ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವರಕ್ಷಿಣೆ ಕಿರುಕಳ ಮತ್ತು ಕೊಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:೩೧.೦೮.೨೦೦೮ ರಂದು ಸಂಜೆ ೭.೦೦ ಸಮಯದಲ್ಲಿ ಬೇತಮಂಗಲ ಪೊಲೀಸ್ ಠಾಣೆ ಸರಹದ್ದು ಕಲಾವಿಹೊಸಹಳ್ಳಿ ಗ್ರಾಮದ ಶ್ರೀಮತಿ ನಾಗತ್ನಮ್ಮ ರವರ ಬಳಿ ಆಕೆಯ ಗಂಡ ರಾಮಕೃಷ್ಣರೆಡ್ಡಿ ಮತ್ತು ಅತೆ ಕೃಷ್ಣಮ್ಮರುವರು ವರದಕ್ಷಿಣೆ ಹಣದ ಬಗ್ಗೆ ಜಗಳ ತೆಗೆದು ಮಾನಸಿಕವಾಗಿ ಹಿಂಸೆ ನೀಡಿ ದೊಣ್ಣೆಯಿಂದ ನಾಗರತ್ನಮ್ಮ ರವರಿಗೆ ಹೊಡೆದು ಕೆಳಗೆ ಬಿದ್ದಾಗ ಆಕೆಯ ಕೊರಳಿಗೆ ಹಗ್ಗದಿಂದ ನೇಣು ಹಾಕಿ ಕೊಲೆ ಮಾಡಿರುತ್ತಾರೆ.
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಾಲಾಗಿರುತ್ತದೆ. ದಿನಾಂಕ:೦೧.೦೯.೨೦೦೮ ರಂದು ಮದ್ಯಾಹ್ನ ೩.೦೦ ಗಂಟೆಯ ಸಮಯದಲ್ಲಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ಸರಹದ್ದು ಸಂಜಯಗಾಂದಿ ನಗರದ ವಾಸಿ ಚಂದ್ರ ಎಂಬುವನು ತನ್ನ ಹೆಂಡತಿ ಶ್ರೀಮತಿ ಶಾಂತಿ ರವರು ತವರು ಮನೆಯಿಂದ ಗಂಡನ ಮನೆಗೆ ಬರಲಿಲ್ಲವೆಂತ ಜಗಳ ಕಾದು ಚಂದ್ರ ಎಂಬುವನು ಅತನ ಹೆಂಡತಿ ಶ್ರೀಮತಿ ಶಾಂತಿ ರವರಿಗೆ ಕೈಯಿಂದ ಹೊಡೆದು ಹಲ್ಲು ಮುರಿದು ಪ್ರಾಣ ಬೆದರಿಕೆ ಹಾಕಿರುತ್ತಾನೆ.


