ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ಬೆಳಿಗ್ಗೆ ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಹೋಬಳಿ ಭುವನಹಳ್ಳಿ ಗ್ರಾಮದ ವಾಸಿ ರವಿ ಮತ್ತು ಅವರ ಪತ್ನಿ ಶ್ರೀಮತಿ ಚಂದ್ರಮ್ಮ ಎಂಬುವರು ತಮ್ಮ ಮೋಟಾರು ಸೈಕಲ್ ಸಂಖ್ಯೆ ಎ.ಪಿ-೦೩-ಎಎ-೩೧೨೦ ವಾಹನದಲ್ಲಿ ಕೋಲಾರಕ್ಕೆ ಹೋಗಿದ್ದರು. ಸಂಜೆ ತಮ್ಮ ಗ್ರಾಮಕ್ಕೆ ವಾಪಸ್ಸು ಬರುತ್ತಿರುವಾಗ ಭುವನಹಳ್ಳಿ ಗ್ರಾಮದ ವಾಸಿಗಳಾದ ವೆಂಕಟೇಶ, ಪಾಂಡುರಂಗ, ಚಲಪತಿ, ಪಾಪಣ್ಣ, ಚಂದ್ರಶೇಖರ್ ಮತ್ತು ಇತರರು ಗುಂಪು ಕಟ್ಟಿಕೊಂಡು ಚಿಕ್ಕಕಳವಂಚಿ ಮತ್ತು ಭುವನಹಳ್ಳಿ ಗ್ರಾಮದ ಮದ್ಯೆ ರವಿ ಮತ್ತು ಅವರ ಪತ್ನಿ ರವರನ್ನು ಅಡ್ಡಕಟ್ಟಿ ಸಾಯಿಸಿರುತ್ತಾರೆ. ಸಾಕ್ಷಾದಾರಗಳು ಮರೆ ಮಾಚುವ ಉದ್ದೇಶದಿಂದ ಶವಗಳನ್ನು ಆಂದ್ರ ಪ್ರದೇಶದ ಗುಡಿಪಲ್ಲಿ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ಹಾಕಿರುತ್ತಾರೆ. ರೈಲುಗಳು ಬಂದು ಹೋಗಿ ಶವಗಳು ತುಂಡಾಗಿರುತ್ತವೆ. ಮನೆ ಮತ್ತು ಜಮೀನಿನ ವಿಚಾರದಲ್ಲಿ ತಕರಾರುಗಳು ಇದ್ದುದ್ದರಿಂದ ಈ ಕೃತ್ಯ ಎಸಗಿರುತ್ತಾರೆ. ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೯-೨೦೦೧ ರಂದು ಕೆ.ಜಿ.ಎಫ್ ಉರಿಗಾಂ ಪೇಟೆ ವಾಸಿ ಶಬನಾ ಖಾನಮ್ ಮತ್ತು ಬಂಗಾರಪೇಟೆ ಸೇಠ್ ಕಾಂಪೊಂಡ್ ವಾಸಿ ಸುಜಿತ್ ಅಲೀಖಾನ್ ರವರ ಜೊತೆ ಮೊದುವೆಯಾಗಿರುತ್ತಾರೆ. ಮದುವೆಯ ಸಮಯದಲ್ಲಿ ೫೦ ಸೌರನ್ ಬಂಗಾರ ಮತ್ತು ಇತರೆ ಸಾಮಾನುಗಳು ಒಟ್ಟು ರೂ ೧,೦೦,೦೦೦/ ಬೆಲೆ ಬಾಲುವುದನ್ನು ಕೊಟ್ಟಿದ್ದರು. ಇವರುಗಳಿಗೆ ಈಗ ಎರಡು ಮಕ್ಕಳಿರುತ್ತಾರೆ. ಆಕೆಯ ಗಣಡನಾದ ಸುಜಿತ್ ಅಲೀಖಾನ್ ಮತ್ತು ಅವರ ಸಹೋದರ ಮುಜೀದ್ ಆಲೀಖಾನ್ ರವರು ಸಲಾಂ ಬಿನ್ ಜಮೀರ್ ಸಾಬ್, ನವಚೇತನ ಶಾಲೆ ಹತ್ತಿರ, ಬಂಗಾರಪೇಟೆ ರವರ ಕುಮಕ್ಕಿನಿಂದ ಇನ್ನೂ ಹೆಚ್ಚಿಗೆ ವರದಕ್ಷಿಣೆ ತರುವಂತೆ ಶಬನಾ ಖಾನಮ್ ರವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುತ್ತಾರೆ ಇತ್ಯಾದಿ.
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೧೨-೨೦೦೭ ರಂದು ೧೦೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಉರಿಗಾಂ ಸೌಥ್ ಟ್ಯಾಂಕ್ ಬ್ಲಾಕ್ ಶ್ರೀಮತಿ ಶಾಂತಿ (೩೮) ಕೋಂ ಎಳಂಗೋವನ್ ಎವರು ಠಾಣೆ ಹಾಜರಾಗಿ ಒಂದು ದೂರನ್ನು ನೀಡಿರುತ್ತಾರೆ. ದೂರಿನಲ್ಲಿ ದಿನಾಂಕ ೨೯-೦೭-೨೦೦೭ ರಂದು ೦೯೩೦ ರಿಂದ ೧೦೩೦ ಗಂಟೆ ಸಮಯದಲ್ಲಿ ಶ್ರೀಮತಿ ಶಾಂತಿ ರವರ ಮಗಳಾದ ಕುಮಾರಿ ಕೀರ್ತಿ ರವರು ಮನೆ ಪಕ್ಕದ ತಿಪ್ಪೆಯಲ್ಲಿ ಮಲಮೂತ್ರವಿಸರ್ಜನೆ ಮಾಡಿದ ಸಲುವಾಗಿ ಪಕ್ಕದ ಮನೆ ವಾಸಿಗಳಾದ ದಶರಥನ್, ದಕ್ಷೀಣಮೂರ್ತಿ ಮತ್ತು ದಿನೇಶ್ ಎಂಬುವರುಗಳು ಸಮಾನ ಉದ್ದೇಶದಿಂದ ಶಾಂತಿರವರೊಂದಿಗೆ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಒಂದು ಚಾಕುವಿನಿಂದ ತಲೆಗೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಶ್ರೀಮತಿ ಶಾಂತಿಯವರಿಗೆ ಗಾಯಗಳಾದ ಪ್ರಯುಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ದೂರು ನೀಡುವುದಾಗಿ ಇತ್ಯಾದಿ.
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನೆಗೆ ಬೆಂಕಿ ಹಚ್ಚಿರುವ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಳವಾಯಿಹೊಸಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ (೫೦) ಬಿನ್ ಕಾಳಪ್ಪ ಎಂಬುವರಿಗೂ ತಮ್ಮ ಪಕ್ಕದ ಮನೆಯ ವಾಸಿ ವೆಂಕಟೇಶಪ್ಪ (೫೦) ಬಿನ್ ಮುನಿಯಪ್ಪ ರವರುಗಳಿಗೆ ಹಳೇ ವೈಷಮ್ಯದಿಂದ ಆಗಾಗ ಗಲಾಟೆಗಳು ನಡೆಯುತಿತ್ತು. ದಿನಾಂಕ ೨೯/೩೦-೧೨-೨೦೦೭ ರಂದು ೦೦೩೦ ಗಂಟೆ ಸಮಯದಲ್ಲಿ ವೆಂಕಟೇಶಪ್ಪ (೫೦) ಬಿನ್ ಕಾಳಪ್ಪ ಎಂಬುವರ ಮನೆಗೆ ವೆಂಕಟೇಶಪ್ಪ (೫೦) ಬಿನ್ ಮುನಿಯಪ್ಪ ಎಂಬುವರು ಬೆಂಕಿ ಹಚ್ಚಿರುತ್ತಾರೆ. ಮನೆಗೆ ಬೆಂಕಿ ಇಟ್ಟದ್ದರಿಂದ ಮನೆಯಲ್ಲಿದ್ದ ದವಸ ದಾನ್ಯ, ಬಟ್ಟೆ, ಹಣ ಮತ್ತು ಆಭರಣಗಳು ಸುಮಾರು ರೂ ೬೭೦೦೦/ ಗಳಷ್ಟು ನಷ್ಟವಾಗಿರುತ್ತದೆ. ಈ ಹಿಂದೆಯು ಸಹ ಈ ಕೃತ್ಯ ಎಸಗಿದ್ದು, ಈ ಬಗ್ಗೆ ಗ್ರಾಮದಲ್ಲಿ ಪಂಚಾಯ್ತಿ ಮಾಡಿಕೊಂಡಿರುತ್ತಾರೆ ಇತ್ಯಾದಿ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಬಳಿ ದೊಡ್ಡಗಾಂಡ್ಲಹಳ್ಳಿ ಗ್ರಾಮದ ವಾಸಿ ಶ್ರೀಮತಿ ಎಸ್. ಅರುಣ (೨೬) ಕೋಂ ಎ.ವೆಂಕಟೇಶ್ ಎಂಬುವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹೆಂಗಸಿನ ಚಹರೆ ಈ ರೀತಿ ಇರುತ್ತದೆ. ಎತ್ತರ ೫ ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಕಂದು ಬಣ್ಣದ ಸೀರೆ ಮತ್ತು ಜಾಕಿಟು ಧರಿಸಿರುತ್ತಾರೆ. ತೆಲಗು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


