February 29, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ರಾಜಶೇಖರ್ ಕಾಂಪ್ಲೆಕ್ಸ್ ಬಳಿ ಸಂಭವಿಸಿರುತ್ತದೆ. ಶ್ರೀ. ನಾರಾಯಸ್ವಾಮಿ ಬಿನ್ ಗೋವಿಂದಪ್ಪ ರವರು ಈಗ್ಗೆ ೨ ವರ್ಷಗಳ ಹಿಂದೆ ಪ್ರಸಾದ್ ಬಿನ್ ತ್ಯಾಗರಾಜ್ ರವರಿಗೆ ಸಾಲವಾಗಿ ರೂ. ೧೪೦೦೦/- ಗಳನ್ನು ನೀಡಿದ್ದು, ದಿನಾಂಕ ೨೮-೦೨-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಪ್ರಸಾದ್ ರವರ ಬಳಿ ಸಾಲವನ್ನು ವಾಪಸ್ಸು ಕೇಳಲು ಹೋದಾಗ ಪ್ರಸಾದ್, ಪ್ರವೀಣ್, ಹರಿ ಬಂಗಾರಪೇಟೆ ರವರುಗಳು ಜಗಳ ತೆಗೆದು ಒಂದು ದೊಣ್ಣೆಯಿಂದ ನಾರಾಯಸ್ವಾಮಿ ರವರ ಬಲಗಣ್ಣಿನ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಒಂದು ರೈಸರ್ನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತವ್ಯವು ಬಂಗಾರಪೇಟೆ ತಾಲೂಕು ತಂಬಾರಲಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೯-೦೨-೨೦೦೮ ರಂದು ಬೆಳಿಗ್ಗೆ ೦೯೪೫ ಗಂಟೆಯಲ್ಲಿ ತಂಬಾರಲಹಳ್ಳಿ ಗ್ರಾಮದ ಸಾರ್ವಜನಿಕ ಕೊಳಯಿ ಬಳಿ ರಾಧರಾಣಿ ಮತ್ತು ಯಲ್ಲಮ್ಮ ರವರುಗಳಿಗೆ ನೀರಿನ ವಿಚಾರವಾಗಿ ಜಗಳವಾಗಿ ಯಲ್ಲಮ್ಮ ರವರು ರಾಧರಾಣಿ ರವರಿಗೆ ಚಾಕೂವಿನಿಂದ ಹೊಡದು ರಕ್ತಗಾಯಪಡಿಸಿ, ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 28, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನೆರೆನಹಳ್ಳಿ ಗ್ರಾಮದ ಬಳಿ ಈ ಕೃತ್ಯವು ಸಂಬಂವಿಸಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ರಾತ್ರಿ ೨೨೦೦ ಗಂಟೆಯಲ್ಲಿ ಶ್ರೀ. ಪದ್ದಪ್ಪಯ್ಯ ಬಿನ್ ಕೆ.ಎಂ.ನಾಗಪ್ಪ(೩೦), ಕೊಡಿಗೇನಹಳ್ಳಿ ಗ್ರಾಮದ ವಾಸಿ ತನ್ನ ವಾಹನ ಸಂಖ್ಯೆ ಕೆಎ-೦೩-ಇಎಲ್-೪೯೯೪ ಟಿ.ವಿ.ಎಸ್. ವಿಕ್ಟರ್ ವಾಹನದಲ್ಲಿ ಬೆಂಗಳೂರಿನಿಂದ ತನ್ನ ಗ್ರಾಮಕ್ಕೆ ಬರುವಾಗ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ನೆರೆನಹಳ್ಳಿ ಗ್ರಾಮದ ಬಸ್ಸ್ ಶೆಲ್ಟರ್‌ಗೆ ಡಿಕ್ಕಿ ಹೊಡೆದ ಪ್ರಯುಕ್ತ ತಲೆಯ ಬಲಭಾಗಕ್ಕೆ ತೀವ್ರವಾದ ರಕ್ತಗಾಯವಾಗಿ ಮೃತಪಟ್ಟಿರುತ್ತಾರೆ.
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೋಟಿಲಿಂಗೇಶ್ವನ ದೇವಸ್ಥಾನದ ಬಳಿ ಈ ಕೃತ್ಯವು ಸಂಬಂವಿಸಿರುತ್ತದೆ. ದಿನಾಂಕ ೨೮-೦೨-೨೦೦೮ ರಂದು ಬೆಂಗಳೂರಿನ ಕೋಣನಕುಂಟೆ ವಾಸಿ ರತ್ಮಮ್ಮ ರವರ ಮಗನಾದ ಉಮೇಶನಿಗೆ ೧೦ ವರ್ಷಗಳ ಹಿಂದೆಯೇ ಮದುವೆಯಾಗಿದ್ದರೂ, ಪುನಃ ಎರಡನೇ ಮದುವೆಯನ್ನು ಮಿಂಡಹಳ್ಳಿ ಗ್ರಾಮದ ವಾಸಿ ತಿಪ್ಪೇಗೌಢ ರವರ ಮಗಳಾದ ಸುನಂದ ರವರೊಂದಿಗೆ ಮದುವೆ ಮಾಡಲು ಪ್ರಯತ್ನಿಸಿದ್ದಾಗ, ಉಮೇಶನ ಮೊದಲನೇ ಹೆಂಡತಿ ರುಕ್ಮಿಣಿ ರವರು ಈ ಮದುವೆಯನ್ನು ತಡೆದು ದೂರು ನೀಡಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಇತರೆ: ೦೧
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೆ.ಜಿ.ಎಫ್ ನ ಮಾರಿಕುಪ್ಪಂ ತೆಲಗು ಮಾಡಲ್ ಹೌಸ್ ನಲ್ಲಿ ಈ ಕತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ಶ್ರೀಮತಿ ಗ್ಲೋರಿ ಕೋಂ ಆನಂದನ್ ರವರು ಎಲ್ಲಿಯೋ ಹೋಗಿ ಮದ್ಯಾಹ್ನ ೧೪೦೦ ಗಂಟೆಗೆ ಮನಗೆ ಬಂದು ಬೀಗ ತೆಗೆದು ನೋಡಲಾಗಿ ಮನೆಯಲ್ಲಿದ್ದ ಹಾಸಿಗೆ ಮತ್ತು ಪುಸ್ತಕಗಳು ಬೆಂಕಿಯಿಂದ ಸುಡುತ್ತಿದ್ದವು, ಇದನ್ನು ಅಕ್ಕಪಕ್ಕದವರ ಸಹಾಯದಿಂದ ಬೆಂಕಿಯನ್ನು ನಂದಿಸಿರುತ್ತಾರೆ. ಈ ಬಗ್ಗೆ ರಂಗಮ್ಮನಾಯ್ಡು ಮತ್ತು ಶ್ರೀಮತಿ ವಸಂತಮ್ಮ ರವರುಗಳ ಮೇಲೆ ಗುಮಾನಿ ಇರುವುದಾಗಿ ತಿಳಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 27, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಜೆ.ಕೆ. ಪುರಂ ಗ್ರಾಮದ ಬಳಿ ಸಂಭವಿಸಿರುತ್ತದೆ. ಶ್ರೀ. ಮುರಳಿ ಬಿನ್ ಕೃಷ್ಣಪ್ಪ(೨೦) ದಾಸರಹೊಸಹಳ್ಳಿ ಗ್ರಾಮ ರವರು ಕೆಎ-೦೨-ಸಿ-೯೧೧೧ರ ಚಾಲಕರಾಗಿದ್ದು, ದಿನಾಂಕ ೨೬-೦೨-೨೦೦೮ ರಂದು ಬೆಳಿಗ್ಗೆ ೦೬೧೫ ಗಂಟೆ ಸಮಯದಲ್ಲಿ ವೆಂಕಟೇಶ(೩೦) ಮಾರಿಕುಪ್ಪಂ ಕೆ.ಜಿ.ಎಫ್ ಮತ್ತು ಮತ್ತೊಬ್ಬರು (ಹೆಸರು ಗೊತ್ತಿಲ್ಲ) ರವರುಗಳು ಕಾರನ್ನು ೭೦೦/- ರೂ ಬಾಡಿಗ ಪಡೆದು ಕುಪ್ಪಂ ಹೋಗಲು ತಿಳಿಸಿ ಅನೇಕ ಕಡೆ ಸುತ್ತಾಡಿಸಿ ರಾತ್ರಿ ೨೧೩೦ ಗಂಟೆಯಲ್ಲಿ ರಾಜಪೇಟೆ ಕಡೆಯಿಂದ ಕೆ.ಜಿ.ಎಫ್ ವಾಪಾಸ್ಸು ಬರುತ್ತಿದ್ದಾಗ ವೆಂಟೇಶ ಮತ್ತು ಮತ್ತೊಬ್ಬ ಕಾರನ್ನು ನಿಲ್ಲಿಸಲು ಹೇಳಿ ಮುರಳಿ ರವರ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಕಾರನ್ನು ಸುಲಿಗೆ ಮಾಡಿಕೊಂಡಿ ಹೋಗಿರುತ್ತಾರೆ.
ಮನೆಗಳ್ಳತನ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನೆ ಕನ್ನಕಳವುಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನೆರೆನಹಳ್ಳಿ ಗ್ರಾಮದಲ್ಲಿ ಈ ಕೃತ್ಯವು ಸಂಬಂವಿಸಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ರಾತ್ರಿ ನೆರೆನಹಳ್ಳಿ ಗ್ರಾಮದ ಸರ್ಕಾರಿ ಹಿರಿಯರ ಪ್ರಾಥಮಿಕ ಶಾಲೆಯಲ್ಲಿ ಯಾರೋ ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗವನ್ನು ಕಿತ್ತು ಶಾಲೆಯಲ್ಲಿದ್ದ ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ೨ ಅಲ್ಯುಮಿನಿಯಂ ಪಾತ್ರೆಗಳು, ಒಂದು ಗ್ಯಾಸ್ ಸ್ವೌವ್ , ೨ ಗ್ಯಾಸ್ ಸಿಲೆಂಡರ್ ಸುಮಾರು ೩೦ ಕೆ.ಜಿ. ಅಕ್ಕಿ ಇತ್ಯಾದಿ ರೂ. ೧೦೦೦೦/- ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ನೆರನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೫/೨೬-೦೨-೨೦೦೮ ರಂದು ರಾತ್ರಿ ೦೦೩೦ಗಂಟೆ ಸಮಯದಲ್ಲಿ ಶ್ರೀಮುನಿರಾಜು ಬಿನ್ ಮುನಿಯಪ್ಪ(೨೦) ಎಂಬುವರ ತಮ್ಮ ಮದುವಯ ಆರತಕ್ಷತೆಗೆ ನೆರನಹಳ್ಳಿ ಗ್ರಾಮಕ್ಕೆ ಹೋಗಿದ್ದು, ಅದೇ ಗ್ರಾಮದ ವಾಸಿಗಳಾದ ವಿಜಿ, ಮುರಳಿ, ಪ್ರತಾಪ್ ಮತ್ತು ಮಂಜುನಾಥ್ ಎಂಬುವರುಗಳು ಉದ್ದೇಶಪೂರ್ವಕವಾಗಿ ವಿನಾಕಾರಣ ಜಗಳ ತೆಗೆದು ಮುನಿರಾಜು ರವರಿಗೆ ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು, ಕಾಲಿನಿಂದ ಎಡ ದೊಕ್ಕೆಗೆ ಒದ್ದಿ, ಕೈಗಳಿಂದ ಕುತ್ತಿಗೆಗೆ ಒಡೆದು ಮತ್ತು ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಾಣಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತವ್ಯವು ಬೇತಮಂಗಲದ ಬಸ್ಸ್ ನಿಲ್ದಾಣದಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ೧೬೦೦ ಗಂಟೆಯಲ್ಲಿ ಶ್ರೀ. ನಾರಾಯಣಸ್ವಾಮಿ ಎಂಬುವರು ಬೇತಮಂಗಲ ಬಸ್ಸ್ ನಿಲ್ದಾಣದಲ್ಲಿ ಹೋಗುತ್ತಿದ್ದಾಗ ಚಂದ್ರಶೇಖರ್ ಎಂಬುವರು ವಿನಾಕಾರಣ ಜಗಳ ತೆಗೆದು ನಾರಾಯಣಸ್ವಾಮಿರವರಿಗೆ ತೋರು ಬೆರಳನ್ನು ಕಚ್ಚಿ, ನನ್ನ ತಂಟೆಗೆ ಬಂದರೆ ಸಾಯಿಸುತ್ತೇನೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 25, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಭವಿಸಿರುತ್ತದೆ. ಬಂಗಾರಪೇಟೆ ತಾಲೂಕು ಕಾರಹಳ್ಳಿ ಗ್ರಾಮದಲ್ಲಿ ಈ ಕೃತ್ಯವು ಸಂಭವಿಸಿರುತ್ತದೆ. ಶ್ರೀ. ರವಿ ಬಿನ್ ಕೆ.ಎಂ.ವೆಂಕಟ್ರಾಮಪ್ಪ ರವರ ಟಾಟೋ ಸುಮೋ ವಾಹನಕ್ಕೆ ಹರೀಶ್ ಎಂಬುವರನ್ನು ಚಾಲಕರನ್ನಾಗಿ ಇಟ್ಟುಕೊಂಡಿದ್ದು, ದಿನಾಂಕ ೨೪-೦೨-೨೦೦೮ ರಂದು ೧೩೩೦ ಗಂಟೆಯಲ್ಲಿ ವಾಹನದಲ್ಲಿ ಬೆಂಗಳೂರಿನಿಂದ ರವಿ ಮನೆಗೆ ಬಂದು ಚಾಲಕನನ್ನು ಮನೆಯಲ್ಲಿ ಬಿಟ್ಟು ರವಿಯವರು ತನ್ನ ಮೈಮೇಲೆ ಇದ್ದ ರೂ. ೨೪,೦೦೦/-ಗಳ ಬೆಲೆಬಾಳುವ ಒಡವೆಗಳನ್ನು ಬಿಚ್ಚಿಇಟ್ಟು ಸ್ನಾನ ಮಾಡಲು ಹೋಗಿದ್ದು, ಚಾಲಕ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ.
ಸಾಧಾರಣ ಕಳ್ಳತನ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಭವಿಸಿರುತ್ತದೆ. ಬಂಗಾರಪೇಟೆ ತಾಲೂಕು ಕೊತ್ತೂರು ಗ್ರಾಮದಿಂದ ಘಟ್ಟರಾಗಡಹಳ್ಳಿಗಳ ಮದ್ಯೆ ಈ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ರಾತ್ರಿ ಯಾರೋ ಕಳ್ಳರು ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಸುಮಾರು ರೂ. ೧೫,೭೫೦/- ಬೆಲೆಬಾಳುವ ೬೯೦ ಮೀಟರ್‍ಗಳಷ್ಟು ೨ ಎಸಿಎಸ್ಆರ್ ೧೧ ಕೆ.ವಿ. ವಿದ್ಯುತ್ ತಂತಿಯನ್ನು ಕತ್ತರಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 24, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: E®è
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲಹಲ್ಲೆ: ೦೧
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ನ್ಯಾಯಾಲಯದ ಆವರದಲ್ಲಿ ಸಂಭವಿಸಿರುತ್ತದೆ. ಶ್ರೀ. ಮುನಿಯಪ್ಪ ಬಿನ್ ಚಿಕ್ಕಣ (೩೯), ಮರಾಠಹೊಸಹಳ್ಳಿ, ಬಂಗಾರಪೇಟೆ ತಾಲೂಕು ಮತ್ತು ಅದೇ ಗ್ರಾಮದ ವಾಸಿಗಳಾದ ಚಿಕ್ಕಪಾಪಣ್ಣ, ಪ್ರಭಾಕರ, ಕೃಣ್ಣಮೂರ್ತಿ ಮತ್ತು ಮುನಿಲಕ್ಷ್ಮಮ್ಮ ರವರುಗಳ ಮದ್ಯೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು, ದಿನಾಂಕ ೨೩-೦೨-೨೦೦೮ ರಂದು ೪-೦೦ ಸಮಯದಲ್ಲಿ ಮುನಿಯಪ್ಪ ರವರು ಬಂಗಾರಪೇಟೆ ನ್ಯಾಯಾಲಯಕ್ಕೆ ಬಂದಾಗ ಸದರಿ ಮೇಲ್ಕಂಡವರು ವಿನಾಕಾರಣ ಅಡ್ಡಗಟ್ಟಿ ಜಗಳ ತೆಗೆದು ಕೈಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 23, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: E®è
