ದಿನದ ಅಪರಾಧಗಳ ಪಕ್ಷಿನೋಟ ೨೨ ನೇ ಡಿಸೆಂಬರ್ ೦೭

December 22, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೧-೨೦೦೭ ರಂದು ೧೫೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ಬೆಮೆಲ್ ನಗರ, ಕತ್ತಿಹಳ್ಳಿ ವಾಸಿ ಮಹೇಶ್ (೧೬) ಎಂಬುವರು ಆಫೀಸರ್ಕ್ವಾಟ್ರಸ್ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಸಮಯದಲ್ಲಿ ಸಿ.ಟಿ.-೧೦೦ ವಾಹನ ಸಂಖ್ಯೆ ಕೆ.-೦೮-ಜೆ-೭೯೭೯ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ಮಹೇಶ್ ಎಂಬುವರಿಗೆ ಎಡ ಕೈ ಮತ್ತು ಎಡ ಭುಜದ ಮೇಲೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕುರುಬೂರು ಗ್ರಾಮದ ವಾಸಿ ನಾಗರಾಜ್ (೩೫) ಮತ್ತು ಅವರ ಹೆಂಡತಿ ಶ್ರೀಮತಿ ವರಲಕ್ಷ್ಮಿ ಎಂಬುವರು ಕುರುಬೂರು ಗ್ರಾಮದ ಆಸ್ಪತ್ರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಬಾಸ್ಕರ್ರೆಡ್ಡಿ ಮತ್ತು ರವಿ ಎಂಬುವರು ರೀಫರ್ನಿಂದ ಮತ್ತು ಕೈಗಳಿಂದ ನಾಗರಾಜ್ ಮತ್ತು ಅವರ ಹೆಂಡತಿ ವರಲಕ್ಷ್ಮಿಯವರಿಗೆ ಹೊಡೆದು ಗಾಯ ಪಡಿಸಿರುತ್ತಾರೆ. ಜಮೀನಿನ ರಸ್ತೆ ವಿಚಾರವಾಗಿ ಕೃತ್ಯ ಎಸಗಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ / ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೧-೨೦೦೭ ರಂದು ೧೧೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಅನಿಗಾನಹಳ್ಳಿ ಗ್ರಾಮದ ವಾಸಿ .ವೆಂಕಟಾಚಲಪತಿ ಎಂಬುವರ ಮೇಲೆ ಅದೇ ಗ್ರಾಮದ ವಾಸಿ .ಜಿ.ಶಿವಶಂಕರಪ್ಪ ಮತ್ತು ಹುದುಕುಳ ಗ್ರಾಮದ ವಾಸಿ ಸುಂದರ ಶರ್ಮ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿ ಪರಿಶಿಷ್ಟ ಜಾತಿ ರವರ ವಿರುದ್ಧ ದೌರ್ಜನ್ಯ ಎಸಗಿರುತ್ತಾರೆ. ಆರೋಪಿಗಳು .ವೆಂಕಟಾಚಲಪತಿ ರವರಿಗೆ ಸೇರಿದ ಸರ್ವೆ ನಂ. ೩೧ ರಲ್ಲಿ ಉದ್ದೇಶ ಪೂರ್ವಕವಾಗಿ ಅಕ್ರಮ ಪ್ರವೇಶ ಮಾಡಿ ಟ್ರಾಕ್ಟರ್ ಸಂಖ್ಯೆ ಕೆ.-೦೮-ಟಿ-೩೦೫೦ ರಲ್ಲಿ ಲೋಡ್ ಮಣ್ಣನ್ನು ಇಳಿಸಿ ನೆಲಸಮ ಮಾಡಿರುತ್ತಾರೆ ಇತ್ಯಾದಿ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  • ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೧೨-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ವೆಸ್ಟ್ ಬ್ಲಾಕ್ ಮಾರಿಕುಪ್ಪಂ ವಾಸಿ ಕುಮಾರಿ ಮಲರ್ ವೈ (೧೮) ಎಂಬುವರು ಮಲಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಅದೇ ಲೈನಿನ ವಾಸಿ ಮುಗಿಲೆನ್ @ ಗುಂಡು ಎಂಬುವರ ಮೇಲೆ ಗುಮಾನಿ ಇರುತ್ತದೆ. ಕಾಣೆಯಾದ ಹುಡಗಿ ಚಹರೆ ರೀತಿ ಇರುತ್ತದೆ. ಎತ್ತರ . ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಕಾಫಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ತಮಿಳು ಭಾಷೆ ಮಾತನಾಡುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೦ ನೇ ಡಿಸೆಂಬರ್ ೦೭

December 20, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೧೨-೨೦೦೭ ರಂದು ೦೯೦೦ ಗಂಟೆಯ ಸಮಯದಲ್ಲಿ ಬಂಗಾರಪೇಟೆ ವಿಜಯ ನಗರ ವಾಸಿ ಎಲ್.ತಿಮ್ಮಯ್ಯ (೬೫) ಎಂಬುವರು ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಹೊರಗಡೆಯ ತೊಟ್ಟಿಯಲ್ಲಿ (೩೫) ಅಪರಿಚಿತ ಗಂಡಸಿನ ಮೃತ ದೇಹ ಕಂಡು ಬಂದಿರುತ್ತದೆ. ಬಗ್ಗೆ ಪೊಲೀಸರು ಮುಂದಿನ ಕ್ರಮ ಕೈಗಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೯ ನೇ ಡಿಸೆಂಬರ್ ೦೭

December 19, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೧೨-೨೦೦೭ ರಂದು ೦೧೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ಅಮರಾವತಿ ಲೇಹೌಟ್ ವಾಸಿ ಶ್ರೀಧರ್ ಎಂಬುವರು ತಮ್ಮ ಮಾರುತಿ ಕಾರು ಸಂಖ್ಯೆ ಕೆ.-೦೧--೩೫೦೩ ಯಲ್ಲಿ ಬೆಂಗಳೂರಿನಿಂದ ಬಂಗಾರಪೇಟೆಗೆ ಬರುತ್ತಿದ್ದರು. ಆ ಸಮಯದಲ್ಲಿ ಹಿಂದೆಯಿಂದ ಬಂದ ಟೆಂಪೊ ಸಂಖ್ಯೆ ಕೆ.-೦೧-ವಿ-೦೩೩೨ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರಿಗೆ ಜಕ್ಕಂ ಆಗಿರುತ್ತದೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೧೨-೨೦೦೭ ರಂದು ೧೭೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕೊಮ್ಮೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಚಿನ್ನಕ್ಕ ಎಂಬುವರು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತಿದ್ದರು. ಆ ಸಮಯದಲ್ಲಿ ಹಿಂಬಾಗದಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆ.-೦೭-ಎಫ್-೭೬೫ ರ ಚಾಲಕ ಚಾಂದ್ ಪಾಷ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ಶ್ರೀಮತಿ ಚಿನ್ನಕ್ಕ ಎಂಬುವರಿಗೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೧೨-೨೦೦೭ ರಂದು ೦೮೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬಲಮಂದೇ ಗ್ರಾಮದ ವಾಸಿ ಶ್ರೀಮತಿ ಮಂಜಮ್ಮ (೨೩) ರವರ ಗಂಡನಾದ ಶ್ರೀನಿವಾಸಗೌಡ ರವರ ಜೊತೆಯಲ್ಲಿ ಹೊಲ ಕೊಯ್ಯಲು ಹೋಗಿರುತ್ತಾರೆ. ಶ್ರೀಮತಿ ಮಂಜಮ್ಮ ರವರಿಗೆ ಮೈ ಹುಷಾರಿಲ್ಲದೆ ಹೊಲದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆ ಸಮಯದಲ್ಲಿ ಮಂಜಮ್ಮನ ಗಂಡ ಮತ್ತು ಅತ್ತೆ ರವರು ದೊಣ್ಣೆಯಿಂದ ಹೊಡೆದು ರಕ್ತಗಾಯಪಡೆಸಿರುತ್ತಾರೆ. ಹೊಲ ಕೊಯ್ಯದೆ ವಿಶ್ರಾಂತಿ ಪಡೆಯುತ್ತಿದ್ದರಿಂದ ಈ ಕೃತ್ಯ ಸಂಭವಿಸಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ-

ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೮ ನೇ ಡಿಸೆಂಬರ್ ೦೭

December 18, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೧೨-೨೦೦೭ ರ ೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  • ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಭಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೩-೦೯-೨೦೦೭ ರಂದು ಬಂಗಾರಪೇಟೆ ತಾಲೂಕು ದೊಡ್ಡೂರುಕರಪನಹಳ್ಳಿಯ ವಾಸಿ ಶ್ರೀಮತಿ ವೆಂಕಟಲಕ್ಷ್ಮಮ್ಮ (೪೦) ಎಂಬುವರು ತಮ್ಮ ಗ್ರಾಮದ ಗಂಗಮ್ಮನ ದೇವಾಲಯದ ಬಳಿ ಮೃತಪಟ್ಟಿದ್ದು ಈ ಬಗ್ಗೆ ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ದಿನಾಂಕ ೧೭-೧೨-೨೦೦೭ ರಂದು ೧೭೪೫ ಗಂಟೆಗೆ ಮೃತಳ ಶವ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳಾದ ಶಿವಕುಮಾರ್ಸರ್ಕಾರಿ ಆಸ್ಪತ್ರೆ ಕೆ.ಜಿ.ಎಫ್ ರವರು ಮೃತಳನ್ನು ಉಸಿರು ಕಟ್ಟಿಸಿ ಸಾಯಿಸಿರಬಹುದಾಗಿ ತಮ್ಮ ವರದಿಯಲ್ಲಿ ತಿಳಿಸಿದ್ದು ಪ್ರಕರಣ ದಾಖಲಾಗಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದೇವೇರಹಳ್ಳಿ ಗ್ರಾಮದ ವಾಸಿ ಶ್ರೀಮತಿ ಶಾಂತಮ್ಮ (೨೫) ಎಂಬುವರು ತಮ್ಮ ಮೈಮೇಲೆ ತಾವೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾರೆ. ಇದರ ಪರಿಣಾಮ  ಸುಟ್ಟಗಾಯಗಲಾಗಿರುತ್ತದೆ. ದಿನಾಂಕ ೧೭-೧೨-೨೦೦೭ ರಂದು ೦೯೦೦ ಗಂಟೆಯ ಸಮಯದಲ್ಲಿ ಶಾಂತಮ್ಮ ಮತ್ತು ಆಕೆಯ ಗಂಡನ ನಡುವೆ ಜಗಳವಾಗಿದ್ದು ಈ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುತ್ತಾರೆ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಚಿಕ್ಕವಲಗಮಾದಿ ಗ್ರಾಮದ ವಾಸಿಗಲಾದ ವೆಂಕಟಲಕ್ಷ್ಮಮ್ಮ ಮತ್ತು ಗಿರೀಶ್ ಎಂಬುವರು ತಮ್ಮ  ವಾಹನ ಸಂಖ್ಯೆ ಕೆ.ಎ-೦೩-ಇ-೭೬೦೦ ಟಿ.ವಿ.ಎಸ್ ಎಕ್ಸ್‌ಎಲ್ ವಾಹನದಲ್ಲಿ ಕೆ.ಜಿ.ಎಫ್. ಬಂಗಾರಪೇಟೆ ರಸ್ತೆಯಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಹಿಂಬಾಗದಿಂದ ಬಂದ ಖಾಸಗಿ ಕೆ.ಆರ್.ಆರ್ ಬಸ್ ಸಂಖ್ಯೆ ಕೆ.ಎ-೦೮-೩೬೬೩  ರ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡ ವೆಂಕಟಲಕ್ಷ್ಮಮ್ಮ ರವರು ಸ್ಥಳದಲ್ಲಿ ಮೃತ ಪಟ್ಟಿದ್ದು ಗಿರೀಶ್ ರವರಿಗೆ ರಕ್ತ ಗಾಯಗಳುಂಟಾಗಿರುತ್ತದೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  • ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶ ಮತ್ತು ಸ್ವತ್ತು ಹಾನಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಭುವನಹಳ್ಳಿ ವಾಸಿ ಸಿ.ವೆಂಕಟೇಶಪ್ಪ ಎಂಬುವರ ಗರುಡಕೆಂಪನಹಳ್ಳಿ ಗ್ರಾಮದಲ್ಲಿರುವ ಜಮೀನಿನಲ್ಲಿ ಕೃತ್ಯ ನಡೆದಿರುತ್ತದೆ. ದಿನಾಂಕ ೧೭-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಗರುಡಕೆಂಪನಹಳ್ಳಿ ಗ್ರಾಮದ ವಾಸಿ ದೊಣ್ಣೆಪ್ಪ, ಮುನಿವೆಂಕಟಪ್ಪ ಮತ್ತು ಇತರರು ಸಿ.ವೆಂಕಟೇಶಪ್ಪನವರಿಗೆ ಸೇರಿದ ಗರುಡಕೆಂಪನಹಳ್ಳಿ ಗ್ರಾಮದ ಸರ್ವೆ ನಂ. ೩/ಪಿ೪ ರ ೩ ಎಕರೆ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿ ಬೆಳೆಸಿರುವ ೬,೦೦,೦೦೦/ ರೂ ಬಲೆ ಬಾಳುವ ನೀಲಗಿರಿ ಬರಗಳನ್ನು ಕಟಾವು ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೭ ನೇ ಡಿಸೆಂಬರ್ ೦೭

December 18, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೧೨-೨೦೦೭ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಸಾವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಹೆಚ್ಚಿನ ವರದಕ್ಷಿಣೆಗಾಗಿ ಒತ್ತಾಯಿಸಿ ಬಂಗಾರಪೇಟೆ ತಾಲೂಕು ಕಳ್ಳಿಕುಪ್ಪ ಗ್ರಾಮದ ವಾಸಿ ಸಂಧ್ಯಾರಾಣಿ ಎಂಬುವರನ್ನು ಅವರ ಗಂಡ ರಾಮಚಂದ್ರ ಮಾವ ವೆಂಕಟೇಶಪ್ಪ ಮತ್ತು ಅತ್ತೆ ಗಂಗಮ್ಮ ರವರುಗಳು ಸೇರಿಕೊಂಡು ಕೊಲೆಮಾಡಿ ಬಂಗಾರಪೇಟೆ ತಾಲೂಕು ನಾಗಶೆಟ್ಟಿಹಳ್ಳಿ ಗ್ರಾಮದ ಬಳಿ ನಾಗರಾಜ್ ಎಂಬುವರ ನೀರು ಬಾವಿಗೆ ಹಾಕಿರುತ್ತಾರೆ. ಈಗ್ಗೆ ತಿಂಗಳ ಹಿಂದೆ ಬಂಗಾರಪೇಟೆ ತಾಲೂಕು ಕಳ್ಳಿಕುಪ್ಪ ವಾಸಿ ರಾಮಚಂದ್ರ ಎಂಬುವರೊಂದಿಗೆ ವಿವಾಹವಾಗಿದ್ದು ಹಣ ಮತ್ತು ಒಡವೆಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಿರುತ್ತಾರೆ. ಮದುವೆಯ ನಂತರ ಆರೋಪಿಗಳು ಇನ್ನು ಹೆಚ್ಚಿನ ಹಣ ತರಲು ಪೀಡಿಸುತ್ತಿದ್ದು ಇದಕ್ಕೆ ಸಂಧ್ಯಾರಾಣಿ ರವರು ಒಪ್ಪದಿದ್ದಾಗ ಕೃತ್ಯ ಎಸಗಿರುತ್ತಾರೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೧೨-೨೦೦೭ ರಂದು ೦೯೫೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಪಿಚ್ಚಹಳ್ಳಿ ಗ್ರಾಮದ ವಾಸಿ ಪೃಥ್ವಿರಾಜ್ ಎಂಬುವರು ತಮ್ಮ ಗ್ರಾಮದ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಆ ಸಮಯದಲ್ಲಿ ಕೆ.ಜಿ.ಎಫ್. ಕಡೆಯಿಂದ ಬಂದ ಕೆ.ಎಸ್.ಆರ್‍.ಟಿ.ಸಿ ವಾಹನ ಸಂಖ್ಯೆ ಕೆಎ-೦೮-ಎಫ್-೮೧೯ ರ ಚಾಲಕ ಉದಯ್ ಕುಮಾರ್ ಎಂಬುವರು ತಮ್ಮ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾರೆ.  ಇದರ ಪರಿಣಾಮ ಪೃಥ್ವಿರಾಜ್ ರವರಿಗೆ ಗಾಯಗಳುಂಟಾಗಿರುತ್ತದೆ.  

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ದಿನಾಂಕ ೧೫-೧೨-೨೦೦೭ ರಂದು ೧೭೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕೊಮ್ಮೇನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಕೊಮ್ಮೇನಹಳ್ಳಿ ವಾಸಿ ಣ್ಣಯ್ಯ (೬೫) ಎಂಬುವರ ಮೇಲೆ ಅದೇ ಗ್ರಾಮದ ವೆಂಕಟಪ್ಪ ಎಂಬುವನು ಜಗಳ ತೆಗೆದು ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆರೋಪಿಯ ಹೆಂಡತಿ ಕೋಪ ಮಾಡಿಕೊಂಡು ತವರು ಮನೆಗೆ ಬಂದ ವಿಚಾರದಲ್ಲಿ ಕೃತ್ಯ ಸಂಭವಿಸಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.