ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಲ್ಲಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ತಲ್ಲಪಲ್ಲಿ ಗ್ರಾಮಸ ವಾಸಿ ಶ್ರೀ ಶ್ರೀನಿವಾಸರೆಡ್ಡಿ (೩೦) ಎಂಬುವರು ತಮ್ಮ ಗ್ರಾಮದಲ್ಲಿರುವ ತೋಟದ ಬಳಿ ಹಸುಗಳನ್ನು ಮೇಯಿಸುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ಕೃಷ್ಣಾರೆಡ್ಡಿ, ಮುನಿವೆಂಕಟರೆಡ್ಡಿ ಮತ್ತು ಬಾಸ್ಕರ್ ಎಂಬುವರುಗಳು ತೋಟದಲ್ಲಿ ಮರದ ರಂಬೆಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗುತ್ತಿದ್ದವರನ್ನು ಶ್ರೀನಿವಾಸರೆಡ್ಡಿ ರವರು ಏಕೆ ತೆಗೆದುಕೊಂಡು ಹೋಗುತ್ತಿದ್ದಿರಿ ಎಂದು ಕೇಳಿದ್ದಕ್ಕೆ ವಿನಾಕಾರಣ ಜಗಳ ಮಾಡಿ ಕೃಷ್ಣಾರೆಡ್ಡಿ ರವರು ಕೈಯಲ್ಲಿದ್ದ ಮಚ್ಚಿನಿಂದ ಎಡಕಿವಿಗೆ ಹೊಡೆದು ಮತ್ತಿಬ್ಬರು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


