ದಿನದ ಅಪರಾಧಗಳ ಪಕ್ಷಿನೋಟ ೦೮ನೇ ಡಿಸೆಂಬರ್‍ ೨೦೧೦

December 8, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೧೨-೨೦೧೦ ರಂದು ರಾತ್ರಿ ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿರುವ ಅನಿಗಾನಹಳ್ಳಿಯ ಹಳೇ ಮನೆ ಬಾಗಿಲು ಕಿತ್ತು ಅಲ್ಲಿದ್ದ ಹಳೇ ವಸ್ತುಗಳನ್ನು ಟಾಟಾ ಎಸ್ ವಾಹನದಲ್ಲಿ ತುಂಬಿಸಿಕೊಂಡು ಟೇಕಲ್ ಗೆ ಹೋಗಿ ಮಾರಲು ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಮುಬಾರಕ್ ಖಾನ್, ಅಜಾದ್ ನಗರ, ಕೋಲಾರ ಮತ್ತು ರೋಷನ್ ಖಾನ್ ಬಿನ್ ಗೌಸ್ ಖಾನ್, ನಿಸಾರ್‍ ನಗರ ಕೋಲಾರ ಎಂಬುವರುಗಳನ್ನು ಗಸ್ತಿನಲ್ಲಿದ್ದ ಪೊಲೀಸರು ಮಾಲು ಮತ್ತು ವಾಹನ ಸಮೇತ ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ ಇತ್ಯಾದಿ.
  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೭-೧೨-೨೦೧೦ ರಂದು ಬೆಳಿಗ್ಗೆ ೮.೦೦ ಗಂಟೆಗೆಯಲ್ಲಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಮುಖ್ಯ ಪೇದೆ ೯೮ ಮತ್ತು ಪೇದೆ ೨೩೨ ರವರಿಗೆ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ತಲಾಷೆ ಬಗ್ಗೆ ನೇಮಿಸಿ ಕಳುಹಿಸಿದ್ದು ಸದರಿ ಸಿಬ್ಬಂದಿಯವರು ನಗರದಲ್ಲಿ  ಗಸ್ತಿನಲ್ಲಿರುವಾಗ ಬಿ.ಎಂ.ರಸ್ತೆ, ಅಶೋಕ ನಗರದ ಬ್ರಡ್ಜ್ ಬಳಿ ಗಸ್ತು ನಿರ್ವಹಿಸುತ್ತಿದ್ದಾಗ ಬೆಳಿಗ್ಗೆ ೯.೦೦ ಗಂಟೆಯ ಸಮಯದಲ್ಲಿ ಬಿ.ಎಂ. ರಸ್ತೆ ಕಡೆಯಿಂದ ಮುಳಬಾಗಿಲು ಕಡೆಗೆ ಆರೋಪಿ ಸುಬ್ರಮಣಿ ಬಿನ್ ಲೇಟ್ ವೆಂಕಟೇಶಪ್ಪ, ಪೆದ್ದಗುಟ್ಟಹಳ್ಳಿ, ನಂಗಲಿ ಹೋಬಲಿ, ಮುಳಬಾಗಿಲು ತಾಲೂಕು ಎಂಬುವನು ಒಂದು ಟಿ.ವಿ.ಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ವಾಹನ ಸಂಖ್ಯೆ: ಕೆಎ-೦೮-ಕೆ-೮೨೦೦ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದು ಗಸ್ತಿನಲ್ಲಿದ ಸಿಬ್ಬಂದಿಯನ್ನು ನೋಡಿ ವಾಹನವನ್ನು ಅಲ್ಲಿಯೇ ಬಿಟ್ಟು ಓಡಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಆತನನ್ನು ಹಿಡಿದು ವಾಹನದ ಬಗ್ಗೆ ಸರಿಯಾದ ವಿವರಗಳನ್ನು ನೀಡದೇ ಇದ್ದ ಕಾಣರ ಸದರಿ ವಾಹನ ಮತ್ತು ಆರೋಪಿಯನ್ನು ಕಳುವು ಮಾಡಿಕೊಂಡು ಹೋಗುತ್ತಿರುವುದಾಗಿ ಅನುಮಾನ ಬಂದಿದ್ದರಿಂದ ಠಾಣೆಗೆ ತಂದು ಮುಂದಿನ ಕ್ರಮ ಕೈಗೊಂಡಿರುತ್ತಾರೆ ಇತ್ಯಾದಿ.

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

- ಸಾಧಾರಣ: ಇಲ್ಲ

- ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೦೭ನೇ ಡಿಸೆಂಬರ್‍ ೨೦೧೦

December 7, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

- ಸಾಧಾರಣ: ಇಲ್ಲ

- ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ : ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೧೨-೨೦೧೦ ರಂದು ಬೆಳಿಗ್ಗೆ ೬.೩೦ ಗಂಡೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀ. ನಾರಾಯಣ ಬಿನ್ ಸೀತಾರಾಮಪ್ಪ, ವಿಜಯ ನಗರ, ಬಂಗಾರಪೇಟೆ ಎಂಬುವರು ತಮ್ಮ ಮನೆಯಲ್ಲಿರುವಾಗ ಆರೋಪಿಯಾದ ಎಂ.ಗೋವಿಂದಪ್ಪ ಮತ್ತು ಇತರೆ ಇಬ್ಬರು ಎಲ್ಲರೂ ಬಂಗಾರಪೇಟೆ ತಾಲೂಕು ಭುವನಹಳ್ಳಿ ಗ್ರಾಮದವರು ಹಣಕಾಸಿನ ವಿಚಾರದಲ್ಲಿ ಅಕ್ರಮ ಗುಂಪು ಕಟ್ಟಿಕೋಂಡು ಬಂದು ಉದ್ದೇಶ ಪೂರ್ವಕವಾಗಿ ಪಿರ್ಯಾದಿಯ ಮನೆ ಪ್ರವೇಶ ಮಾಡಿ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ೦೧

  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೧೧-೨೦೧೦ ರಂದು ೧೯.೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌‌ಸನ್‌ಪೇಟೆಯ ಬಾಲಕೃಷ್ಣ ಲೇಔಟ್ ವಾಸಿ ಅಬ್ದುಲ್ ಖಾದರ್‍ ಎಂಬುವರ ಹೆಂಡತಿಯಾದ ಸಲ್ಮಾನ ಎಂಬುವರು ಎಲ್ಲಿಯೋ ಹೋಗಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಇತ್ಯಾದಿ.

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಧಗಳ ಪಕ್ಷಿನೋಟ ೦೬ನೇ ಡಿಸೆಂಬರ್‍ ೨೦೧೦

December 6, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೬-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

- ಸಾಧಾರಣ: ಇಲ್ಲ

- ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  • ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ ೩ ೧/೨ ವರ್ಷಗಳ ಹಿಂದೆ ಪಿರ್ಯಾದಿಯಾದ ಶ್ರೀ. ಯರಪ್ಪ ಬಿನ್ ಲೇಟ್ ಮುನಿಸ್ವಾಮಿ, ಗುಂಡ್ಲಪಾಳ್ಯ ಗ್ರಾಮ, ಮಾಲೂರು ತಾಲೂಕು ಎಂಬುವರ ಮಗಳಾದ ಸುನಂದಮ್ಮ ರವರನ್ನು ಬಂಗಾರಪೇಟೆ ತಾಲೂಕು ಬೋಯಿಸೊಣ್ಣೇನಹಳ್ಳಿ ಗ್ರಾಮದ ಮಂಜುನಾಥ್ ಬಿನ್ ವೆಂಕಟೇಶಪ್ಪ ಎಂಬುವರಿಗೆ ವರನ ಮನೆಯ ಬಳಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲದಲ್ಲಿ ವರದಕ್ಚಿಣೆಗಾಗಿ ವರನಿಗೆ ನಗುದು ರೂ. ೧೦,೦೦೦/- ರೂಗಳನ್ನು ಮತ್ತು ಬಂಗಾರದ ಒಡವೆಗಳನ್ನು ನೀಡಿ ಮದುವೆ ಮಾಡಿಕೊಟ್ಟಿದ್ದು ಈಗ ೨ ವರ್ಷದ ಮಗಳಿರುತ್ತಾಳೆ. ಮದುವೆಯಾದ ನಂತರ ೬ ತಿಂಗಳಕಾಲ ಪಿರ್ಯಾದಿಯ ಮಗಳನ್ನು ಆರೋಪಿಗಳು ಚನ್ನಾಗಿ ನೋಡಿಕೊಂಡಿದ್ದು, ನಂತರ ಆರೋಪಿಗಳು ಪಿರ್ಯಾದಿ ಅಳಿನಿಗೆ ಬೈಕು ಕೊಡಬೇಕು ಎಂಬದು ಇತ್ತಾಯಿಸಿ ಪಿರ್ಯದಿಯ ಮಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದು, ತವರು ಮನೆಗೆ ಕಳುಹಿಸಿದ್ದರಿಂದ ಪಿರ್ಯದಿದಾರರು ಚಂಚಾಯ್ತಿದಾರರ ಮೂಲಕ ಚಂಚಾಯ್ತಿ ಮಾಡಿಸಿ ರೂ. ೧೫,೦೦೦/- ಗಳನ್ನು ನೀಡಿ ಮಗಳನ್ನು ಗಂಡನ ಮನೆಗೆ ಕಳುಹಿಸಿರುತ್ತಾರೆ. ದಿನಂಕ: ೦೫-೧೨-೨೦೧೦ ರಂದು ಪಿರ್ಯಾದಿ ಮಗಳು ಪಿರ್ಯಾದಿಗೆ ಮೋನ್ ಮಾಡಿ ನನ್ನ ಗಂಡ ಮಾವ ಅತ್ತೆ ಮತ್ತು ಮೈದುನ ರವರುಗಳು ಇನ್ನೂ ವರದಕ್ಷಿಣೆ ಕೊಡ ಬೇಕು ಎಂದು ಹೊಡೆಯುತ್ತಿದ್ದಾರೆ ಎಂದು ತಿಳಿಸಿರುತ್ತಾರೆ. ನಂತರ ಸಂಜೆ ಯಾರೋ ಬೋವಿಸಿಣ್ಣೇನಹಳ್ಳಿ ಗ್ರಾಮದಿಂದ ಪೋನ್ ಮಾಡಿ ನಿಮ್ಮ ಮಗಳು ಸತ್ತಿರುವುದಾಗಿ ತಿಳಿಸಿರುತ್ತಾರೆ ಇತ್ಯಾದಿ.

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಧಗಳ ಪಕ್ಷಿನೋಟ ೦೫ನೇ ಡಿಸೆಂಬರ್‍ ೨೦೧೦

December 5, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ೦೧

- ಸಾಧಾರಣ: ಇಲ್ಲ

- ಮಾರಣಾಂತಿಕ: ೦೧

  • ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ-ಕೋಲಾರ ರಸ್ತೆ, ಅನಿಗಾನಹಳ್ಳಿ-ಹುದುಕುಳ ಗೇಟ್‌ ಮದ್ಯದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೪.೧೨.೨೦೧೦ ರಂದು ಸಂಜೆ ಸುಮಾರು ೭.೦೦ ಗಂಟೆ ಸಮಯದಲ್ಲಿ ಮೃತರಾದ ಪ್ರೇಮ್‌ಕುಮಾರ್‌, ವಾಸ  ಕೆ.ಜಿ.ಎಫ್‌ ಹಿಂಬಾದಿಯಲ್ಲಿ ಕುಳಿತಿದ್ದ ವಿನಯ್‌ಕುಮಾರ್‌ ಬಿನ್‌ ವೆಂಕಟಾಚಲಪತಿ, ೨೬ ವರ್ಷ, ಜಯನಗರ, ಕೋಲಾರ ವಾಸಿಗಳು ತನ್ನ ಹಿರೋಹೊಂಡ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಆರ್‌-೬೨೩೯ರಲ್ಲಿ ಕೋಲಾರದಿಂದ ಬಂಗಾರಪೇಟೆ ಕಡೆಗೆ ಅನಿಗಾನಹಳ್ಳಿ-ಹುದುಕುಳ ಗೇಟ್‌ ಮದ್ಯದಲ್ಲಿ ಹೋಗುತ್ತಿರುವಾಗ ಎದುರಿಗೆ ಬಂದ ಬಲೇರೋ ವಾಹನ ಸಂಖ್ಯೆ ಟಿಎನ್‌-೦೯-ಬಿಡಿ-೦೧೧೧ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರೇಮ್‌ಕುಮಾರ್‌ ರವರ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾ ಪ್ರೇಮ್‌ಕುಮಾರ್‌ ಮತ್ತು ವಿನಯ್‌ ರವರುಗಳಿಗೆ ಬಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಬಲೇರೋ ವಾಹನ ಸಹ ಮರಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೪-೧೨-೨೦೧೦ ಕೈ ಒಂದು ತಿಂಗಳ ಹಿಂದೆ ಆರೋಪಿ ೧ ವೆಂಕಟಪ್ಪ, ವಿ,ಕೋಟ, ಆಂದ್ರಪ್ರದೇಶ ಎಂಬುವರು ಪಿರ್ಯಾದಿಯಾದ ಶ್ರೀ. ಎಸ್.ಸುಂದರಂ ಬಿನ್ ನಾಗಭೂಷಣ್ ರಾವ್, ವಿಘ್ನೇಶ್ವರ ನಿಲಯ, ಕಾರ್ಪೋರೇಶನ್ ಬ್ಯಾಂಕ್ ಹಿಂದೆ, ಅತ್ತಿಬೆಲೆ, ಬೆಂಗಳೂರು ಜಿಲ್ಲೆ ಎಂಬುವರೊಂದಿಗೆ ಪರಿಚಯವಾಗಿ ಬಂಗಾರದ ನಾಣ್ಯಗಳ ನಿದಿ ಸಿಕ್ಕಿದೆ ಮಾರಾಟ ಮಾಡಿಕೊಡು ಎಂದು ಪಿರ್ಯದಿಯನ್ನು ನಂಬಿಸಿ ಸ್ಯಾಂಪಲ್‌ಗಾಗಿ ಎರಡು ನಾಣ್ಯಗಳನ್ನು ಕೊಟ್ಟಿದ್ದು, ಪಿರ್ಯದಿಯು ಎಲ್ಲಾ ನಾಣ್ಯಗಳನ್ನು ತೆಗೆದುಕೊಳ್ಳಲು ದಿನಾಂಕ: ೦೪-೧೨-೨೦೧೦ ರಂದು ಸಂಜೆ ೦೪.೦೦ ಗಂಟೆಗೆ ಬಂಗಾರಪೇಟೆಗೆ ಬಂದಾಗ ಆ೧ ಮತ್ತು ಆ೨ ವೆಂಕಟಪ್ಪನ ತಂಗಿ ರವರು ಬಂಗಾರದ ನಾಣ್ಯಗಳನ್ನು ತಂದಿದ್ದೇವೆ ಹಣ ಕೊಡು ಎಂದು ಪಿರ್ಯದಿಯ ಕಡೆಯಿಂದ ೫ ಲಕ್ಷ ರೂ ಹಣತೆಗೆದುಕೊಂಳ್ಳುತ್ತಿದ್ದ  ಅದೇ ಸಮಯದಲ್ಲಿ ಒಂದು ಟಾಟಾ ಸುಮೋ ನಂ. ಕೆಎ-೦೩-೨೨೨೮ ಅಥವಾ ಕೆಎ-೦೨-೨೨೦೮ ನಂಬರ್‌ ನ ವಾಹನದಲ್ಲಿ ಉಳಿದ ೪ ಜನ ಅಪರಿವಿತರು ಪೊಲೀಸ್ ಸಮವಸ್ತ್ರದಲ್ಲಿ ಬಂದು ಹಣದ ಸಮೇತ ಆ೧ ಮತ್ತು ೨ ರವರನ್ನು ಕರೆದುಕೊಂಡು ಹೋಗಿದ್ದು, ಇವರೆಲ್ಲರೂ ಸೇರಿ ಬಂಬಿಸಿ ಮೋಸ ಮಾಡಿ ಹಣ ದೋಚಿರುತ್ತಾರೆ ಇತ್ಯಾದಿ.

-ಕೊಲೆಗೆ ಪ್ರಯತ್ನ: ೦೧

  • ಅಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೪-೧೨-೨೦೧೦ ರಂದು ಬೆಳಿಗ್ಗೆ ೧೧.೦೦ ಗಂಟೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀ. ಸ್ಠಾಲಿನ್ ಬಿನ್ ಯಾಕೂಬ್, ಲೂರ್ದ್‌‌ನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ಎಂಬುವರು ತಮ್ಮ ಮನೆಯಲ್ಲಿರುವಾಗ ಆರೋಪಿ ಅಪ್ಪೇನ್ ಮತ್ತು ಆತೋಣಿ ಇಬ್ಬೂರು ಲೂರ್ದ್‌‌ನಗರದ ವಾಸಿಗಳು ಪಿರ್ಯಾದಿಯನ್ನು ಮಾತನಾಡಲು ಹೊರಗಡೆ ಕರೆದು ಆ೧ ರವರು ಒಂದು ಕತ್ತಿಯಿಂದ ಪಿರ್ಯದಿ ಎರಡು ಕಾಲುಗಳ ಮೇಲೆ ಹೊಡೆದು ರಕ್ತ ಗಾಯಗಳನ್ನುಂಟು ಮಾಡಿರುತ್ತಾನೆ ಮತ್ತು ಅ೨ ರವರು ಒಂದು ದೊಣ್ಣೆಯಿಂದ ಕೈಗಳ ಮೇಲೆ ಹೊಡೆದು ಮೂಗು ಗಾಯವನ್ನುಂಟು ಮಾಡಿ ನಿನ್ನನ್ನು ಸಾಯಿಸದೇ ಬುಡುವಿದಿಲ್ಲವೆಂತ ಪ್ರಾಣ ಬೆದರಿಕೆ ಹಕಿರುತ್ತಾರೆ.

-ದೊಂಬಿ: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಐವಾರಹಳ್ಳಿ ಗ್ರಾಮದ ನೀರಿನ ನಲ್ಲಿಯ ಬಳಿ ಸಂಭವಿಸಿರುತ್ತದೆ. ದಿನಾಂಕ: ೦೪-೧೨-೨೦೧೦ ರಂದು ಮದ್ಯಾಹ್ನ ೧.೦೦ ಗಂಟೆ ಸಮಯದಲ್ಲಿ ಐವಾರಹಳ್ಳಿ ಗ್ರಾಮದ ಸಾರ್ವಜನಿಕ ನೀರಿನ ನಲ್ಲಿಯ ಬಳಿ ಶ್ರೀಮತಿ. ಸೀತಮ್ಮ ಕೋಂ ಪ್ರಭು ಮತ್ತು ಅದೇ ಗ್ರಾಮದ ವಾಸಿ ಸುಮಿತ್ರಮ್ಮ ಕೋಂ ಕೃಷ್ಣಪ್ಪ ಎಂಬುವರುಗಳಿಗೆ ಬಟ್ಟೆ ಹೊಗೆಯುವ ವಿಚಾರದಲ್ಲಿ ಕಲಾಟೆಯಾಗಿ ಇಬ್ಬರೂ ಗುಂಪುಕಟ್ಟಿಕೊಂಡು ಹೊಡೆದಾಡಿಕೊಂಡು ಒಬ್ಬರಿಗೊಬ್ಬರು ಪ್ರಾಣ ಬೆದರಿಕೆ ಹಾಕಿಕೊಂಡಿರುತ್ತಾರೆ ಇತ್ಯಾದಿ.

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೧೨-೨೦೧೦ ರಂದು ಸಂಜೆ ೪.೦೦ ಗಂಟೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀಮತಿ. ಶ್ಯಾಮಲಮ್ಮ ಕೋಂ ಗಣೇಶ್, ಬಡಮಾಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವರ ಜಮೀನಿನಲ್ಲಿ ಅದೇ ಗ್ರಾಮದ ವಾಸಿ ಆರೋಪಿ ಸುಮಿತ್ರಮ್ಮ ರವರು ಕುರಿಗಳನ್ನು ಮೇಯಲು ಬಿಟ್ಟಿದ್ದು, ಆಗ ಪಿರ್ಯಾದಿದಾರರು ಜೋರಾಗಿ ಯಾರು ನಮ್ಮ ಹೊಲದಲ್ಲಿ ಕುರಿಗಳನ್ನು ಬಿಟ್ಟು ರಾತ್ರಿ  ಹೊಲವನ್ನು ಮೇಯಲು ಬಟ್ಟಿರುವುದು ಎಂದು ಕುಗಾಡುದಾಗ ಆರೋಪಿ ಮತ್ತು ಇತರೆ ೩ ಜನರು ಉದ್ದೇಶಪೂರ್ವಕವಾಗಿ ಪಿರ್ಯಾದಿಯೊಂದಿಗೆ ಜಗಳ ತೆಗೆದು ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ೦೧

  • ಆಂಸ್ರಡನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ಸರಹದ್ದು ಬೀರನಕುಪ್ಪ ಗ್ರಾಮದ ಬಳಿ ಇರುವ ಬಟ್ಟದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೪-೧೨-೨೦೧೦ ರಂದು ಆಂಸ್ರಪ್ರದೇಶದ ರಾಮಕುಪ್ಪಂ ಪೊಲೀಸ್ ಠಾಣೆಯ ಮೊಕದ್ದಮೆಯಲ್ಲಿ ಕೇಸಿನ ಗುಮಾನಿ ಆಸಾಮಿಗಳಾದ ವಡಿವೇಲು ಮತ್ತು ಪರಮೇಶ್ವರರೆಡ್ಡಿ, ಬೀರನಕುಪ್ಪ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವರುಗಳನ್ನು ರಾಜ್‌ಪೇಟ್ ರಸ್ತೆಯಲ್ಲಿ ಪಿಎಸ್‌ಐ ಶ್ರೀ. ಜಿ.ಅಶೋಕ ಕುಮಾರ್‍ ರವರ ವಶಕ್ಕೆ ತೆಗೆದುಕೊಂಡು ಅವರನ್ನು ಕೇಸಿನ ಬಗ್ಗೆ ವಿಚಾರಣೆ ಮಾಡಲಾಗಿ ಕಳುವಾಗಿರುವ ಮಾಲು ಬೀರನಕುಪ್ಪ ಬಳಿಯಿಂದ ತೆಗೆದು ಹಾಜರುಪಡಿಸುವುದಾಗಿ ತಿಳಿಸಿದ್ದರಿಂದ ಸದರಿ ಇಬ್ಬರು ಗುಮಾನಿ ಆಸಾಮಿಗಳು ಮತ್ತು ಪಿಸಿ ೨೮೭೪ ರವರೊಂದಿಗೆ ಬೀರನಕುಪ್ಪ ಗ್ರಾಮದ ಬೆಟ್ಟದ ಬಳಿ ಬರುವಾಗ್ಗೆ ಸದರಿ ಇಬ್ಬರು ಆಸಾಮಿಗಳು ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿ ವಡಿವೇಲು ಎಂಬಾತನು ಬೆಟ್ಟದ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಬೆಟ್ಟದ ಮೇಲಿನಿಂದ ಕೆಳಕ್ಕೆ ಜಿಗಿದು ಬಿದ್ದಿದ್ದು ರಕ್ತಗಾಯಗಳಾಗಿರುತ್ತದೆ ಹಾಗೂ ಮತ್ತೊಬ್ಬ ಗುಮಾನಿ ಆಸಾಮಿಯನ್ನು ಪಿಸಿ ೨೮೭೪ ರವರು ಓಡಿ ಹೋಗಿ ಹಿಡಿದುಕೊಂಡಿರುತ್ತಾರೆ. ಸದರಿ ಇಬ್ಬರು ಆಸಾಮಿಗಳನ್ನು ಚಿಕಿತ್ಸೆಗಾಗಿ ರಾಬರ್ಟ್‌‌ಸನ್‌ಪೇಟೆ ಜನರಲ್ ಆಸ್ಪತ್ರಗೆ ಕರೆದುಕೊಂಡು ಬಂದು ವೈದ್ಯರ ಬಳಿ ತೋರಿಸಿದಾಗ ವಡಿವೇಲುರವರನ್ನು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂತ ತಿಳಿಸಿರುತ್ತಾರೆ ಇತ್ಯಾದಿ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೪ನೇ ಡಿಸೆಂಬರ್‍ ೨೦೧೦

December 4, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೪-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ೦೧

  • ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೧೨-೨೦೧೦ ರಂದು ಮದ್ಯಾಹ್ನ ೧೪.೩೦ ಗಂಟೆ ಸಮಯದಲ್ಲಿ ಪಿರ್ಯದಿಯಾದ ಶ್ರೀ. ಶ್ರೀನಿವಾಸರಾವ್ ಬಿನ್ ವೆಂಕಟರಾವ್, ಕುಂಬಾರಪೇಟೆ, ಮಾಲೂರು ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: ೨೦-೦೯-೨೦೧೦ ರಂದು ತನ್ನ ಮಗಳಾದ ಲಕ್ಷ್ಮಿಬಾಯಿ ಎಂಬಾಕೆಯನ್ನು ಬಂಗಾರಪೇಟೆ ತಾಲೂಕು ದಿನ್ನೂರು ಗ್ರಾಮದ ನಾರಾಯಣರಾವ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲದಲ್ಲಿ ೫೦,೦೦೦/- ರೂ ನಗದು, ಒಂದು ಚೈನು, ಒಂದು ಉಂಗುರ ಒಟ್ಟು ೧೨ ಗ್ರಾಂ ಮತ್ತು ಹುಡುಗಿಗೆ ಓಲೆ ಜುಮುಕಿ ಉಂಗುರ ಒಟ್ಟು ೧೫ ಗ್ರಾಂ ಬಂಗಾರದ ಒಡವೆಗಳನ್ನು ಹಾಕಿದ್ದು, ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ನನ್ನ  ಮಗಳು ನನ್ನ ಮನೆಗೆ ಬಂದಾಗ ಗಂಡ ಹೊಡೆದಿರುವುದಾಗಿ ತಿಳಿಸಿ ಹಣ ಕೊಡುವಂತೆ ತಿಳಿಸಿದ್ದಳು. ಈ ದಿನ ದಿನಾಂಕ: ೦೩-೧೨-೨೦೧೦ ರಂದು ಬೆಳಿಗ್ಗೆ ೮.೩೦ ಗಂಟೆಯಲ್ಲಿ ತನ್ನ ಮಗಳು ಸತ್ತಿರುವುದಾಗಿ ತಿಳಿಸಿದ್ದು, ಆರೋಪಿಗಳು ತನ್ನ ಮಗಳನ್ನು ವರದಕ್ಷಿಣೆಗಾಗಿ ಹಿಂಸಿಸಿ ಸುಟ್ಟುಹಾಕಿರುತ್ತಾರೆ ಇತ್ಯಾದಿ.

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

- ಸಾಧಾರಣ: ಇಲ್ಲ

- ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಿಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೧೨-೨೦೧೦ ರಂದು ಪಿರ್ಯಾದಿಯಾದ ಶ್ರೀಮತಿ. ಸುಮಿತ್ರಮ್ಮ ಕೋಂ ಕೃಷ್ಣಪ್ಪ, ಬಡಮಾಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವರು ತನ್ನ ಕುರಿಗಳನ್ನು ಹೊಲದ ಬಳಿ ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಂಜೆ ೪.೩೦ ಗಂಟೆ ಸಮಯದಲ್ಲಿ ಪಿರ್ಯಾದಿಯ ಪಕ್ಕದ ಜಮೀನಿನ ಶ್ಯಾಮಲಮ್ಮ ಕೋಂ ಗಣೇಶಪ್ಪ ಎಂಬುವರು ಮತ್ತು ಇತರೆ ೩ ಜನ ಸೇರಿಕೊಂಡು ಪಿರ್ಯಾದಿಯೊಂದಿಗೆ ಕುರಿಗಳು ನಮ್ಮ ಜಮೀನಿಗೆ ಬಂದು ಬೆಳೆ ನಾಶಪಡಿಸಿದೆ ಎಂದು ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಹೊಡೆದು ರಕ್ತಗಾಯಪಡಿಸಿರುತ್ತಾರೆ.

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ೦೧

  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೧-೧೨-೨೦೧೦ ರಂದು ಪಿರ್ಯದಿಯಾದ ಶ್ರೀ. ಶೇಖರ್‍ ಬಿನ್ ಮಣಿಕನರ್‍, ಬೋರಿಲಾಲ್‌ಪೇಟೆ, ಕೆ.ಜಿ.ಎಫ್ ಎಂಬುವರ ಮಗಳಾದ ದೀಪಿಕಾ ಎಂಬುವಳು ಟೈಲರಿಂಗ್ ಶಾಲೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೦೩ನೇ ಡಿಸೆಂಬರ್‍ ೨೦೧೦

December 3, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೩-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೯-೧೧-೨೦೧೦ ರಂದು ಸಂಜೆ ೬.೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕಛೇರಿ ಮುಂಭಾಗದಲ್ಲಿ ಪಿರ್ಯಾದಿಯಾದ ಶ್ರೀ. ಎ.ಎಸ್.ಸೋಮಶೇಖರ್‍ ಬಿನ್ ಲೇಟ್ ಸದಾಶಿವಪ್ಪ, ಮುನ್ಸಿಪಲ್ ಕಛೇರಿ, ಬಂಗಾರಪೇಟೆ ಎಂಬುವರು ತನ್ನ ಟಿ.ವಿ.ಎಸ್ ಹೆವಿ ಡ್ಯೂಟಿ  ದ್ವಿಚಕ್ರ ವಾಹನ ಸಂಖ್ಯೆ: ಕೆಎ-೦೮-ಕೆ-೯೪೦೮ ಅನ್ನು ನಿಲ್ಲಿಸಿ ರೈಲ್ವೆ ಪ್ಲಾಟ್ ಫಾರಂಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಪಿರ್ಯಾದಿಯ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂತ ಠಾಣೆಗೆ ಬಂದು ದೂರು ನೀಡಿರುತ್ತಾರೆ ಇದರ ಬೆಲೆ ಸುಮಾರು ೧೯,೦೦೦/- ರೂಗಳಾಗಿರುತ್ತದೆ ಇತ್ಯಾದಿ.

-ಅಪಘಾತಗಳು: ಇಲ್ಲ

- ಸಾಧಾರಣ: ಇಲ್ಲ

- ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅರಣ್ಯ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೩-೧೧-೨೦೧೦ ರಂದು ಬೆಳಿಗ್ಗೆ ೮.೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಚಿಗರಾಪುರ ಗ್ರಾಮಕ್ಕೆ ಸೇರಿದ ೦೪ ಹುಣಸೆ ಮರಗಳ ಪೈಕಿ ಸುಮಾರು ೮೦೦೦/- ರೂ ಬೆಲೆ ಬಾಳುವ ೦೨ ಹುಣಸೆ ಮರಗಳನ್ನು ಅದೇ ಗ್ರಾಮದ ವಾಸಿ ಜಾನ್ ಮತ್ತು ವಿನ್ಸೆಂಟ್ ಎಂಬುವರು ಕಟಾವುಮಾಡಿದ್ದು, ಈ ಬಗ್ಗೆ ಚಿಗರಾಪುರ ಗ್ರಾಮಸ್ಥರು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ವಿಚಾರವಾದಲ್ಲಿ ಪಿರ್ಯಾದಿ ಶ್ರೀ. ರಾಮಕೃಷ್ಣಪ್ಪ, ಪಿ.ಡಿ.ಓ, ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿ ರವರು ಸ್ಥಳಕ್ಕೆ ಭೇಟಿ ನೀಡಿ ಜಾನ್ ಮತ್ತು ವಿನ್ಸೆಂಟ್ ರವರಿಗೆ ದಾಖಲೆಗಳನ್ನು ನೀಡಲು ತಿಳಿಸಿದರೂ ಸಹ ದಾಖಲೆಗಳನ್ನು ನೀಡಿರುವುದಿಲ್ಲ ಆದ್ದರಿಂದ ಇವರ ವಿರುದ್ಧ ಠಾಣೆಯಲ್ಲಿ ದೂರು ನೀಡಿರುತ್ತಾರೆ ಇತ್ಯಾದಿ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೦೨ನೇ ಡಿಸೆಂಬರ್‍ ೨೦೧೦

December 2, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೨-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ೦೧

- ಸಾಧಾರಣ: ಇಲ್ಲ

- ಮಾರಣಾಂತಿಕ: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೧೧-೨೦೧೦ ರಂದು ಬೆಳೀಗ್ಗೆ ೧೧.೩೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಬಾಬು ವೇ ಬ್ರಿಡ್ಜ್ ನಲ್ಲಿ ಲಾರಿ ಸಂಖ್ಯೆ: ಕೆಎ-೦೭-೯೧೪೫ ರಲ್ಲಿ ನೀಲಗಿರಿ ಮರಗಳ ತೂಕ ಮಾಡುತ್ತಿದ್ದಾಗ ಮೃತ ವೆಂಕಟೇಶ್ ಲಾರಿಯ ಮೇಲೆ ಹತ್ತಿ ಮರಗಳನ್ನು ಸರಿ ಪಡಿಸುತ್ತಿರುವಾಗ ಲಾರಿ ಚಾಲಕ ಲಾರಿಯನ್ನು ನಿರ್ಲಕ್ಷತೆಯಿಂದ ಚಲಾಯಿಸಿದ್ದರಿಂದ ಲಾರಿ ಮೇಲಿದ್ದ ವೆಂಕಟೇಶ್‌ರವರು ಕಾಲು ಜಾರಿ ಬಿದ್ದು, ಲಾರಿಯಲ್ಲಿದ್ದ ಮರಗಳು ಆತನ ಮೇಲೆ ಬಿದ್ದ ಪ್ರಯುಕ್ತ ಆತನು ಲಾರಿಯಿಂದ ಕೆಳಕ್ಕೆ ಬಿದ್ದು, ರಕ್ತ ಗಾಯಗಳಾಗಿ ಚಿಕಿತ್ಸೆ ಸಲುವಾಗಿ ಕೋಲಾರ – ಬೆಂಗಳೂರು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: ೦೧-೧೨-೨೦೧೦ ರಂದು ಬೆಳಿಗ್ಗೆ ೬.೦೦ ಗಂಟೆಯಲ್ಲಿ ಬೆಂಗಳೂರಿನ ಉದ್ಬವ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ೦೨

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೧೧-೨೦೧೦ ರಂದು ರಾತ್ರಿ ೮.೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಸಕ್ಕನಹಳ್ಳಿ ಗ್ರಾಮದ ವಾಸಿ ಶ್ರೀ. ರಘುನಾಥ ರೆಡ್ಡಿ ರವರು ಮೂತ್ರ ವಿಸರ್ಜನೆಗೆ ಮನೆಯಿಂದ ಹೊರಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಯಾವುದೋ ವಿಷ ಪೂರಿತ ಹಾವು ಆತನ ಪಾದಕ್ಕೆ ಕಚ್ಚಿದ್ದು  ಚಿಕಿತ್ಸೆಗಾಗಿ ಬಂಗಾರಪೇಟೆ – ಕೋಲಾರದ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ: ೦೧-೧೨-೨೦೧೦ ರಂದು ಮೃತ ಪಟ್ಟಿರುತ್ತಾರೆ.
  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೧-೧೨-೨೦೧೦ ರಂದು ಬೆಳಿಗ್ಗೆ ೩.೦೦ ಗಂಟೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀ. ಪಾಪಣ್ಣ ಬಿನ್ ಪಾಪಯ್ಯ ಶೆಟ್ಟಿ, ಬೂದಿಕೋಟೆ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವರ ಹೆಂಡತಿಯಾದ ಮೃತ ಶ್ರೀಮತಿ.ರಾಮಕ್ಕರವರು ಮಲ ವಿಸರ್ಜನೆಗೆ ಹೋಗಿ ದೇವಸ್ಥಾನದ ಮುಂಭಾಗದಲ್ಲಿರುವ ಕಾವೇರಮ್ಮ ಬಾವಿ ಕಲ್ಯಾಣಿಯಲ್ಲಿ ಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುತ್ತಾರೆ ಇತ್ಯಾದಿ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೩೦ನೇ ನವೆಂಬರ್‌ ೨೦೧೦

November 30, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೧-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ೦೩

- ಸಾಧಾರಣ: ೦೨

  • ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೧೧-೨೦೧೦ ರಂದು  ಬೆಳಿಗ್ಗೆ ಸುಮಾರು ೧೧.೦೦ ಗಂಟೆಯಲ್ಲಿ ಪಿರ್ಯಾದಿ ಶ್ರೀ.ರಾಜಪ್ಪ, ೫೫ವರ್ಷ, ಬೋಡಗುರ್ಕಿ ಗ್ರಾಮ, ಬಂಗಾರಪೇಟೆ ತಾಲ್ಲೂಕು    ರವರು ನಾರಾಯಣಸ್ವಾಮಿ ರವರ ದ್ವಿಚಕ್ರ ವಾಹನದಲ್ಲಿ ಕಾಮಸಮುದ್ರದಿಂದ ಗ್ರಾಮದಿಂದ ಬೋಡಗುರ್ಕಿ ಗ್ರಾಮಕ್ಕೆ ಹೋಗುತ್ತಿರುವಾಗ ಎದುರುಗಡೆಯಿಂದ ಯಾವುದೋ ಒಂದು ಲಗೇಜ್‌ ಆಟೋವಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯದಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಪಿರ್ಯದಿಗೆ ಬಲಕಾಲಿನ ಮೇಲೆ ರಕ್ತಗಾಯಳಾಗಿರುತ್ತದೆ ಇತ್ಯಾದಿ.
  • ದಿನಾಂಕ: ೨೮-೧೧-೨೦೧೦ ರಂದು ಮದ್ಯಾಹ್ನ ಸುಮಾರು ೩.೩೦ ಗಂಟೆಯಲ್ಲಿ ಪಿರ್ಯಾದಿ  ಮುನಿಯಪ್ಪ ಬಿನ್ ಸಿದ್ದಪ್ಪ, ೧೬ವರ್ಷ, ದೇವರಗುಟ್ಟಹಳ್ಳಿ ಗ್ರಾಮ ರವರು ತನ್ನ ಸ್ನೇಹಿತರೊಂದಿಗೆ ಒಂದು ಲಗೇಜ್‌ ಆಟೋದಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಲಗೇಜ್‌ ಆಟೋವಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕನುಮಾನಹಳ್ಳಿ ಬಳಿ ರಸ್ತಯ ಬದಿಯಲ್ಲಿದ್ದ ಒಂದು ಮರಕ್ಕೆ ಡಿಕ್ಕಿ ಹೊಡೆದ ಕಾರಣ ಪಿರ್ಯದಿಗೆ ಕಿವಿ, ಕೆನ್ನೆಯ ಭಾಗ, ಎಡಕೈ, ಕಾಲುಗಳಿಗೆ ರಕ್ತಗಾಯ ಹಾಗೂ ತರಚಿದ ಗಾಯಗಳಾಗಿರುತ್ತದೆ, ಇತ್ಯಾದಿ.

- ಮಾರಣಾಂತಿಕ: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೯.೧೧.೨೦೧೦ ರಂದು ಸಂಜೆ ೫-೦೦ ಗಂಟೆಯ ಸಮಯದಲ್ಲಿ ಬೂದಿಕೋಟೆ ಗ್ರಾಮದಲ್ಲಿ ಅಭಿರಾಮ್‌, ೫,ವರ್ಷದ ಬಾಲಕ ರಸ್ತೆ ಡಾಟುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ ಸಂಖ್ಯೆ ಕೆಎ-೦೭-ಎಫ್-೬೯೮ರ ಚಾಲಕ ಸೈಯದ್‌ ಗಪೂರ್‍ ರವರು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಭಿರಾಮ್‌ಗೆ ಡಿಕ್ಕಿಹೊಡೆದ ಪ್ರಯುಕ್ತ ಎಡ ಕೈ ಮತ್ತು ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆ  ಸಲುವಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಾದ್ಯದಲ್ಲಿ ಮೃತಪಟ್ಟಿರುತ್ತಾನೆ.

 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು  ಮುತ್ತೇನಹಳ್ಳಿಯಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೯.೧೧.೨೦೧೦ ರಂದು ಬೆಳಿಗ್ಗೆ ೧೧.೦೦ ಗಂಟೆ ಸಮಯದಲ್ಲಿ ಮುನಿಯಮ್ಮ ಕೋಂ ರಾಮಪ್ಪ ರವರು ತನ್ನ ಅಣ್ಣನ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ, ಇದೇ ಗ್ರಾಮದ ಚಿಕ್ಕಮುನಿಯಪ್ಪ ಬಿನ್‌ ತಪ್ಪಸಂದ್ರ ವೆಂಕಟಪ್ಪ ಎಂಬುವರು ಇಲ್ಲಿ ಕುರಿಗಳನ್ನು ಮೇಯಿಸಬಾರದೆಂದು ಅಂತ ಹೇಳಿ ಒಂದು ನೀಲಿಗಿರಿ ದೊಣ್ಣೆಯಿಂದ ಮೈ ಮೇಲೆ ಹೊಡಿದ್ದು, ಜಗಳ ಬಿಡಿಸಲು ಮುನಿಯಮ್ಮನ ಗಂಡನಿಗೂ ಸಹ ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ೦೧

  • ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಹುಡುಗ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀಮತಿ. ಸರಸ್ವತಿ ಕೋಂ ಅಣ್ಣಾಮಲೈ, ನಂ. ೧೧, ಪೆದ್ದಪಲ್ಲಿ ಗ್ರಾಮ ವಾಸಿ ರವರ ಮಗನಾದ ಸಂಪತ್‌ಕುಮಾರ್‌, ೧೬ ವರ್ಷ ಎಂಬುವರು ದಿನಾಂಕ: ೨೧.೧೧.೨೦೧೦ ರಂದು ಮದ್ಯಾಹ್ನ ೧.೩೦ ಗಂಟೆ ಸಮಯದಲ್ಲಿ ಗ್ರಾಮದ ಹುಡುಗರೊಂದಿಗೆ ಆಟವಾಡಿಕೊಂಡು ಬರುತ್ತೇನೆಂತ ಹೇಳಿ ಹೋದವನು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ.

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೨೯ನೇ ನವೆಂಬರ್‍ ೨೦೧೦

November 29, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೧೧-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ೦೧

  • ಕಾಂಸಮುದ್ರಂ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೭-೧೧-೨೦೧೦ ರಂದು ರಾತ್ರೀ ಯಾರೋ ಕಳ್ಳರು ಬಂಗಾರಪೇಟೆ ತಾಲೂಕು ಬೋಡಗಿರ್ಕಿ ಗ್ರಾಮದ ವಾಸಿ ಶ್ರೀಮತಿ. ರುಕ್ಕಮ್ಮ ಕೋಂ ಸೀನಪ್ಪ ಎಂಬುವರ ಹಳೆ ಮನೆಯ ಬಾಗಿಲನ್ನು ಯಾರೋಕಳ್ಳರು ಮುರಿದು ಒಳಗೆ ಪ್ರವೇಶಿಸಿ ಮನೆಯ ಬೀರುವಿನಲ್ಲಿದ್ದ ಸುಮಾರು ೬ ಗ್ರಾಮಗಳ ಚಿನ್ನದ ಓಲೆಗಳು, ಒಂದು ಜೊತೆ ಚಿನ್ನದ ಮಾಟಿಗಳು, ಒಂದು ಜೊತೆ ೧೦೦ ಗ್ರಾಮಗಳ ಬೆಳ್ಳಿ ದೀಪ, ೬ ಕೆ.ಜಿ ತೂಕದ ಒಂದು ಕಂಚಿನ ಹಂಡಾ ಮತ್ತು ಮನೆ ಜಮೀನಿನ ದಾಖಲಾತಿಗಳು ಎಲ್ಲಾ ಒಟ್ಟು ಸುಮಾರು ೧೬,೦೦೦/- ರೂ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ೦೧

- ಸಾಧಾರಣ: ೦೧

  • ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೧೧-೨೦೧೦ ರಂದು ಮದ್ಯಾಹ್ನ ಸುಮಾರು ೩.೦೦ ಗಂಟೆಯಲ್ಲಿ ಪಿರ್ಯದಿಯಾದ ಶ್ರೀ. ಅಶೋಕ್‌ಕುಮಾರ್‍ ಬಿನ್ ಸುಬ್ಬಯ್ಯ, ನಂ. ೦೧, ಆಂದ್ರ ಲೈನ್, ಕೋರಮಂಡಲ್, ಉರಿಗಾಂ, ಕೆ.ಜಿ.ಎಫ್ ಎಂಬುರು ತನ್ನ ತಾಯಿಯೊಂದಿಗೆ ಉರಿಗಾಂನ ಸ್ಕೂಲ್ ಆಫ್ ಮೈನ್ಸ್ ಬಳಿ ಇರುವ ಅಂಬೇಡ್ಕರ್‍ ಪ್ರತಿಮೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯಾದ ರಾಮು, ಇ.ಟಿ ಬ್ಲಾಕ್, ಚಾಂಪಿಯನ್‌ರೀಪ್ಸ್ ವಾಸಿ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೩-ಟಿಸಿ-೪೨೭ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯದಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಪಿರ್ಯದಿಗೆ ಎಡಕಾಲಿನ ಮೇಲೆ ಮತ್ತು ತಲೆಯಲ್ಲಿ ಊತಗಾಯಗಳಾಗಿರುತ್ತದೆ ಇತ್ಯಾದಿ.

- ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ೦೧

  • ಉರಿಗಾಂ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದಕ್ಕೆ ಸಂಬಮಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೧೧-೨೦೧೦ ರಂದು ರಾತ್ರಿ ಗಸ್ತಿನಲ್ಲಿದ್ದ ಉರಿಗಾಂ ಪೊಲೀಸ್ ಠಾಣೆಯ ಸಿಬ್ಬಂದಿಯಾ  ಶ್ರೀ. ತಂಗವೇಲು, ಸಿಹೆಚ್‌ಸಿ ೫೨ ಮತ್ತು ಪಿಸಿ ೩೪ ರವರು ರಾತ್ರಿ ಗಸ್ತನ್ನು ಮಾಡುತ್ತಿದ್ದಾಗ ಮದ್ಯ ರಾತ್ರಿ ಸುಮಾರು ೧.೪೫ ಗಂಟೆಯ ಸಮಯದಲ್ಲಿ ಯಾರೋ ಗುಮಾನಿ ಆಸಾಮಿಯು ಸತ್ತಾರ್‍ ಸರ್ಕಲ್ ಬಳಿ ಇರುವ ಮೆಕಾನಿಕ್ ಶಾಫ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದು ಅವನನ್ನು ವಿಚಾರಿಸಲಾಗಿ ಅವನು ಸರಿಯಾದ ರೀತಿಯಲ್ಲಿ ಮಾಹಿತಿ ನೀಡದ ಕಾರಣ ಅವನನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿರಬಹುದೆಂದು ತಿಳಿಸು ಮುಂದಿನ ಕ್ರಮಕ್ಕಾಗಿ ಸದರಿ ಆಸಾಮಿಯನ್ನು ಠಾಣೆಗೆ ಕರೆತಂದಿರುತ್ತಾರೆ ಇತ್ಯಾದಿ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೨೮ನೇ ನವೆಂಬರ್‌ ೨೦೧೦

November 28, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೧-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ೦೧

- ಸಾಧಾರಣ: ಇಲ್ಲ

- ಮಾರಣಾಂತಿಕ: ೦೧

  • ಬೆಮಲ್‌ನಗರ ಪೊಲಿಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತವಾಗಿರುವ ಬಗ್ಗೆ ಕೇಸು ದಾಖಲಾಗಿರುತ್ತದೆ, ದಿನಾಂಕ ೨೭.೧೧.೨೦೧೦ ರಂದು ರಾತ್ರಿ ೯.೧೫ ಗಂಟೆಯಲ್ಲಿ ಬೆಮಲ್‌ನಗರ ಸರ್ಕಾರಿ ಐ.ಟಿ.ಐ ಬಳಿ ಮುಖ್ಯೆ ರಸ್ತೆಯಲ್ಲಿ ಟ್ರಾಕ್ಟರ್‌  ಸಂಖ್ಯೆ ಸಿಟಿಕೆ-೬೨೩೧ ರ ಚಾಲಕ ತನ್ನ ಟ್ರಾಕ್ಟ್‌ರ್‌ ನ್ನು ನಿರ್ಲಕ್ಷತೆಯಿಂದ ನಿಲ್ಲಿಸಿದ್ದು ಕೆ.ಜಿಎಫ್‌ ಕಡೆಯಿಂದ ಬಜಾಜ್‌ ಪಲ್ಸರ್‌ ಸಂಖ್ಯೆ ಕೆಎ.೦೮-ಐ.೪೫೯೫ ರ ಚಾಲಕ ರವಿ ಪೊಟ್ಟೆಪಲ್ಲಿ ವಾಸಿ ಕತ್ತಲೆಯಲ್ಲಿದ್ದ ಕಾರಣ ಟ್ರಾಕ್ಟರ್‌ನ ಟ್ರಾಲಿಯ ಕಬ್ಬಿಣದ ಬಂಪರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಮೇತ ಕೆಳಗೆ ಬಿದ್ದು ತಲೆಗೆ ತೀರ್ವ ತರಹದ ಗಾಯಗಳಾಗಿದ್ದು ಅದೇ ಸಮಯದಲ್ಲಿ ಪಿರ್ಯಾದಿ ಹರಿ (ರವಿ ಸ್ನೇಹಿತ) ಅಲ್ಲಿಗೆ ಬಂದು ನೋಡಿ ಗಾಯಾಳನ್ನು ಆಸ್ಪತ್ರೆ ಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ರವಿ ಮೃತಪಟ್ಟಿರುತ್ತಾನೆ ಎಂದು ದೂರು.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ೦೨

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಕೇಸು ಪ್ರತಿ ಕೇಸು ದಾಖಲಾಗಿರುತ್ತದೆ. ದಿನಾಂಕ ೨೭.೧೧.೨೦೧೦ ರಂದು ಬೆಳಿಗ್ಗೆ ೭.೩೦ ಗಂಟೆಯಲ್ಲಿ ಬೇತಮಂಗಲ ಹೋಬಳಿ, ತಲ್ಲಪಲ್ಲಿ ಗ್ರಾಮದಲ್ಲಿ ಶ್ರೀನಿವಾಸ ರೆಡ್ಡಿ ರವರ ಮನೆಯ ಮುಂದೆ ಅವರ ಸ್ವಾಧೀನ ಅನುಬವದಲ್ಲಿರುವ ಜಾಗದಲ್ಲಿ ಕೃಷ್ಣರೆಡ್ಡಿ ರವರು ತಿಪ್ಪೆ ಹಾಕಿದ್ದು, ಈ ತಿಪ್ಪೆಯಿಂದ ಶ್ರೀನಿವಾಸರೆಡ್ಡಿ ಮನೆಯವರಿಗೆ ಸಾಂಕ್ರಾಮಿಕ ರೋಗಗಳು ಹರಡಿ ತೊಂದರೆಯಾಗುತ್ತಿದ್ದರಿಂದ ಶ್ರೀನಿವಾಸರೆಡ್ಡಿ ರವರು ಕೃಷ್ಣರೆಡ್ಡಿ ರವರಿಗೆ ತಿಪ್ಪೆ ಖಾಲಿ ಮಾಡುವಂತೆ ತಿಳಿಸಿದ್ದು ಈ ವಿಷಯದಲ್ಲಿ ಇಬ್ಬರಿಗೂ ಜಗಳವಾಗಿರುತ್ತದೆ.

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  • ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೩೦.೧೧.೨೦೧೦ ರಂದು ಕೇಸಿನ ಪಿರ್ಯಾದಿ ಶ್ರೀಮತಿ ಅನುರಾಧ, ೨೩ವರ್ಷ ರವರು ಆಂಡ್ರಸನ್‌ಪೇಟೆ ಶ್ರೀರಾಮ ಕಾಂಪೌಂಡ್‌ ನ ವಾಸಿ ಸರವಣ ಎಂಬುವರನ್ನು ಮದುವೆಯಾಗಿದ್ದು ಮದುವೆ ಕಾಲದಲ್ಲಿ ವರದಕ್ಷಿಣೆಯಾಗಿ ೧೭೦ ಗ್ರಾಂ ಚಿನ್ನ, ೧ ಕೆಜಿ ಬೆಳ್ಳಿ ಸಾಮಾನುಗಳು ಇತರೆ ಮನೆ ಬಳಿಕೆ ವಸ್ತುಗಳನ್ನು ನೀಡಿದ್ದು, ಮದುವೆಯಾದ ನಂತರ ದಿನಗಳಲ್ಲಿ ಗಂಡ ಸರವಣ, ಮಾವ ವಿಜಯಕುಮಾರ್‍, ಅತ್ತೆ ವಿಮಲ, ಗಂಡ ತಮ್ಮನಾದ ಸತೀಶ್‌ ಎಂಬುವರು ಪ್ರತ್ಯೇಕವಾಗಿ ಅಂಗಡಿ ಇಡಬೇಕು ಪಿರ್ಯಾದಿ ಮನೆಯಿಂದ ೨ ಲಕ್ಷ ತರಬೇಕು ಇಲ್ಲದಿದ್ದರೆ ತಮ್ಮ ಸಂಬಂಧಿಕರ ಮಗಳಾದ ಅನಿತಾ, ಚಾಂಪಿಯನ್‌ ರೀಪ್ಸ್ ವಾಸಿ ರವರೊಂದಿಗೆ ಕೊಟ್ಟ ಮದುವೆ ಮಾಡುವುದಾಗಿ ಪಿರ್ಯಾದಿಗೆ ಕೈಗಳಿಂದ ಹೊಡೆದು, ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬರುತ್ತಿರುತ್ತಾರೆ, ದಿನಾಂಕ ೨೪.೧೧.೨೦೧೦ ರಂದು ಮೇಲ್ಕಂಡ ಆರೋಪಿಗಳು ಪಿರ್ಯಾದಿ ವಡುವೆಗಳನ್ನು ಕಿತ್ತುಕೊಂಡು ಪಿರ್ಯಾದಿಯನ್ನು ಮತ್ತು ಆಕೆಯ ಮಗುವನ್ನು ಮನೆಯಿಂದ ಹೊರಗೆ ಅಟ್ಟಿ ಕೇಳಿದ ೨ ಲಕ್ಷ ತೆಗದುಕೊಂಡು ಬಾರದೆ ಮನೆಗೆ ಬರಬೇಡ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ, ಇತ್ಯಾದಿ.

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


Follow

Get every new post delivered to your Inbox.