ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೧೨-೨೦೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಭಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೩-೦೯-೨೦೦೭ ರಂದು ಬಂಗಾರಪೇಟೆ ತಾಲೂಕು ದೊಡ್ಡೂರುಕರಪನಹಳ್ಳಿಯ ವಾಸಿ ಶ್ರೀಮತಿ ವೆಂಕಟಲಕ್ಷ್ಮಮ್ಮ (೪೦) ಎಂಬುವರು ತಮ್ಮ ಗ್ರಾಮದ ಗಂಗಮ್ಮನ ದೇವಾಲಯದ ಬಳಿ ಮೃತಪಟ್ಟಿದ್ದು ಈ ಬಗ್ಗೆ ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ದಿನಾಂಕ ೧೭-೧೨-೨೦೦೭ ರಂದು ೧೭೪೫ ಗಂಟೆಗೆ ಮೃತಳ ಶವ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳಾದ ಶಿವಕುಮಾರ್ ಸರ್ಕಾರಿ ಆಸ್ಪತ್ರೆ ಕೆ.ಜಿ.ಎಫ್ ರವರು ಮೃತಳನ್ನು ಉಸಿರು ಕಟ್ಟಿಸಿ ಸಾಯಿಸಿರಬಹುದಾಗಿ ತಮ್ಮ ವರದಿಯಲ್ಲಿ ತಿಳಿಸಿದ್ದು ಪ್ರಕರಣ ದಾಖಲಾಗಿರುತ್ತದೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದೇವೇರಹಳ್ಳಿ ಗ್ರಾಮದ ವಾಸಿ ಶ್ರೀಮತಿ ಶಾಂತಮ್ಮ (೨೫) ಎಂಬುವರು ತಮ್ಮ ಮೈಮೇಲೆ ತಾವೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾರೆ. ಇದರ ಪರಿಣಾಮ ಸುಟ್ಟಗಾಯಗಲಾಗಿರುತ್ತದೆ. ದಿನಾಂಕ ೧೭-೧೨-೨೦೦೭ ರಂದು ೦೯೦೦ ಗಂಟೆಯ ಸಮಯದಲ್ಲಿ ಶಾಂತಮ್ಮ ಮತ್ತು ಆಕೆಯ ಗಂಡನ ನಡುವೆ ಜಗಳವಾಗಿದ್ದು ಈ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುತ್ತಾರೆ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಚಿಕ್ಕವಲಗಮಾದಿ ಗ್ರಾಮದ ವಾಸಿಗಲಾದ ವೆಂಕಟಲಕ್ಷ್ಮಮ್ಮ ಮತ್ತು ಗಿರೀಶ್ ಎಂಬುವರು ತಮ್ಮ ವಾಹನ ಸಂಖ್ಯೆ ಕೆ.ಎ-೦೩-ಇ-೭೬೦೦ ಟಿ.ವಿ.ಎಸ್ ಎಕ್ಸ್‌ಎಲ್ ವಾಹನದಲ್ಲಿ ಕೆ.ಜಿ.ಎಫ್. ಬಂಗಾರಪೇಟೆ ರಸ್ತೆಯಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಹಿಂಬಾಗದಿಂದ ಬಂದ ಖಾಸಗಿ ಕೆ.ಆರ್.ಆರ್ ಬಸ್ ಸಂಖ್ಯೆ ಕೆ.ಎ-೦೮-೩೬೬೩ ರ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡ ವೆಂಕಟಲಕ್ಷ್ಮಮ್ಮ ರವರು ಸ್ಥಳದಲ್ಲಿ ಮೃತ ಪಟ್ಟಿದ್ದು ಗಿರೀಶ್ ರವರಿಗೆ ರಕ್ತ ಗಾಯಗಳುಂಟಾಗಿರುತ್ತದೆ.
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶ ಮತ್ತು ಸ್ವತ್ತು ಹಾನಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಭುವನಹಳ್ಳಿ ವಾಸಿ ಸಿ.ವೆಂಕಟೇಶಪ್ಪ ಎಂಬುವರ ಗರುಡಕೆಂಪನಹಳ್ಳಿ ಗ್ರಾಮದಲ್ಲಿರುವ ಜಮೀನಿನಲ್ಲಿ ಕೃತ್ಯ ನಡೆದಿರುತ್ತದೆ. ದಿನಾಂಕ ೧೭-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಗರುಡಕೆಂಪನಹಳ್ಳಿ ಗ್ರಾಮದ ವಾಸಿ ದೊಣ್ಣೆಪ್ಪ, ಮುನಿವೆಂಕಟಪ್ಪ ಮತ್ತು ಇತರರು ಸಿ.ವೆಂಕಟೇಶಪ್ಪನವರಿಗೆ ಸೇರಿದ ಗರುಡಕೆಂಪನಹಳ್ಳಿ ಗ್ರಾಮದ ಸರ್ವೆ ನಂ. ೩/ಪಿ೪ ರ ೩ ಎಕರೆ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿ ಬೆಳೆಸಿರುವ ೬,೦೦,೦೦೦/ ರೂ ಬಲೆ ಬಾಳುವ ನೀಲಗಿರಿ ಬರಗಳನ್ನು ಕಟಾವು ಮಾಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


