪು ನೀಡಿರುತ್ತಾರೆ.

   ತನಿಖಾಧಿಕಾರಿಗಳು ಮತ್ತು ಪ್ರಕರಣಕ್ಕೆ ಸಹಾಯಕರಾದ ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ಬಹುಮಾನ ಘೋಷಿಸಲಾಗಿದೆ.

Leave a Reply