ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಜನವರಿ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ರಾಬರ್ಟ್‌ಸನ್ ಪೇಟೆಯ ೪ನೇ ಬ್ಲಾಕ್ ನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೦೫೦೦ ಗಂಟೆ ಸಮಯದಲ್ಲಿ ೪ನೇ ಬ್ಲಾಕ್ ವಾಸಿ ಶ್ರೀ ಸಗಾದೇವನ್ (೪೦) ಎಂಬುವರು ಅವರ ಪತ್ನಿ ಮತ್ತು ಮಗಳನ್ನು ವೇಲೂರಿನ ಬಸ್ಸಿಗೆ ಕಳುಹಿಸಿ ಕೊಡಲು ಬಸ್ ನಿಲ್ದಾಣಕ್ಕೆ ಬರುವ ಆತುರದಲ್ಲಿ ತನ್ನ ಮನೆಯ ಹಿಂಬದಿಯ ಬಾಗಿಲ ಚಿಲಕ ಹಾಕದೇ ಮುಂಭಾಗದ ಬಾಗಲಿಗೆ ಬೀಗ ಹಾಕಿಕೊಂಡು ಹೋಗಿದ್ದು, ವಾಪಸ್ಸು ಮನೆಗೆ ಬಂದು ನೋಡಲಾಗಿ ಯಾರೋ ಅಪರಿಚಿತ ಕಳ್ಳರು ಮನೆಯ ಹಿಂಬಾಗಿಲಿನಿಂದ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಬೀರುವನ್ನು ತೆಗೆದು ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಲನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಣ್ಣೂರು ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಕಣ್ಣೂರು ಗ್ರಾಮ ವಾಸಿ ಶ್ರೀಮತಿ ವನಿತಾ (೨೩) ಎಂಬುವರಿಗೆ ಮಂಜುನಾಥ್ ಎಂಬುವರೊಂದಿಗೆ ೬ ವರ್ಷಗಳ ಹಿಂದೆ ಮದುವೆಯಾಗಿ ಒಂದು ಗಂಡು ಮಗು ಇದ್ದು, ಮದುವೆಯ ಕಾಲದಲ್ಲಿ ಆಕೆಯ ತಂದೆ ೨ ಎಕರೆ ಜಮೀನನ್ನು ಆಕೆಯ ಹೆಸರಿಗೆ ಬರೆದುಕೊಟ್ಟಿದ್ದು, ಒಂದು ವರ್ಷದ ಕಾಲ ಅನ್ಯೋನ್ಯವಾಗಿ ಜೀವನ ಮಾಡಿಕೊಂಡಿದ್ದರು. ನಂತರ ಆಕೆಯ ಅತ್ತೆ ಸರಸಮ್ಮ ಮತ್ತು ಮಾವ ಶ್ರೀರಾಮನಾಯ್ಡು ರವರುಗಳು ನಿನ್ನ ಹೆಸರಿನಲ್ಲಿರುವ ಜಮೀನನ್ನು ಮಾರಿ ಬಂದ ಹಣವನ್ನು ನಮಗೆ ಕೊಡು ಎಂದು ಪ್ರತಿ ದಿನ ಹೊಡೆದು ಗಲಾಟೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದು, ದಿನಾಂಕ ೨೮-೦೧-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಆಕೆಯ ಅತ್ತೆ ಮತ್ತು ಮಾವ ಜಮೀನು ಮಾರಿ ಹಣ ಕೊಡು ಇಲ್ಲವಾದರೆ ನಿನ್ನನ್ನು ಸಾಯಿಸುವುದಾಗಿ ವನಿತಾ ರವರಿಗೆ ಪ್ರಾಣ ಬೆದರಿಕೆಹಾಕಿ ಅತ್ತೆ ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ ಮತ್ತು ಮಾವ ತಲೆ ಕೂದಲನ್ನು ಎಳೆದಾಡಿ ಕಾಲಿನಿಂದ ಹೊಟ್ಟಿಯ ಮೇಲೆ ಒದ್ದಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಸಿಟಿಎಂ ಕಾಲೋನಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೧-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಸಿಟಿಎಂ ಕಾಲೋನಿಯ ವಾಸಿ ಶ್ರೀ. ಶ್ರೀನಿವಾಸ ಎಂಬುವರು ಮನೆಯಲ್ಲಿರುವಾಗ ಅದೇ ಕೇರಿಯ ವಾಸಿ ನಾಗರಾಜ್ ಎಂಬುವರು ಹಣದ ವಿಚಾರದಲ್ಲಿ ಗಲಾಟೆ ಮಾಡಿ, ನಾಗರಾಜ ಮತ್ತು ಆತನ ಪತ್ನಿ ಉಲಗಮ್ಮ ಹಾಗೂ ಮಕ್ಕಳಾದ ಆಧಿನಾರಾಯಣ ಮತ್ತು ವೆಂಕಟೇಶ್ ರವರುಗಳು ಶ್ರೀನಿವಾಸ ಮತ್ತು ಆತನ ಹೆಂಡತಿ ಲಕ್ಷ್ಮಿದೇವಮ್ಮ ರವರುಗಳಿಗೆ ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾಬಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾದೇಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಾದೇಪಲ್ಲಿ ಗ್ರಾಮದ ವಾಸಿ ಉದಯಕುಮಾರ್ (೨೫) ಬಿನ್ ಶ್ರೀ.ಎಲ್.ವೆಂಕಟಸ್ವಾಮಿ ಎಂಬುವರಿಗೆ ಸುಮಾರು ದಿನಗಳಿಂದ ಹೊಟ್ಟೆ ನೋವು ಬರುತ್ತಿದ್ದು, ದಿನಾಂಕ ೨೮-೦೧-೨೦೦೮ ರಂದು ಬೆಳಿಗ್ಗೆ ತೋಟಕ್ಕೆ ನೀರು ಹಾಕಲು ಹೋಗಿದ್ದವನು, ಹೊಟ್ಟೆ ನೋವು ಬಾದೆಯನ್ನು ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೊ ವಿಷವನ್ನು ಸೇವಿಸಿರುತ್ತಾನೆ. ಅವರ ತಂದೆ ಆತನನ್ನು ಕೋಲಾರದ ಆರ್‌ಎಲ್.ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಯು ಫಲಕಾರಿಯಾಗದೆ ದಿನಾಂಕ ೨೯-೦೧-೨೦೦೮ ರಂದು ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೧-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಸುಂದ್ರಪಾಳ್ಯ ಗ್ರಾಮದ ವಾಸಿ ಶ್ರೀಮತಿ ದನಮ್ಮ (೩೫) ಎಂಬುವರ ಮಗ ರಾಘವೇಂದ್ರ (೧೪) ಎಂಬುವನು ಅದೇ ಗ್ರಾಮದಲ್ಲಿರುವ ಸರ್ಕಾರಿ ಪ್ರೌಡ ಶಾಲೆಯಲ್ಲಿ ನೇ ತರಗತಿ ಪರೀಕ್ಷೆ ಬರೆಯಲು ಮನೆಯಿಂದ ಹೋದವನು ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ. ಕಾಣೆಯಾದ ಹುಡುಗನ ಚಹರೆ ರೀತಿ ಇರುತ್ತದೆ. ಎತ್ತರ . ಅಡಿ, ತೆಳ್ಳನೆಯ ಮೈಕಟ್ಟು, ಗುಂಡು ಮುಖ, ಸಾದಾರಣ ಮೈಬಣ್ಣ, ಕೆಂಪು ಬಣ್ಣದ ಕಪ್ಪು ಗೆರೆಗಳ ಷರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply