ದಿನದ ಅಪರಾಧಗಳ ಪಕ್ಷಿನೋಟ ೩೧ ನೇ ಡಿಸೆಂಬರ್ ೦೭

December 31, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ಬೆಳಿಗ್ಗೆ ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಹೋಬಳಿ ಭುವನಹಳ್ಳಿ ಗ್ರಾಮದ ವಾಸಿ ರವಿ ಮತ್ತು ಅವರ ಪತ್ನಿ ಶ್ರೀಮತಿ ಚಂದ್ರಮ್ಮ ಎಂಬುವರು ತಮ್ಮ ಮೋಟಾರು ಸೈಕಲ್ ಸಂಖ್ಯೆ ಎ.ಪಿ-೦೩-ಎಎ-೩೧೨೦ ವಾಹನದಲ್ಲಿ ಕೋಲಾರಕ್ಕೆ ಹೋಗಿದ್ದರು. ಸಂಜೆ ತಮ್ಮ ಗ್ರಾಮಕ್ಕೆ ವಾಪಸ್ಸು ಬರುತ್ತಿರುವಾಗ ಭುವನಹಳ್ಳಿ ಗ್ರಾಮದ ವಾಸಿಗಳಾದ ವೆಂಕಟೇಶ, ಪಾಂಡುರಂಗ, ಚಲಪತಿ, ಪಾಪಣ್ಣ, ಚಂದ್ರಶೇಖರ್ ಮತ್ತು ಇತರರು ಗುಂಪು ಕಟ್ಟಿಕೊಂಡು ಚಿಕ್ಕಕಳವಂಚಿ ಮತ್ತು ಭುವನಹಳ್ಳಿ ಗ್ರಾಮದ ಮದ್ಯೆ ರವಿ ಮತ್ತು ಅವರ ಪತ್ನಿ ರವರನ್ನು ಅಡ್ಡಕಟ್ಟಿ ಸಾಯಿಸಿರುತ್ತಾರೆ. ಸಾಕ್ಷಾದಾರಗಳು ಮರೆ ಮಾಚುವ ಉದ್ದೇಶದಿಂದ ಶವಗಳನ್ನು ಆಂದ್ರ ಪ್ರದೇಶದ ಗುಡಿಪಲ್ಲಿ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ಹಾಕಿರುತ್ತಾರೆ. ರೈಲುಗಳು ಬಂದು ಹೋಗಿ ಶವಗಳು ತುಂಡಾಗಿರುತ್ತವೆ. ಮನೆ ಮತ್ತು ಜಮೀನಿನ ವಿಚಾರದಲ್ಲಿ ತಕರಾರುಗಳು ಇದ್ದುದ್ದರಿಂದ ಈ ಕೃತ್ಯ ಎಸಗಿರುತ್ತಾರೆ. ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೯-೨೦೦೧ ರಂದು ಕೆ.ಜಿ.ಎಫ್ ಉರಿಗಾಂ ಪೇಟೆ ವಾಸಿ ಶಬನಾ ಖಾನಮ್ ಮತ್ತು ಬಂಗಾರಪೇಟೆ ಸೇಠ್ ಕಾಂಪೊಂಡ್ ವಾಸಿ ಸುಜಿತ್ ಅಲೀಖಾನ್ ರವರ ಜೊತೆ ಮೊದುವೆಯಾಗಿರುತ್ತಾರೆ. ಮದುವೆಯ ಸಮಯದಲ್ಲಿ ೫೦ ಸೌರನ್ ಬಂಗಾರ ಮತ್ತು ಇತರೆ ಸಾಮಾನುಗಳು ಒಟ್ಟು ರೂ ೧,೦೦,೦೦೦/ ಬೆಲೆ ಬಾಲುವುದನ್ನು ಕೊಟ್ಟಿದ್ದರು. ಇವರುಗಳಿಗೆ ಈಗ ಎರಡು ಮಕ್ಕಳಿರುತ್ತಾರೆ. ಆಕೆಯ ಗಣಡನಾದ ಸುಜಿತ್ ಅಲೀಖಾನ್ ಮತ್ತು ಅವರ ಸಹೋದರ ಮುಜೀದ್ ಆಲೀಖಾನ್ ರವರು ಸಲಾಂ ಬಿನ್ ಜಮೀರ್ ಸಾಬ್, ನವಚೇತನ ಶಾಲೆ ಹತ್ತಿರ, ಬಂಗಾರಪೇಟೆ ರವರ ಕುಮಕ್ಕಿನಿಂದ ಇನ್ನೂ ಹೆಚ್ಚಿಗೆ ವರದಕ್ಷಿಣೆ ತರುವಂತೆ ಶಬನಾ ಖಾನಮ್ ರವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುತ್ತಾರೆ ಇತ್ಯಾದಿ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೧೨-೨೦೦೭ ರಂದು ೧೦೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಉರಿಗಾಂ ಸೌಥ್ ಟ್ಯಾಂಕ್ ಬ್ಲಾಕ್ ಶ್ರೀಮತಿ ಶಾಂತಿ (೩೮) ಕೋಂ ಎಳಂಗೋವನ್ ಎವರು ಠಾಣೆ ಹಾಜರಾಗಿ ಒಂದು ದೂರನ್ನು ನೀಡಿರುತ್ತಾರೆ. ದೂರಿನಲ್ಲಿ ದಿನಾಂಕ ೨೯-೦೭-೨೦೦೭ ರಂದು ೦೯೩೦ ರಿಂದ ೧೦೩೦ ಗಂಟೆ ಸಮಯದಲ್ಲಿ ಶ್ರೀಮತಿ ಶಾಂತಿ ರವರ ಮಗಳಾದ ಕುಮಾರಿ ಕೀರ್ತಿ ರವರು ಮನೆ ಪಕ್ಕದ ತಿಪ್ಪೆಯಲ್ಲಿ ಮಲಮೂತ್ರವಿಸರ್ಜನೆ ಮಾಡಿದ ಸಲುವಾಗಿ ಪಕ್ಕದ ಮನೆ ವಾಸಿಗಳಾದ ದಶರಥನ್, ದಕ್ಷೀಣಮೂರ್ತಿ ಮತ್ತು ದಿನೇಶ್ ಎಂಬುವರುಗಳು ಸಮಾನ ಉದ್ದೇಶದಿಂದ ಶಾಂತಿರವರೊಂದಿಗೆ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಒಂದು ಚಾಕುವಿನಿಂದ ತಲೆಗೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಶ್ರೀಮತಿ ಶಾಂತಿಯವರಿಗೆ ಗಾಯಗಳಾದ ಪ್ರಯುಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ದೂರು ನೀಡುವುದಾಗಿ ಇತ್ಯಾದಿ.

ಇತರೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನೆಗೆ ಬೆಂಕಿ ಹಚ್ಚಿರುವ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ದಳವಾಯಿಹೊಸಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ (೫೦) ಬಿನ್ ಕಾಳಪ್ಪ ಎಂಬುವರಿಗೂ ತಮ್ಮ ಪಕ್ಕದ ಮನೆಯ ವಾಸಿ ವೆಂಕಟೇಶಪ್ಪ (೫೦) ಬಿನ್ ಮುನಿಯಪ್ಪ ರವರುಗಳಿಗೆ ಹಳೇ ವೈಷಮ್ಯದಿಂದ ಆಗಾಗ ಗಲಾಟೆಗಳು ನಡೆಯುತಿತ್ತು. ದಿನಾಂಕ ೨೯/೩೦-೧೨-೨೦೦೭ ರಂದು ೦೦೩೦ ಗಂಟೆ ಸಮಯದಲ್ಲಿ ವೆಂಕಟೇಶಪ್ಪ (೫೦) ಬಿನ್ ಕಾಳಪ್ಪ ಎಂಬುವರ ಮನೆಗೆ ವೆಂಕಟೇಶಪ್ಪ (೫೦) ಬಿನ್ ಮುನಿಯಪ್ಪ ಎಂಬುವರು ಬೆಂಕಿ ಹಚ್ಚಿರುತ್ತಾರೆ. ಮನೆಗೆ ಬೆಂಕಿ ಇಟ್ಟದ್ದರಿಂದ ಮನೆಯಲ್ಲಿದ್ದ ದವಸ ದಾನ್ಯ, ಬಟ್ಟೆ, ಹಣ ಮತ್ತು ಆಭರಣಗಳು ಸುಮಾರು ರೂ ೬೭೦೦೦/ ಗಳಷ್ಟು ನಷ್ಟವಾಗಿರುತ್ತದೆ. ಈ ಹಿಂದೆಯು ಸಹ ಈ ಕೃತ್ಯ ಎಸಗಿದ್ದು, ಈ ಬಗ್ಗೆ ಗ್ರಾಮದಲ್ಲಿ ಪಂಚಾಯ್ತಿ ಮಾಡಿಕೊಂಡಿರುತ್ತಾರೆ ಇತ್ಯಾದಿ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಬಳಿ ದೊಡ್ಡಗಾಂಡ್ಲಹಳ್ಳಿ ಗ್ರಾಮದ ವಾಸಿ ಶ್ರೀಮತಿ ಎಸ್. ಅರುಣ (೨೬) ಕೋಂ ಎ.ವೆಂಕಟೇಶ್ ಎಂಬುವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹೆಂಗಸಿನ ಚಹರೆ ಈ ರೀತಿ ಇರುತ್ತದೆ. ಎತ್ತರ ೫ ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಕಂದು ಬಣ್ಣದ ಸೀರೆ ಮತ್ತು ಜಾಕಿಟು ಧರಿಸಿರುತ್ತಾರೆ. ತೆಲಗು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಡಿಸೆಂಬರ್ ೦೭

December 30, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೪೪೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಆನಂದಗಿರಿ ಎಸ್..ಬಿ.ಎಸ್. ವಾಸಿ ಡಾ: ಎಜಕಿಯಲ್ ಶಾಂತಕುಮಾರ್ ಎಂಬುವರು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮನೆ ಮತ್ತು ಕಛೇರಿಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿರುತ್ತಾರೆ. ನಂತರ ದಿನಾಂಕ ೨೮-೧೨-೨೦೦೭ ರಂದು ೦೯೩೦ ಗಂಟೆ ಸಮಯಕ್ಕೆ ವಾಪಸ್ಸು ಬಂದು ನೋಡಿದ್ದು, ಯಾರೋ ಕಳ್ಳರು ಮನೆ ಮತ್ತು ಕಛೇರಿಯ ಬೀಗವನ್ನು ಕಿತ್ತು, ಒಳಗೆ ಹೋಗಿ ಡ್ರಾಯರ್ ನಲ್ಲಿದ್ದ ನಗದು ರೂ.೧೩,೧೪೦/ ಮತ್ತು ಕ್ರಿಸ್‌ಮಸ್ ಕೊಡುಗೆಗಳು ಬೆಲೆ ಸುಮಾರು ರೂ.,೫೦೦/ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ ೨೨-೧೨-೨೦೦೭ ರಿಂದ ೨೮-೧೨-೨೦೦೭ರ ಮದ್ಯೆ ಕೃತ್ಯ ನಡೆದಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ:

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೧೨-೨೦೦೭ ರಂದು ೨೧೩೦ ಗಂಟೆ ಸಮಯದಲ್ಲಿ ರಾಬರ್ಟ್‌ಸನ್ ಪೇಟೆ ಪಾರಂಡಹಳ್ಳಿ ವಾಸಿ ಶ್ರೀ ಶ್ರೀನಿವಾಸರೆಡ್ಡಿ (೩೨) ಎಂಬುವರು ತಮ್ಮ ತಂದೆ ರಾಬರ್ಟ್‌ಸನ್ ಪೇಟೆ ಪೊಟ್ಟೇಪಲ್ಲಿ ಗ್ರಾಮದ ವಾಸಿ ಮುನಿರೆಡ್ಡಿ ಮತ್ತು ಅವರ ದೊಡಪ್ಪನವರಾದ ಶ್ರೀರಾಮರೆಡ್ಡಿ, ಗೋವಿಂದರೆಡ್ಡಿ ಮತ್ತು ನರಸಿಂಹರೆಡ್ಡಿ ರವರ ಬಳಿ ಆಸ್ತಿ ಭಾಗ ಕೇಳಲು ಹೋಗಿದ್ದರು. ಸಮಯದಲ್ಲಿ ಶ್ರೀನಿವಾಸರೆಡ್ಡಿ ರವರ ತಂದೆ ಮತ್ತು ದೊಡ್ಡಪ್ಪ ರವರುಗಳು ಕೈಗಳಿಂದ ಹೊಡೆದು, ಕೆಟ್ಟ ಮಾತಿನಿಂದ ಬೈದು ಮತ್ತು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಕೃತ್ಯವು ಆಸ್ತಿ ವಿಚಾರದಲ್ಲಿ ಸಂಭವಿಸಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಕೆ.ಜಿ.ಎಫ್. ಪೊಲೀಸ್ ಜಿಲ್ಲಾಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ ೨೦೦೭

December 29, 2007

 ಕೆ.ಜಿ.ಎಫ್ ಪೊಲೀಸ್ ಜಿಲ್ಲಾಯ ೨೦೦೭ ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿ..ಆರ್‍  ಕೆ.ಜಿ.ಎಫ್. ನಲ್ಲಿ ದಿನಾಂಕ ೨೬-೧೨-೨೦೦೭ ಮತ್ತು ೨೭-೧೨-೨೦೦೭ ರಂದು ನಡೆದಿರುತ್ತದೆ. ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಜಿ.ರಾಮಚಂದ್ರ ..ಎಸ್ ರವರು ದಿನಾಂಕ ೨೬-೧೨-೨೦೦೭ ರಂದು ಕ್ರೀಡಾಕೂಟವನ್ನು ಉದ್ಘಾಟಿಸಿರುತ್ತಾರೆ. ಎರಡು ದಿನಗಳ ಕ್ರೀಡಾಕೂಟದಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯ ಕ್ರೀಡಾಪಟುಗಳಿಗೆ, ಪೊಲೀಸ್ ಅಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ಆಟೋಟ, ಬ್ಯಾಡ್ಮಿಟನ್, ಶೂಟಿಂಗ್, ವಾಲಿಬಾಲ್ ಇತ್ಯಾದಿ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು. ಪೊಲೀಸ್ ಅಧಿಕಾರಿಗಳಿಗೂ ಮತ್ತು ಪತ್ರಕರ್ತರ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗಿದ್ದು ಪಂದ್ಯಾವಳಿಯಲ್ಲಿ ಪೊಲೀಸ್ ತಂಡ ವಿಜಯಿಯಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆದಿದ್ದು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಶ್ರೀ ಟಿ.ಜಿ.ದೊರೆಸ್ವಾಮಿ ನಾಯಕ್, .ಪಿ.ಎಸ್., ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್, ಕೇಂದ್ರ ವಲಯ, ಬೆಂಗಳೂರು ರವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿರುತ್ತಾರೆ. ವಿಜೇತರ ವಿವರ ಕೆಳಕಂಡತೆ ಇರುತ್ತದೆ.

Sl No

List of Games

Name and designation of prize winners & Name of the Sub division

1 100 Mtrs. Run for Men I. APC 190 K.K.Mugendra, DAR, KGFII. APC 96 Mohan Kumar, DAR, KGF

II. CPC 44 Prabhakar, Bangarpet Circle.

2 200 Mtrs. Run for Men I. APC 96 Mohan Kumar, DAR, KGFII. CPC 76 Joseph Dinesh Champion Circle

III. CPC 44 Prabhakar, Bangarpet Circle.

3 400 Mtrs. Run for Men I. . APC 190 K.K.Mugendra, DAR, KGFII. APC 96 Mohan Kumar, DAR, KGF

III. CPC 76 Joseph Dinesh Champion Circle

4 1500 Mtrs. Run for Men I. APC 96 Mohan Kumar, DAR, KGFII. APC 189 Manjunatha, DAR, KGF

III. CPC 289 Jagadish, Champion Circle.

5 5000 Mtrs. Run for Men I. APC 189 Manjunatha, DAR, KGFII. APC 96 Mohan Kumar, DAR, KGF

III. CPC 289 Jagadish, Champion Circle.

6 4 X 100 Mtrs. Pelay I. Cahmpion Reefs CircleII. Robertsonpet Circle.
7 Shot Put for men I. APC 63 K.Rajendra, DAR, KGFII.CPC 184 Shankarachari, Robertsonpet Circle.

III. CHC 130 E.Lakshman, Bangarpet Circle.

8 Shot Put for Women I. WPC 95 Amudha Malar, Oorgaum CircleII.WPC 330 Vanitha Bangarpet Circle.

III. WPC 304 C.V.Prathima, Champion Circle.

9 Discuss throw for men I. CHC 130 E.Lakshman, Bangarpet CircleII. APC 63 K.Rajendra, DAR, KGF.

III. APC 09 V.Chalapathi, DAR, KGF

10 Javalin Throw for men I. CHC 18 D.Selvaraj, Robertsonpet CircleII. APC 09 V.Chalapathi, DAR, KGF

III. CPC 288 K.L.Gajendra, Champion Circle

11 High Jump for men I. CPC 288 K.L.Gajendra, Champion CircleII. CPC 76 Joseph Dinesh Champion Circle

III. CPC 44 Prabhakar, Bangarpet Circle

12 Long Jump for men I. CPC 76 Joseph Dinesh Champion CircleII. CPC 44 Prabhakar, Bangarpet Circle

III. CPC 288 K.L.Gajendra, Champion Circle

13 Long Jump for women I. WPC 210 Manjula, Robertsonpet CircleII. WPC 95 Amudha Malar, Oorgaum Circle

III.WPC 319 Bharathamma, Robertsonpet Circle

14 Tug-of-war Winner D.A.R., K.G.F.Runner Oorgaum Circle.
15 Hammer Throw for men I. APC 63 K.Rajendra, DAR, KGFII.CHC 15 Ananda, Champion Circle.

III. CHC 130 E.Lakshman, Bangarpet Circle.

16 Volley Ball Winner Bangarpet CircleRunner D.A.R., K.G.F..
17 Revolver Shooting for Gazetted officers I M.V.Seshan,Deputy Supdt. of Police, K.G.F.
18 Revolver Shooting for Police Inspectors I. A.G.Kariappa, CPI BangarpetII. V.L.Ramesh, P.I., DCRB, KGF

III. Lakshmaiah, P.I., DCIB, KGF.

19 Rifle Shooting for Police Inspectors I. V.L.Ramesh, P.I., DCRB, KGFII. Lakshmaiah, P.I., DCIB, KGFIII. A.G.Kariappa, CPI Bangarpet
20 Rifle Shooting for Gazetted officers I M.V.Seshan,Deputy Supdt. of Police, K.G.F.
21 Revolver Shooting for Police Sub-Inspectors I. Mustaqpasha, PSI (L&O), Oorgaum PSII. Ramappa, PSI (Crime), Oorgaum PS

III. R.Raghuramareddy, PSI Bethamangala PS.

Spl. Prize K.Prathap Singh, ARSI, DAR, KGF

22 Rifle Shooting for Police Sub-Inspectors I. Anjappa, PSI BEML Nagar PSII. Ramappa, PSI (Crime), Oorgaum PS

III. Mustaqpasha, PSI (L&O), Oorgaum PS.

Spl. Prize K.Prathap Singh, ARSI, DAR, KGF

23 Rifle Shooting for men I. APC 63 K.Rajendra, DAR, KGFII.APC 172 Srinivasamurthy, DAR, KGF

III. CHC 29 Ameer, Bangarpet Circle.

24 Rifle Shooting for Women I. WPC 326 Iqubal Sulthana, Champion CircleII.WPC 319 Bharathamma, Robertsonpet Circle

III.WPC 314 Padmavathamma, Bangarpet Circle

25 Rifle Shooting for Drivers I. APC 193 Kadarvali, DAR, KGFII.APC 150 Rajesh, DAR, KGF

III. APC 81 Somashekar, DAR, KGF.

26 Shot Put for D.P.O., Ministerial Staff I. G.T.Marutesh, Section Supdt., DPO, KGFII. V.Girish, FDA, DPO, KGF

III. Javeed Imam, SDR, DPO, KGF.

27 50 Mtrs. Brist walk for D.P.O., Ministerial Staff I. V.Girish, FDA, DPO, KGFII. K.J.Gopal, FDA, DPO, KGF

III. Dyavegowda, Section Supdt. DPO, KGF.

28 100 Mtrs. Run for D.P.O., Ministerial Staff I. Javeed Imam, SDR, DPO, KGFII. V.Girish, FDA, DPO, KGF

III. K.J.Gopal, FDA, DPO, KGF.

29 100 Mtrs. Run for Wireless Staff I. Shivananda, PC (W) KGFII. M.Saravana, PC (W), KGF

III. Narasimhaiah, ASI(W) KGF.

30 Shuttle cock (singles) I. Puttamadaiah, CPI Robertsonpet Circle.II. A.G.Kariyappa, CPI Bangarpet Circle.

III. A.K.Vivekananda, CPI Oorgaum Circle.

31 Shuttle cock (Doubles) I. Puttamadaiah, CPI & V.L.Ramesh P.I.II. Anjappa PSI & S.Shanthappa PSI
32 Shot Put for CPIs I. V.Krishnappa, PI, DSA, DPO, KGF.II. A.G.Kariyappa, CPI Bangarpet Circle

.III. Lakshmaiah, P.I., DCIB, DPO, KGF.

33 Shot Put for PSIs I. S.Y.Mohan, PSI (L&O), Bangarpet PSII. B.Ashok Kumar, PSI, Robertsonpet PS.

III. K.Ravi, PSI Kamasamudram PS.

34 Discuss Throw for CPIs I. V.Krishnappa, PI, DSA, DPO, KGF.II. A.G.Kariyappa, CPI Bangarpet Circle.

III. Puttamadiah, CPI Robertsonpet Circle.

Spl. Prize M.V.Seshan, Deputy Supdt. of Police

35 Discuss Throw for PSIs I. S.Shanthappa, PSI (Crime), Marikuppam PSII.S.Y.Mohan, PSI (L&O), Bangarpet PS.

III. B.Ashok Kumar, PSI, Robertsonpet PS

36 Discuss Throw for Women I. WPC 95 Amudha Malar, Oorgaum Circle.II. WPC 314 G.Padmavathi, Bangarpet Circle.

III. WPC 312 S.Manjula, BangarpetCircle.

37 100 Mtrs. Run for Officers I. V.Krishnappa, PI, DSA, DPO, KGFII.S.Y.Mohan, PSI (L&O), Bangarpet PS.

III. S.Shanthappa, PSI (Crime), Marikuppam PS

38 100 Mtrs. Run for Drivers I. APC 193 Kadarvali, DAR, KGFII.APC 16 Swamynathan, DAR, KGF

III. APC 153 Venkatachalapathi, DAR, KGF.

39 100 Mtrs. Run for Women I. WPC 210 M.Manjula, Robertsonpet Circle.II. WPC 322 Jayasudha, Champion Circle.

III. WPC 308 Asharani, Bangarpet Circle.

40 Bandsmen Race I. APC 180 BabuRajendraPrasad, DAR, KGFII.AHC 06, Narayanaswamy DAR, KGF

III. APC 159 G.Sagayraj, DAR, KGF.

41 Guest Events – Musical Chair I. Anitha D/o Dr. Narayan.II. Nandini D/o Ramarj

III. Savitha D/o Srinivas.

42 Guest EventsBombing-in-city I. Sri.T.G.Doreswamy Naik, IPS, Inspector General of Police, Central Range, Bangalore..II. Sri. M.V.Seshan, Deputy Supdt. of Police, KGF

III. Kum. Deepika.

43 Individual Championship Sri. Mohan Kumar, APC 96, DAR, KGF
44 Overall Championship D.A.R., K.G.F.

 


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಡಿಸೆಂಬರ್ ೦೭

December 28, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೨೩೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಕೋರಮಂಡಲ್ ವಾಸಿ ಜಾಕ್ ಹರೀಶ್ (೧೯) ಬಿನ್ ಕುಮಾರ್ ಎಂಬುವರು ತಮ್ಮ ವಾಹನ ಸಂಖ್ಯೆ ಟಿ.ಎನ್-೨೦-ಎಡಿ-೧೨೧೨ ರಲ್ಲಿ ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯ ರಸ್ತೆ ಪುಡ್ ಗೋಡನ್ ಹತ್ತಿರ ಹೋಗುತ್ತಿದ್ದರು. ಆ ಸಮಯದಲ್ಲಿ ಜಾಕ್ ಹರೀಶ್ ತಮ್ಮ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಯ ತಪ್ಪಿ ವಾಹನದಿಂದ ಕೆಳಗೆ ಬಿದ್ದು, ಹಣೆಯ ಮೇಲೆ ಗಾಯವಾಗಿ ಪ್ರಜ್ಞೆತಪ್ಪಿರುತ್ತಾರೆ ಇತ್ಯಾದಿ.
  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೦೮೩೦ ಗಂಟೆ ಸಮಯದಲ್ಲಿ ಎಂದಿನಂತೆ ಬಂಗಾರಪೇಟೆ ತಾಲೂಕು ಘಟ್ಟಕಾಮದೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ನಾಗಮ್ಮ (೭೦) ಎಂಬುವರು ಕೆ.ಜಿ.ಎಫ್.ನ ಗಾಂಧಿ ವೃತ್ತದ ಬಳಿ ಇರುವ ದರ್ಭಾರ್ ಹೋಟೆಲ್ ಬಳಿ ಬಿಕ್ಷೆ ಬೇಡುತ್ತಿದ್ದರು. ಆ ಸಮಯದಲ್ಲಿ ಅಪರಿಚಿತ ಆಟೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶ್ರೀಮತಿ ನಾಗಮ್ಮನಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿರುತ್ತಾರೆ. ಇದರ ಪರಿಣಾಮ ನಾಗಮ್ಮನ ಬಲ ಕಲಿನ ಮುಳೆಗೆ ಬಲವಾದ ಗಾಯವಾಗಿರುತ್ತದೆ ಇತ್ಯಾದಿ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೪

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೦೯೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಗಂಗಾಪುರ ಗ್ರಾಮದ ವಾಸಿ ಶ್ರೀಮತಿ ಮುನಿಯಮ್ಮ ಎಂಬುವರು ಹುಲ್ಲು ತರಲು ತನ್ನ ಜಮೀನಿಗೆ ಹೋಗಿದ್ದರು. ಆ ಸಮಯದಲ್ಲಿ ತಮ್ಮ ಜಮೀನಿನಲ್ಲಿರುವ ಹಾಳು ಬಿದ್ದಿರುವ ಬಾವಿಯಲ್ಲಿ ಯಾರೋ ಒಬ್ಬ ಹೆಂಗಸಿನ ಮೃತ ದೇಹವು ತೇಲುತ್ತಿರುವುದನ್ನು ನೋಡಿದರು. ಶ್ರೀಮತಿ ಮುನಿಯಮ್ಮ ತನ್ನ ಗಂಡನ ಅಣ್ಣನಾದ ವೆಂಕಟೇಶ್ ಎಂಬುವರಿಗೆ ವಿಷಯ ತಿಳಿಸಿದರು. ವೆಂಕಟೇಶ್ ರವರು ಬಾವಿ ಹತ್ತಿರ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ಮೃತಳು ದಳವಾಯಿಹೊಸಹಳ್ಳಿ ಗ್ರಾಮದ ವಾಸಿ ವಸಂತ (೩೫) ಬಿನ್ ಚಿನ್ನಬ್ಬಯ್ಯ ಎಂಬುವುದು ತಿಳಿದು ಬಂದಿರುತ್ತದೆ ಇತ್ಯಾದಿ.
  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೧೪೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ಬೆಮೆಲ್ ನಗರದ, ಕಾವೇರಿನಗರ ವಾಸಿ ಶ್ರೀ ಎಸ್..ಲೂಯಿಸ್ @ ಜಯ ಪ್ರಕಾಶಂ ಎಂಬುವರು ಮಲಮುತ್ರ ವಿಸರ್ಜನೆಗೆ ಬಾತ್ ರೂಂಗೆ ಹೋಗಿದ್ದರು. ಆ ಸಮಯದಲ್ಲಿ ಅವರು ಕುಸಿದುಬಿದ್ದ ಕಾರಣ ಆತನ ಮಗ ವಿನ್ಸೆಂಟ್ ಎಂಬುವರು ಬೆಮೆಲ್ ಮೆಡಿಕಲ್ ಸೆಂಟರ್‍ಗೆ ಕರೆತಂದರು. ವೈದ್ಯರು ಎಸ್..ಲೂಯಿಸ್ ರವರನ್ನು ಪರೀಕ್ಷಿಸಿ ಎದೆ ನೋವಿನಿಂದ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಇತ್ಯಾದಿ.
  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ಬೆಳಿಗ್ಗೆ ಬಂಗಾರಪೇಟೆ ವಿಜಯನಗರ ವಾಸಿ ಶ್ರೀಮತಿ ಪಿತಿಮುನ್ನಿಸಾ ಕೋಂ ನಜೀಮ್ ಅಹಮದ್ ಎಂಬುವರಿಗೆ ಆಕೆಯ ಪತಿ ನಜೀಮ್ ಅಹಮದ್ ರವರು ತನ್ನ ವಾಸದ ಮನೆ ಸಂಖ್ಯೆ ೪೪, ೧ನೇ ಟೈಪ್, ಬೆಮೆಲ್ ನಗರದಲ್ಲಿ ಮೃತಪಟ್ಟಿರುತ್ತಾರೆಂದು ಯಾರಿಂದಲೋ ತಿಳಿದುಬಂದಿರುತ್ತದೆ. ಆ ಸಮಯದಲ್ಲಿ ಶ್ರೀಮತಿ ಪಿತಿಮುನ್ನಿಸಾ ರವರು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತದೆ. ಮೃತ ನಜೀಮ್ ಅಹಮದ್ ಎಂಬುವರಿಗೆ ೩-೪ ವರ್ಷಗಳಿಂದ ಜಠರಕ್ಕೆ ಸಂಬಂಧಿಸಿದಂತೆ ಕಾಯಿಲೆ ಮತ್ತು ಮಧ್ಯಪಾನ ಮಾಡುವ ಅಭ್ಯಾಸವಿದ್ದು, ಇದರಿಂದ ಮೃತ ಪಟ್ಟಿರಬಹುದೆಂತ ತಿಳಿಸಿರುತ್ತಾರೆ ಇತ್ಯಾದಿ.
  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೧೦೧೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಸಂಜಯಗಾಂಧಿನಗರ ಜನತಾ ಹೌಸ್ ನ ವಾಸಿ ಶ್ರೀಮತಿ ರಾಣಿ ಕೋಂ ಲೇಟ್ ಸೀತಾರಾಂ ಠಾಣೆಗೆ ಹಾಜರಾಗಿ ತನ್ನ ಮಗನಾದ ಚಿನ್ನ ಎಂಬುವರು ದಿನಾಂಕ ೨೭-೧೨-೨೦೦೭ ರಂದು ೧೦೩೦ ಗಂಟೆಗೆ ತನ್ನ ಅಕ್ಕನ ಮನೆಗೆ ಹೋಗುವುದಾಗಿ ತನ್ನ ತಾಯಿಗೆ ತಿಳಿಸಿ ಹೋದವನು ಕೆನೆಡಿಸ್ ಲೈನಿನ ಸೈನಾಡ್ ದಿಬ್ಬದ ಮೇಲೆ ಈಚಲ ಮರಕ್ಕೆ ನೇಣುಹಾಕಿಕೊಂಡು ಮೃತ ಪಟ್ಟಿರುತ್ತಾರೆ ಎಂದು ದೂರು ನೀಡಿದರು. ಮೃತನಾದ ಚಿನ್ನನಿಗೆ ಮತ್ತು ಆತನ ಹೆಂಡತಿಗೆ ಸಂಸಾರದ ವಿಷಯದಲ್ಲಿ ವೈಮನಸ್ಯವಿದ್ದು ಮದ್ಯಪಾನ ಚಟಕ್ಕೆ ಬಲಿಯಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿರುತ್ತಾನೆ ಇತ್ಯಾದಿ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೧೨-೨೦೦೭ ರಂದು ೧೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮಾರಿಕುಪ್ಪಂ ರಾಜೇಶ್ ಕ್ಯಾಂಪ್ ವಾಸಿ ಪ್ರೇಮಕುಮಾರಿ (೧೫) ಬಿನ್ ಕುಮಾರ್ ಎಂಬುವರು ಸ್ನೇಹಿತರನ್ನು ನೋಡಲು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹುಡುಗಿಯ ಚಹರೆ ಈ ರೀತಿ ಇರುತ್ತದೆ. ಎತ್ತರ ೫ ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಹಸಿರು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ತಮಳು ಭಾಷೆ ಮಾತನಾಡುತ್ತಾರೆ ಇತ್ಯಾದಿ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಡಿಸೆಂಬರ್ ೦೭

December 27, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ:

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೧೨೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಕೆಸಿರೆಡ್ಡಿಗಾಂಡ್ಲಹಳ್ಳಿಯ ವಾಸಿ ಓಬಳಪ್ಪ (೬೭) ಎಂಬುವರು ತನ್ನ ಮನೆಯಲ್ಲಿದ್ದಾಗ, ಈತನ ಮಗ ಗೋವಿಂದಪ್ಪ ಎಂಬುವರು ತನ್ನ ತಾಯಿಯಾದ ಮುನಿಯಮ್ಮ ರವರನ್ನು ಕುರಿತು ನಿಮ್ಮ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಸಹಿ ಹಾಕುವಂತೆ ಕೇಳಿದರು. ಸಮಯದಲ್ಲಿ ಓಬಳಪ್ಪ ರವರು ಪ್ರಶ್ನಿಸಿದಾಗ ಗೋವಿಂದಪ್ಪ ತನ್ನ ತಂದೆಯ ಬಳಿ ಜಗಳ ಕಾದು ಒಂದು ರೀಪರಿನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಗೊಳಿಸಿರುತ್ತಾನೆ. ಜಮೀನಿನ ವಿವಾದದ ವಿಚಾರವಾಗಿ ಕೃತ್ಯವೆಸಗಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಡಿಸೆಂಬರ್ ೦೭

December 26, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ:

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೨೧೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಆಂಡ್ರಸನ್‌ಪೇಟೆ ವಾಸಿ ಶರತ್ (೧೭) ಎಂಬುವರು ಆಂಡ್ರಸನ್‌ಪೇಟೆ ೨ನೇ ಬ್ಲಾಕ್‌ನಲ್ಲಿ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದರು. ಸಮಯದಲ್ಲಿ ಮಾರಿಕುಪ್ಪಂ ಗಿಲ್ಬಟ್ಸ್‌ðಲೈನ್ ವಾಸಿ ಶಂಕರ್ಮತ್ತು ಇನ್ನಿಬ್ಬರು ಶರತ್‌ರವರನ್ನು ಬ್ಲೇಡಿನಿಂದ ಕಣ್ಣುಬ್ಬು ಮತ್ತು ತಲೆಯ ಮೇಲೆ ಹೊಡೆದು ರಕ್ತಘಾಯಪಡಿಸಿರುತ್ತಾರೆ. ಡ್ಯಾನ್ಸ್ ಕಾರ್ಯಕ್ರಮದಲ್ಲಿ ಗೇಲಿ ಮಾಡಿದ ವಿಚಾರವಾಗಿ ಕೃತ್ಯವೆಸಗಿರುತ್ತಾರೆ.

ಇತರೆ:

  •   ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೨-೧೨-೨೦೦೭ ರಂದು ಬಂಗಾರಪೇಟೆ ತಾಲೂಕು ದೊಡ್ಡೂರು ಕರಪನಹಳ್ಳಿ ಗ್ರಾಮದ ವಾಸಿ ಸೋಮನಾಥ (೨೭) ಎಂಬುವರನ್ನು ಅದೇ ಗ್ರಾಮದ ವಾಸಿ ವಿಜಯ್‌ಕುಮಾ ಎಂಬುವರು ಡಿಶ್ಕೇಬಲ್ ಹಾಕಲು ಅರಳೀಮರದ ಮೇಲೆ ಹತ್ತಿಸಿರುತ್ತಾರೆ. ಸಮಯದಲ್ಲಿ ಸೋಮನಾಥ ಎಂಬುವರು ಡಿಶ್ ಕೇಬಲ್ ಹಾಕುವಾಗ ಮರದ ಬಳಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಡಿಶ್ ಕೇಬಲ್ ತಗುಲಿ ವಿದ್ಯುತ್ ಶಾಕ್‌ ಹೊಡೆದಿದ್ದರಿಂದ ಮರದ ಮೇಲಿನಿಂದ ಕೆಳಕ್ಕೆ ಬಿದ್ದಿದ್ದು ತಲೆ ಮತ್ತು ಮೈಮೇಲೆ ಘಾಯಗಳಾಗಿದ್ದು, ಈತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆಯಿಂದ ಗುಣಮುಖನಾಗದೆ ದಿನಾಂಕ ೦೩-೧೨-೨೦೦೭ ರಂದು ೧೨೪೫ ಗಂಟೆಗೆ ಮೃತಪಟ್ಟಿರುತ್ತಾನೆ. ವಿಜಯ್‌ಕುಮಾ ಎಂಬುವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ಸೋಮನಾಥ ಎಂಬುವರನ್ನು ಅರಳಿಮರ ಹತ್ತಿಸಿದ್ದರಿಂದ ಕೃತ್ಯ ಸಂಭವಿಸಿರುತ್ತದೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ರೂ.೨೦೦೦/ ಬೆಲೆಯ ಬೆಳೆಬಾಳುವ ಸೋನಿ ಎರಕ್ಸ್ನ ಮೊಬೈಲ್ ವಶ, ಒಬ್ಬನ ಬಂಧನ

December 25, 2007
  •   ದಿನಾಂಕ ೨೪-೧೨-೨೦೦೭ ರಂದು ೧೨೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಶಾಂತಿನಗರ ವಾಸಿ ವೆಂಕಟಸುಬ್ಬಯ್ಯ ಎಂಬುವರು ತಮ್ಮ ಮನೆಯ ಒಳಗಡಯ ಕಿಟಕಿಯಲ್ಲಿ ೨೦೦೦/ ರೂ ಬೆಳೆಬಾಳುವ ಸೋನಿ ಎರಕ್ಸ್ನ ಮೊಬೈಲ್ ಸಿಮ್ ಸಂಖ್ಯೆ ೯೮೮೦೪೯೭೬೮೨ ಅನ್ನು ಇಟ್ಟಿದ್ದರು. ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಮೊಬೈಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಠಾಣೆಯಲ್ಲಿ ದೂರು ನೀಡಿರುತ್ತಾರೆ. ಆ ಸಮುದಲ್ಲಿ ಪಿ.ಎಸ್.. ಅಪರಾಧ, ಬಂಗಾರಪೇಟೆ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಗಳಾದ ಮುಖ್ಯಪೇದೆ ೮೯ ಮುನಿಯಪ್ಪ ಮತ್ತು ಪೇದೆ ೫೬ ಶಿವಶಂಕರ ರೆಡ್ಡಿ ಎಂಬುವರುಗಳನ್ನು ಈ ಕೇಸಿನಲ್ಲಿ ಆರೋಪಿ ಹಾಗೂ ಮಾಲನ್ನು ಪತ್ತೆಮಾಡಲು ನೇಮಿಸಲಾಗಿತ್ತು. ಸದರಿ ಸಿಬ್ಬಂದಿಯವರು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದ ಸಮಯದಲ್ಲಿ ಆಂದ್ರಪ್ರದೇಶ ರಾಜ್ಯದ ವಿ.ಕೋಟೆ ವಾಸಿ ಮುರುಗನ್ (೩೫) ಎಂಬುವರು ಸೋನಿ ಎರಕ್ಸ್ನ ಮೊಬೈಲ್ ಅನ್ನು ರೂ. ೫೦೦/ ಗೆ ಮಾರುತ್ತಿದ್ದವರನ್ನು ಮಾಲಿನ ಸಮೇತ ದಸ್ತಗಿರಿಮಾಡಿ ಠಾಣೆಗೆ ಕರೆತಂದಿರುತ್ತಾರೆ. ವಿಚಾರಣೆಯ ಸಮಯದಲ್ಲಿ ಆರೋಪಿಯು ಸೋನಿ ಎರಕ್ಸ್ನ ಮೊಬೈಲ್ ಅನ್ನು ವೆಂಕಟಸುಬ್ಬಯ್ಯ ಎಂಬುವರ ಮನೆಯಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.

ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಡಿಸೆಂಬರ್ ೦೭

December 25, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೮೧೫ ಗಂಟೆ ಸಮಯದಲ್ಲಿ ಪಿ.ಶೇಖರ್ ಪಿ.ಎಸ್. ರೈಲ್ವೆ ಪೊಲೀಸ್ ಠಾಣೆ ಬಂಗಾರಪೇಟೆ ರವರು ಠಾಣೆಗೆ ಹಾಜರಾಗಿ ದಿನಾಂಕ ೨೪-೧೨-೨೦೦೭ ರಂದು ಉರಿಗಾಂಚಾಂಪಿಯನ್ ಮದ್ಯೆ ನಂ. ೧೩/೧೦೦ ಬಳಿ ರೈಲು ಹಳಿಗಳ ಮೇಲೆ ಒಬ್ಬ ಗಂಡಸಿನ ಮೃತ ದೇಹ ಕಂಡು ಬಂದಿರುತ್ತದೆ ಎಂದು ತಿಳಿಸಿರುತ್ತಾರೆ. ಮೃತನನ್ನು ಯಾರೋ ದುಷ್ಕರ್ಮಿಗಳು ಆರ್..ಟಿ. ಬ್ಲಾಕ್ ಕೆ.ಜಿ.ಎಫ್. ನಲ್ಲಿ ಕೊಲೆ ಮಾಡಿ ಸಾಕ್ಷಾಧಾರಗಳನ್ನು ಮರೆ ಮಾಚುವ ಉದ್ದೇಶದಿಂದ ರೈಲ್ವೆ ಹಳಿಗಳ ಮೇಲೆ ತಂದು ಹಾಕಿರುತ್ತಾರೆ. ರೈಲು ಹರಿದು ಕೈಗಳು ಮತ್ತು ತಲೆ ತುಂಡಾಗಿರುತ್ತದೆ ಇತ್ಯಾದಿ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೨೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಶಾಂತಿನಗರ ವಾಸಿ ವೆಂಕಟಸುಬ್ಬಯ್ಯ ಎಂಬುವರು ತಮ್ಮ ಮನೆಯ ಒಳಗಡೆಯ ಕಿಟಕಿಯಲ್ಲಿ ೨೦೦೦/ ರೂ ಬೆಳೆಬಾಳುವ ಸೋನಿ ಎರಕ್ಸ್ನ ಮೊಬೈಲ್ ಸಿಮ್ ಸಂಖ್ಯೆ ೯೮೮೦೪೯೭೬೮೨ ಅನ್ನು ಇಟ್ಟಿದ್ದರು. ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಮೊಬೈಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೦೯೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ಸೇಠ್ ಕಾಂಪೌಂಡ್ ವಾಸಿ ಮೊಹ್ಮದ್ ರಿಯಾಜ್ ಅಹ್ಮದ್ (೪೪) ಎಂಬುವರು ಮುಸ್ತಾಕ್ ಅಹ್ಮದ್ ರವರನ್ನು ಹಿಂದೆ ಕುಳ್ಳರಿಸಿಕೊಂಡು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಸಂಜಯ್ ಗಾಂದಿ ನಗರದ ಹತ್ತಿರ ಹಿರೋ ಹೋಂಡಾ ಮೋಟಾರ್ ಸೈಕಲ್ ವಾಹನ ಸಂಖ್ಯೆ ಕೆ..-೦೮-ಹೆಚ್-೫೩೭ ನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂದೆಯಿಂದ ಬಂದ ಹಿರೋ ಹೋಂಡಾ ಮೋಟಾರ್ ಸೈಕಲ್ ವಾಹನ ಸಂಖ್ಯೆ ಕೆ.-೦೮-ಹೆಚ್-೯೯೦೧ ನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊಹ್ಮದ್ ರಿಯಾಜ್ ಅಹ್ಮದ್ ಎಂಬುವರ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದಿರುತ್ತಾರೆ. ಇದರ ಪ್ರಯುಕ್ತ ಮೊಹ್ಮದ್ ರಿಯಾಜ್ ಅಹ್ಮದ್ ಮತ್ತು ಮುಸ್ತಾಕ್ ಅಹ್ಮದ್ ಎಂಬುವರುಗಳಿಗೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೧೨-೨೦೦೭ ರಂದು ೧೫೫೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌ಸನ್ ಪೇಟೆ ವಾಸಿ ಕುಮಾರಿ ನಿತ್ಯಹರ್ಷಿಣಿ (೧೮) ಬಿನ್ ಮುಗಿಮೈದಾಸ್ ಎಂಬುವರು ಮಸ್ಕಂನಲ್ಲಿರುವ ಥಾಮಸ್ ಚರ್ಚ್‌ಗೆ ಸೇರಿದ ಎನ್...ಟಿ ಕಂಪ್ಯೂಟರ್ ಸೆಂಟರ್ ಗೆ ಹೋದವರು ಇದುವರೆವಿಗೂ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹುಡಗಿ ಚಹರೆ ರೀತಿ ಇರುತ್ತದೆ. ಎತ್ತರ ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಕಪ್ಪು ಮಿಶ್ರೀತ ಕಂದು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ತಮಿಳು, ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಡಿಸೆಂಬರ್ ೦೭

December 24, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೨-೨೦೦೭ ರಂದು ೧೭೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಉರಿಗಾಂ ವಾಸಿ ಸೋಮಪ್ಪ (೫೩) ಎಂಬುವರು ಐದು ದೀಪಗಳ ವೃತ್ತದ ಕಡೆಯಿಂದ ಉರಿಗಾಂ ಅಂಚೆ ಕಛೇರಿ ಹತ್ತಿರ ತನ್ನ ಸ್ನೇಹಿತರ ಜೊತೆ ರಸ್ತೆ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ ಉರಿಗಾಂ ರೈಲು ನಿಲ್ದಾಣದ ಕಡೆಯಿಂದ ಉರಿಗಾಂ ವಾಸಿ ಮನೋಹರ್ ಎಂಬುವರು ಸೈಕಲ್ ನಲ್ಲಿ ಹೋಗುತ್ತಿದ್ದರು. ಸಮಯದಲ್ಲಿ ಅಂಬಾಸಿಡರ್ ಕಾರ್ ಸಂಖ್ಯೆ ಕೆ.-೦೩-ಎಂ-೪೭೬೦ ವಾಹನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮನೋಹರ್ ಎಂಬುವರ ಸೈಕಲ್ ಗೆ ಡಿಕ್ಕಿ ಹೊಡೆದ ಪ್ರಯುಕ್ತ ಸೈಕಲ್ ಜಖಂಗೊಂಡು ಮನೋಹರ್ ಮತ್ತು ಪಾದಚಾರಿ ಸೋಮಪ್ಪ ಎಂಬುವರುಗಳಿಗೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೨-೨೦೦೭ ರಂದು ೦೬೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಟಿ.ಗೊಲ್ಲಹಳ್ಳಿ ಗ್ರಾಮದ ವಾಸಿ ಶ್ರೀಮತಿ ರೇಣುಕಮ್ಮ (೨೭) ಕೋಂ ನಾಗರಾಜಪ್ಪ ಎಂಬುವರು ತನ್ನ ಗಂಡನೊಡನೆ ಬಾಯಿಮಾತಿನ ಜಗಳ ಮಾಡಿಕೊಂಡಿರುತ್ತಾರೆ. ಸಮಯದಲ್ಲಿ ಮನೆಯ ಕಸವನ್ನು ಹೊರಗೆ ಹಾಕಿ ಬರುತ್ತೇನೆಂದು ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹೆಂಗಸಿನ ಚಹರೆ ರೀತಿ ಇರುತ್ತದೆ. ಎತ್ತರ . ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಕೆಂಪು ಬಣ್ಣದ ಜಾಕೀಟು, ಹಸಿರು ಬಣ್ಣದ ಹೂಗಳ ಸೀರೆ ಮತ್ತು ಬೂದು ಬಣ್ಣದ ಶ್ವೇಟರ್ ಧರಿಸಿರುತ್ತಾರೆ. ಕನ್ನಡ, ತಮೀಳು ಮತ್ತು ತೆಲಗು ಭಾಷೆ ಮಾತನಾಡುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಡಿಸೆಂಬರ್ ೦೭

December 23, 2007

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೧೨-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಮೈಸೂರು ಮೈನ್ಸ್ ಕೆ.ಜಿ.ಎಫ್ ನ ಸೆಕ್ಯೂರಿಟಿ ಗಾರ್ಡರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ೨೦ ರಿಂದ ೨೫ ಜನ ಅಪರಿಚಿತ ಕಳ್ಳರು ಮೈಸೂರು ಮೈನ್ಸ್ ಪ್ಲಾಂಟೇಷನ್ ಒಳಗೆ ಅಕ್ರಮ ಪ್ರವೇಶ ಮಾಡಿ ಕಳವು ಮಾಡಲು ಪ್ರಯತ್ನಿಸಿದಾಗ ಸೆಕ್ಯೂರಿಟಿ ಗಾರ್ಡರವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದಾಗ ಆರೋಪಿಗಳು ಪರಾರಿಯಾಗಿರುತ್ತಾರೆ ಇತ್ಯಾದಿ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೭೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಪುರ ಗ್ರಾಮದ ವಾಸಿ ಪಿ.ನಾಗಾರಜ್ (೪೨) ಮತ್ತು ಅವರ ಬಾವ ಆರ್.ನಾಗರಾಜ್ ರವರುಗಳು ಬಂಗಾರಪೇಟೆ – ಸೂಲಿಕುಂಟೆ ರಸ್ತೆಯ ಹೊಸೂರು ಗ್ರಾಮದ ಬಳಿ ಹಿರೋಹೊಂಡ ಪ್ಯಾಷನ್ ವಾಹನ ಸಂಖ್ಯೆ ಕೆ.ಎ-೦೮-ಜೆ-೨೯೮೯ ರಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಲಾರಿ ಸಂಖ್ಯೆ ಕೆ.ಎ-೫೩-೪೯೫೦ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ಎಸ್.ನಾಗರಾಜ್ ಮತ್ತು ಅವರ ಬಾವ ಆರ್‍,ನಾಗರಾಜ್ ಎಂಬುವರುಗಳಿಗೆ ರಕ್ತಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೧೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಗ್ರಾಮದ ವಾಸಿ ಬಾಸ್ಕರರೆಡ್ಡಿ ಎಂಬುವರು ತನ್ನ ಅಣ್ಣನ ಮನೆಯಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ನಾಗರಾಜ್ ಗೌಡ, ನಾರಾಯಣಗೌಡ ಮತ್ತು ಮುನೇಗೌಡ ರವರುಗಳು ಉದ್ದೇಶಪೂರ್ವಕವಾಗಿ ಜಗಳತೆಗೆದು ದೊಣ್ಣೆ ಮತ್ತು ಕಲ್ಲುಗಳಿಂದ ಬಾಸ್ಕರರೆಡ್ಡಿ ಎಂಬುವರಿಗೆ ಹೊಡೆದು ಪ್ರಣ ಬೆದರಿಕೆ ಹಾಕಿರುತ್ತಾರೆ. ಜಮೀನಿನ ರಸ್ತೆ ಮತ್ತು ಹಣದ ವಿಚಾರವಾಗಿ ಕೃತ್ಯ ಎಸಗಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.