ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಜನವರಿ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೨

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಲನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳ ಹೋಬಳಿ ನೀಲಗಿರಿಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ನೀಲಗರಿಹಳ್ಳಿ ಗ್ರಾಮದ ವಾಸಿ ಶ್ರೀಮತಿ.ಮಂಜುಳಾ (೨೦) ಎಂಬುವರಿಗೆ ಕೃಷ್ಣಪ್ಪ ಎಂಬುವರೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಈಗ್ಗೆ ಸುಮಾರು - ತಿಂಗಳಿಂದ ಕೃಷ್ಣಪ್ಪನವರು ಸಂಸಾರಕ್ಕೆ ಸರಿಯಾಗಿ ಮನೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬರದೆ ಯಾವಾಗಲೂ ಮಂಜುಳಾ ರವರೊಂದಿಗೆ ಗಲಾಟೆಮಾಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು ದಿನಾಂಕ ೨೧-೦೧-೨೦೦೮ ರಂದು ೧೧೦೦ ಗಂಟೆಯಲ್ಲಿ ಮಂಜುಳಾರವರಿಗೆ ಕೃಷ್ಣಪ್ಪರವರು ಕೈಗಳಿಂದ ಹೊಡೆದು ಮನೆಯಲ್ಲಿ ಇರಬಾರದೆಂತ ಹಿಂಸೆ ಕೊಟ್ಟಿರುತ್ತಾರೆ.
  •   ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಿಮ್ಮಾಪುರ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ತಿಮ್ಮಾಪುರ ಗ್ರಾಮದ ವಾಸಿ ಶ್ರೀಮತಿ ಮಂಜುಳ(೨೦) ಎಂಬುವರು ಚಲಪತಿ ಎಂಬುವರೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಗಂಡ ಚಲಪತಿ, ಅತ್ತೆ ಮುನಿಲಕ್ಷಮ್ಮ ಮತ್ತು ನಾದಿನಿ ಪ್ರೇಮ ರವರುಗಳ ಪ್ರತಿ ನಿತ್ಯ ಸಣ್ಣಪು‌ಟ್ಟ ವಿಷಯಕ್ಕೆಲ್ಲಾ ಮಂಜುಳ ರವರ ಬಳಿ ಜಗಳ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ ೨೨-೦೧-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಮೇಲ್ಕಂಡವರುಗಳು ಮಂಜುಳ ಮತ್ತು ಆಕೆಯ ಗನೊಂದಿಗೆ ಮನೆಯಿಂದ ಹೊರಗೆ ಹೋಗು ಇಲ್ಲದಿದ್ದರೆ ಸೀಮೇ ಎಣ್ಣೆ ಹಾಕಿ ಬೆಂಕಿಯಿಟ್ಟು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾಟಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್‌ ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಪೆಟ್ರೋಲ್ ಬಂಕ್ ಹಾಗೂ ನ್ಯಾಯಾಲಯದ ಮದ್ಯೆ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ವಿಜಯನಗರ ಬಂಗಾರಪೇಟೆ ವಾಸಿ ರಾಮಾಂಜನಪ್ಪ (೪೫) ತಮ್ಮ ಸ್ನೇಹಿತನಾದ ಸಂಜೀವಪ್ಪ ರೊಂದಿಗೆ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೪--೧೭೯೯ ಅನ್ನು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಪೆಟ್ರೋಲ್‌ ಬಂಕ್ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಲಾರಿ ಸಂಖ್ಯೆ ಕೆಎ-೦೧-ಎಎ-೩೨೨೬ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಮಾಂಜನಪ್ಪ ನವರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಾಮಾಂಜನಪ್ಪರವರಿಗೆ ಬಲಕಾಲಿನ ªÀÄvÀÄÛ ಮೊಣಕಾಲಿನ ಮೇಲೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  • ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾಬಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಾಸರಹೊಸಹಳ್ಳಿ ವಾಸಿ ಮರ್ವಿನ್(೨೦) ಎಂಬುವರಿಗೆ ಹೊಟ್ಟೆ ನೋವು ಬಂದಿದ್ದು, ಬರಾಲ್ಗನ್ ಮಾತ್ರೆ ತೆಗೆದುಕೊಂಡರು ವಾಸಿಯಾಗದೆ ದಿನಾಂಕ ೨೪-೦೧-೨೦೦೮ ರಂದು ಮರ್ವಿನ್ ಹೊಟ್ಟೆ ನೋವು ಬಾದೆಯನ್ನು ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೊ ವಿಷವನ್ನು ಸೇವಿಸಿರುತ್ತಾನೆ. ಅವರ ತಾಯಿ ಆತನನ್ನು ರಾಬರ್ಟ್‌‌ಸನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಯು ಫಲಕಾರಿಯಾಗದೆ ದಿನಾಂಕ ೨೪-೦೧-೨೦೦೮ ರಂದು ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply