ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಡಿಸೆಂಬರ್ ೦೭

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೪೪೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಆನಂದಗಿರಿ ಎಸ್..ಬಿ.ಎಸ್. ವಾಸಿ ಡಾ: ಎಜಕಿಯಲ್ ಶಾಂತಕುಮಾರ್ ಎಂಬುವರು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮನೆ ಮತ್ತು ಕಛೇರಿಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿರುತ್ತಾರೆ. ನಂತರ ದಿನಾಂಕ ೨೮-೧೨-೨೦೦೭ ರಂದು ೦೯೩೦ ಗಂಟೆ ಸಮಯಕ್ಕೆ ವಾಪಸ್ಸು ಬಂದು ನೋಡಿದ್ದು, ಯಾರೋ ಕಳ್ಳರು ಮನೆ ಮತ್ತು ಕಛೇರಿಯ ಬೀಗವನ್ನು ಕಿತ್ತು, ಒಳಗೆ ಹೋಗಿ ಡ್ರಾಯರ್ ನಲ್ಲಿದ್ದ ನಗದು ರೂ.೧೩,೧೪೦/ ಮತ್ತು ಕ್ರಿಸ್‌ಮಸ್ ಕೊಡುಗೆಗಳು ಬೆಲೆ ಸುಮಾರು ರೂ.,೫೦೦/ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ ೨೨-೧೨-೨೦೦೭ ರಿಂದ ೨೮-೧೨-೨೦೦೭ರ ಮದ್ಯೆ ಕೃತ್ಯ ನಡೆದಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ:

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೧೨-೨೦೦೭ ರಂದು ೨೧೩೦ ಗಂಟೆ ಸಮಯದಲ್ಲಿ ರಾಬರ್ಟ್‌ಸನ್ ಪೇಟೆ ಪಾರಂಡಹಳ್ಳಿ ವಾಸಿ ಶ್ರೀ ಶ್ರೀನಿವಾಸರೆಡ್ಡಿ (೩೨) ಎಂಬುವರು ತಮ್ಮ ತಂದೆ ರಾಬರ್ಟ್‌ಸನ್ ಪೇಟೆ ಪೊಟ್ಟೇಪಲ್ಲಿ ಗ್ರಾಮದ ವಾಸಿ ಮುನಿರೆಡ್ಡಿ ಮತ್ತು ಅವರ ದೊಡಪ್ಪನವರಾದ ಶ್ರೀರಾಮರೆಡ್ಡಿ, ಗೋವಿಂದರೆಡ್ಡಿ ಮತ್ತು ನರಸಿಂಹರೆಡ್ಡಿ ರವರ ಬಳಿ ಆಸ್ತಿ ಭಾಗ ಕೇಳಲು ಹೋಗಿದ್ದರು. ಸಮಯದಲ್ಲಿ ಶ್ರೀನಿವಾಸರೆಡ್ಡಿ ರವರ ತಂದೆ ಮತ್ತು ದೊಡ್ಡಪ್ಪ ರವರುಗಳು ಕೈಗಳಿಂದ ಹೊಡೆದು, ಕೆಟ್ಟ ಮಾತಿನಿಂದ ಬೈದು ಮತ್ತು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಕೃತ್ಯವು ಆಸ್ತಿ ವಿಚಾರದಲ್ಲಿ ಸಂಭವಿಸಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply