ದಿನದ ಅಪರಾಧಗಳ ಪಕ್ಷಿನೋಟ ೩೧ ನೇ ಜನವರಿ ೨೦೦೮

January 31, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧.೦೧.೨೦೦೮ ರಂದು ೧೨೨೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಟೇಕಲ್ ಹೋಬಳಿ ನಿದ್ರಸಂದ್ರ ಗ್ರಾಮದ ವಾಸಿ ಶ್ರೀ. ಶ್ರೀನಿವಾಸ (೬೦) ಎಂಬುವರು ತನ್ನ ಪತ್ನಿ ನಾರಾಯಣಮ್ಮ ರವರೊಂದಿಗೆ ಮಗಳ ಮೊದುವೆಗಾಗಿ ಬಟ್ಟೆಗಳನ್ನು ತರಲು ಬಂಗಾರಪೇಟೆಗೆ ತಮ್ಮ ಟಿ.ವಿ.ಎಸ್. ವಾಹನ ಸಂಖ್ಯೆ ಕೆ.-೦೪-ಇಸಿ-೪೨೦೩ ರಲ್ಲಿ ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯ ಸಂಜಯಗಾಂಧಿ ನಗರದ ಬಳಿ ಬರುತ್ತಿರುವಾಗ ಎದರುಗಡೆಯಿಂದ ಒಂದು ಕಾರು ಸಂಖ್ಯೆ ಕೆಎ-೦೩-ಎಂಇ-೩೩೭೭ರ ಚಾಲಕ ವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸ್ ರವರ ಟಿ.ವಿ.ಎಸ್ ಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಅಪಘಾತದ ದೆಸೆಯಿಂದ ಶ್ರೀನಿವಾಸ್ ಮತ್ತು ನಾರಾಯಣಮ್ಮ ರವರುಗಳಿಗೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಜನವರಿ ೨೦೦೮

January 30, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ರಾಬರ್ಟ್‌ಸನ್ ಪೇಟೆಯ ೪ನೇ ಬ್ಲಾಕ್ ನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೦೫೦೦ ಗಂಟೆ ಸಮಯದಲ್ಲಿ ೪ನೇ ಬ್ಲಾಕ್ ವಾಸಿ ಶ್ರೀ ಸಗಾದೇವನ್ (೪೦) ಎಂಬುವರು ಅವರ ಪತ್ನಿ ಮತ್ತು ಮಗಳನ್ನು ವೇಲೂರಿನ ಬಸ್ಸಿಗೆ ಕಳುಹಿಸಿ ಕೊಡಲು ಬಸ್ ನಿಲ್ದಾಣಕ್ಕೆ ಬರುವ ಆತುರದಲ್ಲಿ ತನ್ನ ಮನೆಯ ಹಿಂಬದಿಯ ಬಾಗಿಲ ಚಿಲಕ ಹಾಕದೇ ಮುಂಭಾಗದ ಬಾಗಲಿಗೆ ಬೀಗ ಹಾಕಿಕೊಂಡು ಹೋಗಿದ್ದು, ವಾಪಸ್ಸು ಮನೆಗೆ ಬಂದು ನೋಡಲಾಗಿ ಯಾರೋ ಅಪರಿಚಿತ ಕಳ್ಳರು ಮನೆಯ ಹಿಂಬಾಗಿಲಿನಿಂದ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಬೀರುವನ್ನು ತೆಗೆದು ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಲನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಣ್ಣೂರು ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಕಣ್ಣೂರು ಗ್ರಾಮ ವಾಸಿ ಶ್ರೀಮತಿ ವನಿತಾ (೨೩) ಎಂಬುವರಿಗೆ ಮಂಜುನಾಥ್ ಎಂಬುವರೊಂದಿಗೆ ೬ ವರ್ಷಗಳ ಹಿಂದೆ ಮದುವೆಯಾಗಿ ಒಂದು ಗಂಡು ಮಗು ಇದ್ದು, ಮದುವೆಯ ಕಾಲದಲ್ಲಿ ಆಕೆಯ ತಂದೆ ೨ ಎಕರೆ ಜಮೀನನ್ನು ಆಕೆಯ ಹೆಸರಿಗೆ ಬರೆದುಕೊಟ್ಟಿದ್ದು, ಒಂದು ವರ್ಷದ ಕಾಲ ಅನ್ಯೋನ್ಯವಾಗಿ ಜೀವನ ಮಾಡಿಕೊಂಡಿದ್ದರು. ನಂತರ ಆಕೆಯ ಅತ್ತೆ ಸರಸಮ್ಮ ಮತ್ತು ಮಾವ ಶ್ರೀರಾಮನಾಯ್ಡು ರವರುಗಳು ನಿನ್ನ ಹೆಸರಿನಲ್ಲಿರುವ ಜಮೀನನ್ನು ಮಾರಿ ಬಂದ ಹಣವನ್ನು ನಮಗೆ ಕೊಡು ಎಂದು ಪ್ರತಿ ದಿನ ಹೊಡೆದು ಗಲಾಟೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದು, ದಿನಾಂಕ ೨೮-೦೧-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಆಕೆಯ ಅತ್ತೆ ಮತ್ತು ಮಾವ ಜಮೀನು ಮಾರಿ ಹಣ ಕೊಡು ಇಲ್ಲವಾದರೆ ನಿನ್ನನ್ನು ಸಾಯಿಸುವುದಾಗಿ ವನಿತಾ ರವರಿಗೆ ಪ್ರಾಣ ಬೆದರಿಕೆಹಾಕಿ ಅತ್ತೆ ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ ಮತ್ತು ಮಾವ ತಲೆ ಕೂದಲನ್ನು ಎಳೆದಾಡಿ ಕಾಲಿನಿಂದ ಹೊಟ್ಟಿಯ ಮೇಲೆ ಒದ್ದಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಸಿಟಿಎಂ ಕಾಲೋನಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೧-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಸಿಟಿಎಂ ಕಾಲೋನಿಯ ವಾಸಿ ಶ್ರೀ. ಶ್ರೀನಿವಾಸ ಎಂಬುವರು ಮನೆಯಲ್ಲಿರುವಾಗ ಅದೇ ಕೇರಿಯ ವಾಸಿ ನಾಗರಾಜ್ ಎಂಬುವರು ಹಣದ ವಿಚಾರದಲ್ಲಿ ಗಲಾಟೆ ಮಾಡಿ, ನಾಗರಾಜ ಮತ್ತು ಆತನ ಪತ್ನಿ ಉಲಗಮ್ಮ ಹಾಗೂ ಮಕ್ಕಳಾದ ಆಧಿನಾರಾಯಣ ಮತ್ತು ವೆಂಕಟೇಶ್ ರವರುಗಳು ಶ್ರೀನಿವಾಸ ಮತ್ತು ಆತನ ಹೆಂಡತಿ ಲಕ್ಷ್ಮಿದೇವಮ್ಮ ರವರುಗಳಿಗೆ ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾಬಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾದೇಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಾದೇಪಲ್ಲಿ ಗ್ರಾಮದ ವಾಸಿ ಉದಯಕುಮಾರ್ (೨೫) ಬಿನ್ ಶ್ರೀ.ಎಲ್.ವೆಂಕಟಸ್ವಾಮಿ ಎಂಬುವರಿಗೆ ಸುಮಾರು ದಿನಗಳಿಂದ ಹೊಟ್ಟೆ ನೋವು ಬರುತ್ತಿದ್ದು, ದಿನಾಂಕ ೨೮-೦೧-೨೦೦೮ ರಂದು ಬೆಳಿಗ್ಗೆ ತೋಟಕ್ಕೆ ನೀರು ಹಾಕಲು ಹೋಗಿದ್ದವನು, ಹೊಟ್ಟೆ ನೋವು ಬಾದೆಯನ್ನು ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೊ ವಿಷವನ್ನು ಸೇವಿಸಿರುತ್ತಾನೆ. ಅವರ ತಂದೆ ಆತನನ್ನು ಕೋಲಾರದ ಆರ್‌ಎಲ್.ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಯು ಫಲಕಾರಿಯಾಗದೆ ದಿನಾಂಕ ೨೯-೦೧-೨೦೦೮ ರಂದು ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೧-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಸುಂದ್ರಪಾಳ್ಯ ಗ್ರಾಮದ ವಾಸಿ ಶ್ರೀಮತಿ ದನಮ್ಮ (೩೫) ಎಂಬುವರ ಮಗ ರಾಘವೇಂದ್ರ (೧೪) ಎಂಬುವನು ಅದೇ ಗ್ರಾಮದಲ್ಲಿರುವ ಸರ್ಕಾರಿ ಪ್ರೌಡ ಶಾಲೆಯಲ್ಲಿ ನೇ ತರಗತಿ ಪರೀಕ್ಷೆ ಬರೆಯಲು ಮನೆಯಿಂದ ಹೋದವನು ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ. ಕಾಣೆಯಾದ ಹುಡುಗನ ಚಹರೆ ರೀತಿ ಇರುತ್ತದೆ. ಎತ್ತರ . ಅಡಿ, ತೆಳ್ಳನೆಯ ಮೈಕಟ್ಟು, ಗುಂಡು ಮುಖ, ಸಾದಾರಣ ಮೈಬಣ್ಣ, ಕೆಂಪು ಬಣ್ಣದ ಕಪ್ಪು ಗೆರೆಗಳ ಷರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಜನವರಿ ೨೦೦೮

January 29, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಶ್ರೀನಿವಾಸ ಸಂದ್ರ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಶ್ರೀನಿವಾಸ ಸಂದ್ರ ಗ್ರಾಮದ ವಾಸಿ ಶ್ರೀಮತಿ ಲಕ್ಷ್ಮಮ್ಮ (೪೫) ಕೋಂ ವೆಂಕಟೇಶಪ್ಪ ಎಂಬುವರು ಮನೆಗೆ ಬೀಗ ಹಾಕಿಕೊಂಡು ಪ್ಲೋರ್ ಮಿಲ್ಲಿಗೆ ಹೋಗಿ ೧೬೦೦ ಗಂಟೆ ಸಮಯಕ್ಕೆ ವಾಪಸ್ಸು ಮನೆಗೆ ಬಂದು ನೋಡಲಾಗಿ ಯಾರೋ ಅಪರಿಚಿತ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಬೀರುವನ್ನು ತೆಗೆದು ಒಂದು ಬಂಗಾರದ ಎರಡೆಳೆ ಚೈನು, ಒಂದು ಜೊತೆ ಓಲೆ ಮತ್ತು ಒಂದು ಜೊತೆ ಕಾಲು ಚೈನು ಒಟ್ಟು ೨೩,೦೦೦/ ರೂಗಳ ಬಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಕುಪ್ಪಸ್ವಾಮಿ ಲೇ ಔಟನಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೧-೨೦೦೪ ರಂದು ಬಂಗಾರಪೇಟೆ ಅಮರಾವತಿ ಬಡಾವಣೆಯ ವಾಸಿ ಶ್ರೀ ರಾಜ್ ಗೋಪಾಲ್ ಎಂಬುವರು ಅದೇ ಕೇರಿಯ ವಾಸಿ ಶ್ರೀನಿವಾಸ್ ರವರಿಂದ ಕುಪ್ಪಸ್ವಾಮಿ ಲೇ ಔಟನಲ್ಲಿ ಒಂದು ಖಾಲಿ ನಿವೇಶನವನ್ನು ಶುದ್ದ ಕ್ರಯಕ್ಕೆ ಮಾಡಿಕೊಂಡಿರುತ್ತಾರೆ. ದಿನಾಂಕ ೦೨-೧೧-೨೦೦೭ ರಂದು ಸದರಿ ನಿವೇಶನದಲ್ಲಿ ಮನೆ ಕಟ್ಟಲು ಪುರಸಭೆಯಿಂದ ಲೈಸನ್ಸ್ ಅನ್ನು ಕೇಳಲಾಗಿ ಸದರಿ ಜಾಗ ಸರ್ಕಾರಿ ರಾಜ ಕಾಲುವೆ ಜಾಗವಾಗಿರುತ್ತದೆ ಎಂದು ತಿಳಿಸಿರುತ್ತಾರೆ. ರಾಜ್ ಗೋಪಾಲ್ ರವರು ಈ ವಿಷಯವನ್ನು ಶ್ರೀನಿವಾಸ್ ರವರಿಗೆ ತಿಳಿಸಿದಾಗ ನಿನಗೆ ಬೇರೆ ಕಡೆ ನಿವೇಶನ ಕೊಡುತ್ತೇನೆ ಅಥವಾ ಹಣವನ್ನಾದರೂ ವಾಪಸ್ಸು ಕೊಡುತ್ತೇನೆ ಎಂದು ೩ ತಿಂಗಳು ಕಾಲವಕಾಶ ತೆಗೆದುಕೊಂಡು ಇದುವರೆವಿಗೂ ಹಣವನ್ನು ವಾಪಸ್ಸು ಕೊಡದೇ ಇದ್ದು ದಿನಾಂಕ ೨೪-೦೧-೨೦೦೮ ರಂದು ಶ್ರೀನಿವಾಸ್ ರವರು ರಾಜಗೋಪಾಲ್ ರವರಿಗೆ ಬಂಗಾರಪೇಟೆಯಲ್ಲಿ ಸಿಕ್ಕಿ ಕೇಳಲಾಗಿ ನೀನುಂಟು ಆ ಸೈಟು ಉಂಟು ನನಗೂ ಅದಕ್ಕು ಸಂಬಂಧವಿಲ್ಲ, ಇನ್ನು ಮುಂದೆ ಸೈಟಿನ ವಿಚಾರ ತಂದರೆ ರೌಡಿಗಳನ್ನು ಬಿಟ್ಟು ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ಮೋಸ / ವಂಚನೆ ಮಾಡಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೨

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಐಸಂದ್ರಮಿಟ್ಟೂರು ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೨೩೩೦ ಗಂಟೆ ಸಮಯದಲ್ಲಿ ಐಸಂದ್ರಮಿಟ್ಟೂರು ಗ್ರಾಮದ ವಾಸಿ ಶ್ರೀ ಬೈರಪ್ಪ (೫೦) ಎಂಬುವರು ತನ್ನ ನಾದನಿಯಾದ ಶ್ರೀಮತಿ ಅಮರಾವತಿ ಎಂಬುವರ ಗಂಡ ರಮೇಶ್ ರವರು ಮೃತಪಟ್ಟ ನಂತರ ತನ್ನ ಮನೆಯಲ್ಲಿ ವಾಸವಾಗಿದ್ದು, ಅಮರಾವತಿ ರವರು ಅದೇ ಗ್ರಾಮದ ವೆಂಕಟೇಶರವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಬುದ್ದಿವಾದ ಹೇಳಿದರೂ ಸಹ ಕೇಳದೇ ತನ್ನ ಮನೆತನದ ಗೌರವ ಹಾಳು ಮಾಡುತ್ತಿರುತ್ತಾಳೆಂದು ಜೀವನದಲ್ಲಿ ಜಿಗುಪ್ಸೆಗೊಂಡು ಆಲುಗಡ್ಡೆ ತೋಕ್ಕೆ ತಂದಿದ್ದ ಔಷದಿಯನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ.
  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕಣರ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ವೆಂಗಸಂದ್ರ ಗ್ರಾಮದ ಕ್ರಾಸ್ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಅನ್ನಸಾಗರ ಗ್ರಾಮದ ವಾಸಿಯಾದ ಸುಬ್ಬರಾಜು ಎಂಬುವರು ಸ್ವಂತ ಕೆಲಸದ ಪ್ರಯುಕ್ತ ವೆಂಗಸಂದ್ರ ಗ್ರಾಮದ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಿರುವಾಗ ಅದೇ ಗ್ರಾಮದ ವಾಸಿ ಶ್ರೀ ರಾಮಪ್ಪ ಎಂಬುವರು ಎಕಾ ಏಕಿಯಾಗಿ ಸುಬ್ಬರಾಜುರವರನ್ನು ಕೆಟ್ಟ ಮಾತುಗಳಿಂದ ಬೈದು ಮಚ್ಚಿನಿಂದ ಕತ್ತರಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಜನವರಿ ೨೦೦೮

January 28, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀ. ಅಪ್ಪೋಜಿ ಸಿಪಿಸಿ ೧೭೧ ಮತ್ತು ಶ್ರೀ ಶಿವಶಂಕರ್ರೆಡ್ಡಿ ಸಿಪಿಸಿ ೫೬ ರವರುಗಳು ಕಾರಹಳ್ಳಿ ಬಳಿ ಗಸ್ತಿನಲ್ಲಿರುವಾಗ ಮುಳಬಾಗಲು ತಾಲೂಕು ತಾಯಲೂರು ಗ್ರಾಮದ ವಾಸಿ ಪ್ಯಾರು @ ಪ್ಯಾರೇಜಾನ್ (೨೬) ಎಂಬುವರು ಅನುಮಾನಸ್ಪದವಾಗಿ ಬಜಾಜ್ ಕ್ಯಾಲಿಬಾರ್ ಸಂಖ್ಯೆ ಕೆಎ-೦೩-ಇಸಿ-೯೪೪೩ ವಾಹನವನ್ನು ಮಾರಾಟ ಮಾಟಲು ಪ್ರಯತ್ನಿಸುತ್ತಿದ್ದವರನ್ನು ಬಂದಿಸಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಒಂಬತ್ತುಗುಳಿ ಗ್ರಾಮದ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಕಾರಮಂಗಲ ಗ್ರಾಮದ ವಾಸಿ ಶ್ರೀ ಚಂದ್ರಪ್ಪ (೩೫) ಮತ್ತು ಐನೋರಹೊಸಹಳ್ಳಿ ಗ್ರಾಮದ ವಾಸಿ ಶ್ರೀ ವಿಷ್ಣು (೨೨) ಎಂಬುವರುಗಳು ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಒಂಬತ್ತುಗುಳಿ ಗ್ರಾಮದ ಬಳಿ ಪ್ರಯಾಣ ಮಾಡುತ್ತಿದ್ದಾಗ ವಿಷ್ಣು ಎಂಬುವರು ವಿನಾ ಕಾರಣ ಚಂದ್ರಪ್ಪರವರೊಂದಿಗೆ ಜಗಳ ಮಾಡಿ ಕೈಗಳಿಂದ ಮತ್ತು ಬೆಲ್ಟಿನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಜನವರಿ ೨೦೦೮

January 27, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಲನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವು ಕೆ.ಜಿ.ಎಫ್ ರಾಬಟ್ðಸನ್ ಪೇಟೆ ವಾಸಿ ಅಮಾನುಲ್ಲಾಖಾನ್ ಎಂಬುವರು ನೀಡಿದ ಆಧಾರದ ಮೇರೆಗೆ ದಾಖಲಾಗಿರುತ್ತದೆ. ಅಮಾನುಲ್ಲಾಖಾನ್ ರವರು ತನ್ನ ಮಗಳಾದ ಅಜುಂಖಾನ್ ಎಂಬುವರಿಗೆ  ಅಮ್ಜದ್‌ಖಾನ್‌ ಎಂಬುವರೊಂದಿಗೆ  ವಿವಾಹ ಮಾಸಡಿರುತ್ತಾರೆ. ವಿವಾಹದ ಸಮಯದಲ್ಲಿ ನಿಡಿದ್ದ  ವರದಕ್ಷಿಣೆ ಸಾಲದೆಂದು ಇನ್ನೂ ಹೆಚ್ಚಿನ ವರದಕ್ಷಿಣೆಯನ್ನು ತವರು ಮನೆಯಿಂದ ತರುವಂತೆ ದಿನಾಂಕ ೨೬-೧೨-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಗಂಡ ಅಮ್ಜದ್‌ಖಾನ್, ರಶೀದ್‌ಬೇಗಂ ಅತ್ತೆ, ನೂರುಲ್ಲಾ ಖಾನ್ ಮಾ ಮತ್ತು ಅಯೇಷ ನಾದಿನಿ ರವರುಗಳು ಸೇರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ, ಅಜುಂಖಾನ್ ರವರು ಇವರ ಕಿರುಕುಳ ತಾಳಲಾರದೆ ನೇಣು ಹಾಕಿಕೊಂಡು ಸತ್ತಿರಬಹುದು ಅಥವಾ ಕೊಲೆ ಮಾಡಿರಬಹುದು ಎಂಬುದಾಗಿ  ಅಮಾನುಲ್ಲಾಖಾನ್ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:è

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ನಗರದ ೨ನೇ ಎಂ.ಜಿ. ಮಾರ್ಕೆಟ್, ರಾಬರ್ಟ್‌‌ಸನ್‌ಪೇಟೆ ಶ್ರೀ. ಆನಂದ(೧೫) ಬಿನ್ ಗಣಪತಿ ಎಂಬುವರು ಎಂದಿನಂತೆ ಶಾಲೆಗೆ ಹೋಗಲು ಮನೆಯಿಂದ ಹೋಗಿ ಶಾಲೆಗೂ ಹೋಗದೆ ಸಂಜೆ ಮನಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹುಡುಗನ ಚಹರೆ ರೀತಿ ಇರುತ್ತದೆ. ಎತ್ತರ ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ಬಿಸ್ಕೆಟ್ ಬಣ್ಣದ ಷರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ತೆಲಗು ತಮಿಳು ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.

ಮುಂಜಾಗ್ರತೆ ಕ್ರಮಗಳು: E®è

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಜನವರಿ ೨೦೦೮

January 26, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೧-೨೦೦೮ ರಂದು ೧೩೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮಲ್ಲಂಗುರ್ಕಿ ಗ್ರಾಮದ ವಾಸಿ ಮುನಿವೆಂಕಟಪ್ಪ ಎಂಬುವರು ಟಿ.ವಿ.ಎಸ್. ಎಕ್ಸೆಲ್ ನಂ. ಕೆಎ-೪೦--೭೧೧೧ ರಲ್ಲಿ ಬಂಗಾರಪೇಟೆ ತಾಲೂಕು ದೇಶಿಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಎಂಬುವರ ತೋಟದ ಬಳಿ ಬರುತ್ತಿದ್ದರು. ಸಮಯದಲ್ಲಿ ಲಗ್ಗೇಜ್ ಆಟೋ ನಂ. ಟಿಎನ್-೨೪-೫೨೧೨ರ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿ.ವಿ.ಎಸ್.ಎಕ್ಸೆಲ್‌ಗೆ ಡಿಕ್ಕಿಪಡಿಸಿದ ಪ್ರಯುಕ್ತ ಮುನಿವೆಂಕಟಪ್ಪ ಎಂಬುವರಿಗೆ ರಕ್ತಗಾಯಗಳಾಗಿರುತ್ತದೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೧-೨೦೦೮ ರಂದು ೦೯೩೫ ಗಂಟೆ ಸಮಯದಲ್ಲಿ ಕೋಲಾರ ಜಯನಗರದ ವಾಸಿ ಶ್ರೀನಿವಾಸಯ್ಯಶೆಟ್ಟಿ ಎಂಬುವರು ಬಂಗಾರಪೇಟೆಯ ಜೆ.ಎಂ.ಎಫ್.ಸಿ.ನ್ಯಾಯಾಲಯದ ಮುಂದೆ ಅಲ್ಟೋ ಕಾರ್ ನಂ. ಕೆಎ-೦೭-ಎಂ-೧೯೮೨ರಲ್ಲಿ ಬರುತ್ತಿದ್ದರು. ಸಮಯದಲ್ಲಿ ಕೋಲಾರ ಜಿಲ್ಲೆ ಎಂ.ಮಲ್ಲಾಂಡಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರು ಲಾರಿ ಸಂಖ್ಯೆ ಕೆಎ-೦೨-ಬಿ-೭೯೨ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂಬದಿಯಲ್ಲಿ ಡಿಕ್ಕಿ ಹೊಡೆದು ಕಾರ್ ಹಿಂಭಾಗ dRAUÉÆArgÀÄvÀÛzÉ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: E®è

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೧-೨೦೦೮ ರಂದು ೦೩೩೦ ಗಂಟೆ ಸಮಯದಲ್ಲಿ ಉರಿಗಾಂ ಪೊಲೀಸ್ ಠಾಣೆಯ .ಎಸ್.. ಆದೆಪ್ಪ .ಕೆ. ಮತ್ತು ಪಿ.ಸಿ. ಮಂಜುನಾಥ ಎಂಬುವರುಗಳು ಕೆ.ಜಿ.ಎಫ್. ಸ್ಕೂಲ್ ಆಫ್ ಮೈನ್ಸ್ ಮೈನ್ ಗೇಟ್ ಬಳಿ ಬಂದಿರುತ್ತಾರೆ. ಸಮಯದಲ್ಲಿ ಕೆ.ಜಿ.ಎಫ್. ಬಿ.ಜಿಎಂ.ಎಲ್.ಓಲ್ಡ್ ಡಿಸ್ಪೆನ್ಸೆರಿ ಕ್ವಾರ್ಟರಸ್ ವಾಸಿ ಪರಿರಾಜ್ @ ಕುಟ್ಟಿ ಎಂಬುವರು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದರು. ಆಗ ಪೊಲೀಸರು ಹಿಡಿದು ಅವೇಳೆಯಲ್ಲಿ ಸ್ಥಳದಲ್ಲಿ ಇರಲು ಕಾರಣ ಕೇಳಿದಾಗ ಸರಿಯಾದ ಉತ್ತರ ನೀಡಿರುವುದಿಲ್ಲ. ಪರಿರಾಜ್ ರವರನ್ನು ಪೊಲೀಸ್ ಠಾಣೆಗೆ ಕರೆತಂದು ಕಳವು ಮಾಡುವ ಉದ್ದೇಶದಿಂದ ಹೊಂಚುಹಾಕುತ್ತಿರುವೆನೆಂತ ಗುಮಾನಿ ಬಂದು ಕೇಸು ದಾಖಲು ಮಾಡಿರುತ್ತದೆ.

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಜನವರಿ ೨೦೦೮

January 25, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೨

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಲನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳ ಹೋಬಳಿ ನೀಲಗಿರಿಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ನೀಲಗರಿಹಳ್ಳಿ ಗ್ರಾಮದ ವಾಸಿ ಶ್ರೀಮತಿ.ಮಂಜುಳಾ (೨೦) ಎಂಬುವರಿಗೆ ಕೃಷ್ಣಪ್ಪ ಎಂಬುವರೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಈಗ್ಗೆ ಸುಮಾರು - ತಿಂಗಳಿಂದ ಕೃಷ್ಣಪ್ಪನವರು ಸಂಸಾರಕ್ಕೆ ಸರಿಯಾಗಿ ಮನೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬರದೆ ಯಾವಾಗಲೂ ಮಂಜುಳಾ ರವರೊಂದಿಗೆ ಗಲಾಟೆಮಾಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು ದಿನಾಂಕ ೨೧-೦೧-೨೦೦೮ ರಂದು ೧೧೦೦ ಗಂಟೆಯಲ್ಲಿ ಮಂಜುಳಾರವರಿಗೆ ಕೃಷ್ಣಪ್ಪರವರು ಕೈಗಳಿಂದ ಹೊಡೆದು ಮನೆಯಲ್ಲಿ ಇರಬಾರದೆಂತ ಹಿಂಸೆ ಕೊಟ್ಟಿರುತ್ತಾರೆ.
  •   ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಿಮ್ಮಾಪುರ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ತಿಮ್ಮಾಪುರ ಗ್ರಾಮದ ವಾಸಿ ಶ್ರೀಮತಿ ಮಂಜುಳ(೨೦) ಎಂಬುವರು ಚಲಪತಿ ಎಂಬುವರೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಗಂಡ ಚಲಪತಿ, ಅತ್ತೆ ಮುನಿಲಕ್ಷಮ್ಮ ಮತ್ತು ನಾದಿನಿ ಪ್ರೇಮ ರವರುಗಳ ಪ್ರತಿ ನಿತ್ಯ ಸಣ್ಣಪು‌ಟ್ಟ ವಿಷಯಕ್ಕೆಲ್ಲಾ ಮಂಜುಳ ರವರ ಬಳಿ ಜಗಳ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ ೨೨-೦೧-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಮೇಲ್ಕಂಡವರುಗಳು ಮಂಜುಳ ಮತ್ತು ಆಕೆಯ ಗನೊಂದಿಗೆ ಮನೆಯಿಂದ ಹೊರಗೆ ಹೋಗು ಇಲ್ಲದಿದ್ದರೆ ಸೀಮೇ ಎಣ್ಣೆ ಹಾಕಿ ಬೆಂಕಿಯಿಟ್ಟು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾಟಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್‌ ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಪೆಟ್ರೋಲ್ ಬಂಕ್ ಹಾಗೂ ನ್ಯಾಯಾಲಯದ ಮದ್ಯೆ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ವಿಜಯನಗರ ಬಂಗಾರಪೇಟೆ ವಾಸಿ ರಾಮಾಂಜನಪ್ಪ (೪೫) ತಮ್ಮ ಸ್ನೇಹಿತನಾದ ಸಂಜೀವಪ್ಪ ರೊಂದಿಗೆ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೪--೧೭೯೯ ಅನ್ನು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಪೆಟ್ರೋಲ್‌ ಬಂಕ್ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಲಾರಿ ಸಂಖ್ಯೆ ಕೆಎ-೦೧-ಎಎ-೩೨೨೬ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಮಾಂಜನಪ್ಪ ನವರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಾಮಾಂಜನಪ್ಪರವರಿಗೆ ಬಲಕಾಲಿನ ªÀÄvÀÄÛ ಮೊಣಕಾಲಿನ ಮೇಲೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  • ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾಬಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಾಸರಹೊಸಹಳ್ಳಿ ವಾಸಿ ಮರ್ವಿನ್(೨೦) ಎಂಬುವರಿಗೆ ಹೊಟ್ಟೆ ನೋವು ಬಂದಿದ್ದು, ಬರಾಲ್ಗನ್ ಮಾತ್ರೆ ತೆಗೆದುಕೊಂಡರು ವಾಸಿಯಾಗದೆ ದಿನಾಂಕ ೨೪-೦೧-೨೦೦೮ ರಂದು ಮರ್ವಿನ್ ಹೊಟ್ಟೆ ನೋವು ಬಾದೆಯನ್ನು ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೊ ವಿಷವನ್ನು ಸೇವಿಸಿರುತ್ತಾನೆ. ಅವರ ತಾಯಿ ಆತನನ್ನು ರಾಬರ್ಟ್‌‌ಸನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಯು ಫಲಕಾರಿಯಾಗದೆ ದಿನಾಂಕ ೨೪-೦೧-೨೦೦೮ ರಂದು ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಜನವರಿ ೨೦೦೮

January 24, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಲ್ಲಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ತಲ್ಲಪಲ್ಲಿ ಗ್ರಾಮಸ ವಾಸಿ ಶ್ರೀ ಶ್ರೀನಿವಾಸರೆಡ್ಡಿ (೩೦) ಎಂಬುವರು ತಮ್ಮ ಗ್ರಾಮದಲ್ಲಿರುವ ತೋಟದ ಬಳಿ ಹಸುಗಳನ್ನು ಮೇಯಿಸುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ಕೃಷ್ಣಾರೆಡ್ಡಿ, ಮುನಿವೆಂಕಟರೆಡ್ಡಿ ಮತ್ತು ಬಾಸ್ಕರ್ ಎಂಬುವರುಗಳು ತೋಟದಲ್ಲಿ ಮರದ ರಂಬೆಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗುತ್ತಿದ್ದವರನ್ನು ಶ್ರೀನಿವಾಸರೆಡ್ಡಿ ರವರು ಏಕೆ ತೆಗೆದುಕೊಂಡು ಹೋಗುತ್ತಿದ್ದಿರಿ ಎಂದು ಕೇಳಿದ್ದಕ್ಕೆ ವಿನಾಕಾರಣ ಜಗಳ ಮಾಡಿ ಕೃಷ್ಣಾರೆಡ್ಡಿ ರವರು ಕೈಯಲ್ಲಿದ್ದ ಮಚ್ಚಿನಿಂದ ಎಡಕಿವಿಗೆ ಹೊಡೆದು ಮತ್ತಿಬ್ಬರು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಜನವರಿ ೨೦೦೮

January 23, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾನಭಂಗ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಸಂಗನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಸಂಗನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಮಂಜುಳ (೨೨) ಕೋಂ ನಾರಾಯಣಸ್ವಾಮಿ ಎಂಬುವರು ತಮ್ಮ ಮನೆಯಲ್ಲಿರುವಾಗ, ಆದೇ ಗ್ರಾಮದ ವಾಸಿ ಶ್ರೀರಾಮ(೨೮) ಎಂಬುವರು ಮಂಜುಳ ರವರ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಕೈ ಗಳಿಂದ ಹೊಡೆದು, ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ವಿವೇಕಾನಂದ ನಗರದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ವಿವೇಕಾನಂದ ನಗರದ ವಾಸಿ ಶ್ರೀಮತಿ ಮುನಿರತ್ನಮ್ಮ ಎಂಬುವರಿಗೆ ದಿನಾಂಕ ೧೬-೧೨-೧೯೯೭ ರಂದು ಹಿಂದೂ ಸಾಂಪ್ರದಾಯದಂತೆ ಶ್ರೀ ಎಸ್.ವಿ.ರಾಮೇಗೌಡ ಎಂಬುವರೊಂದಿಗೆ ಮದುವೆಯಾಗಿತ್ತು. ರಾಮೇಗೌಡರು ಬೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ನಂತರ ಡಿಸೆಂಬರ್ ೨೦೦೫ ರಂದು ನಿವೃತ್ತಿ ಹೊಂದಿ, ಅಂದಿನಿಂದ ಮುನಿರತ್ನಮ್ಮ ರವರಿಗೆ ಚಿತ್ರ ಹಿಂಸೆ ನೀಡುತ್ತಿದ್ದು, ದಿನಾಂಕ ೧೨-೧೨-೨೦೦೭ ರಂದು ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಚಾಕುವನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾಟಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್ ಕೋಲಾರ ಮುಖ್ಯ ರಸ್ತೆ ಕಿಂಗ್ ವೇ ಬ್ರಿಡ್ಜ್ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೨೧೫೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಆನಂದಗಿರಿ ವಾಸಿ ಶ್ರೀ ರಮೇಶ್ (೨೭) ಎಂಬುವರು ತಮ್ಮ ಆಟೋ ಸಂಖ್ಯೆ ಕೆಎ-೦೪-೪೧೯ ವಾಹನವನ್ನು ಕಿಂಗ್ ವೇ ಬ್ರಿಡ್ಜ್ ಬಳಿ ಚಲಾಯಿಸಿಕೊಂಡು ಬರುತ್ತಿದ್ದರು. ಸಮುದಲ್ಲಿ ಎದರುಗಡೆಯಿಂದ ಟ್ರಾಕ್ಟರ್‍ ಸಂಖ್ಯೆ ಕೆಎ-೦೮-ಟಿ-೨೨೯೫ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಟ್ರಾಕ್ಟರ್ ಅನ್ನು ಚಲಾಯಿಸಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆದ ಪ್ರಯುಕ್ತ ಆಟೋ ಜಕ್ಕಂಗೊಂಡಿರುತ್ತೆ ಮತ್ತು ಆಟೋ ಚಾಲಕ ರಮೇಶ್ ರವರ ತಲೆ ಮತ್ತು ಹಣೆಯ ಮೇಲೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ನೆರನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೧-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ನೆರನಹಳ್ಳಿ ವಾಸಿ ಶ್ರೀ ಆಂಜನೇಯಗೌಡ (೩೭) ಎಂಬುವರು ತನ್ನ ತೋಟದ ಬಳಿ ಹೋಗುತ್ತಿದ್ದಾಗ ಆದೇ ಗ್ರಾಮದ ವಾಸಿಗಳಾದ ಶ್ರೀರಾಮಪ್ಪ, ಲಕ್ಷ್ಮಣಗೌಡ, ಅಂಜಪ್ಪಗೌಡ, ನಾರಯಣಸ್ವಾಮಿಗೌಡ ಮತ್ತು ಗೋಪಾಲಗೌಡ ರವರುಗಳು ಉದ್ದೇಶಪೂರ್ವಕವಾಗಿ ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಆಂಜನೇಯಗೌಡ ರವರ ಬಲಗಾಲಿಗೆ ಹೊಡೆದು ರಕ್ತಗಾಯಪಡಿಸಿ, ಕಾಲುಗಳಿಂದ ಒದ್ದು, ಕೈಗಳಿಂದ ಮೈ ಮೇಲೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೨ ನೇ ಜನವರಿ ೨೦೦೮

January 22, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತಾವರೆಕೆರೆ ಗ್ರಾಮದ ಸಕಾðರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃತ್ಯ ಸಂಭವಿಸಿರುತ್ತೆ. ದಿನಾಂಕ ೧೮-೦೧-೨೦೦೮ ರಂದು ೧೬-೩೦ ಗಂಟೆಯಿಂದ ೨೧-೦೧-೨೦೦೮ರ ಮದ್ಯೆ ಯಾರೋ ಅಪರಿಚಿತ ಕಳ್ಳರು ಶಾಲೆಗೆ ಹಾಕಿರುವ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಶಾಲೆಯಲ್ಲಿದ್ದ ೬೭೬೮/- ರೂ ಬೆಲೆ ಬಾಳುವ ಅಲ್ಯುಮಿನಿಯಂ ಪಾತ್ರೆಗಳು, ಮುಚ್ಚಳಗಳು, ಕುಕ್ಕರ್‍ಗಳು ಮತ್ತು ಸ್ಟೀಲ್ ಬಾಕ್ಸ್ ಮುಂತಾದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮೋಸ ಮತ್ತು ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಅಜ್ಜಪ್ಪನಹಳ್ಳಿ ಗ್ರಾಮದ ಬಳಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೧-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಶ್ರೀ ಆಂಜಪ್ಪ, ಪಿ.ಎಸ್.. ಬೆಮೆಲ್ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿಯೊಂದಿಗೆ ನಗರ ಮತ್ತು ಹೊರವಲಯ ಗಸ್ತು ಮಾಡುತ್ತಿದ್ದರು. ಆ ಸಮಯದಲ್ಲಿ ಅಜ್ಜಪ್ಪನಹಳ್ಳಿ-ಬಂಗಾರಪೇಟೆ ರಸ್ತೆಯಲ್ಲಿ ನಿಂತುಕೊಂಡಿದ್ದ ತಮಿಳು ನಾಡಿನ ತಿರುಪತ್ತೂರು ವಾಸಿ ತಿರುಪತಿ (೨೫), ಶ್ರೀನಿವಾಸ (೩೮), ಪಾರಂಡಹಳ್ಳಿ, ಕೆ.ಜಿ.ಎಫ್, ರಾಮಪ್ಪ ಮತ್ತು ನಾರಾಜ್, ಬಂಗಾರಪೇಟೆ ವಾಸಿಗಳು ಪೊಲೀಸ್ ವಾಹನವನ್ನು ನೋಡಿ ಅಲ್ಲಿಂದ ಓಡಲು ಪ್ರಯತ್ನಿಸಿದ್ದು, ಅವರನ್ನು ಸುತ್ತುವರೆದು ಹಿಡಿದು ವಿಚಾರಣೆ ಮಾಡಲಾಗಿ ನಾಲ್ಕು ಜನರ ಪೈಕಿ ಒಬ್ಬರ ಬಳಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಕೆಜಿ ತೂಕದ ನಕಲಿ ಸಣ್ಣ ಸಣ್ಣ ಚಿನ್ನದಂತಹ ನಾಣ್ಯಗಳಿದ್ದು, ಅವುಗಳನ್ನು ಯಾರಿಗಾದರು ಚಿನ್ನದ ನಾಣ್ಯಗಳೆಂತ ಮೋಸದಿಂದ ಮಾರಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಾಯುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೨

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಆಂಡ್ರಸನ್‌ಪೇಟೆ ಸುಸೈಪಾಳ್ಯಂನಲ್ಲಿ ಕೃತ್ಯ ಸಂಬಂವಿಸಿರುತ್ತೆ. ದಿನಾಂಕ ೨೧-೦೧-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಸುಸೈಪಾಳ್ಯಂ ವಾಸಿ ಶ್ರೀಮತಿ ವನಿತಾ(೩೨) ಮತ್ತು ಅವರ ಗಂಡ ಸಂಪತ್ ರವರು ಮನೆಯಲ್ಲಿದ್ದರು. ಸಮಯದಲ್ಲಿ ಸುಸೈಪಾಳ್ಯಂ ವಾಸಿಗಳಾದ ಜೋನ್ ಮೇರಿ, ಡಿಸೋ, ಜಾನ್‌ಪಾಲ್ ಮತ್ತು ಇತರೆ ಜನರು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಮಾರಕಾಸ್ತ್ರಗಳಾದ ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ವನಿತಾ ರವರ ಮನೆಯ ಹತ್ತಿರ ಬಂದು ನಗರಸಭೆ ಚುನಾವಣೆಯಲ್ಲಿ ನಮಗೆ ಓಟು ಹಾಕದೇ ಮೋಸ ಮಾಡಿ ಬೇರೆ ಪಕ್ಷಕ್ಕೆ ಓಟು ಹಾಕಿರುತ್ತೀರಿ ಎಂದು ಕೂಗಾಡುತ್ತಾ, ವನಿತಾ ಮತ್ತು ಆಕೆಯ ಗಂಡನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಮೂಗು ಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಆಂಡ್ರಸನ್‌ಪೇಟೆ ಸುಸೈಪಾಳ್ಯಂನಲ್ಲಿ ಕೃತ್ಯ ಸಂಬಂವಿಸಿರುತ್ತೆ. ದಿನಾಂಕ ೨೧/೨೨-೦೧-೨೦೦೮ ರಂದು ೦೦೦೧ ಗಂಟೆ ಸಮಯದಲ್ಲಿ ಸುಸೈಪಾಳ್ಯಂ ವಾಸಿ ಶ್ರೀಮತಿ ಪಾತಿಮ(೪೫) ಕೋಂ ಅಂತೂ ರವರ ಮನೆಯ ಬಳಿ ಸುಸೈಪಾಳ್ಯಂ ವಾಸಿಗಳಾದ ಯೇಸು, ಜಬ್ರಿ, ಮೇರಿವಿನ್, ಕಿಲ್ಟಸ್ , ಜರ್ಮನ್, ಪಿಲಿಕ್ಸ್, ರವರುಗಳು ಕೈಗಳಲ್ಲಿ ಮಾರಕಾಸ್ತ್ರಗಳಾದ ದೊಣ್ಣೆಗಳನ್ನು ಹಿಡಿದುಕೊಂಡು ಪಾತಿಮ ರವರ ಮಗ ವಿನೋದ್ ಮತ್ತು ಆರೋಪಿಗಳಿಗೆ ಹಿಂದೆ ನಡೆದ ಗಲಾಟೆ ವಿಚಾರವಾಗಿ ಅಕ್ರಮ ಕೂಟ ಕಟ್ಟಿಕೊಂಡು ಪಾತಿಮ ರವರಿಗೆ ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದಿರುತ್ತಾರೆ. ಇದನ್ನು ತಡೆಯಲು ಬಂದ ಪಾತಿಮ ಸಂಬಂದಿ ಮೇರಿಸ್ಟಾಲ ರವರಿಗೂ ಕಾಲಿನಿಂದ ಒದ್ದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅತ್ಯಚಾರಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಮರಗಲ್ ಗ್ರಾಮದ ನರ್ಸರಿ ಫಾರಂನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೧-೨೦೦೮ ಕ್ಕೆ ಒಂದು ವರ್ಷದ ಹಿಂದೆ ಮರಗಲ್ ಗ್ರಾಮದ ೧೫ ವರ್ಷದ ಬಾಲಕಿ ಅದೇ ಗ್ರಾಮದ ವಾಸಿಗಳಾದ ನಾಗರತ್ನಮ್ಮ ಮತ್ತು ಲಕ್ಷ್ಮಿದೇವಮ್ಮ ರವರುಗಳ ಜೊತೆ ಕೂಲಿ ಕೆಲಸಕ್ಕೆ ಬೀರಪ್ಪ ರವರ ನರ್ಸರಿ ಫಾರಂಗೆ ಹೋಗಿದ್ದಾಗ ನಾಗರತ್ನಮ್ಮ ಮತ್ತು ಲಕ್ಷ್ಮಿದೇವಮ್ಮ ರವರುಗಳು ಉದ್ದೇಶಪೂರ್ವಕವಾಗಿ ಬಾಲಕಿಯನ್ನು ಕೊಠಡಿ ಒಳಗೆ ಕೂಡಿ ಹಾಕಿ ಬಾಗಿಲ ಚೀಲಕವನ್ನು ಹಾಕಿದರು ಒಳಗೆ ಇದ್ದ ಬೀರಪ್ಪ, ಸುರೇಶ್ ಮತ್ತು ಅಂಬರೀಷ್ ಎಂಬುವರುಗಳು ಆಕೆಯ ಮೇಲೆ ಸಾಮುಹಿಕ ಅತ್ಯಾಚಾರವೆಸಗಿರುತ್ತಾರೆ. ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಮತ್ತು ನಿಮ್ಮ ತಂದೆತಾಯಿಯನ್ನು ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಪ್ರಯುಕ್ತ ಆಕೆ ವಿಷಯವನ್ನು ಯಾರಿಗೂ ತಿಳಿಸದೇ ಇದ್ದು, ಆಕೆ ತಿಂಗಳ ಗರ್ಭವತಿಯಾಗಿದ್ದು, ಆಕೆಯ ತಾಯಿ ದಿನಾಂಕ ೦೭-೦೧-೨೦೦೮ ರಂದು ಬಂಗಾರಪೇಟೆ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದು, ಆರೋಪಿಯಗಳ ವಿರುದ್ದ ಕ್ರಮ ಜರುಗಿಸಲು ಕೋರಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.