ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಶ್ರೀನಿವಾಸ ಸಂದ್ರ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಶ್ರೀನಿವಾಸ ಸಂದ್ರ ಗ್ರಾಮದ ವಾಸಿ ಶ್ರೀಮತಿ ಲಕ್ಷ್ಮಮ್ಮ (೪೫) ಕೋಂ ವೆಂಕಟೇಶಪ್ಪ ಎಂಬುವರು ಮನೆಗೆ ಬೀಗ ಹಾಕಿಕೊಂಡು ಪ್ಲೋರ್ ಮಿಲ್ಲಿಗೆ ಹೋಗಿ ೧೬೦೦ ಗಂಟೆ ಸಮಯಕ್ಕೆ ವಾಪಸ್ಸು ಮನೆಗೆ ಬಂದು ನೋಡಲಾಗಿ ಯಾರೋ ಅಪರಿಚಿತ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಬೀರುವನ್ನು ತೆಗೆದು ಒಂದು ಬಂಗಾರದ ಎರಡೆಳೆ ಚೈನು, ಒಂದು ಜೊತೆ ಓಲೆ ಮತ್ತು ಒಂದು ಜೊತೆ ಕಾಲು ಚೈನು ಒಟ್ಟು ೨೩,೦೦೦/ ರೂಗಳ ಬಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಕುಪ್ಪಸ್ವಾಮಿ ಲೇ ಔಟನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೧-೨೦೦೪ ರಂದು ಬಂಗಾರಪೇಟೆ ಅಮರಾವತಿ ಬಡಾವಣೆಯ ವಾಸಿ ಶ್ರೀ ರಾಜ್ ಗೋಪಾಲ್ ಎಂಬುವರು ಅದೇ ಕೇರಿಯ ವಾಸಿ ಶ್ರೀನಿವಾಸ್ ರವರಿಂದ ಕುಪ್ಪಸ್ವಾಮಿ ಲೇ ಔಟನಲ್ಲಿ ಒಂದು ಖಾಲಿ ನಿವೇಶನವನ್ನು ಶುದ್ದ ಕ್ರಯಕ್ಕೆ ಮಾಡಿಕೊಂಡಿರುತ್ತಾರೆ. ದಿನಾಂಕ ೦೨-೧೧-೨೦೦೭ ರಂದು ಸದರಿ ನಿವೇಶನದಲ್ಲಿ ಮನೆ ಕಟ್ಟಲು ಪುರಸಭೆಯಿಂದ ಲೈಸನ್ಸ್ ಅನ್ನು ಕೇಳಲಾಗಿ ಸದರಿ ಜಾಗ ಸರ್ಕಾರಿ ರಾಜ ಕಾಲುವೆ ಜಾಗವಾಗಿರುತ್ತದೆ ಎಂದು ತಿಳಿಸಿರುತ್ತಾರೆ. ರಾಜ್ ಗೋಪಾಲ್ ರವರು ಈ ವಿಷಯವನ್ನು ಶ್ರೀನಿವಾಸ್ ರವರಿಗೆ ತಿಳಿಸಿದಾಗ ನಿನಗೆ ಬೇರೆ ಕಡೆ ನಿವೇಶನ ಕೊಡುತ್ತೇನೆ ಅಥವಾ ಹಣವನ್ನಾದರೂ ವಾಪಸ್ಸು ಕೊಡುತ್ತೇನೆ ಎಂದು ೩ ತಿಂಗಳು ಕಾಲವಕಾಶ ತೆಗೆದುಕೊಂಡು ಇದುವರೆವಿಗೂ ಹಣವನ್ನು ವಾಪಸ್ಸು ಕೊಡದೇ ಇದ್ದು ದಿನಾಂಕ ೨೪-೦೧-೨೦೦೮ ರಂದು ಶ್ರೀನಿವಾಸ್ ರವರು ರಾಜಗೋಪಾಲ್ ರವರಿಗೆ ಬಂಗಾರಪೇಟೆಯಲ್ಲಿ ಸಿಕ್ಕಿ ಕೇಳಲಾಗಿ ನೀನುಂಟು ಆ ಸೈಟು ಉಂಟು ನನಗೂ ಅದಕ್ಕು ಸಂಬಂಧವಿಲ್ಲ, ಇನ್ನು ಮುಂದೆ ಸೈಟಿನ ವಿಚಾರ ತಂದರೆ ರೌಡಿಗಳನ್ನು ಬಿಟ್ಟು ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ಮೋಸ / ವಂಚನೆ ಮಾಡಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೨
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಐಸಂದ್ರಮಿಟ್ಟೂರು ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೨೩೩೦ ಗಂಟೆ ಸಮಯದಲ್ಲಿ ಐಸಂದ್ರಮಿಟ್ಟೂರು ಗ್ರಾಮದ ವಾಸಿ ಶ್ರೀ ಬೈರಪ್ಪ (೫೦) ಎಂಬುವರು ತನ್ನ ನಾದನಿಯಾದ ಶ್ರೀಮತಿ ಅಮರಾವತಿ ಎಂಬುವರ ಗಂಡ ರಮೇಶ್ ರವರು ಮೃತಪಟ್ಟ ನಂತರ ತನ್ನ ಮನೆಯಲ್ಲಿ ವಾಸವಾಗಿದ್ದು, ಅಮರಾವತಿ ರವರು ಅದೇ ಗ್ರಾಮದ ವೆಂಕಟೇಶರವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಬುದ್ದಿವಾದ ಹೇಳಿದರೂ ಸಹ ಕೇಳದೇ ತನ್ನ ಮನೆತನದ ಗೌರವ ಹಾಳು ಮಾಡುತ್ತಿರುತ್ತಾಳೆಂದು ಜೀವನದಲ್ಲಿ ಜಿಗುಪ್ಸೆಗೊಂಡು ಆಲುಗಡ್ಡೆ ತೋಟಕ್ಕೆ ತಂದಿದ್ದ ಔಷದಿಯನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕಣರ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ವೆಂಗಸಂದ್ರ ಗ್ರಾಮದ ಕ್ರಾಸ್ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಅನ್ನಸಾಗರ ಗ್ರಾಮದ ವಾಸಿಯಾದ ಸುಬ್ಬರಾಜು ಎಂಬುವರು ಸ್ವಂತ ಕೆಲಸದ ಪ್ರಯುಕ್ತ ವೆಂಗಸಂದ್ರ ಗ್ರಾಮದ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಿರುವಾಗ ಅದೇ ಗ್ರಾಮದ ವಾಸಿ ಶ್ರೀ ರಾಮಪ್ಪ ಎಂಬುವರು ಎಕಾ ಏಕಿಯಾಗಿ ಸುಬ್ಬರಾಜುರವರನ್ನು ಕೆಟ್ಟ ಮಾತುಗಳಿಂದ ಬೈದು ಮಚ್ಚಿನಿಂದ ಕತ್ತರಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