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಎನ್.ಜಿ.ಹುಲ್ಕೂರು ಗ್ರಾಮದ ಕ್ರಾಸ್ ಮಸೀದಿ ಬಳಿ ಸಂಭವಿಸಿರುತ್ತದೆ. ಪೂಗಾನಹಳ್ಳಿ ವಾಸಿ ಶ್ರೀ. ಅಶೋಕ್ ಬಿನ್ ರಾಧಕೃಷ್ಣಪ್ಪ(೧೯) ರವರು ದಿನಾಂಕ ೨೩-೦೨-೨೦೦೮ ರಂದು ಬೆಳಿಗ್ಗೆ ೦೫೩೦ ಗಂಟೆಯಲ್ಲಿ ಎನ್.ಜಿ.ಹುಲ್ಕೂರು ಗೇಟಿನಲ್ಲಿರುವ ಹಾಲಿನ ಡೈರಿಗೆ ಹಾಲನ್ನು ಹಾಕಲು, ಪೂಗಾನಹಳ್ಳಿ ಗ್ರಾಮದಿಂದ ಹಾಲನ್ನು ತೆಗೆದುಕೊಂಡು ವಿವೇPÁನಂದ ವಿದ್ಯಾಸಂಸ್ಥೆಯನ್ನು ಬಿಟ್ಟು ಎನ್.ಜಿ.ಹುಲ್ಕೂರು ಕ್ರಾಸ್ ಬಳಿಯಿರುವ ಮಸೀದಿ ಬಳಿ ಬರುತ್ತಿರುವಾಗ ಯಾರೋ ೮ ಜನ ಹುಡುಗರು ಬಂದು ಅಶೋಕ್ ರವರನ್ನು ಹಿಡಿದುಕೊಂಡು ದೊಣ್ಣೆಗಳಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಹಾಗೂ ಕೈಗಳಿಂದ ಮೈಮೇಲೆ ಹೊಡೆದು ಮೂಗುಗಾಯಪಡಿಸಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎಂ.ವಿ.ನಗರ, ಬೆಮೆಲ್‌ನಗರದಲ್ಲಿ ಸಂಭವಿಸಿರುತ್ತದೆ. ಮೃತಳು ಶ್ರೀಮತಿ ಸತ್ಯಬಾಮ ಕೋಂ ಮನೋಹರನ್ (೪೮) ರವರು ಮಾನಸಿಕ ಅಸ್ವಸ್ಥಳಾಗಿದ್ದು, ದಿನಾಂಕ ೧೩-೦೨-೨೦೦೮ ರಂದು ವಿಷ ಸೇವನೆ ಮಾಡಿ ಚಿಕಿತ್ಸೆಗಾಗಿ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೨-೦೨-೨೦೦೮ ರಂದು ರಾತ್ರಿ ೨೧೫೫ ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಂತೇಪುರಮಠ ಗ್ರಾಮದಲ್ಲಿ ಸಂಭವಿಸಿರುತ್ತದೆ. ಅದೇ ಗ್ರಾಮದ ವಾಸಿ ಮೃತ ಶ್ರೀ. ಗಣೇಶ್ ಬಿನ್ ಲಿಂಗಒಡೆಯರ್(೩೦) ಎಂಬುವರು ಎರಡು ಮದುವೆಯಾಗಿ ಇಬ್ಬರು ಹೆಂಡತಿಯರೊಂದಿಗೆ ಅನ್ಯೋನ್ಯವಾಗಿ ಸಂಸಾರ ಮಾಡಲು ಸಾಧ್ಯವಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ ೨೨-೦೨-೨೦೦೮ ರಂದು ಇವರ ಜಮೀನಿನಲ್ಲಿರುವ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ-
ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 23, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಅಶೋಕನಗರ, ’ಸಿ’ ಬ್ಲಾಕ್ ವಾಸಿ ಶ್ರೀಮತಿ ಜಯಂತಿ ಎಂಬುವರು ಮುನಿಸಿಪಲ್ ಕೌಂನ್ಸ್‌ಲರ್ ಆಗಿದ್ದು, ದಿನಾಂಕ ೨೨-೦೨-೨೦೦೮ ರಂದು ೦೫೦೦ ಗಂಟೆ ಸಮಯದಲ್ಲಿ ಮನೆಯ ಮುಂದೆ ಕಸಗುಡಿಸುತ್ತಿರುವಾಗ ಮಾಜಿ ಶಾಸಕರಾದ ಭಕ್ತವತ್ಸಲಂ ಮತ್ತು ಇತರರು ಅವರನ್ನು ಅಪಹರಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ರಾಬರ್ಟ್‌ಸನ್‌ಪೇಟೆ ಮುನಿಸ್ಸಿಪಲ್ ಬಸ್ಸ್ ನಿಲ್ದಾಣದಲ್ಲಿ ಸಂಭವಿಸಿರುತ್ತದೆ. ಮೃತ ರವಿ ರವರು ಆಸ್ತಮ ಖಾಯಿಲೆಯಿಂದ ನರಳುತ್ತಿದ್ದು, ದಿನಾಂಕ ೨೧-೦೨-೨೦೦೮ಕ್ಕೆ ೪ ದಿನ ಮುಂಚೆ ಬೆಂಗಳೂರಿನಿಂದ ಕೆ.ಜಿ.ಎಫ್‌ಗೆ ಹೋಗುವುದಾಗಿ ತಿಳಿಸಿ, ದಿನಾಂಕ ೨೧-೦೨-೨೦೦೮ ರಂದು ರಾತ್ರಿ ವೇಳೆಯಲ್ಲಿ ಬಸ್ಸ್ ನಿಲ್ದಾಣದಲ್ಲಿ ಮಗಿದ್ದಾಗ ಕೋಲ್ಡ್ ನಿಂದ ಮೃತ ಪಟ್ಟಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ-
ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 21, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಗಿತಾ ರಸ್ತೆ, ೬ ನೇ ಅಡ್ಡ ರಸ್ತೆಯ ಮನೆ ಸಂಖ್ಯೆ ೧೫೧೯/೧ ರ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೯-೦೨-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ೬ ನೇ ಅಡ್ಡ ರಸ್ತೆಯ ಮನೆ ಸಂಖ್ಯೆ ೧೫೧೯/೧ ವಾಸಿ ಶ್ರೀ ಪ್ರಸನ್ನ ಸತ್ಯ ಎಂಬುವರು ತನ್ನ ಮನೆಯ ಮುಂದೆ ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೫-ಟಿಆರ್-೦೫೨೮ ಅನ್ನು ನಿಲ್ಲಿಸಿ ಒಳಗೆ ಹೋಗಿ ನಂತರ ೧೮೦೦ ಗಂಟೆ ಸಮಯದಲ್ಲಿ ಬಂದು ನೋಡಲಾಗಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. – ಬಂಗಾರಪೇಟೆ ಮುಖ್ಯ ರಸ್ತೆ ಉರಿಗಾಂ, ಬಾಟಗಂಗಮ್ಮ ದೇವಾಲಯದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೨-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಚಾಂಪಿಯನ್‌ರೀಫ್ಸ್ ಕಾಸ್ಟನ್ ಬ್ಲಾಕ್ ವಾಸಿ ಶ್ರೀ ಪ್ಯಾರಿಸ್ಟ್ ರ್ ವಿಜಯ್ (೨೦) ಎಂಬುವರು ತನ್ನ ಪಲ್ಸರ್ ವಾಹನ ಸಂಖ್ಯೆ ಕೆಎ-೦೮-ಜೆ-೬೫೮೦ ರಲ್ಲಿ ಬೆಮೆಲ್ ಕಡೆಯಿಂದ ಬರುತ್ತಿರುವಾಗ ಮಾರುತಿ -೮೦೦ ವ್ಯಾನಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಹೇನ್ರಿಸ್ ಬಾಟಗಂಗಮ್ಮ ದೇವಾಲಯದ ಬಳಿ ವಿಜಯ್ ರವರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ವಿಜಯ್ ರವರು ಅಪಘಾತದ ಪ್ರಯುಕ್ತ ಕೆಳಗೆ ಬಿದ್ದು ಮೃತ ಪಟ್ಟಿರುತ್ತಾರೆ.
- ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 20, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಬೇತಮಂಗಲದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೯-೦೨-೨೦೦೮ ರಂದು ೨೨೩೦ ಗಂಟೆ ಸಮಯದಲ್ಲಿ ಬೇತಮಂಗಲದ ನ್ಯೂಟೌನ್ ವಾಸಿ ಶ್ರೀ ಬಿ.ಕೆ.ಚಂದ್ರಪ್ಪ (೩೦) ಎಂಬುವರು ಕ್ಯಾಸಂಬಳ್ಳಿ ರಸ್ತೆಯಲ್ಲಿರುವ ತಮ್ಮ ಎಸ್.ಎಲ್.ವಿ. ಜನರಲ್ ಸ್ಟೋರ್ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿ ದಿನಾಂಕ: ೨೦-೦೨-೨೦೦೮ ಬೆಳಿಗ್ಗೆ ೦೬೦೦ ಗಂಟೆಗೆ ಅಂಗಡಿಯ ಬಾಗಿಲನ್ನು ತೆಗೆಯಲು ಬಂದು ನೋಡಲಾಗಿ ಯಾರೋ ಅಪರಿಚಿತ ಕಳ್ಳರು ಶೆಲ್ಟರ್ ಬೀಗವನ್ನು ಹೊಡೆದು ಒಳಗೆ ಪ್ರವೇಶಿಸಿ ಅಂಗಡಿಯಲ್ಲಿಟ್ಟಿದ್ದ ನಗದು ರೂ ೧೫,೦೦೦/- ಗಳನ್ನು ಮತ್ತು ನೋಕಿಯೊ ಮೊಬೈಲ್ ಪೋನ್‌ಗಳು ಎಲ್ಲಾ ಒಟ್ಟು ೨೧,೦೦೦/- ರೂಗಳ ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
February 19, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನತ್ತ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೯-೦೨-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ನತ್ತ ಗ್ರಾಮದ ವಾಸಿ ಶ್ರೀ ಎಂ.ಎನ್.ಜಯರಾಂ ಎಂಬುವರ ಜಮೀನಿನಲ್ಲಿ ಬೋರುವೆಲ್‌ಗೆ ಅಳವಡಿಸಿದ್ದ ೪೦ ಮೀಟರ್ ಕೇಬಲ್ ವೈರನ್ನು ೩ ಜನ ಆರೋಪಿಗಳಾದ ರಾಜು, ಪುಂಗಾವಣಿ ಮತ್ತು ಮಾಣಿಕ್ಯಂ ಎಂಬುವರು ಕೆಬಲ್ ವೈರನ್ನು ಕತ್ತರಿಸಿ ಸುಮಾರು ೧೫೦೦/- ರೂ ಬೆಲೆ ಬಾಳುವುದನ್ನು ನೀಲಗಿರಿ ತೋಪಿನಲ್ಲಿ ಹಾಕಿ ಸುಡುತ್ತಿದ್ದವರನ್ನು ದಸ್ತಗಿರಿ ಮಾಡಲಾಗಿರುತ್ತದೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಸಿಂಗರಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಸಿಂಗರಹಳ್ಳಿ ಗ್ರಾಮದ ವಾಸಿ ಶ್ರೀಮತಿ ಮಂಜುಳಾದೇವಿ ಎಂಬುವರಿಗೆ ೩ ವರ್ಷಗಳ ಹಿಂದೆ ವಿ.ಸೀತಾರಾಮ ಎಂಬುವರೊಂದಿಗೆ ಮದುವೆಯಾಗಿದ್ದು, ಸೀತಾರಾಮನು ಸಂಸಾರಕ್ಕೆ ಸರಿಯಾಗಿ ಮನೆ ಸಾಮಾಗ್ರಿಗಳನ್ನು ತಂದು ಹಾಕುತಿಲ್ಲದ ಕಾರಣ ಮಂಜುಳಾದೇವಿ ರವರು ಕೇಳಿದರೆ ವಿನಾ ಕಾರಣ ಬೈಯುವುದು ಹಿಂಸೆ ನೀಡುತ್ತಿರುತ್ತಾನೆ. ಈ ಬಗ್ಗೆ ದಿನಾಂಕ ೧೭-೦೨-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಮಂಜುಳಾದೇವಿಯವರು ಸೀತಾರಾಮರವರನ್ನು ಸಂಸಾರಕ್ಕೆ ಸಾಮಾಗ್ರಿಗಳನ್ನು ತಂದು ಹಾಕು ಎಂದು ಕೇಳಿದ್ದಕ್ಕೆ ಮನೆಯಲ್ಲಿದ್ದ ಮುದ್ದೆ ತೊಳಸುವ ಕೋಲಿನಿಂದ ಎರಡೂ ಕಾಲುಗಳ ಮೇಲೆ ಮತ್ತು ಕೈಗಳ ಮೇಲೆ ಹೊಡೆದಿದ್ದು, ಆ ಸಮಯಕ್ಕೆ ಮಂಜುಳಾದೇವಿಯವರ ತಂದೆ ಅಲ್ಲಿಗೆ ಬಂದು ಯಾಕೆ ಹೊಡೆಯುತ್ತಿಯ ಎಂದು ಕೇಳಿದ್ದಕ್ಕೆ ಆತನನ್ನು ಸಹಾ ಕೈಗಳಿಂದ ಹೊಡೆದು ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಿರುತ್ತಾನೆ.
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳಿ ಹೋಬಳಿ ಕಾವೇರನಹಳ್ಳಿಯ ದೇವರಾಜ್ ಜಲ್ಲಿ ಕ್ರಷರ್ ಪ್ಯಾಕ್ಟರಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೬-೦೨-೩೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಯಂಡಪಲ್ಲಿ ಗ್ರಾಮದ ವಾಸಿ ಶ್ರೀ ಶಿವ (೨೪) ಎಂಬುವರು ದೇವರಾಜ್ ಜಲ್ಲಿ ಕ್ರಷರ್ ಪ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಕಟ್ ಆಗಿ ಕ್ರಷರ್ ಚಕ್ರದ ಹತ್ತಿರ ಕಲ್ಲುಗಳು ಸೇರಿಕೊಂಡು ಜಾಮ್ ಆಗಿದ್ದು, ಕಲ್ಲುಗಳನ್ನು ಶಿವ ರವರು ಗಡಾರಿಯಿಂದ ತೆಗೆಯುತ್ತಿರುವಾಗ ಗಡಾರಿ ಮತ್ತು ಹ್ಯಾಂಗಲ್ ನಡುವೆ ಶಿವ ರವರ ಬೆರಳುಗಳು ಸಿಕ್ಕಿ ಹಾಕಿಕೊಂಡು ಎಡಕೈ ಮದ್ಯ ಮತ್ತು ಉಂಗುರದ ಬೆರಳುಗಳ ತುದಿ ಸುಮಾರು ಒಂದು ಅಂಗುಲದಷ್ಟು ಜಜ್ಜಿ ರಕ್ತಗಾಯವಾಗಿರುತ್ತದೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಪೆಟ್ರೋಲಿಯಂ ರಿಸ್ಟ್ರಿಷನ್ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೨-೨೦೦೮ ರಂದು ೧೮೧೫ ಗಂಟೆ ಸಮಯದಲ್ಲಿ ಪಿ.ಎಸ್.ಐ. ಕಾಮಸಮುದ್ರಂ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಗುಲ್ಲಹಳ್ಳಿ ಗ್ರಾಮದ ತಾಯಪ್ಪ @ ಮುನಿಸ್ವಾಮಿ ಎಂಬುವರು ತಮ್ಮ ಚಿಲ್ಲರೆ ಅಂಗಡಿಯ ಮೇಲೆ ದಾಳಿ ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಕಲಬೆರೆಕೆ ಪೆಟ್ರೋಲ್ ಮಾರಾಟ ಮಾಡುತ್ತಿರುವವನನ್ನು ದಸ್ತಿಗಿರಿ ಮಾಡಿ ಕಲಬೆರೆಕೆ ಪೆಟ್ರೋಲ್ ಅನ್ನು ವಶಪಡಿಸಿಕೊಂಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf