ರೂ.೨೦೦೦/ ಬೆಲೆಯ ಬೆಳೆಬಾಳುವ ಸೋನಿ ಎರಕ್ಸ್ನ ಮೊಬೈಲ್ ವಶ, ಒಬ್ಬನ ಬಂಧನ

  •   ದಿನಾಂಕ ೨೪-೧೨-೨೦೦೭ ರಂದು ೧೨೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಶಾಂತಿನಗರ ವಾಸಿ ವೆಂಕಟಸುಬ್ಬಯ್ಯ ಎಂಬುವರು ತಮ್ಮ ಮನೆಯ ಒಳಗಡಯ ಕಿಟಕಿಯಲ್ಲಿ ೨೦೦೦/ ರೂ ಬೆಳೆಬಾಳುವ ಸೋನಿ ಎರಕ್ಸ್ನ ಮೊಬೈಲ್ ಸಿಮ್ ಸಂಖ್ಯೆ ೯೮೮೦೪೯೭೬೮೨ ಅನ್ನು ಇಟ್ಟಿದ್ದರು. ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಮೊಬೈಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಠಾಣೆಯಲ್ಲಿ ದೂರು ನೀಡಿರುತ್ತಾರೆ. ಆ ಸಮುದಲ್ಲಿ ಪಿ.ಎಸ್.. ಅಪರಾಧ, ಬಂಗಾರಪೇಟೆ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಗಳಾದ ಮುಖ್ಯಪೇದೆ ೮೯ ಮುನಿಯಪ್ಪ ಮತ್ತು ಪೇದೆ ೫೬ ಶಿವಶಂಕರ ರೆಡ್ಡಿ ಎಂಬುವರುಗಳನ್ನು ಈ ಕೇಸಿನಲ್ಲಿ ಆರೋಪಿ ಹಾಗೂ ಮಾಲನ್ನು ಪತ್ತೆಮಾಡಲು ನೇಮಿಸಲಾಗಿತ್ತು. ಸದರಿ ಸಿಬ್ಬಂದಿಯವರು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದ ಸಮಯದಲ್ಲಿ ಆಂದ್ರಪ್ರದೇಶ ರಾಜ್ಯದ ವಿ.ಕೋಟೆ ವಾಸಿ ಮುರುಗನ್ (೩೫) ಎಂಬುವರು ಸೋನಿ ಎರಕ್ಸ್ನ ಮೊಬೈಲ್ ಅನ್ನು ರೂ. ೫೦೦/ ಗೆ ಮಾರುತ್ತಿದ್ದವರನ್ನು ಮಾಲಿನ ಸಮೇತ ದಸ್ತಗಿರಿಮಾಡಿ ಠಾಣೆಗೆ ಕರೆತಂದಿರುತ್ತಾರೆ. ವಿಚಾರಣೆಯ ಸಮಯದಲ್ಲಿ ಆರೋಪಿಯು ಸೋನಿ ಎರಕ್ಸ್ನ ಮೊಬೈಲ್ ಅನ್ನು ವೆಂಕಟಸುಬ್ಬಯ್ಯ ಎಂಬುವರ ಮನೆಯಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.

Leave a Reply