January 21, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ವೆಂಕಟಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೧-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಟೇಕಲ್ ಹೋಬಳಿ ಹುಲ್ಲೇರಹಳ್ಳಿ ಗ್ರಾಮದ ವಾಸಿ ಶ್ರೀ ರವಿಕುಮಾರ್ ಎಂಬುವರು ವಿ-ಕೋಟೆ ಕಡೆಯಿಂದ ಬೇತಮಂಗಲಕ್ಕೆ ಬರಲು ತನ್ನ ನಂಬರ್ ಇಲ್ಲದ ಹೀರೋಹೊಂಡ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದರು. ಆ ಸಮಯದಲ್ಲಿ ಎದರುಗಡೆಯಿಂದ ಲಗ್ಗೇಜ್ ಆಟೋ ಸಂಖ್ಯೆ ಕೆಎ-೦೮-೩೩೨೦ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೀರೋಹೊಂಡ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ರವಿಕುಮಾರ್ ರವರು ರಸ್ತೆ ಬಲಕ್ಕೆ ಬಿದ್ದು ತಲೆಗೆ ಮತ್ತು ದೇಹದ ಮೇಲೆ ರಕ್ತಗಾಯಗಳಾಗಿ ಒದ್ದಾಡುತ್ತಿರುವವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದು, ಆಸ್ಪತ್ರೆಯಲ್ಲಿ ರವಿಕುಮಾರ್ ರವರು ಮೃತ ಪಟ್ಟಿರುತ್ತಾರೆ.
-ಸಾಧಾರಣ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಾವೇರಹಳ್ಳಿ ಗ್ರಾಮದ ಜಲ್ಲಿ ಕಾರ್ಖಾನೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೯-೦೧-೨೦೦೮ ರಂದು ೧೬೧೫ ಗಂಟೆ ಸಮಯದಲ್ಲಿ ಬಿಹಾರ ರಾಜ್ಯದ ಮೊತಿಹಾರ ಜಿಲ್ಲೆ ಸಿರಿಪುರ ಗ್ರಾಮದ ವಾಸಿಗಳಾದ ಮೋತಿಲಾಲ್ (೩೨), ಭವಾಲಿ ಮತ್ತು ಸುಧಾಮಾಸ ಎಂಬುವರುಗಳು ಕಾವೇರಹಳ್ಳಿ ಗ್ರಾಮದಲ್ಲಿರುವ ಜಲ್ಲಿ ಕಾರ್ಖಾನೆಯಲ್ಲಿ ಜಲ್ಲಿಯನ್ನು ತುಂಬುಸಿಕೊಂಡು ಬರಲು ಟ್ರಾಕ್ಟರ್ ಸಂಖ್ಯೆ ಕೆಎ-೦೮-ಟಿ-೩೨೮೬ ರ ವಾಹನದಲ್ಲಿ ಹೋಗಿದ್ದರು. ಆ ಸಮಯದಲ್ಲಿ ಟ್ರಾಕ್ಟರ್ ಚಾಲಕ ಸರವಣ ಎಂಬುವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಟ್ರಾಕ್ಟರ್ ಅನ್ನು ಹಿಂದಕ್ಕೆ ಚಲಾಯಿಸಿದ್ದರಿಂದ ಟ್ರಾಲಿಯಲ್ಲಿ ಕುಳಿತಿದ್ದ ಸುಧಾಮಾಸ ರವರು ಕೆಳಗೆ ಉರುಳಿ ಬಿದ್ದ ಪ್ರಯುಕ್ತ ಟ್ರಾಕ್ಟರ್ ನ ಚಕ್ರ ಆತನ ತಲೆಯ ಮೇಲೆ ಹರಿದು ಕತ್ತು ಮತ್ತು ತಲೆಯ ಮೇಲೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಾತೇಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೧-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ತಾತೇಪಲ್ಲಿ ವಾಸಿಯಾದ ಶ್ರೀಮತಿ ಗೌರಮ್ಮ ಮತ್ತು ಅದೇ ಗ್ರಾಮದ ವಾಸಿ ಸೀನಪ್ಪ@ ಬೊಂಡಲ ಸೀನಪ್ಪನವರಿಗೆ ಹಣದ ವಿಚಾರದಲ್ಲಿ ಜಗಳ ಮಾಡಿಕೊಂಡು, ಸೀನಪ್ಪ ಎಂಬುವರು ಈ ದಿವಸ ನಿನ್ನನ್ನು ಸಾಯಿಸುವ ತನಕ ಬಿಡುವುದಿಲ್ಲವೆಂತ ಗೌರಮ್ಮನಿಗೆ ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂದು ರಾತ್ರಿ ಗೌರಮ್ಮ ಒಬ್ಬಳೇ ಮನೆಯಲ್ಲಿ ರಾತ್ರಿ ೨೪೦೦ ಗಂಟೆ ಸಮಯದಲ್ಲಿ ಮಲಗಿರುವಾಗ ಸೀನಪ್ಪನು ಬಂದು ಕೆಟ್ಟ ಮಾತುಗಳಿಂದ ಬೈದು ಜಾತಿ ನಿಂದನೆ ಮಾಡಿ ಆಕೆಯ ಮೈ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿಯಿಟ್ಟು ಓಡಿ ಹೋಗಿರುತ್ತಾನೆ. ಗೌರಮ್ಮನಿಗೆ ಮೈಗೆ ಬೆಂಕಿ ಹೊತ್ತಿಕೊಂಡು ಸುಟ್ಟಗಾಯಗಳಾಗಿ ಗ್ರಾಮಸ್ಥರ ಸಹಾಯದಿಂದ ಕೆ.ಜಿ.ಎಫ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 20, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
-
ಆಂಡ್ರಸಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಗ್ರಾಮದ ರಘುರಾಮರೆಡ್ಡಿ ರವರ ಪ್ಲೋರ್ ಮಿಲ್ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೯-೦೧-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಕ್ಯಾಸಂಬಳ್ಳಿ ಹೋಬಳಿ ಬಿಲ್ಲೇರಹಳ್ಳಿ ಗ್ರಾಮದ ವಾಸಿಗಳಾದ ಮಂಜುನಾಥ್ (೧೮), ಸುನೀಲ್ ಕುಮಾರ್ ಮತ್ತು ಸಂತೋಷ್ ರೆಡ್ಡಿ ಎಂಬುವರುಗಳು ತಮ್ಮ ಗ್ರಾಮದಿಂದ ಕ್ಯಾಸಂಬಳ್ಳಿಗೆ ಆಟೋ ಸಂಖ್ಯೆ ಕೆಎ-೦೮-೨೧೬೨ ರ ವಾಹನದಲ್ಲಿ ರಘುರಾಮರೆಡ್ಡಿ ರವರ ಪ್ಲೋರ್ ಮಿಲ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಕ್ಯಾಸಂಬಳ್ಳಿಯಿಂದ ರಾಮಕುಪ್ಪಂ ಕಡೆಗೆ ಹೋಗಲು ಒಂದು ಟ್ರಾಕ್ಟರ್ ಚಾಲಕ ತನ್ನ ವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಇದರ ಪರಿಣಾಮ ಆಟೋದಲ್ಲಿದ್ದ ಮಂಜುನಾಥ್ ರವರಿಗೆ ಎಡಕಾಲು ಮುರಿದು ಗಾಯವಾಗಿದ್ದು, ಅದರ ಚಾಲಕ ಸಂತೋಷ್ ರೆಡ್ಡಿ ಮತ್ತು ಸುನೀಲ್ ಕುಮಾರ್ ರವರುಗಳಿಗೆ ರಕ್ತ ಗಾಯಗಳಾಗಿರುತ್ತದೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಬಿಲ್ಲೇರಹಳ್ಳಿ ಗ್ರಾಮದ ಕ್ರಾಸ್ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೯-೦೧-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಬಿಲ್ಲೇರಹಳ್ಳಿ ಗ್ರಾಮದ ವಾಸಿ ಶ್ರೀ ರಮೇಶ್ (೨೭) ಎಂಬುವರು ಜಂಗಮಾನಹಳ್ಳಿ ಗ್ರಾಮದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ತಮ್ಮ ಊರಿಗೆ ತನ್ನ ಹೀರೋ ಪುಚ್ ಸಂಖ್ಯೆ ಕೆಎ-೦೩-ಡ್ಲ್ಯು-೮೧೬೫ ರ ವಾಹನದಲ್ಲಿ ಬಿಲ್ಲೇರಹಳ್ಳಿ ಕ್ರಾಸ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಎದರುಗಡೆಯಿಂದ ಟ್ರಾಕ್ಟರ್ ಸಂಖ್ಯೆ ಕೆಎ-೦೭-ಟಿ-೨೦೫೬ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಮೇಶ್ ರವರ ವಾಹನಕ್ಕೆ ಡಿಕ್ಕಿ ಹೊಡೆದ ಕ್ರಯುಕ್ತ ವಾಹನ ಚಕಂಗೊಂಡು ಎಡಕಾಲಿನ ಹಿಮ್ಮಡಿ, ತೊಡೆ ಮತ್ತು ಎದೆಗೆ ಮುಗುಗಾಯಗಳಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 19, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ ಕುವೆಂಪು ನಗರದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೯-೦೧-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಕುವೆಂಪು ನಗರದ ವಾಸಿ ಶ್ರೀಮತಿ ಲಕ್ಷ್ಮೀದೇವಿ (೨೮) ಕೋಂ ಮುನಿಯಪ್ಪ ಎಂಬುವರು ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ನಗರದ ವಾಸಿಗಳಾದ ಶ್ರೀಮತಿ ಸುಶೀಲಮ್ಮ (೪೦) ಕೋಂ ಬಾಲರಾಜ್, ಶ್ರೀನಿವಾಸ್ (೨೫) ಮತ್ತು ಕುಮಾರಿ ಭವ್ಯ (೨೦) ಎಂಬುವರುಗಳು ಲಕ್ಷ್ಮೀದೇವಿ ರವರೊಂದಿಗೆ ವಿನಾ ಕಾರಣ ಜಗಳ ಮಾಡಿ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ಮೈ ಮೇಲಿನ ಉಡುಪುಗಳನ್ನು ಕಿತ್ತು ಹಾಕಿರುತ್ತಾರೆ.
ಇತರೆ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಬೆಮೆಲ್ ನಗರ ಕೋರಮಂಡೆಲ್ ನ್ಯೂಮಾಡೆಲ್ ಹೌಸ್‌ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೮-೦೧-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಬೆಮೆಲ್ ನಗರ ಪೊಲೀಸ್ ಠಾಣೆಯ ಮುಖ್ಯೆ ಪೇದೆ ೧೩೮ ಶ್ರೀ ಸಿ.ವೆಂಕಟೇಶ್ ರವರು ಮೇಲಾಧಿಕಾರಿಗಳ ಆದೇಶದಂತೆ ಠಾಣಾ ಬೆ.ವಾ.ತ ಸಂಖ್ಯೆ ೭/೨೦೦೮ ರಲ್ಲಿ ಪುಷ್ಪರಾಜ್ (೪೦) ಎಂಬುವರಿಗೆ ಪೊಲೀಸ್ ನೋಟೀಸ್ ಜಾರಿ ಮಾಡಲು ನ್ಯೂಮಾಡೆಲ್ ಹೌಸಿಗೆ ಗೋಗಿದ್ದಾಗ, ಅನ್ಬು ರವರ ಅಂಗಡಿಯ ಬಳಿ ಇದ್ದ ನ್ಯೂಮಾಡೆಲ್ ಹೌಸ್ ವಾಸಿ ಪುಷ್ಪರಾಜ್ ರವರು ಪೊಲೀಸ್ ನೋಟಿಸನ್ನು ಪಡೆಯಲು ನಿರಾಕರಿದ್ದಲ್ಲದೆ ಎಕಾಏಕಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯದಲ್ಲಿದ್ದ ಸಿ.ವೆಂಕಟೇಶ್ ರವರ ಸಮವಸ್ತ್ರವನ್ನು ಹರಿದುಹಾಕಿ ಅಲ್ಲಿಯೇ ಇದ್ದ ಒಂದು ದೊಣ್ಣೆಯಿಂದ ತಲೆಯ ಹಿಂಬಾಗ, ಹಣೆಯ ಮೇಲೆ ಮತ್ತು ಎಡ ಕ್ಕೆ ಮೇಲೆ ಹೊಡೆದು ಗಾಯಪಡಿಸಿ, ಪ್ರಾಣಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡಚಣೆ ಉಂಟುಮಾಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 18, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೀರ್ತಿಕುಪ್ಪ ಗ್ರಾಮದ ವಾಸಿ ಸುಬ್ರಮಣಿ (೨೨) ಎಂಬುವರಿಗೆ ಹೊಟ್ಟೆ ನೋವು ಮತ್ತು ಮುರ್ಚೆ ರೋಗ ಬರುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೧೭-೦೧-೨೦೦೮ ರಿಂದ ೧೮-೦೧-೨೦೦೮ ರ ಮದ್ಯೆ ಅದೇ ಗ್ರಾಮದ ವಾಸಿ ರಾಮಕೃಷ್ಣ ರವರ ಜಮೀನಿನಲ್ಲಿರುವ ಹುಣೆಸೆ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 17, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದೇಶಿಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೫-೦೧-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ದೇಶಿಹಳ್ಳಿ ಗ್ರಾಮದ ವಾಸಿ ಶ್ರೀಮತಿ ಸರಸ್ವತಮ್ಮ(೪೮) ಕೋಂ ಕೆಂಪಣ್ಣ ಎಂಬುವರು ತಮ್ಮ ಮನೆಯ ಮುಂದೆ ಬಟ್ಟೆಯನ್ನು ಹೊಗೆಯುತ್ತಿದ್ದರು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಮುನಿವೆಂಕಟಪ್ಪ(೬೦), ಆನಂದ ಮತ್ತು ಮಂಜುನಾಥ್ ಎಂಬುವರುಗಳು ಉದ್ದೇಶಪೂರ್ವಕವಾಗಿ ಸರಸ್ವತಮ್ಮ ರವರೊಂದಿಗೆ ಜಗಳ ಮಾಡಿ ಕಲ್ಲು ಮತ್ತು ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ೦೨
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಉರಿಗಾಂ ವೆಸಲಿನ್ ಬ್ಲಾಕ್ ನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೫-೦೧-೨೦೦೮ ೧೫೩೦ ಗಂಟೆ ಸಮಯದಲ್ಲಿ ವೆಸಲಿನ್ ಬ್ಲಾಕ್ ವಾಸಿ ಶಾಂತಕುಮಾರ್ (೨೮) ಎಂಬುವರು ಮೋಹನ್ ರವರ ಚಿಲ್ಲರೆ ಅಂಗಡಿಯ ಮುಂದೆ ಎರಡು ಮೂರು ಬಾರಿ ಸಾಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಈ ದಿನ ನನ್ನ ಸಾವನ್ನು ಯಾರಿಂದಲೂ ತಡೆಯಲಾಗುವುದಿಲ್ಲವೆಂದು ಮೋಹನ್ ರವರ ಅಂಗಡಿಯಲ್ಲಿದ್ದ ಬ್ಲೇಡ್‌ನಿಂದ ತನ್ನ ಎದೆಯ ಮೇಲೆ ತಾನೆ ಕೊಯ್ಡುಕೊಂಡು ರಕ್ತಗಾಯ ಪಡಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾನೆ. ಮನೆಯಲ್ಲಿ ನೆಮ್ಮದಿ ಇಲ್ಲದೆ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 16, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ರಾಬರ್ಟ್‌ಸನ್‌ಪೇಟೆ-ಉರಿಗಾಂ ರಸ್ತೆ ಮುರುಗನ್ ದೇವಸ್ಥಾನದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೫-೦೧-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಎಸ್.ಎಸ್.ಆರ್ ಖಾಸಗಿ ಬಸ್ ಸಂಖ್ಯೆ ಕೆಎ-೦೮-೨೭೩೭ ವಾಹನವು ಕೆ.ಜಿ.ಎಫ್‌ನಿಂದ ಕೋಲಾರಕ್ಕೆ ಹೋಗಲು ಉರಿಗಾಂ ಮುರುಗನ್ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಅದರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗುರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಎಸ್.ಎಸ್.ಎನ್ ಬಸ್ಸನ್ನು ಹಿಂದಕ್ಕೆ ಹಾಕಲು ಹೋಗಿ ದಿಡೀರನೆ ಬ್ರೇಕ್ ಹಾಕಿದಾಗ ಎಸ್.ಎಸ್.ಆರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಐಮರಸಪುರ ಗ್ರಾಮದ ವಾಸಿ ಸುಧಾಕರ್ ರವರು ಬಸ್ಸಿನಿಂದ ಕೆಳಗೆ ಬಿದ್ದಾಗ, ಅದೇ ಬಸ್ಸಿನ ಹಿಂಬದಿ ಚಕ್ರ ಸುಧಾಕರ್ ಮೇಲೆ ಹರಿದು ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ.
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 15, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೊಂಗನಹಳ್ಳಿ ಬ್ರಿಡ್ಜ್ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೨-೦೧-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಸುಬ್ರಮಣಿರೆಡ್ಡಿ ಎಂಬುವರು ಟ್ರಾಕ್ಟರ್ ಸಂಖ್ಯೆ ಕೆಎ-೦೮-ಟಿ ೨೩೦೨ ರಲ್ಲಿ ಮಂಜುನಾಥ, ಶಂಕರಪ್ಪ ಮತ್ತು ಗಂಗಿರೆಡ್ಡಿ ಎಂಬುವರುಗಳನ್ನು ಟ್ರಾಕ್ಟರ್‌ನಲ್ಲಿ ಕುಳ್ಳರಿಸಿಕೊಂಡು ರಾಜ್‌ಪೇಟೆ ರಸ್ತೆಯಿಂದ ಕರಡಗೂರಿಗೆ ಚಲಾಯಿಸಿಕೊಂಡು ಬರುತ್ತಿದ್ದರು. ಅ ಸಮಯದಲ್ಲಿ ಸುಬ್ರಮಣಿರೆಡ್ಡಿ ರವರು ಟ್ರಾಕ್ಟರ್‌ನ್ನು ಕೊಂಗನಹಳ್ಳಿ ಬ್ರಿಡ್ಜ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೆಳಕ್ಕೆ ಉರುಳಿಸಿ ಟ್ರಾಕ್ಟರ್‌ನಲ್ಲಿದ್ದ ಮಂಜುನಾಥ, ಶಂಕರಪ್ಪ ಮತ್ತು ಗಂಗಿರೆಡ್ಡಿ ಎಂಬುವರುಗಳಿಗೆ ಗಾಯಗಳಾಗಿರುತ್ತೆ. ಸುಬ್ರಮಣಿರೆಡ್ಡಿ ರವರು ಸ್ಥಳದಿಂದ ಪರಾರಿಯಾಗಿರುತ್ತಾರೆ.
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾಸರಹೊಸಳ್ಳಿ ಗ್ರಾಮದ ಲ್ಯಾಂಡ್ ಮಾರ್ಕ್ ಹೋಟೆಲ್ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೧-೨೦೦೮ ರಂದು ೧೨೩೫ ಗಂಟೆ ಸಮಯದಲ್ಲಿ ಎಂಬಿಎಸ್ ಬಸ್ಸ್ ಸಂಖ್ಯೆ ಕೆಎ-೦೭-೬೬೧೧ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯ ರಸ್ತೆ ಲ್ಯಾಂಡ್ ಮಾಕ್ð ಬಳಿ ಬಂಗಾರಪೇಟೆ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ಸಂಖ್ಯೆ ಕೆಎ-೦೧-ಎಸ್-೩೪೩೨ರ ಸವಾರ ಮಂಜುನಾಥ್, ಕೋಲಾರ ತಾಲೂಕು ಚನ್ನಸಂದ್ರ ಗ್ರಾಮದ ವಾಸಿರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಮಂಜುನಾಥ್ ರವರ ಬಲ ಕಾಲು ಮುರಿದು ಹೋಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೧-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಗ್ರಾಮದ ವಾಸಿ ನಾಗರಾಜಪ್ಪ ಮತ್ತು ಅವರ ತಮ್ಮ ಆದಿನಾರಾಯಣ ಎಂಬವರು ಕಾಮಸಮುದ್ರಂನಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಹೋಗಿ ಪೊಜೆ ಸಲ್ಲಿಸಿ ಮಂಗಳಾರತಿ ಪಡೆಯುತ್ತಿದ್ದರು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಗೋಪಿ, ಮುರಳಿ, ಶ್ರೀನಿವಾಸ ಮತ್ತು ಲಕ್ಷ್ಮಿದೇವಮ್ಮ ಎಂಬುವರುಗಳು ಕೆಟ್ಟ ಮಾತುಗಳಿಂದ ಬೈದಿದ್ದು, ನಾಗರಾಜಪ್ಪ ಮತ್ತು ಆದಿನಾರಾಯಣ ರವರುಗಳು ಪೂಜೆ ಮುಗಿಸಿಕೊಂಡು ಮನೆಗೆ ಹೋಗಲು ಸರ್ಕಾರಿ ಬಾಲಕಿಯರ ಹಾಸ್ಟೆಲ್ ಬಳಿ ಹೋಗುತ್ತಿದ್ದಾಗ ಮತ್ತೆ ಸದರಿಯವರುಗಳು ಕೆಟ್ಟ ಮಾತುಗಳಿಂದ ಬೈದು ಅಲ್ಲಿಯೇ ಇದ್ದ ನೀಲಗಿರಿ ದೊಣ್ಣೆಯಿಂದ ನಾಗರಾಜಪ್ಪ ರವರಿಗೆ ತಲೆಯ ಮೇಲೆ ಹೊಡದು ರಕ್ತಗಾಯಪಡಿಸಿರುತ್ತಾರೆ. ನಾಗರಾಜಪ್ಪನವರ ತಾಯಿ ಉಳಿಗಮ್ಮ ರವರು ಜಗಳ ಬಿಡಿಸಲು ಹೋದಾಗ ಅವರನ್ನು ಕೆಳೆಗೆ ತಳ್ಳಿ ಕಾಲುಗಳಿಂದ ಒದ್ದು ಕೈಗಳಿಂದ ಗುದ್ದಿ ಮೈ ಕೈ ನೋವುಂಟುಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 14, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೧-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೇತಮಂಗಲ ವಾಸಿ ಶ್ರೀ. ವೆಂಕಟರಾಮಪ್ಪ(೫೦) ಎಂಬುವರು ಕೂಳೂರು ಗ್ರಾಮದಲ್ಲಿರುವ ತಮ್ಮ ತೋಟದಿಂದ ಮನಗೆ ದೊಡ್ಡಕಾರಿಯ ಬಳಿ ವಾಪಸ್ಸು ಬರುತ್ತಿದ್ದಾಗ ಅದೇ ಗ್ರಾಮದ ವಾಸಿ ನಾಗರಾಜ್ ಎಂಬುವರು ಈತನ ಬಳಿ ವಿನಾಕಾರಣ ಜಗಳ ಮಾಡಿ ವೆಂಕಟರಾಮಪ್ಪ ರವರನ್ನು ಸೈಕಲ್‌ನಿಂದ ಕೆಳಗೆ ತಳ್ಳಿ, ಕೈಗಳಿಂದ ಹೊಡದು ಬಲಗಡೆ ಭುಜವನ್ನು ಬಾಯಿಂದ ಕಚ್ಚಿ ರಕ್ತ ಗಾಯಪಡಿಸಿ, ಕೆಟ್ಟ ಮಾತುಗಳಿಂದ ಬೈಯ್ದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 13, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
January 12, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ೦೧
-
ರಾಬಟ್ðಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ರಾಬರ್ಟ್‌ಸನ್‌ಪೇಟೆ ಸ್ವರ್ಣ ನಗರ ವಾಸಿ ಶ್ರೀ ಅಶ್ವಥನಾರಾಯಣರೆಡ್ಡಿ (೪೪) ಎಂಬುವರು ೬ ತಿಂಗಳ ಹಿಂದೆ ವ್ಯಾಪಾರದ ಸಲುವಾಗಿ ಚಿಂತಾಮಣಿ ನಗರದ ವಾಸಿ ರಮೇಶಯ್ಯ ಎಂಬುವರಿಗೆ ೨,೦೦,೦೦೦/ ರೂಗಳನ್ನು ಮತ್ತು ಕೆಲವು ಬಂಗಾರದ ಒಡವೆಗಳನ್ನು ನೀಡಿದ್ದರು. ಬಳಿಕ ಅಶ್ವಥನಾರಾಯಣರೆಡ್ಡಿ ರವರು ರಮೇಶಯ್ಯ ರವರನ್ನು ಹಣ ಮತ್ತು ಒಡವೆಗಳನ್ನು ಕೊಡಲು ಕೇಳಿದ್ದಕ್ಕೆ ಮೂಂದೂಡುತ್ತಾ ಬಂದಿದ್ದು, ಕೇಲವು ದಿನಗಳಿಂದ ಕಾಣಿಸದೆ ಇದ್ದು, ದಿನಾಂಕ ೧೦-೦೧-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ರಮೇಶಯ್ಯ ರವರು ಸ್ವರ್ಣಕುಪ್ಪಂ ವೃತ್ತದ ಬಳಿ ಬರುತ್ತಿದ್ದವರನ್ನು ಅಶ್ವಥನಾರಾಯಣರೆಡ್ಡಿ ರವರು ಹಣ ಮತ್ತು ಒಡವೆಗಳನ್ನು ಕೇಳಿದ್ದಕ್ಕೆ ಇನ್ನು ಮುಂದೆ ಹಣ ಮತ್ತು ಒಡವೆಗಳನ್ನು ಕೇಳಿದರೆ ಹೊಡೆದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ, ವಂಚನೆ ಮಾಡಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf