ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
-
ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೮೧೫ ಗಂಟೆ ಸಮಯದಲ್ಲಿ ಪಿ.ಶೇಖರ್ ಪಿ.ಎಸ್.ಐ ರೈಲ್ವೆ ಪೊಲೀಸ್ ಠಾಣೆ ಬಂಗಾರಪೇಟೆ ರವರು ಠಾಣೆಗೆ ಹಾಜರಾಗಿ ದಿನಾಂಕ ೨೪-೧೨-೨೦೦೭ ರಂದು ಉರಿಗಾಂ – ಚಾಂಪಿಯನ್ ಮದ್ಯೆ ನಂ. ೧೩/೧೦೦ ರ ಬಳಿ ರೈಲು ಹಳಿಗಳ ಮೇಲೆ ಒಬ್ಬ ಗಂಡಸಿನ ಮೃತ ದೇಹ ಕಂಡು ಬಂದಿರುತ್ತದೆ ಎಂದು ತಿಳಿಸಿರುತ್ತಾರೆ. ಮೃತನನ್ನು ಯಾರೋ ದುಷ್ಕರ್ಮಿಗಳು ಆರ್.ಎ.ಟಿ.ಎ ಬ್ಲಾಕ್ ಕೆ.ಜಿ.ಎಫ್. ನಲ್ಲಿ ಕೊಲೆ ಮಾಡಿ ಸಾಕ್ಷಾಧಾರಗಳನ್ನು ಮರೆ ಮಾಚುವ ಉದ್ದೇಶದಿಂದ ರೈಲ್ವೆ ಹಳಿಗಳ ಮೇಲೆ ತಂದು ಹಾಕಿರುತ್ತಾರೆ. ರೈಲು ಹರಿದು ಕೈಗಳು ಮತ್ತು ತಲೆ ತುಂಡಾಗಿರುತ್ತದೆ ಇತ್ಯಾದಿ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೨೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಶಾಂತಿನಗರ ವಾಸಿ ವೆಂಕಟಸುಬ್ಬಯ್ಯ ಎಂಬುವರು ತಮ್ಮ ಮನೆಯ ಒಳಗಡೆಯ ಕಿಟಕಿಯಲ್ಲಿ ೨೦೦೦/ ರೂ ಬೆಳೆಬಾಳುವ ಸೋನಿ ಎರಕ್ಸ್ನ ಮೊಬೈಲ್ ಸಿಮ್ ಸಂಖ್ಯೆ ೯೮೮೦೪೯೭೬೮೨ ಅನ್ನು ಇಟ್ಟಿದ್ದರು. ಆ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಮೊಬೈಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೦೯೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ಸೇಠ್ ಕಾಂಪೌಂಡ್ ವಾಸಿ ಮೊಹ್ಮದ್ ರಿಯಾಜ್ ಅಹ್ಮದ್ (೪೪) ಎಂಬುವರು ಮುಸ್ತಾಕ್ ಅಹ್ಮದ್ ರವರನ್ನು ಹಿಂದೆ ಕುಳ್ಳರಿಸಿಕೊಂಡು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಸಂಜಯ್ ಗಾಂದಿ ನಗರದ ಹತ್ತಿರ ಹಿರೋ ಹೋಂಡಾ ಮೋಟಾರ್ ಸೈಕಲ್ ವಾಹನ ಸಂಖ್ಯೆ ಕೆ.ಎ.-೦೮-ಹೆಚ್-೫೩೭ ನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂದೆಯಿಂದ ಬಂದ ಹಿರೋ ಹೋಂಡಾ ಮೋಟಾರ್ ಸೈಕಲ್ ವಾಹನ ಸಂಖ್ಯೆ ಕೆ.ಎ-೦೮-ಹೆಚ್-೯೯೦೧ ನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊಹ್ಮದ್ ರಿಯಾಜ್ ಅಹ್ಮದ್ ಎಂಬುವರ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದಿರುತ್ತಾರೆ. ಇದರ ಪ್ರಯುಕ್ತ ಮೊಹ್ಮದ್ ರಿಯಾಜ್ ಅಹ್ಮದ್ ಮತ್ತು ಮುಸ್ತಾಕ್ ಅಹ್ಮದ್ ಎಂಬುವರುಗಳಿಗೆ ರಕ್ತಗಾಯಗಳಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೧೨-೨೦೦೭ ರಂದು ೧೫೫೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌ಸನ್ ಪೇಟೆ ವಾಸಿ ಕುಮಾರಿ ನಿತ್ಯಹರ್ಷಿಣಿ (೧೮) ಬಿನ್ ಮುಗಿಮೈದಾಸ್ ಎಂಬುವರು ಮಸ್ಕಂನಲ್ಲಿರುವ ಥಾಮಸ್ ಚರ್ಚ್‌ಗೆ ಸೇರಿದ ಎನ್.ಐ.ಐ.ಟಿ ಕಂಪ್ಯೂಟರ್ ಸೆಂಟರ್ ಗೆ ಹೋದವರು ಇದುವರೆವಿಗೂ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹುಡಗಿ ಚಹರೆ ಈ ರೀತಿ ಇರುತ್ತದೆ. ಎತ್ತರ ೫ ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಕಪ್ಪು ಮಿಶ್ರೀತ ಕಂದು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ತಮಿಳು, ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


