ದಿನದ ಅಪರಾಧಗಳ ಪಕ್ಷಿನೋಟ ೨೨ ನೇ ಜನವರಿ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಾವರೆಕೆರೆ ಗ್ರಾಮದ ಸಕಾðರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃತ್ಯ ಸಂಭವಿಸಿರುತ್ತೆ. ದಿನಾಂಕ ೧೮-೦೧-೨೦೦೮ ರಂದು ೧೬-೩೦ ಗಂಟೆಯಿಂದ ೨೧-೦೧-೨೦೦೮ರ ಮದ್ಯೆ ಯಾರೋ ಅಪರಿಚಿತ ಕಳ್ಳರು ಶಾಲೆಗೆ ಹಾಕಿರುವ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಶಾಲೆಯಲ್ಲಿದ್ದ ೬೭೬೮/- ರೂ ಬೆಲೆ ಬಾಳುವ ಅಲ್ಯುಮಿನಿಯಂ ಪಾತ್ರೆಗಳು, ಮುಚ್ಚಳಗಳು, ಕುಕ್ಕರ್‍ಗಳು ಮತ್ತು ಸ್ಟೀಲ್ ಬಾಕ್ಸ್ ಮುಂತಾದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮೋಸ ಮತ್ತು ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಅಜ್ಜಪ್ಪನಹಳ್ಳಿ ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೧-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಶ್ರೀ ಆಂಜಪ್ಪ, ಪಿ.ಎಸ್.. ಬೆಮೆಲ್ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿಯೊಂದಿಗೆ ನಗರ ಮತ್ತು ಹೊರವಲಯ ಗಸ್ತು ಮಾಡುತ್ತಿದ್ದರು. ಆ ಸಮಯದಲ್ಲಿ ಅಜ್ಜಪ್ಪನಹಳ್ಳಿ-ಬಂಗಾರಪೇಟೆ ರಸ್ತೆಯಲ್ಲಿ ನಿಂತುಕೊಂಡಿದ್ದ ತಮಿಳು ನಾಡಿನ ತಿರುಪತ್ತೂರು ವಾಸಿ ತಿರುಪತಿ (೨೫), ಶ್ರೀನಿವಾಸ (೩೮), ಪಾರಂಡಹಳ್ಳಿ, ಕೆ.ಜಿ.ಎಫ್, ರಾಮಪ್ಪ ಮತ್ತು ನಾರಾಜ್, ಬಂಗಾರಪೇಟೆ ವಾಸಿಗಳು ಪೊಲೀಸ್ ವಾಹನವನ್ನು ನೋಡಿ ಅಲ್ಲಿಂದ ಓಡಲು ಪ್ರಯತ್ನಿಸಿದ್ದು, ಅವರನ್ನು ಸುತ್ತುವರೆದು ಹಿಡಿದು ವಿಚಾರಣೆ ಮಾಡಲಾಗಿ ನಾಲ್ಕು ಜನರ ಪೈಕಿ ಒಬ್ಬರ ಬಳಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಕೆಜಿ ತೂಕದ ನಕಲಿ ಸಣ್ಣ ಸಣ್ಣ ಚಿನ್ನದಂತಹ ನಾಣ್ಯಗಳಿದ್ದು, ಅವುಗಳನ್ನು ಯಾರಿಗಾದರು ಚಿನ್ನದ ನಾಣ್ಯಗಳೆಂತ ಮೋಸದಿಂದ ಮಾರಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಾಯುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೨

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಆಂಡ್ರಸನ್‌ಪೇಟೆ ಸುಸೈಪಾಳ್ಯಂನಲ್ಲಿ ಕೃತ್ಯ ಸಂಬಂವಿಸಿರುತ್ತೆ. ದಿನಾಂಕ ೨೧-೦೧-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಸುಸೈಪಾಳ್ಯಂ ವಾಸಿ ಶ್ರೀಮತಿ ವನಿತಾ(೩೨) ಮತ್ತು ಅವರ ಗಂಡ ಸಂಪತ್ ರವರು ಮನೆಯಲ್ಲಿದ್ದರು. ಸಮಯದಲ್ಲಿ ಸುಸೈಪಾಳ್ಯಂ ವಾಸಿಗಳಾದ ಜೋನ್ ಮೇರಿ, ಡಿಸೋ, ಜಾನ್‌ಪಾಲ್ ಮತ್ತು ಇತರೆ ಜನರು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಮಾರಕಾಸ್ತ್ರಗಳಾದ ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ವನಿತಾ ರವರ ಮನೆಯ ಹತ್ತಿರ ಬಂದು ನಗರಸಭೆ ಚುನಾವಣೆಯಲ್ಲಿ ನಮಗೆ ಓಟು ಹಾಕದೇ ಮೋಸ ಮಾಡಿ ಬೇರೆ ಪಕ್ಷಕ್ಕೆ ಓಟು ಹಾಕಿರುತ್ತೀರಿ ಎಂದು ಕೂಗಾಡುತ್ತಾ, ವನಿತಾ ಮತ್ತು ಆಕೆಯ ಗಂಡನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಮೂಗು ಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಆಂಡ್ರಸನ್‌ಪೇಟೆ ಸುಸೈಪಾಳ್ಯಂನಲ್ಲಿ ಕೃತ್ಯ ಸಂಬಂವಿಸಿರುತ್ತೆ. ದಿನಾಂಕ ೨೧/೨೨-೦೧-೨೦೦೮ ರಂದು ೦೦೦೧ ಗಂಟೆ ಸಮಯದಲ್ಲಿ ಸುಸೈಪಾಳ್ಯಂ ವಾಸಿ ಶ್ರೀಮತಿ ಪಾತಿಮ(೪೫) ಕೋಂ ಅಂತೂ ರವರ ಮನೆಯ ಬಳಿ ಸುಸೈಪಾಳ್ಯಂ ವಾಸಿಗಳಾದ ಯೇಸು, ಜಬ್ರಿ, ಮೇರಿವಿನ್, ಕಿಲ್ಟಸ್ , ಜರ್ಮನ್, ಪಿಲಿಕ್ಸ್, ರವರುಗಳು ಕೈಗಳಲ್ಲಿ ಮಾರಕಾಸ್ತ್ರಗಳಾದ ದೊಣ್ಣೆಗಳನ್ನು ಹಿಡಿದುಕೊಂಡು ಪಾತಿಮ ರವರ ಮಗ ವಿನೋದ್ ಮತ್ತು ಆರೋಪಿಗಳಿಗೆ ಹಿಂದೆ ನಡೆದ ಗಲಾಟೆ ವಿಚಾರವಾಗಿ ಅಕ್ರಮ ಕೂಟ ಕಟ್ಟಿಕೊಂಡು ಪಾತಿಮ ರವರಿಗೆ ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದಿರುತ್ತಾರೆ. ಇದನ್ನು ತಡೆಯಲು ಬಂದ ಪಾತಿಮ ಸಂಬಂದಿ ಮೇರಿಸ್ಟಾಲ ರವರಿಗೂ ಕಾಲಿನಿಂದ ಒದ್ದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅತ್ಯಚಾರಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಮರಗಲ್ ಗ್ರಾಮದ ನರ್ಸರಿ ಫಾರಂನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೧-೨೦೦೮ ಕ್ಕೆ ಒಂದು ವರ್ಷದ ಹಿಂದೆ ಮರಗಲ್ ಗ್ರಾಮದ ೧೫ ವರ್ಷದ ಬಾಲಕಿ ಅದೇ ಗ್ರಾಮದ ವಾಸಿಗಳಾದ ನಾಗರತ್ನಮ್ಮ ಮತ್ತು ಲಕ್ಷ್ಮಿದೇವಮ್ಮ ರವರುಗಳ ಜೊತೆ ಕೂಲಿ ಕೆಲಸಕ್ಕೆ ಬೀರಪ್ಪ ರವರ ನರ್ಸರಿ ಫಾರಂಗೆ ಹೋಗಿದ್ದಾಗ ನಾಗರತ್ನಮ್ಮ ಮತ್ತು ಲಕ್ಷ್ಮಿದೇವಮ್ಮ ರವರುಗಳು ಉದ್ದೇಶಪೂರ್ವಕವಾಗಿ ಬಾಲಕಿಯನ್ನು ಕೊಠಡಿ ಒಳಗೆ ಕೂಡಿ ಹಾಕಿ ಬಾಗಿಲ ಚೀಲಕವನ್ನು ಹಾಕಿದರು ಒಳಗೆ ಇದ್ದ ಬೀರಪ್ಪ, ಸುರೇಶ್ ಮತ್ತು ಅಂಬರೀಷ್ ಎಂಬುವರುಗಳು ಆಕೆಯ ಮೇಲೆ ಸಾಮುಹಿಕ ಅತ್ಯಾಚಾರವೆಸಗಿರುತ್ತಾರೆ. ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಮತ್ತು ನಿಮ್ಮ ತಂದೆತಾಯಿಯನ್ನು ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಪ್ರಯುಕ್ತ ಆಕೆ ವಿಷಯವನ್ನು ಯಾರಿಗೂ ತಿಳಿಸದೇ ಇದ್ದು, ಆಕೆ ತಿಂಗಳ ಗರ್ಭವತಿಯಾಗಿದ್ದು, ಆಕೆಯ ತಾಯಿ ದಿನಾಂಕ ೦೭-೦೧-೨೦೦೮ ರಂದು ಬಂಗಾರಪೇಟೆ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದು, ಆರೋಪಿಯಗಳ ವಿರುದ್ದ ಕ್ರಮ ಜರುಗಿಸಲು ಕೋರಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply